ವಿತ್ತ
ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದೆ. ತತ್ಪರಿಣಾಮ ಬ್ಯಾಂಕುಗಳಿಂದ ಗ್ರಾಹಕರು ಪಡೆದ ಎಲ್ಲಾ ವಿಧದ ಸಾಲಗಳ ಮೇಲಿನ ಬಡ್ಡಿಯೂ ಹೆಚ್ಚಳವಾಗಿದೆ. ಈ ಹೆಚ್ಚಳ ಆರಂಭ ಮಾತ್ರ ಎಂಬುದು ಆತಂಕದ ಸಂಗತಿ. ಅಂದರೆ, ಮುಂಬರುವ ತಿಂಗಳುಗಳಲ್ಲಿ ಬಡ್ಡಿದರ ಮತ್ತಷ್ಟು ಏರಲಿದೆ. ಗ್ರಾಹಕರು ಮಾಡಿರುವ ಸಾಲಗಳ ಮೇಲಿನ ಬಡ್ಡಿ ಹೆಚ್ಚಾಗಲಿದ್ದು, ಪಾವತಿಸಬೇಕಾದ ಇಎಂಐ (ಸಮಾನ ಮಾಸಿಕ ಕಂತು) ಮೊತ್ತವು ಗಣನೀಯವಾಗಿ ಹೆಚ್ಚಳವಾಗಲಿದೆ. ಶೇ.೭ರಷ್ಟು ಬಡ್ಡಿದರದಲ್ಲಿ ಗೃಹ ಸಾಲಪಡೆದಿದ್ದವರೀಗ ಸರಿಸುಮಾರು ಶೇ.೮.೫ರಷ್ಟು ಬಡ್ಡಿ ಪಾವತಿಸುವಂತಾಗಿದೆ ಅಂದರೆ ಬಡ್ಡಿದರ ಏರಿಕೆಯು ಶೇ.೧.೫ರಷ್ಟಾದರೂ ಪಾವತಿಸಬೇಕಾದ ಬಡ್ಡಿ ಮೊತ್ತವು ಶೇ.೨೦ರಷ್ಟು ಹೆಚ್ಛಳವಾಗಿದೆ. ೨೦ ಲಕ್ಷ ಗೃಹ ಸಾಲಕ್ಕೆ ಶೇ.೭ರಂತೆ ಮಾಸಿಕ ೧೪,೦೦೦ ಬಡ್ಡಿ ಪಾವತಿಸುತ್ತಿದ್ದವರೀಗ ಶೇ.೮.೫ರಂತೆ ೧೭,೦೦೦ ರೂಪಾಯಿ ಬಡ್ಡಿ ಪಾವತಿಸಬೇಕಾಗಿದೆ. ಅಂದರೆ ೨೦ ಲಕ್ಷ ಸಾಲಪಡೆದವರ ಸರಾಸರಿ ಮಾಸಿಕ ಬಡ್ಡಿ ಪಾವತಿಯ ಹೊರೆ ೩೦೦೦ ರೂಪಾಯಿಗಳು.
ವಿಜ್ಞಾನ
ಕೆಲವೊಮ್ಮೆ ಛಾಯಾಚಿತ್ರಗಳು ಅಕ್ಷರಶಃ ಜೀವನ, ಸಾವು -ಜೊಂಬಿಗಳ ವಿಷಯವಾಗುತ್ತವೆ. ಈ ಚಿತ್ರವನ್ನು ನೋಡಿ. ಇದು, ೨೦೨೨ ಬಿಎಂಸಿ ಎಕಾಲಜಿ ಅಂಡ್ ಎವಲ್ಯೂಷನ್ ಫೋಟೋಗ್ರಫಿ ಸ್ಪರ್ಧೆಯಲ್ಲಿನ ವಿಜೇತ ಚಿತ್ರ. ಈ ಚಿತ್ರಕ್ಕೆ ಮೇಲಿನ ವಿವರಣೆ ಖಂಡಿತವಾಗಿಯೂ ಸರಿಹೊಂದುತ್ತದೆ. ಚಿತ್ರವು ಪೆರುವಿನ ಮಳೆಕಾಡಿನಲ್ಲಿ ಸೋಂಕಿತ ನೊಣದ ನಿರ್ಜೀವ ದೇಹದಿಂದ ಪರಾವಲಂಬಿ ಶಿಲೀಂಧ್ರವು ಹೊರಹೊಮ್ಮುತ್ತಿರುವುದನ್ನು ಸೆರೆಹಿಡಿದಿದೆ. ನೈಸರ್ಗಿಕ ಪ್ರಪಂಚದ ಸೌಂದರ್ಯ ಮತ್ತು ಅದು ಎದುರಿಸುತ್ತಿರುವ ಸವಾಲುಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿರುವ ಛಾಯಾಚಿತ್ರ ಸ್ಪರ್ಧೆಗೆ ಪ್ರಪಂಚದಾದ್ಯಂತ ಸಲ್ಲಿಸಲಾದ ಸಾವಿರಾರು ಚಿತ್ರಗಳ ಪೈಕಿ ನೊಣದಿಂದ ಹೊರಹೊಮ್ಮಿದ ಶಿಲೀಂಧ್ರದ ಚಿತ್ರವೂ ಒಂದಾಗಿದೆ. ಸ್ಪೇನ್‌ನ ವೇಲೆನ್ಸಿಯಾ ವಿಶ್ವವಿದ್ಯಾನಿಲಯದಲ್ಲಿ ಸಂರಕ್ಷಣಾ ಛಾಯಾಗ್ರಾಹಕ ಮತ್ತು ಜೀವಶಾಸ್ತ್ರಜ್ಞ ರಾಬರ್ಟೊ ಗಾರ್ಸಿಯಾ- ರೋವಾ ಅವರು ಅಮೆಜಾನ್‌ನಲ್ಲಿ ಸಂರಕ್ಷಿತ ಆವಾಸಸ್ಥಾನವಾದ ಟ್ಯಾಂಬೋಪಾಟಾಗೆ ಭೇಟಿ ನೀಡಿದಾಗ ವಿಜೇತ ಫೋಟೋವನ್ನು ತೆಗೆದಿದ್ದಾರೆ. ನೊಣದಿಂದ ಹೊರಹೊಮ್ಮುವ ಶಿಲೀಂಧ್ರವು ಓಫಿಯೊಕಾರ್ಡಿಸೆಪ್ಸ್ ಕುಲಕ್ಕೆ ಸೇರಿದ್ದು , ಇದನ್ನು ಜೊಂಬಿ ಶಿಲೀಂಧ್ರಗಳು ಎಂದು ಕರೆಯಲಾಗುತ್ತದೆ.
ವಿಶೇಷ
2 ಕೋಟಿ ಉದ್ಯೋಗಗಳ ಬಗ್ಗೆ ಕೇಳಿ ಕೇಳಿ ಬೇಸತ್ತವರಿಗೆ ಇಲ್ಲೊಂದು ಸಂತಸದ ಸುದ್ದಿ. ಇದು ೨ ಕೋಟಿ ಉದ್ಯೋಗಗಳ ಸುಳ್ಳು ಭರವಸೆಯ ಸುದ್ದಿಯಂತೂ ಅಲ್ಲ. ೨ ಕೋಟಿ ರೂಪಾಯಿಗಳ ಉದ್ಯೋಗದ ಸುದ್ದಿ ಇದು. ಪ್ರತಿಷ್ಠಿತ ಮದ್ರಾಸ್ ಐಐಟಿಯಲ್ಲಿ ಈಗಿನ್ನೂ ಕಲಿಯುತ್ತಿರುವವರ ಪೈಕಿ ಒಬ್ಬ ವಿದ್ಯಾರ್ಥಿಗೆ ಕಂಪನಿಯೊಂದು ೨ ಕೋಟಿ ರೂಪಾಯಿ ವಾರ್ಷಿಕ ವೇತನದ ಕೆಲಸದ ಆಫರ್ ನೀಡಿದೆ. ಮದ್ರಾಸ್ ಐಐಟಿಯಲ್ಲಿ ಕಲಿತವರಿಗೆ ಪ್ರತಿಷ್ಠಿತ ಕಂಪನಿಗಳಿಂದ ಭಾರಿ ಬೇಡಿಕೆ ಇದೆ. ೩೮೦ ಕಂಪನಿಗಳು ಕ್ಯಾಂಪಸ್ಸಿಗೆ ಬಂದು ೧೧೯೯ ಉದ್ಯೋಗಗಳ ಆಫರ್ ನೀಡಿವೆ. ಅಂತರರಾಷ್ಟ್ರೀಯ ಬ್ರಾಂಡ್‌ಗಳಿಂದ ಸ್ಟಾರ್ಟ್‌ಅಪ್‌ಗಳವರೆಗೆ,
ವಿವಿಧ ಗಾತ್ರದ ಕಂಪನಿಗಳು ಇಲ್ಲಿ ಬಂದು ಪ್ರತಿಭಾ ಶೋಧ ನಡೆಸಿ, ಅಲ್ಲಿಯೇ ಆಫರ್ ಲೆಟರ್ ಅನ್ನೂ ನೀಡಿವೆ. ಈ ವರ್ಷ ಗರಿಷ್ಠ ಅಂದರೆ ೪೫ ಅಂತಾರಾಷ್ಟ್ರೀಯ ಕಂಪನಿಗಳು ಪ್ರತಿಭಾ ಶೋಧದಲ್ಲಿ ಪಾಲ್ಗೊಂಡು ಉದ್ಯೋಗಗಳನ್ನು ನೀಡಿವೆ. ರಾಕುಟಿನ್ ಮೊಬೈಲ್, ಗ್ಲೀನ್, ಮೈಕ್ರಾನ್ ಟೆಕ್ನಲಾಜೀಸ್, ಹೊಂಡಾ, ಕೊಹೆಸಿಟಿ, ಅಕ್ಸೆಂರ್ಚ ಜಪಾನ್, ಹೈಲ್ಯಾಬ್ಸ್ ಇಂಕ್, ಕ್ವಾಂಟ್ ಬಾಕ್ಸ್, ರೀಸರ್ಚ್, ರುಬಿಕ್, ಮೆಡಿಯಾ ಟೆಕ್, ಕೋಟಿ ರೂಪಾಯಿಗೂ ಹೆಚ್ಚು ವೇತನ ಆಫರ್ ನೀಡಿವೆ.
ವಿಹಾರ
ಶ್ರೀರಂಗಪಟ್ಟಣದಿಂದ ೩ ಕಿ.ಮೀ. ಪಶ್ಚಿಮಕ್ಕೆ, ಪಶ್ಚಿಮವಾಹಿನಿಗೆ ಅನತಿ ದೂರದಲ್ಲಿದೆ ರಂಗನತಿಟ್ಟು. ಸುಮಾರು ೦.೬೭ ಚದರ ಕಿ.ಮೀ. ವಿಸ್ತೀರ್ಣದ ನಾಲ್ಕಾರು ಕಿರುದ್ವೀಪಗಳನ್ನು ತನ್ನೊಡಲಲ್ಲಿ ನಿರ್ಮಿಸಿರುವ ಕಾವೇರಿಯು, ಇಲ್ಲಿ ಕವಲೊಡೆದು ಒಂದಷ್ಟು ದೂರ ಹರಿದು ಮತ್ತೆ ಒಂದಾಗುತ್ತದೆ. ಸುಣ್ಣದ ಕಲ್ಲಿನಿಂದೊಡಗೂಡಿದ ಈ ದ್ವೀಪಕ್ಕೆ ನಿರ್ದಿಷ್ಟ ಸಮಯದಲ್ಲಿ ದೇಶ-ವಿದೇಶಗಳಿಂದ ಬಂದು ಹೋಗುವ ವಿವಿಧ ಪಕ್ಷಿಗಳಿಂದಾಗಿ ಇದೊಂದು ಪ್ರಾಕೃತಿಕ ಪಕ್ಷಿಧಾಮವಾಗಿದೆ. ಪಕ್ಷಿಪ್ರೇಮಿ ಹಾಗೂ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ಅವರಿಂದಾಗಿ ೧೯೪೦ರ ಜೂನ್ ಒಂದರಿಂದ ಇದನ್ನು ‘ರಾಷ್ಷ್ಟ್ರೀಯ ಪಕ್ಷಿಧಾಮ’ವೆಂದು ಘೋಷಿಸಿ ಸಂರಕ್ಷಿಸಲಾಗುತ್ತಿದೆ. ಇಲ್ಲಿಯ ಮಡುವಿನಲ್ಲಿ ಮೊಸಳೆಗಳೊಂದಿಗೆ ನೀರು ನಾಯಿ, ಬಳಿ, ಕೂರಲು, ಮುಚ್ಯಾಲು, ಕೆಮ್ಮೀನು, ಬಾಳೆ, ಗೂಡ್ಲೆ, ಬಂಗಿಸಿದ್ದ, ಅವಲುಕುಚ್ಚು, ಕೊರವ, ಹಾವು, ಅರ್ಜಗೆಂಡ, ಮುಂತಾದ ಜಾತಿಯ ಮೀನುಗಳೂ ಇದ್ದು, ದೊಡ್ಡ ದ್ವೀಪದಲ್ಲಿ ಗಿಡಮರಗಳು ದಟ್ಟವಾಗಿರುವ ಎಡೆಯಲ್ಲಿ ನವಿಲು, ನರಿ, ಮೊಲ, ಕಾಡುದನ, ಜಿಂಕೆ, ಮುಂತಾದ ಪ್ರಾಣಿಗಳೂ ಇವೆ. ಪ್ರಕೃತಿ ನಿರ್ಮಿತ ಈ ದ್ವೀಪ ಸಮೂಹವು ಪಕ್ಷಿಗಳಿಗೆ ಪ್ರಾಕೃತಿಕ ರಕ್ಷಣೆ, ನೈಸರ್ಗಿಕ ಆಹಾರ ಲಭ್ಯತೆಯ ಅವಕಾಶಗಳನ್ನು ಕಲ್ಪಿಸಿದೆ.
ಹೀಗಾಗಿ ಸಂತಾನ ಸಂಭ್ರಮಕ್ಕೆಂದು ದೇಶ ವಿದೇಶಗಳಿಂದ ಪಕ್ಷಿಗಳು ಇಲ್ಲಿ ಬಂದು ಹೋಗುತ್ತವೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…