ಎಡಿಟೋರಿಯಲ್

ಆಂದೋಲನ ವಿ4 | ವಿತ್ತ-ವಿಜ್ಞಾನ-ವಿಶೇಷ-ವಿಹಾರ

ವಿತ್ತ

ಚಿನ್ನದ ಮೇಲೆ ಮತ್ತಷ್ಟು ಸುಂಕ
ಕೇಂದ್ರ ಸರ್ಕಾರ ಚಿನ್ನದ ಆಮದಿನ ಮೇಲೆ ಸುಂಕವನ್ನು ಹೆಚ್ಚಿಸಿದೆ. ಇದುವರೆಗೆ ಇದ್ದ ಶೇ.೭.೫ರ ಆಮದು ಸುಂಕವೀಗ ಶೇ.೧೨.೫ಕ್ಕೆ ಏರಿದೆ. ಮೇ ತಿಂಗಳಲ್ಲಿ ಚಿನ್ನದ ಆಮದು ಗಣನೀಯವಾಗಿ ಜಿಗಿದ ಪರಿಣಾಮ ಸುಂಕ ಏರಿಸಲಾಗಿದೆ. ಮೇ ತಿಂಗಳೊಂದರಲ್ಲೇ ಭಾರತ ಆಮದು ಮಾಡಿಕೊಂಡ ಚಿನ್ನದ ಪ್ರಮಾಣ ೯೦ ಟನ್ ದಾಟಿದೆ. ಸಮಾನ್ಯವಾಗಿ ತಿಂಗಳಲ್ಲಿ ೨೦ ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುವುದು ವಾಡಿಕೆ. ಈ ಆಮದು ಸುಂಕವಲ್ಲದೇ ದೇಶೀಯವಾಗಿ ಮಾರಾಟವಾಗುವ ಚಿನ್ನದ ಮೇಲೆ ಶೇ.೩ರಷ್ಟು ಜಿಎಸ್ ಟಿ ಹೇರಲಾಗುತ್ತದೆ. ಚಿನ್ನ ಆಮದು ಹೆಚ್ಚಿದಷ್ಟೂ ವಿದೇಶಿ ವಿನಿಮಯದ ಮೇಲಿನ ಒತ್ತಡ ಹೆಚ್ಚುತ್ತದೆ. ಆ ಕಾರಣಕ್ಕಾಗಿ ಸುಂಕ ಹೇರಲಾಗಿದೆ. ಈ ಹಿಂದೆ ಶೇ.೧೨.೫ರಷ್ಟಿದ್ದ ಆಮದು ಸುಂಕವನ್ನು ಕಳೆದ ಬಜೆಟ್ ನಲ್ಲಿ ಶೇ.೭.೫ಕ್ಕೆ ತಗ್ಗಿಸಲಾಗಿತ್ತು. ಈಗ ಮತ್ತೆ ಏರಿಕೆ ಮಾಡಲಾಗಿದೆ. ಆಮದು ಸುಂಕ ಕಡಮೆ ಇದ್ದಾಗ ಚಿನ್ನದ ಕಳ್ಳಸಾಗಣೆ ಪ್ರಮಣ ತಗ್ಗುತ್ತದೆ. ಸುಂಕ ಏರಿದಾಗ ಕಳ್ಳಸಾಗಣೆ ಪ್ರಮಾಣವೂ ಹೆಚ್ಚುತ್ತದೆ.


ವಿಜ್ಞಾನ

ಅನ್ಯಗ್ರಹಜೀವಿಗಳಿಂದ ಸಂದೇಶ ರವಾನೆ!

ಅನ್ಯಗ್ರಹದಲ್ಲಿರುವ ಬುದ್ಧಿವಂತ ಜೀವಿಗಳು ಭೂಮಿಗೆ ಸಂದೇಶವನ್ನು ರವಾನಿಸಬಹುದು ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಬೆಳಕಿನ ಕಣಗಳು ಅಥವಾ ಫೋಟಾನ್ಗಳು, ಅವುಗಳ ಕ್ವಾಂಟಮ್ ಸ್ವಭಾವವನ್ನು ಕಳೆದುಕೊಳ್ಳದೆ ವಿಶಾಲವಾದ, ಅಂತರತಾರಾ ಅಂತರದಲ್ಲಿ ಸಂದೇಶವನ್ನು ಹರಡಬಹುದು ಎಂದು ಫಿಸಿಕಲ್ ರಿವ್ಯೆ ಜೂನ್ ೨೮ರ ಸಂಚಿಕೆಯಲ್ಲಿ ವರದಿ ಮಾಡಿದೆ. ಅಂದರೆ ಭೂಮ್ಯತೀತ ಸಂಕೇತಗಳನ್ನು ಹುಡುಕುವ ವಿಜ್ಞಾನಿಗಳು ಕ್ವಾಂಟಮ್ ಸಂದೇಶಗಳನ್ನು ಸಹ ನೋಡಬಹುದಾಗಿದೆ.
ವಿಜ್ಞಾನಿಗಳು ಪ್ರಸ್ತುತ ಭೂಮಿ ಆಧಾರಿತ ಕ್ವಾಂಟಮ್ ಸಂವಹನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ, ಇದು ಮಾಹಿತಿಯನ್ನು ಕಳುಹಿಸಲು ಕ್ವಾಂಟಮ್ ಕಣಗಳನ್ನು ಬಳಸುವ ತಂತ್ರಜ್ಞಾನವಾಗಿದೆ. ಮತ್ತು ಪ್ರಮಾಣಿತ ಅಥವಾ ಶಾಸ್ತ್ರೀಯ ಸಂವಹನಕ್ಕಿಂತ ಹೆಚ್ಚು ಸುರಕ್ಷಿತವಾಗಿರುವ ಸಾಮರ್ಥ್ಯವನ್ನು ಹೊಂದಿದೆ . ಬುದ್ಧಿವಂತ ಭೂಮ್ಯತೀತ ಜೀವಿಗಳು, ಅನ್ಯಗ್ರಹಗಳಿಗೆ ಹೋಗಿ, ಕ್ವಾಂಟಮ್ ಸಂವಹನವನ್ನು ಸಹ ಅಳವಡಿಸಿಕೊಂಡಿರಬಹುದು ಎಂದು ಸೈದ್ಧಾಂತಿಕ ಭೌತಶಾಸ್ತ್ರಜ್ಞ ಅರ್ಜುನ್ ಬೆರೇರಾ ಹೇಳುತ್ತಾರೆ. ಕ್ವಾಂಟಮ್ ಸಂವಹನಕ್ಕೆ ಒಂದು ಪ್ರಮುಖ ಅಡಚಣೆಯೆಂದರೆ ಡಿಕೋಹೆರೆನ್ಸ್, ಇದರಲ್ಲಿ ಕ್ವಾಂಟಮ್ ಕಣವು ಅದರ ಸುತ್ತಮುತ್ತಲಿನ ಜೊತೆಗೆ ಸಂವಹನ ನಡೆಸುವಾಗ ಅದರ ಪರಿಮಾಣವನ್ನು ಕಳೆದುಕೊಳ್ಳುತ್ತದೆ ಎನ್ನುತ್ತಾರೆ ಬೆರೇರಾ.


ವಿಶೇಷ

ಅಧ್ಯಕ್ಷರ ನಿವಾಸಕ್ಕೇ ಮುತ್ತಿಗೆ

ಶ್ರೀಲಂಕಾದಲ್ಲಿ ಪ್ರಧಾನಿ ಬದಲಾದರೂ ಸಮಸ್ಯೆಗಳು ಬದಲಾಗಿಲ್ಲ. ಪೆಟ್ರೋಲ್, ಡೀಸೆಲ್ ಕೊರತೆಯಿಂದಾಗಿ ಕೆಂಗಟ್ಟಿರುವ ಜನತೆ ಕೋಪವೀಗ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರತ್ತ ತಿರುಗಿದೆ. ಪ್ರತಿಭಟನಾನಿರತರು ಅಧ್ಯಕ್ಷ ಗೊಟಬಯ ಅವರ ನಿವಾಸಕ್ಕೆ ಮತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ಸೂಚನೆ ಪಡೆದಿರುವ ಶ್ರೀಲಂಕಾ ಸೇನೆಯು ಸುರಕ್ಷತೆಗಾಗಿ ಗೊಟಬಯ ಅವರನ್ನು ಸೇನಾ ಪ್ರಧಾನ ಕಚೇರಿಗೆ ಸ್ಥಳಾಂತರಿಸಿದೆ. ಜನರು ಹೆಲ್ಮೆಟ್, ಪೆಟ್ರೋಲ್ ಡಬ್ಬ ಮತ್ತಿತರ ವಸ್ತುಗಳನ್ನು ಹಿಡಿದು ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಪೊಲೀಸರು ಜಲಫಿರಂಗಿ ಬಳಸಿ ಜನರನ್ನು ತಡೆಯೆತ್ನಿಸಿದ್ದಾರೆ. ಆದರೆ, ಜನರನ್ನು ಚದುರಿಸಲಾಗದ ಕಾರಣ ಅಧ್ಯಕ್ಷರನ್ನೇ ಸ್ಥಳಾಂತರ ಮಾಡಲಾಗಿದೆ. ಹಳೆಯ ಸರ್ಕಾರ ಇದ್ದಾಗ ಜನರು ಸಚಿವರ ನಿವಾಸಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ದ್ವೀಪ ರಾಷ್ಟ್ರದಲ್ಲೀಗ ಪೆಟ್ರೋಲ್, ಡಿಸೇಲ್, ಔಷಧಿ, ಆಹಾರದ ಕೊರತೆಯಾಗಿದೆ. ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದರವರ ಬೇಡಿಕೆ ಮೊದಲು ಆಹಾರ ಮತ್ತು ಔಷಧಪೂರೈಕೆ ಮಾಡಿ ಎಂಬುದಾಗಿದೆ.


ವಿಹಾರ

ನಿಶಾನಿಮೊಟ್ಟೆ ಬೆಟ್ಟ

ಮಡಿಕೇರಿಯಿಂದ ಸುಮಾರು ೧೦ ಕಿ.ಮೀ ದೂರದಲ್ಲಿ ೩೦೦ ಅಡಿ ಎತ್ತರದಲ್ಲಿ ಈ ಶಿಖರವಿದೆ. ಇಷ್ಟೊಂದು ಎತ್ತರದಲ್ಲಿರುವ ಶಿಖರದ ಸುತ್ತಲಿನ ಪರಿಸರವನ್ನು ಪರಿಸರಪ್ರಿಯರು ಆಸ್ವಾದಿಸಬಹುದಷ್ಟೇ. ಆದರೆ ಗುಡ್ಡ ಏರಲು ಮಾತ್ರ ಗುಂಡಿಗೆ ಬೇಕು. ಚಾರಣ ಮಾಡುವ ಶಕ್ತಿ ಇರುವವರು ಮಾತ್ರ ಈ ಸಾಹಸಕ್ಕೆ ಕೈ ಹಾಕಬೇಕು. ಇಲ್ಲದಿದ್ದರೆ ಹಸರನ್ನುಟ್ಟ ನಿಸರ್ಗದ ವಿಹಂಗಮಯ ನೋಟ ಕಣ್ಣುಂಬಿಸಿಕೊಂಡು ಬರಬೇಕು. ನಿಶಾನಿಮೊಟ್ಟೆ ಎಂಬ ಹೆಸರು ಬಂದಿರುವ ಹಿಂದೆ ಕಾರಣವಿದೆ. ಕರಾವಳಿ ಪ್ರದೇಶದಿಂದ ಏರಿ ಬರಬಹುದಾಗಿದ್ದ ವೈರಿ ಸೈನ್ಯದ ಕುರಿತು ಇಲ್ಲಿಂದಲೇ ಮಾಹಿತಿ ಪಡೆದುಕೊಳ್ಳುತ್ತಿದ್ದವರು ಮಡಿಕೇರಿ ಅರಸರು. ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರು ಪಹರೆ ಕಾಯುತ್ತಿದ್ದರು. ಈ ಗುಡ್ಡದ ಮೇಲಿನಿಂದ ಶತ್ರು ಸೈನ್ಯ ಕಾಣುತ್ತಿತ್ತು. ಶತ್ರು ಸೈನ್ಯ ತಮ್ಮ ಮೇಲೆ ದಾಳಿ ಮಾಡಲು ಬರುತ್ತಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ನಿಶಾನೆ(ಬಾವುಟ) ತೋರಿಸುವ ಮೂಲಕ ಮಡಿಕೇರಿ ಕೋಟೆಗೆ ತುರ್ತು ರವಾನೆ ಮಾಡುತ್ತಿದ್ದರು. ಮೊಟ್ಟೆ ಎಂದರೆ ಕೊಡವರ ಭಾಷೆಯಲ್ಲಿ ಗುಡ್ಡ. ಗುಡ್ಡದ ಮೇಲೆ ನಿಶಾನೆ ತೋರುವ ಕಾರಣ ನಿಶಾನಿಮೊಟ್ಟೆಯಾಯಿತು ಎಂಬ ಇತಿಹಾಸವಿದೆ.

andolanait

Recent Posts

ಸದನದಲ್ಲಿ ವೈಯಕ್ತಿಕ ತೇಜೋವಧೆ ಸಲ್ಲದು; ಮಹಿಳಾ ಸದಸ್ಯರ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರ ಬೇಕು

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಸುವ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ಹಿರಿಯರ ಮನೆ ಎಂದೇ ಕರೆಯಲಾಗುವ…

1 min ago

ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸು

ಸಮ್ಮೇಳನ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಸಚಿವ ಸಿಆರ್‌ಎಸ್‌ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಥ್ ಬಿ.ಟಿ.ಮೋಹನ್‌ಕುಮಾರ್…

8 mins ago

ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…

2 hours ago

ಎಲ್ಲರ ಪಕ್ಕ ಕೂರುವ ಸಮಾನ ಹಕ್ಕು ನಮಗೆ ಬೇಕು

'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…

2 hours ago

`ವಿದೇಶಗಳಲ್ಲಿ ಕನ್ನಡ ಕಟ್ಟುವುದು ಸವಾಲಿನ ಕೆಲಸ`

ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…

2 hours ago

ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ

`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…

2 hours ago