ಓದುಗರ ಪತ್ರ
ಖಾಸಗಿಯವರು ನಿರ್ಮಿಸಿದ ಸ್ವಚ್ಛ ತಂಗುದಾಣ
‘ಆಂದೋಲನ’ ಪತ್ರಿಕೆಯಲ್ಲಿ ಮೈಸೂರು ನಗರದಲ್ಲಿರುವ ಬಸ್ ತಂಗುದಾಣಗಳ ಅವ್ಯವಸ್ಥೆಯ ಬಗ್ಗೆ ಬರೆಯುತ್ತಿದ್ದೀರಿ. ಕುವೆಂಪು ನಗರದ ಎನ್-ಬ್ಲಾಕ್, ಮುಖ್ಯ ರಸ್ತೆಯಲ್ಲಿರುವ ದಿ. ಹೋರಿ ಸುಬ್ಬೇಗೌಡ ಸ್ಮಾರಕ ಬಸ್ಸು ನಿಲ್ದಾಣ ಇದಕ್ಕೆ ಅಪವಾದವೆಂತೆ ಇದೆ, ಮೈಸೂರು ನಗರದಲ್ಲೇ ಇದೊಂದು ಸುಂದರ ಮತ್ತು ಸ್ವಚ್ಚ ಬಸ್ಸು ತಂಗುದಾಣವಾಗಿದೆ. ನಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿ, ನಿರ್ವಹಣೆ ಮಾಡುತಿದ್ದೇವೆ. ಪ್ರತಿ ಎರಡು- ಮೂರು ದಿನಗಳಿಗೊಮ್ಮೆ ಕಸ ಗುಡಿಸಿ ನೀರಿನಿಂದ ತೊಳೆದು ಸ್ವಚ್ಚಗೊಳಿಸಿ, ಪ್ರತಿ ವರ್ಷಕ್ಕೊಮ್ಮೆ ನಮ್ಮ ಸ್ವತಃ ಖರ್ಚಿನಲ್ಲಿ ಸುಣ್ಣ-ಬಣ್ಣ ಬಳಿಸುತ್ತೇವೆ. ಸರ್ಕಾರದ ವತಿಯಿಂದ ನಿರ್ಮಿಸುವ ಬಸ್ಸು ನಿಲ್ದಾಣಗಳು, ನಿರ್ವಹಣೆ ಇಲ್ಲದೇ ಗಬ್ಬು- ನಾರುತ್ತಿವೆ, ಭಿಕ್ಷುಕರ ತಂಗುದಾಣಗಳಗಿವೆ. ಇನ್ನು ಆ ಪ್ರದೇಶಗಳ ಶಾಸಕರ ಅನುಧಾನದಿಂದ ನಿರ್ಮಾಣ ಮಾಡಿರುವ ಬಸ್ಸು ತಂಗುದಾಣಕ್ಕೆ, ಸ್ಥಳೀಯ ಶಾಸಕರ ಮತ್ತು ಆ ವಾರ್ಡಿನ ಕಾರ್ಪೋರೇಟರ್‌ಗಳ ಭಾವ ಚಿತ್ರಗಳನ್ನು ಹಾಕುವುದಾರೂ ಏಕೆ? ಇವರು ಸ್ವಂತ ಖರ್ಚಿನಲ್ಲಿ ಬಸ್ಸು ತಂಗುದಾಣನ್ನು ನಿರ್ಮಿಸಿದ್ದಾರಾ? ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣಕ್ಕೆ ಇವರ ಫೊಟೋ ಹಾಕಿಸಿಕೊಳ್ಳುವುದು ಎಷ್ಟು ಸರಿ?
-ಬೂಕನಕೆರೆ ವಿಜೇಂದ್ರ, ಮೈಸೂರು.
ವಿಶ್ವಮಾನವ ರೈಲಿನಲ್ಲಿ ಅವ್ಯವಸ್ಥೆ
ಮೈಸೂರಿನಿಂದ ಬೆಳಗಾವಿಗೆ ಪ್ರತಿ ದಿನ ನೇರ ಸಂಪರ್ಕ ಕಲ್ಪಿಸುವ ರೈಲಿಗೆ ನಮ್ಮ ನಾಡಿನ ಪ್ರಸಿದ್ಧ ಕವಿ ನೆನಪಿನ ವಿಶ್ವಮಾನವ ಎಕ್ಸ್‌ಪ್ರೆಸ್ ಹೆಸರು ಇಡಲಾಗಿದೆ. ಈ ರೈಲಿನಲ್ಲಿ ಬೆಳಿಗ್ಗೆ ೬ ಗಂಟೆಗೆ ಹೊರಟು ರಾತ್ರಿ ೧೦ ಗಂಟೆಗೆ ಬೆಳಗಾವಿ ಸೇರುವ ವೇಳೆಗೆ ಪ್ರಯಾಣಿಕರು ಪಡುವ ಬವಣೆ ಹೇಳಲಸಾಧ್ಯ. ಪ್ರತಿ ದಿನ ಸರಿ ಸುಮಾರು ೧ ರಿಂದ ೩ ಗಂಟೆಗಳ ಕಾಲ ಲೇಟಾಗಿ ತಲುಪುವ ಈ ರೈಲಿನ ಸಮಸ್ಯೆ ಸಂಬಂಧಿಸಿದವರ ಗಮನಕ್ಕೆ ಬರದಿರುವುದು ಆಶ್ಚರ್ಯವೇ ಸರಿ. ರಿಸರ್ವ್ ಬೋಗಿಗಳಲ್ಲಿ ತಿರುಗದ ಫ್ಯಾನ್, ನೀರು ಇಲ್ಲದ ಶೌಚಾಲಯ, ಕೆಟ್ಟು ಹೋದ ಶೌಚಾಲಯದ ನಲ್ಲಿ ಗಳು… ಒಂದೇ ಎರಡೇ ಅವ್ಯವಸ್ಥೆಗಳ ಪಟ್ಟಿ. ಸರಿ ಸುಮಾರು ೧೫ ರಿಂದ ೧೯ ಗಂಟೆ ಈ ರೈಲಿನಲ್ಲಿ ಪ್ರಯಾಣ ಮಾಡುವಾಗ ಆಗುವ ಹಿಂಸೆ ವರ್ಣಿಸಲು ಸಾಧ್ಯವಿಲ್ಲ. ಅವ್ಯವಸ್ಥೆ ತುಂಬಿ ತುಳುಕುವ ಈ ರೈಲಿಗೆ ವಿಶ್ವಮಾನವ ಹೆಸರು ಒಂದು ಕಳಂಕ.. ಕ್ಷುಲಕ ವಿಚಾರಗಳಿಗೆ ಬಡಿದಾಡುವ ನಮ್ಮ ಸಂಸದರು, ಶಾಸಕರು ಇನ್ನಿತರರಿಗೆ ಈ ತರದ ಸಮಸ್ಯೆಗಳು ಕಾಣುವುದೇ ಇಲ್ಲವೇ?
-ನಿಡ್ತ ಉಮಾಪತಿ, ಕುವೆಂಪು ನಗರ, ಮೈಸೂರು.
ವಿಶ್ವ ಕಪ್ ಫುಟ್ಬಾಲ್ ಪಂದ್ಯ ವೀಕ್ಷಣೆ
ವಿಶ್ವ ದಾದ್ಯಂತ ಕ್ರೀಡಾ ಪ್ರೇಮಿಗಳ ಕುತೂಹಲವಾಗಿದ್ದ ವಿಶ್ವ ಕಪ್ ಫುಟ್ಬಾಲ್ ಪಂದ್ಯವಳಿ ಆರಂಭವಾಗಿದೆ. ಪಂದ್ಯಾವಳಿ ಪ್ರಸಾರದ ಹಕ್ಕು ಸ್ಪೋರ್ಟ್ಸ್‌೧೮ ಚಾನೆಲ್ ಪಡೆದಿದೆ. ಅದರ ಉಚಿತ ಪ್ರಸಾರಲಭ್ಯವಿಲ್ಲ. ನಾನು ನಮ್ಮ ಕೇಬಲ್ ಆಪರೇರ್ಟ ಗೆ ಕರೆ ಮಾಡಿ ಕೇಳಲಾಗಿ, ಅದು ಪೇ ಚಾನೆಲ್ ರ್ಸ ಅದಕ್ಕೆ ಪ್ರತ್ಯೇಕ ಹಣ ಪಾವತಿ ಮಾಡಿ ಪಡೆಯ ಬೇಕು ಎಂದು ತಿಳಿಸಿದರು.
ಈಗಾಗಲೇ ಕೇಬಲ್ ನವರು ಪ್ರತಿ ೨೮ ದಿನಗಳಿಗೊಮ್ಮೆ ೨೮೦ ರಿಂದ- ೩೦೦ ರೂ ಗಳನ್ನು ಪ್ಯಾಕೇಜ್ ಲೆಕ್ಕಾದಲ್ಲಿ ಪಡೆಯುತ್ತಾರೆ. ಆದರೆ, ವೀಕ್ಷಕರಿಗೆ ಬೇಕಾದ ಚಾನೆಲ್ ನೋಡಲು ಸಾಧ್ಯವಾಗುತ್ತಿಲ್ಲ. ವಿಶ್ವ ಕಪ್ ಫುಟ್ಬಾಲ್ ಪಂದ್ಯವಳಿ ವೀಕ್ಷಿಸಲು ಅನುಕೂಲವಾಗುವಂತೆ ಸಂಬಂಧಪಟ್ಟವರು ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ.
-ಮುಳ್ಳೂರು ಪ್ರಕಾಶ್, ಮೈಸೂರು.
ನಾಚಿಕೆಗೇಡು
ಹೆಗ್ಗೊಠಾರ ಗ್ರಾಮದಲ್ಲಿ ನಡೆದಿರುವ ದಲಿತ ಮಹಿಳೆ ನೀರು ಕುಡಿದ್ದದ್ದಕ್ಕೆ ತೊಂಬೆಯಲ್ಲಿದ್ದ ನೀರನ್ನು ಖಾಲಿ ಮಾಡಿ ಶುದ್ಧೀಕರಿಸಿದ ಘಟನೆ ತುಂಬಾ ಹೇಯಕೃತ್ಯವಾಗಿದೆ. ಅನಾಗರಿಕವಾಗಿ ವರ್ತಿಸಿದವರಿಗೆ ಶಿಕ್ಷೆಯಾಗಲಿ. ಇನ್ನೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಲಸ ಆಗಬೇಕಿದೆ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು
ಬೆಂಗಳೂರು : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…
ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್…
ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ…
ರಾಂಚಿ : ಉತ್ತರ ಭಾರತವು ತೀವ್ರ ಶೀತಗಾಳಿಗೆ ತತ್ತರಿಸಿದ್ದು, ಭಾರೀ ಹಿಮಪಾತದಿಂದ ಪಟ್ಟಣಗಳು, ದೇವಾಲಯಗಳು ಮತ್ತು ಸುತ್ತಮುತ್ತಲಿನ ಬೆಟ್ಟಗಳು ದಟ್ಟ…
ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ…
ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ…