ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 20 ಮಂಗಳವಾರ 2022

ಅದ್ಧೂರಿ ದಸರಾ ಬೇಕೆ?
ಕೋವಿಡ್ ೧೯ ಸೋಂಕು ಹರಡಿದ್ದರಿಂದಾಗಿ ದೇಶದ ಬಡಜನರಿಗೆ ಎದುರಾದ ಬಹುತೇಕ ಸಮಸ್ಯೆಗಳು ಹಾಗೇ ಇವೆ. ಅದರಲ್ಲೂ ಲಾಕ್‌ಡೌನ್ ಅವಧಿಯಲ್ಲಿ ಉದ್ಭವಿಸಿದ ನಿರುದ್ಯೋಗ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆರ್ಥಿಕತೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಚೇತರಿಕೆಯ ಹಾದಿಯಲ್ಲಿದೆ ಅಷ್ಟೇ. ಬಹಳಷ್ಟು ಜನರು ನಿರುದ್ಯೋಗಿಗಳಾಗಿಯೇ ಇದ್ದಾರೆ. ಇಂತಹ ಸಂದರ್ಭದಲ್ಲಿ ದಸರಾ ಹಬ್ಬವನ್ನು ಅದ್ಧ್ದೂರಿಯಾಗಿ ಆಚರಿಸುವ ಅಗತ್ಯ ಇದೆಯೇ? ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ದಸರಾ ಹಬ್ಬ ಆಚರಿಸುವಷ್ಟು ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆಯೇ? ದೀಪಾಲಂಕಾರ, ಯುವಸಂಭ್ರಮ ,ಯುವ ದಸರಾ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವುದು ಸರಿಯೇ? ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸಿಕ್ಕಿಲ್ಲ, ಸಮವಸ್ತ್ರವೂ ಕೆಲವೆಡೆ ಸಿಕ್ಕಿಲ್ಲ. ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವಾಗುತ್ತಿದೆ. ಪ್ರವಾಹ ಪರಿಸ್ಥಿತಿಯಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ರೈತರಿಗಾದ ನಷ್ಟಕ್ಕೆ ಇನ್ನೂ ಪರಿಹಾರ ನೀಡಿಲ್ಲ. ಈ ಹಂತದಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರ ಅದ್ಧೂರಿ ದಸರಾ ಆಚರಣೆಗೆ ಮುಂದಾಗಿರುವುದು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನವಲ್ಲದೇ ಮತ್ತೇನು ಅಲ್ಲ.
ನಾಗೇಶ್ ಕೆ., ಮಾನಸಗಂಗೋತ್ರಿ, ಮೈಸೂರು.


ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಲಿ
೨೦೨೦ ರ ಏಪ್ರಿಲ್‌ನಲ್ಲಿ ಕೋವಿಡ್ ತೀವ್ರ ಹರಡುತ್ತಿದ್ದ ಸಮಯದಲ್ಲೇ ಚೀನಾ ಭಾರತದ ಪೂರ್ವ ಲಡಾಕ್‌ನ ೧೦೦೦ ಚ. ಕಿ. ಮೀ. ಪ್ರದೇಶವನ್ನು ಅತಿಕ್ರಮಣ ಮಾಡಿಕೊಡಿದ್ದು ಭಾರತ ಯಾವುದೇ ಪ್ರತಿರೋಧ ತೋರದೆ ಬಿಟ್ಟು ಕೊಟ್ಟಿದೆ. ಏಪ್ರಿಲ್ ೨೦೨೦ರ ಯಥಾಸ್ಥಿತಿಗೆ ಮರಳುವಂತೆ ಚೀನಾ ಸೇನೆಗೆ ಹೇಳಿದರೂ ಚೀನಾಸೇನೆ ತಿರಸ್ಕರಿಸಿದೆ. ಪೂರ್ವ ಲಡಾಕ್‌ನಿಂದ ಭಾರತ ಹಾಗೂ ಚೀನಾದ ಸೇನೆಗಳ ವಾಪಸಾತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸರ್ಕಾರ ಹೇಳಿಕೆ ನೀಡಿತ್ತು. ಆದರೆ ಚೀನಾ ಭಾರತದ ಅತಿಕ್ರಮಣ ಪ್ರದೇಶವನ್ನು ಬಿಟ್ಟು ಕೊಟ್ಟಿಲ್ಲ.
ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ಇದೊಂದು ಕಳವಳಕಾರಿ ಸಂಗತಿಯೇ. ಈ ಹಿಂದೆ ೬೦ರ ದಶಕದಲ್ಲಿ ನಡೆದ ಯುದ್ಧದಲ್ಲಿಯೂ ಭಾರತದ ಸಾವಿರಾರು ಚ. ಕಿ. ಮೀ. ಪ್ರದೇಶ ಚೀನಾ ಅತಿಕ್ರಮಿಸಿದ್ದು , ಅದನ್ನೂ ಚೀನಾ ಬಿಟ್ಟು ಕೊಟ್ಟಿಲ್ಲ. ಬಹುಶಃ ಆಗ ಭಾರತ ದ ಸೇನೆ ಇನ್ನೂ ಬಲಶಾಲಿಯಾಗಿರಲಿಲ್ಲ. ಆದರೆ, ಇದೀಗ ೨೦೧೪ ರಲ್ಲಿ ನರೇಂದ್ರ ಮೋದಿ ಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಭಾರತ ವಿಶ್ವದ ಬಲಿಷ್ಠ ರಾಷ್ಟ್ರ, ವಿಶ್ವದ ದೊಡ್ಡಣ್ಣನೇ ಭಾರತದ ಶಕ್ತಿಗೆ ತಲೆಬಾಗುತ್ತಾನೆ. ವಿಶ್ವದ ಬಲಶಾಲಿ ದೇಶಗಳ ಅಭಿವೃದ್ಧ್ಧಿಯ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಸ್ವಘೋಷಿತ ಶಕ್ತಿಗಳು ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಅತಿರಂಜಿತವಾಗಿ ಬಿಂಬಿಸುತ್ತಿವೆ. ಆದರೆ ವಾಸ್ತವವೇ ಬೇರೆ ಇದೆ ಎನ್ನುವುದು ಚೀನಾ ಅತಿಕ್ರಮಣದಿಂದ ಸಾಬಿತಾಗಿದೆ. ಇದು ಕಡೆಗಣಿಸುವ ಸಂಗತಿಯಲ್ಲ. ಆದ್ದರಿಂದ ಈ ಬಗ್ಗೆ ವಾಸ್ತವ ಸಂಗತಿಯನ್ನು ದೇಶದ ಪ್ರಜೆಗಳಿಗೆ ತಿಳಿಸಬೇಕಾದ್ದು ಸರ್ಕಾರದ ಜವಾಬ್ದಾರಿ ಯಾಗಿದೆ. ಇಲ್ಲದಿದ್ದರೆ ಇವರು ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ದೂಷಿಸುವುದರಲ್ಲಿ ಯಾವುದೇ ಉರುಳಿರುವುದಿಲ್ಲ ಎನ್ನುವುದು ಜನರಿಗೆ ಮನದಟ್ಟಾ ಗಲಿದೆ.
-ಮುಳ್ಳೂರು ಪ್ರಕಾಶ್, ಮೈಸೂರು.


ಗ್ರಾಹಕ ಸ್ನೇಹಿ ನಿರ್ಧಾರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಬ್ಯಾಂಕುಗಳ ಸಂಸ್ಥೆಯ ೭೫ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ಬ್ಯಾಂಕುಗಳು ಸ್ಥಳೀಯ ಭಾಷೆಯನ್ನು ತಿಳಿದಿರುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು’ ಎಂದು ಸೂಚಿಸಿರುವುದು ಸ್ವಾಗತಾರ್ಹ. ಸ್ಥಳೀಯ ಭಾಷೆಯಲ್ಲಿ ಮಾತನಾಡಲಾಗದ ಸಿಬ್ಬಂದಿಯನ್ನು ಗ್ರಾಹಕರ ಜತೆ ವ್ಯವಹರಿಸುವ ಕೆಲಸಗಳಿಗೆ ನಿಯೋಜಿಸದಂತೆಯೂ ಸೂಚಿಸಿರುವ ಅವರ ನಿಲವು ಗ್ರಾಹಕ ಸ್ನೇಹಿಯಾಗಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಮಾತು ‘ಸ್ಥಳಿಯರಿಗೆ ಉದ್ಯೋಗ’ ಅನ್ನುವ ಕನ್ನಡಿಗರ ಕೂಗಿಗೆ ಸಿಕ್ಕ ಮಾನ್ಯತೆಯಾಗಿದೆ. ಕೇಂದ್ರ ಸರ್ಕಾರವು ನಡೆಸುವ ಎಲ್ಲ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳಿಗೆ ಸ್ಥಳೀಯ ಭಾಷೆಗಳ ಜ್ಞಾನವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು. ಎಲ್ಲ ಖಾಸಗಿ ಹಾಗೂ ಬಹುರಾಷ್ಟ್ರೀಯ ಬ್ಯಾಂಕ್‌ಗಳು ಈ ಆದೇಶವನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು.
ರಾ.ನಂ. ಚಂದ್ರಶೇಖರ, ಸಂಚಾಲಕರು, ಕನ್ನಡ ಗೆಳೆಯರ ಬಳಗ.

andolanait

Recent Posts

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

40 mins ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

51 mins ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

4 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

4 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

4 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

4 hours ago