ಕಾಡಾನೆಗಳ ಹಾವಳಿಗೆ ಪರಿಹಾರ ಯಾವಾಗ?
ಎಚ್.ಡಿ.ಕೋಟೆ ಭಾಗವು ಅರಣ್ಯ ಪ್ರದೇಶವನ್ನು ಹೆಚ್ಚಾಗಿ ಹೊಂದಿರುವುದರಿಂದ ಇಲ್ಲಿ ಕಾಡು ಪ್ರಾಣಿಗಳು ಕೂಡ ಹೆಚ್ಚಾಗಿ ಕಂಡು ಬರುತ್ತವೆ. ಅದರಲ್ಲೂ ಕಾಡಾನೆಗಳಂತೂ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಇದು ಒಂದೆಡೆ ಸಂತೋಷದ ವಿಚಾರವಾದರೆ, ಮತ್ತೊಂದು ದೃಷ್ಟಿಯಲ್ಲಿ ಇಲ್ಲಿನ ರೈತರಿಗೆ ತೀರಾ ಸಂಕಷ್ಟ ಎದುರಾಗುವಂತಾಗಿದೆ. ರೈತರ ಬೆಳೆಗಳು ಇನ್ನೇನು ಕೈ ಸೇರುವ ಹಂತದಲ್ಲಿ , ಕಾಡಾನೆಗಳು ದಾಳಿ ನಡೆಸಿ ತಿಂದು -ತುಳಿದು ನಾಶ ಮಾಡುತ್ತಿವೆ. ಈ ವೇಳೆ ಸಾಕಷ್ಟು ಬಾರಿ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರ ಮೇಲೂ ದಾಳಿ ನಡೆಸಿ ಅವರನ್ನು ಬಲಿಪಡೆದಿರುವ ಉದಾಹರಣೆಗಳು ಸಾಕಷ್ಟಿವೆ. ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಸಾಕಷ್ಟು ಗ್ರಾಮಗಳಲ್ಲಿ ಈ ರೀತಿಯ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ವರ್ಷದ ಹಿಂದೆ ಕಾಡಾನೆಯೊಂದು ದಾಳಿ ನಡೆಸಿ ಕಲ್ಲಂಬಾಳು ಗ್ರಾಮದ ಸುಮಾರು 45 ವರ್ಷದ ಮಹಿಳೆಯನ್ನು ಸಾಯಿಸಿದ್ದು, ಇದಾದ ಕೆಲವು ತಿಂಗಳುಗಳ ಅಂತರದಲ್ಲೇ ಮತ್ತೆರಡು ಕಾಡಾನೆಗಳು ಬೆಳಗಿನ ಜಾವದಲ್ಲೆ ಗ್ರಾಮಕ್ಕೆ ನುಗ್ಗಿ ಡೇರಿಗೆ ಹಾಲುಹಾಕಲು ತೆರಳುತ್ತಿದ್ದ ಓರ್ವ ವೃದ್ಧನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು. ಅಲ್ಲದೆ ಕಳೆದ ಕೆಲದಿನಗಳಲ್ಲಿ ಕಲ್ಲಂಬಾಳು ಸೇರಿದಂತೆ ಸರಗೂರಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಕಾಡಾನೆಗಳು ಕಾಣಿಸಿಕೊಂಡು ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿವೆ. ಹಾಗಾಗಿ ಈ ಭಾಗದ ಗ್ರಾಮಗಳ ಜನರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ಹಾಗೂ ಬೆಳಗಿನ ಜಾವ ಮತ್ತು ಸಂಜೆಯ ಸಮಯದಲ್ಲಿ ಓಡಾಡಲು ಸಹಜವಾಗಿ ಭಯಪಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸಬೇಕು ಎಂಬುದು ಈ ಭಾಗದ ಜನರ ಮನವಿಯಾಗಿದೆ.
–ಕೆ.ಎಂ.ಅಭಿಷೇಕ್, ಪತ್ರಿಕೋದ್ಯಮ ವಿಭಾಗ,
ಮಹಾರಾಜ ಕಾಲೇಜು, ಮೈಸೂರು.
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…