ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 11 ಬುಧವಾರ 2022

 ಕಾಲೇಜುಗಳಲ್ಲಿ  ಶುಲ್ಕ ಕಡಿಮೆಗೊಳಿಸಿ

ರಾಜ್ಯ ಸರ್ಕಾರ ಇತ್ತೀಚೆಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಇದೇ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಈ ಶುಲ್ಕದ ಭಾರಕ್ಕೆ ತತ್ತರಿಸಿರುವ ಅನೇಕ ಬಡ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣವವನ್ನೇ ಮೊಟಕುಗೊಳಿಸುವಂತಹ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಶೇ.೯೦ ರಷ್ಟು ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರು, ಗ್ರಾಮೀಣ ಭಾಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅವಕಾಶಗಳಿಂದ ವಂಚಿತರಾಗಿರುವವರೇ ಇರುತ್ತಾರೆ. ಉತ್ತಮ ವಿದ್ಯಾಭ್ಯಾಸ ಪಡೆದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಬಯಕೆಯೊಂದಿಗೆ ಕಾಲೇಜಿಗೆ ಸೇರುತ್ತಾರೆ. ಆದರೆ, ಸರ್ಕಾರ ಹೀಗೆ ಸರ್ಕಾರಿ ಕಾಲೇಜುಗಳಲ್ಲಿಯೂ ಶುಲ್ಕವನ್ನು ಹೆಚ್ಚಿಸಿದರೆ ಅದನ್ನು ಭರಿಸುವುದು ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಈಗಲಾದರೂ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿಽಸಿರುವ ಶುಲ್ಕದ ಮೊತ್ತವನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು.

ಕೆ.ಪವನ್, ಪತ್ರಿಕೋದ್ಯಮದ ವಿಭಾಗ, ಮಹಾರಾಜ ಕಾಲೇಜು, ಮೈಸೂರು.


ಮಕ್ಕಳಿಗೂ ಬೇಕು ಸಾಹಿತ್ಯ ಸಮ್ಮೇಳನ

ನಾನು 9ನೇ ತರಗತಿ ಓದುತ್ತಿದ್ದು, ನನ್ನ ಮಾತೃಭಾಷೆ ಕನ್ನಡದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ. ಅಲ್ಲದೇ ನಮ್ಮಂತಹ ಸಾಕಷ್ಟು ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಭಾಷೆ, ಸಾಹಿತ್ಯದ ಅಭಿರುಚಿಯನ್ನು ಹೊಂದಿರುತ್ತಾರೆ. ಅದಕ್ಕೆ ಸರಿಯಾದ ಪ್ರೋತ್ಸಾಹ ಮಾತ್ರ ಸಿಗುತ್ತಿಲ್ಲ.ಕಥೆ ಬರೆಯುವುದು, ಕವನ ರಚನೆ ಮಾಡುವುದು, ನಾಟಕ, ನೃತ್ಯ ಹಾಗೂ ಸಂಗೀತ ಸೇರಿದಂತೆ ನಾನಾ ರಂಗಗಳಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಹೊಂದಿದ್ದು, ನಿರಂತರ ಅಭ್ಯಾಸದಲ್ಲಿಯೂ ತೊಡಗಿದ್ದಾರೆ. ಇಂತಹ ಮಕ್ಕಳಿಗೆಂದೇ ಅವಕಾಶಗಳು ದೊರೆಯುವುದು ಶಾಲಾಮಟ್ಟದಲ್ಲಿ ಮಾತ್ರವಾಗಿರುತ್ತದೆ. ಅದು ಕೂಡ ವರುಷದಲ್ಲೊಮ್ಮೆ ಮಾತ್ರ. ಆದರೆ, ಹಿರಿಯ ಸಾಹಿತಿಗಳು, ಕವಿಗಳು, ಕಲಾವಿದರು ಸೇರಿದಂತೆ ವಿವಿಧ ಪ್ರತಿಭಾವಂತರಿಗಾಗಿ ಅನೇಕ ಸಾಹಿತ್ಯ ಸಮ್ಮೇಳನಗಳು, ಗೋಷ್ಠಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ನಮಗೆ ಮಾತ್ರ ಅವಕಾಶಗಳು ತೀರಾ ಕಡಿಮೆ. ನಮ್ಮಂತಹ ಪುಟ್ಟ ಮಕ್ಕಳಲ್ಲಿನ ಕನ್ನಡ ಭಾಷಾಭಿಮಾನ ಹಾಗೂ ಸಾಹಿತ್ಯದ ಅಭಿರುಚಿಯನ್ನು ಗುರುತಿಸುವ ಸಲುವಾಗಿ ಜಿಲ್ಲಾ , ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಕ್ಕಳಿಗಾಗಿ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿದರೆ ಮಕ್ಕಳು ಸಾಹಿತ್ಯದಲ್ಲಿ ಆಸಕ್ತಿ ಇರುವ ಸ್ನೇಹಿತರೊಂದಿಗೆ ಬೆರೆತು ಸಾಹಿತ್ಯದಲ್ಲಿ ಮತ್ತಷ್ಟು ಆಸಕ್ತಿ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.

ಇದರಿಂದ ಮಕ್ಕಳಲ್ಲಿ ಭಾಷಾ ಪ್ರೇಮವೂ ಮೂಡುತ್ತದೆ. ಆದ್ದರಿಂದ ಮಕ್ಕಳ ಸಾಹಿತ್ಯಕ್ಕೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.

-ಎಂ.ಎಸ್.ಇಂಚರ ದತ್, 9ನೇ ತರಗತಿ, ಐಟಿಐ ಸಿಬಿಎಸ್ಸಿ ಪಬ್ಲಿಕ್ ಶಾಲೆ, ಬೆಂಗಳೂರು


ಸುಗಮ ಸಂಚಾರಕ್ಕಾಗಿ ರಸ್ತೆ ಸರಿಪಡಿಸಿ

ಮೈಸೂರು ನಗರಪಾಲಿಕೆ ವಾರ್ಡ್ ನಂ.೬೧ರ ವಿದ್ಯಾರಣ್ಯಪುರಂನ ನಾಲ್ಕನೇ ಮುಖ್ಯರಸ್ತೆಯ 9ನೆಯ ಕ್ರಾಸ್‌ನಲ್ಲಿ ಕಳೆದ ಎರಡು ವರ್ಷಗಳಿಂದಲೂ ಅವೈಜ್ಞಾನಿಕವಾಗಿ ಯುಜಿಡಿ ಲೈನ್‌ಗಳ ರಿಪೇರಿಯ ನೆಪದಲ್ಲಿ ನಾಲ್ಕು ಬಾರಿ ಅಗೆದು ಈ ರಸ್ತೆಯನ್ನು ಹದಗೆಡುವಂತೆ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗದಂತಾಗಿದೆ.ರಸ್ತೆಯಲ್ಲಿ ಸಂಪೂರ್ಣ ಮಣ್ಣಿನ ರಾಶಿಯೇ ಹರಡಿ ದೂಳುಮಯವಾಗಿ ಹೋಗಿದೆ. ಹೊರ ತೆಗೆದ ಮಣ್ಣನ್ನು ಕೂಡ ಸಮತಟ್ಟು ಮಾಡದೆ ಹಾಗೆಯೇ ಬಿಟ್ಟಿದ್ದು, ಕಾಮಗಾರಿಯನ್ನೂ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಸದ್ಯ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ದುಸ್ಸಾಹಸ ಮಾಡಬೇಕಾಗಿದ್ದು, ಪಾದಚಾರಿಗಳೂ ಓಡಾಡುವುದು ಕಷ್ಟವಾಗಿದೆ. ಇನ್ನೂ ಇಲ್ಲಿ ಮುಖ್ಯ ರಸ್ತೆಯ ಮಧ್ಯದಲ್ಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಒಂದು ತಿಂಗಳು ಕಳೆದರೂ ಅದನ್ನು ತೆರವುಗೊಳಿಸಿಲ್ಲ. ರಸ್ತೆಯಲ್ಲಿ ಮಣ್ಣಿನ ಜೊತೆಗೆ ಗುಂಡಿಗಳೂ ನಿರ್ಮಾಣವಾಗಿದ್ದು, ಈ ದೂಳಿನಿಂದ ಸ್ಥಳೀಯರ ಉಸಿರಾಟಕ್ಕೂ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಜನಪ್ರತಿನಿಽಗಳು ಹಾಗೂ ಅಽಕಾರಿಗಳು ಈ ಬಗ್ಗೆ ಗಮನ ನೀಡಿ ಅವೈಜ್ಞಾನಿಕ ಕಾಮಗಾರಿಗಳನ್ನು ಅಂತ್ಯಗೊಳಿಸಿ, ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾ.


ಬೀಳುವಂತಿರುವ ವಿದ್ಯುತ್ ಕಂಬ!

ಮೈಸೂರಿನ ಗಾಂಽನಗರದ ಆದಿಜಾಂಬವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ (ಶ್ರೀ ದುರ್ಗಾದೇವಿ ದೇವಸ್ಥಾನದ ರಸ್ತೆ) ವಿದ್ಯುತ್ ಕಂಬವೊಂದು ಬಾಗಿದ್ದು, ಯಾವುದೇ ಕ್ಷಣದಲ್ಲಿಯಾದರೂ ಬಿದ್ದು ಹಾನಿಯಾಗಬಹುದಾದ ಸನ್ನಿವೇಶ ಇದೆ ಕಂಬ ಬೀಳದಂತೆ ತಡೆಯಲು ಶಾಲೆಯ ಕಾಂಪೌಂಡ್‌ನಲ್ಲಿರುವ ಕಬ್ಬಿಣದ ಸಲಾಕೆಗೆ ಎಳೆದು ಕಟ್ಟಲಾಗಿದೆ. ಅಲ್ಲದೆ, ಈ ಕಬ್ಬಿಣದ ಸಲಾಕೆಯೂ ತುಕ್ಕು ಹಿಡಿದಿದ್ದು ಜೊತೆಗೆ ಗಿಡಗಂಟಿಗಳು ಅಲ್ಲಿ ಬೆಳೆದು ವಿದ್ಯುತ್ ತಂತಿಗಳ ಮೇಲೆಯೂ ಹಬ್ಬಿದೆ. ಈ ಕಂಬದ ಸಮೀಪದ ದಾರಿಯಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಸಾಕಷ್ಟು ಜನರು ಇಲ್ಲಿ ಓಡಾಡುತ್ತಿರುತ್ತಾರೆ. ಒಂದು ವೇಳೆ ವಿದ್ಯುತ್ ಕಂಬ ಕುಸಿದು ಬಿದ್ದರೆ ಬಾರಿ ಅಪಾಯವಾಗುವ ಸಾಧ್ಯತೆಗಳಿವೆ. ಆದ್ದರಿಂದ ಅಪಾಯ ಸಂಭವಿಸುವ ಮೊದಲು ಕಂಬವನ್ನು ಬದಲಾವಣೆ ಮಾಡಲು ಸಂಬಂಧಪಟ್ಟ ಅಽಕಾರಿಗಳು, ಜನಪ್ರತಿನಿಽಗಳು ಕ್ರಮಕೈಗೊಳ್ಳಬೇಕು.

ಎಂ.ಕೆ.ಕಿರಣ್, ಮಹದೇವಪುರ ಮುಖ್ಯ ರಸ್ತೆ, ಮೈಸೂರು.

andolanait

Recent Posts

ಹೊಸವರ್ಷ : ಪೊಲೀಸರ ಕಾರ್ಯ ಶ್ಲಾಘಿಸಿದ ಸಿಎಂ

ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…

2 hours ago

ಐಪಿಲ್‌ನಲ್ಲಿ ಬಾಂಗ್ಲಾ ಆಟಗಾರ : ಶಾರುಖ್‌ ಒಡೆತನದ ಕೆಕೆಆರ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಮುಂಬೈ :  ಐಪಿಎಲ್‌ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…

3 hours ago

ಮರ್ಯಾದೆಗೇಡು ಹತ್ಯೆ | ಮಾನ್ಯ ಹೆಸರಲ್ಲಿ ಕಾಯ್ದೆಗೆ ಚಿಂತನೆ ; ಸಚಿವ ಮಹದೇವಪ್ಪ

ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…

3 hours ago

ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳ ತನಿಖೆ ಬಳಿಕ ಪುನರ್ವಸತಿ ಕಲ್ಪಿಸಿ: ಯತ್ನಾಳ್‌ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್‌ ವಸತಿ ಕಲ್ಪಿಸಬೇಕು ಎಂದು ಶಾಸಕ…

4 hours ago

ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಭೀಕರ ಸ್ಫೋಟ: 40 ಮಂದಿ ಸಾವು

ಸ್ವಿಟ್ಜರ್ಲೆಂಡ್‌: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…

4 hours ago

ಹೊಸ ವರ್ಷಕ್ಕೆ ಮೆಟ್ರೋ ಧಮಾಕಾ: ಒಂದೇ ದಿನ 3.08 ಕೋಟಿ ಆದಾಯ

ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…

4 hours ago