ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 15 ಗುರುವಾರ 2022

ಕಲಾಮಂದಿರದಲ್ಲೊಂದು ಸೂಕ್ತ ಶೌಚಾಲಯ ನಿರ್ಮಿಸಿ

ಕಲೆಗಳ ಅನಾವರಣಕ್ಕೆಂದೇ ನಿರ್ಮಾಣವಾಗಿರುವ, ಮೈಸೂರು ನಗರಕ್ಕೆ ಮುಕುಟದಂತಿರುವ ಹಾಗೂ ಸಾಂಸ್ಕ ತಿಕ ಮತ್ತು ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ಸೂಕ್ತ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಕುಕ್ಕರಹಳ್ಳಿ ಕೆರೆಯ ದಂಡೆಯ ಮೇಲೆ ಅಂದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಗುಂಡೂರಾವ್ ಅವರ ನೇತೃತ್ವದಲ್ಲಿ ಕಲಾಮಂದಿರ ಎಂಬ ಸಭಾಂಗಣವನ್ನು ನಿರ್ಮಾಣ ಮಾಡಲಾಯಿತು. ಇತ್ತೀಚೆಗೆ ಪ್ರತಿ ದಿನವೂ ಕಲಾಮಂದಿರಲ್ಲಿ ಒಂದಲ್ಲಾ ಒಂದು ಕಾರ್ಯಕ್ರಮ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯ ನಾಗರಿಕರು, ಮಹಿಳೆಯರು ಭಾಗಿಯಾಗಿ ಅಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಸದ್ಯ ಈ ಕಲಾಮಂದಿರದಲ್ಲಿ ಸುಮಾರು ಒಂದೂ ವರೆ ಸಾವಿರದಷ್ಟು ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡ ಲಾಗಿದೆ. ಆದರೆ, ಇಲ್ಲಿ ಸಮರ್ಪಕವಾದ ಒಂದು ಬೃಹತ್ ಶೌಚಾಲಯದ ಅಗತ್ಯ ಇದೆ. ಈಗಿರುವ ಶೌಚಾಲಯವು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಜನಸಂಖ್ಯೆಗೆ ಸಾಕಾಗುವುದಿಲ್ಲ. ಈ ಕಲಾಮಂದಿರಕ್ಕೆ ಮುಖ್ಯ ಮಂತ್ರಿಗಳು ಸೇರಿದಂತೆ ವಿವಿಧ ಸಚಿವರು, ಶಾಸಕರು, ಮಂತ್ರಿಗಳು ಸಿನಿಮಾ ನಟ-ನಟಿಯರು, ಹಿರಿಯ ಕಲಾವಿದರು ಆಗಮಿಸುವ ಸ್ಥಳವಾಗಿದ್ದು, ಇಂತಹ ಸ್ಥಳಕ್ಕೆ ಒಂದು ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಯಾಗ ಬೇಕಿದೆ. ಈ ಕಲಾಮಂದಿರದ ಹೊರ ಭಾಗದಲ್ಲಿ ಸಾಕಷ್ಟು ಖಾಲಿ ಜಾಗಗಳು ಇರುವುದರಿಂದ, ಇಲ್ಲಿ ನಾಲ್ಕಾರು ಶೌಚಾಲಯಗಳನ್ನು ನಿರ್ಮಾಣ ಮಾಡಬಹುದಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು.

ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು. 


ಕಾಡಾನೆ ಸಾವಿಗೆ ಹೊಣೆ ಯಾರು?

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ತಡರಾತ್ರಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸುಮಾರು ೩೫ ವರ್ಷದ ಹೆಣ್ಣಾನೆಯೊಂದು ಸುಮಾರು ೧ ಗಂಟೆಗೂ ಅಽಕ ಕಾಲ ನರಳಿ ಮೃತಪಟ್ಟಿದೆ. ಅರಣ್ಯದೊಳಗೆ ವೇಗವಾಗಿ ವಾಹನ ಚಲಾಯಿಸಿ ಅಷ್ಟು ದೊಡ್ಡ ಗಾತ್ರದ ಆನೆ ಅಪಘಾತ ಮಾಡಿ ಸಾವಿಗೀಡಾಗುವಂತೆ ಮಾಡಿದ್ದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಕಾಡಿನೊಳಗೆ ರಸ್ತೆಯಲ್ಲಿ ನಿಗದಿಯಾಗಿರುವ ವೇಗದಲ್ಲಿ ವಾಹನ ಚಲಾಯಿಸಬೇಕು ಎಂಬ ನಿಯಮವಿದೆ. ಅಲ್ಲದೇ ಬಂಡೀಪುರದ ಮಾರ್ಗದಲ್ಲಿ ಸಂಚರಿಸುವವರಲ್ಲಿ ಸಾಕಷ್ಟು ಮಂದಿ ಪ್ರಾಣಿಗಳಿಗೆ ಕೀಟಲೆ ಮಾಡುತ್ತಿರುವ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಯೂ ಬಿತ್ತರವಾಗುತ್ತಿದೆ. ಇಂತಹದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ. ಅರಣ್ಯದೊಳಗಿನ ರಸ್ತೆಗಳಲ್ಲಿ ಡುಬ್ಬಗಳನ್ನು ನಿರ್ಮಿಸಬೇಕಿದೆ. ಇದರಿಂದ ವಾಹನಗಳ ಅತಿಯಾದ ವೇಗಕ್ಕೆ ಕಡಿವಾಣ ಹಾಕಬಹುದು. ಅಲ್ಲದೆ, ಕುಡಿದು ವಾಹನ ಚಲಾಯಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಅರಣ್ಯ ಇಲಾಖೆಯು ಚೆಕ್‌ಪೋಸ್ಟ್‌ನಲ್ಲಿಯೇ ಅವ ರನ್ನು ಪರಿಶೀಲಿಸಿ ನಂತರ ಅರಣ್ಯದ ರಸ್ತೆಯಲ್ಲಿ ಸಂಚರಿಸಲು ಬಿಡಬೇಕಿದೆ. ಹಾಗೂ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ.

ಎಂ.ಚೈತ್ರ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು. 


ಸಮಾಜವೇಕೆ ಕ್ರೂರತ್ವದ ಕಡೆ ಸಾಗುತ್ತಿದೆ?

ಪ್ರತಿನಿತ್ಯ ಪತ್ರಿಕೆಗಳನ್ನು, ಸುದ್ದಿವಾಹಿನಿಗಳನ್ನು ನೋಡುತ್ತಿದ್ದರೆ ಆತಂಕವಾಗುತ್ತದೆ. ತಾಯಿಯೇ ತನ್ನ ಮಗುವನ್ನು ಕೊಂದಳು, ತನ್ನ ಪ್ರೇಯಸಿಯನ್ನೇ ಕತ್ತರಿಸಿದ ಪ್ರೇಮಿ, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ಮಕ್ಕಳು ತಂದೆ ತಾಯಿಯನ್ನು ಕೊಲ್ಲುವ ಮನಸ್ಥಿತಿಗೆ ಬಂದಿದ್ದಾರೆ ಎನ್ನುವ ಬಗ್ಗೆ ವರದಿಗಳು ಪ್ರಕಟಗೊಳ್ಳುತ್ತಲೇ ಇವೆ. ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ, ಕೆಲ ಶಿಕ್ಷಕರಿಂದ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಇವು ಪ್ರತಿನಿತ್ಯದ ಸುದ್ದಿಗಳಾಗಿ ಹೋಗಿವೆ. ಇಂದಿನ ಯುವಜನತೆಯ ಮನಸ್ಥಿತಿ ಏಕಿಷ್ಟು ಕ್ರೂರತೆಯ ಕಡೆ ಸಾಗುತ್ತಿದೆ? ಕಾನೂನು ಸುವ್ಯವಸ್ಥೆ ಎಷ್ಟೇ ಬಿಗಿಯಾಗಿದ್ದರೂ ಇಂತಹ ಹೇಯ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇವುಗಳನೆಲ್ಲ ಗಮನಿಸಿದರೆ ಬಹುಶಃ ಮಕ್ಕಳಿಗೆ ಶಾಲಾ ಕಾಲೇಜು ಹಂತದಲ್ಲೇ ಶಾಂತಿ, ಸೌಹಾರ್ದತೆಯ ಕಡೆ ಒಲವು ಮೂಡುವಂತೆ ಮಾಡಬೇಕಿದೆ. ಅದಕ್ಕಾಗಿ ಶಾಲಾ ಕಾಲೇಜುಗಳಲ್ಲೇ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸಿ ಮಕ್ಕಳು ತಮ್ಮ ಮನಸ್ಥಿತಿಯನ್ನು ಹೇಗೆ ಸಮತೋಲನದಲ್ಲಿ ಇಟ್ಟುಕೊಳ್ಳುಬೇಕು ಎಂಬುದರ ಬಗ್ಗೆ ತರಬೇತಿ ನೀಡಬೇಕು. ಜೊತೆಗೆ ಯುವಪೀಳಿಗೆಗೆ ಹೆಚ್ಚಾಗಿ ಸಾಹಿತ್ಯ, ಮಹನೀಯರ ಪುಸ್ತಕಗಳನ್ನು ಓದುವುದರತ್ತ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವ ಕುರಿತು ಯುವ ಶಕ್ತಿಗೆ ಮನನ ಮಾಡಬೇಕಾಗಿದೆ.

ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು.


ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರದಿಂದ ಆಂದೋಲನ ವೃತ್ತದ ಮಾರ್ಗವಾಗಿ ಬೆಳಿಗ್ಗೆ ೭.೩೦ ರಿಂದ ೯.೩೦ ರವರೆಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ನೂಕುನುಗ್ಗುಲಿನಲ್ಲಿ ಪ್ರಯಾಣಿಸುವ ಸಂಕಟ ಎದುರಾಗಿದೆ. ಒಂದೇ ಬಸ್ಸಿನಲ್ಲಿ ಎರಡು ಬಸ್ಸಿಗಾಗವಷ್ಟು ಜನರು ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಬಸ್‌ನಲ್ಲಿ ಪ್ರಯಾಣ ಮಾಡುವುದು ತ್ರಾಸದಾಯಕವಾಗಿದೆ. ಅಲ್ಲದೆ ಬರುವ ಎಲ್ಲ ಬಸ್‌ಗಳೂ ಅಗತ್ಯ ಮೀರಿ ತುಂಬುತ್ತಿದ್ದು, ಇದರಿಂದ ಬಸ್ ಹತ್ತುವುದು ಕಷ್ಟಕರವಾಗಿದೆ. ಅಲ್ಲದೆ ಬೆಳಿಗ್ಗೆ ವೇಳೆ ಬಸ್‌ಗಳನ್ನೇ ನಂಬಿ ಈ ಭಾಗದಿಂದ ನಗರದ ವಿವಿಧ ಭಾಗಗಳಿಗೆ ಕೆಲಸಕ್ಕೆಂದು ತೆರಳುವವರು ಕೂಡ ಬಸ್‌ಗಳು ಕಡಿಮೆ ಇರುವುದರಿಂದ ಸರಿ ಯಾದ ಸಮಯಕ್ಕೆ ಬಸ್ ಸಿಗದೆ, ಸಿಕ್ಕಿದರೂ ಬಸ್‌ನಲ್ಲಿ ಜಾಗ ಇರದ ಕಾರಣ ಹತ್ತಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಽಕಾರಿಗಳು ಗಮನ ಹರಿಸಿ ಈ ಮಾರ್ಗವಾಗಿ ಬೆಳಿಗ್ಗೆ ೭.೩೦ ರಿಂದ ೯.೩೦ ರವರೆಗೆ ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ವಿ.ನಿರ್ಮಲ್ ಕುಮಾರ್, ವಿದ್ಯಾರ್ಥಿ, ಮಹಾರಾಜ ಕಾಲೇಜು, ಮೈಸೂರು.

andolanait

Recent Posts

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

55 mins ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

1 hour ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

2 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

2 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

3 hours ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

3 hours ago