ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 29 ಮಂಗಳವಾರ 2022

ಆಂದೋಲನ ಓದುಗರ ಪತ್ರಗಳು

ಕರ್ನಾಟಕದೊಂದಿಗೆ ವಿಲೀನ ಅತ್ಯಗತ್ಯ

ಗಡಿ ಭಾಗದಲ್ಲಿ ಅದರಲ್ಲೂ ಮಹಾರಾಷ್ಟ್ರದ ವ್ಯಾಪ್ತಿಗೆ ಬರುವ, ಜತ್, ಸೋಲಾಪುರ, ಕೊಲ್ಹಾಪುರ, ಲಾತುರ್, ಔರಂಗಾಬಾದ್, ಸಾಂಗ್ಲಿ, ಉಸ್ಮಾನಬಾದ್ ಮತ್ತು ಅಕ್ಕಲಕೋಟದಲ್ಲಿ ಕನ್ನಡ ಮಾತನಾಡುವ ಜನರಿಗೆ ಮೂಲ ಸೌಕರ್ಯಗಳನ್ನು ನಿರಾಕರಿಸಿರುವ ಮಹಾರಾಷ್ಟ್ರ ಸರ್ಕಾರದ ನಡೆ ಖಂಡನೀಯ. ಸರ್ಕಾರದ ವಿರುದ್ಧ ಅಲ್ಲಿನ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಕರ್ನಾಟಕ ಸರಕಾರ ಈ ಪ್ರದೇಶಗಳನ್ನು ನಮ್ಮ ರಾಜ್ಯದೊಂದಿಗೆ ವಿಲೀನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇತ್ತೀಚೆಗೆ, ಮಹಾರಾಷ್ಟ್ರದ ಕಾರ್ಯಕರ್ತರು ಕರ್ನಾಟಕದ ಬೆಳಗಾವಿ ಹಕ್ಕು ವಿರೋಧಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ‘ಜೈ ಮಹಾರಾಷ್ಟ್ರ’ ಎಂದು ಬರೆದು, ಸಾಕಷ್ಟು ಬಸ್ ಗಳನ್ನೂ ದ್ವಂಸಗೊಳಿಸಿರುವುದು ಖಂಡನೀಯ.
ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಎರಡು ರಾಜ್ಯದಲ್ಲೂ ಕಾನೂನು ಸುವ್ಯವಸ್ಥೆ ಕದಡುತ್ತಿದ್ದಾರೆ. ಹೀಗಾಗಿ ಎರಡು ಸರ್ಕಾರಗಳು ಸೇರಿ ಇಂತಹ ಸಂಘಟನೆಗಳನ್ನು ಮಟ್ಟಹಾಕಬೇಕು.

-ವಿಜಯಕುಮಾರ್ ಎಚ್.ಕೆ. ಮೈಸೂರು.


ಏಕರೂಪ ನಾಗರಿಕ ಸಂಹಿತೆ

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಸಂವಿಧಾನದ ಮೂಲ ಆಶಯದಂತೆ ಕಾರ್ಯರೂಪಕ್ಕೆ ತರುವುದು ಉತ್ತಮವಾದ ಕೆಲಸ. ನಾಗರಿಕ ಸಂಹಿತೆ ಜಾರಿ ಮಾಡಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಚರ್ಚೆಗಳು ಮುಕ್ತವಾಗಿ ನಡೆಯಬೇಕು. ಸರ್ವಸಮ್ಮತ ನಿರ್ಧಾರದಿಂದ ಮಾತ್ರ ಅನುಷ್ಟಾನಕ್ಕೆ ತರುವುದು ಅತಿ ಮುಖ್ಯವಾದ ಕೆಲಸ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.


ಅನುಕರಣೀಯ ವಿಶೇಷ ತೀರ್ಪು

ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಬಿಹಾರ ಮೂಲದ ಅಪರಾಧಿಯೋರ್ವನಿಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ೪೩ ವರ್ಷಗಳ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿರುವ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯದ ಗೌರವಾನ್ವಿತ ನ್ಯಾಯಾದೀಶರಾದ ಶ್ರೀಮತಿ ಶೈಮಾ ಖಮ್ರೋಜ್ ರವರಿಗೆ
ಹೃತ್ಪೂರ್ವಕ ಅಭಿನಂದನೆಗಳು. ದೇಶದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ
ಸಮಯದಲ್ಲೇ ಈ ತೀರ್ಪು ಹೊರಬಿದ್ದಿದೆ. ಸಾಮನ್ಯವಾಗಿ ೪೩ ವರ್ಷಗಳಷ್ಟು ದೀರ್ಘಕಾಲದ ಸೆರೆಮನೆವಾಸದ ಶಿಕ್ಷೆ ಇತ್ತೀಚಿನ ವರ್ಷಗಳಲ್ಲಿ ವಿರಳವೆನ್ನಬಹುದಾದರೂ ಆರೋಪಿ ಎಸಗಿರುವ ಹೀನ ಕೃತ್ಯಕ್ಕೆ ಗಲ್ಲು ಶಿಕ್ಷೆ ಸೇರಿದಂತೆ ಯಾವ ಶಿಕ್ಷೆ ಬೇಕಾದರೂ
ನೀಡಬಹುದು. ಆದರೆ ಪ್ರಕರಣದ ಸಮಯ, ಸಂಧರ್ಭ, ಸಾಕ್ಷಿ, ಪುರಾವೆಗಳನ್ನು ಪರಿಗಣಿಸಿ, ಘನ ನ್ಯಾಯಾಲಯ
ಇಂತಹ ಅಪರೂಪದ ಶಿಕ್ಷೆ ವಿಧಿಸಿದೆ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು


ಬ್ಯಾನರ್‌ಗಳನ್ನು ಬ್ಯಾನ್ ಮಾಡಿ

ಇತ್ತೀಚಿನ ದಿನಗಳಲ್ಲಿ ಬ್ಯಾನರ್ ಹಾವಳಿ ನಗರದಲ್ಲಿ ಹೆಚ್ಚಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ಎಂ ಎಲ್‌ಎಗಳು, ಸಂಸದರು ಸೇರಿದಂತೆ ಅವರವರ ಹುಟ್ಟುಹಬ್ಬದ ಪ್ರಯುಕ್ತ ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳನ್ನು ನೋಡದೆ ಅಡ್ಡಾದಿಡ್ಡಿ ಬ್ಯಾನರ್‌ಗಳನ್ನು ಅಳವಡಿಸುತ್ತಾರೆ. ಮರಗಿಡಗಳು, ವಿದ್ಯುತ್ ದೀಪದ ಕಂಬ ಹಾಗೂ ಟ್ರಾಫಿಕ್ ಸಿಗ್ನಲ್ ದೀಪಗಳನ್ನು ಸಹ ಲೆಕ್ಕಿಸದೆ ಬ್ಯಾನರ್ ಹಾಕುತ್ತಾರೆ. ಇದರಿಂದ ವಾಹನ ಸವಾರರಿಗೆ ಸಿಗ್ನಲ್ ದೀಪ ಸರಿಯಾಗಿ ಕಾಣುವುದಿಲ್ಲ. ಬ್ಯಾನರ್ ನೋಡಿ ವಾಹನ ಚಲಾಯಿಸುವಾಗ ಅಪಘಾತವಾಗುವ ಸಂಭವ ಹೆಚ್ಚಾಗುತ್ತಿದೆ. ಬೆಳೆಯುವ ಗಿಡ ಮರಗಳಿಗೆ ಬ್ಯಾನರ್ ಅಳವಡಿಸಿ ಪರಿಸರ ನಾಶ ಮಾಡಿದಂತಾಗಿದೆ. ನಾಯಕರ ಹುಟ್ಟುಹಬ್ಬದ ಆಚರಣೆ ಮುಗಿದು ಅದೇಷ್ಟೋ ದಿನ ಕಳೆದರು ಬ್ಯಾನರ್‌ಗಳು ಹಾಗೆ ಬಿದ್ದಿರುತ್ತವೆ. ಆದ್ದರಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಬ್ಯಾನರ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾಸಗಿ ಬ್ಯಾನರ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಲು ಅವಕಾಶ ನೀಡಬಾರದು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

andolanait

Recent Posts

ಬಂಡೀಪುರ, ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭ : ಸಿಎಂ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…

11 hours ago

ಜ.5, 6ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ; ತವರಲ್ಲಿ ಸಂಭ್ರಮ ಸಾಧ್ಯತೆ?

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…

11 hours ago

ಜ.4ರಂದು ʼಚಾ.ಬೆಟ್ಟಕ್ಕೆ ನಡಿಗೆʼ ಜಾಗೃತಿ ಜಾಥ ; ಬೆಂಬಲಿಸಲು ಮನವಿ

ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…

11 hours ago

ದೇಶದ ಸ್ವಚ್ಛ ನಗರ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ 11 ಮಂದಿ ಸಾವು!

ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…

12 hours ago

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

14 hours ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

15 hours ago