ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 12 ಶನಿವಾರ 2022

ಖಾತಾ ವರ್ಗಾವಣೆಯಲ್ಲಿ ವಿಳಂಬ

೦೧.೦೪.೨೦೨೨ರಿಂದ ಮೈಸೂರು ವರ್ತುಲ ರಸ್ತೆಯ ಹೊರಗಿರುವ ಬಡಾವಣೆಗಳ ನಿರ್ವಹಣೆಯನ್ನು ಪಟ್ಟಣ ಪಂಚಾಯ್ತಿಯ ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಡಾ ವ್ಯಾಪ್ತಿಯಿಂದ ಹೊರವಲಯದ ಬಡಾವಣೆಗಳನ್ನು ಹೊರಗಿಟ್ಟ ಸರ್ಕಾರ ಪಟ್ಟಣ ಪಂಚಾಯ್ತಿಯಲ್ಲಿ ಸ್ವತ್ತಿನ ಖಾತೆಯನ್ನು ಮಾಡಿಸಬೇಕೆಂದೂ ಆದೇಶಿಸಿದ್ದು ಅದರಂತೆ ನಿವೇಶನ / ಮನೆಗಳ ಖಾತೆಯನ್ನು ಪಟ್ಟಣ ಪಂಚಾಯ್ತಿಯಲ್ಲಿ ಸ್ವತ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೊಂದಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಖಾತೆ ವರ್ಗಾವಣೆ ಮಾಡಿಸಿಕೊಂಡು ಕಂದಾಯ ನಿಗದಿಯಾದ ನಂತರ ಕಂದಾಯ ಪಾವತಿ ಮಾಡಬೇಕೆಂದೂ ಸೂಚಿಸಿದೆ.
ನಾನು ಮೈಸೂರಿನ ಕೇರ್ಗಳ್ಳಿಯಲ್ಲಿರುವ ನ್ಯಾಯಾಂಗ ಬಡಾವಣೆಯ ನನ್ನ ನಿವೇಶನ ಸಂಖ್ಯೆ ೧೩೧ ರ ಖಾತೆಯನ್ನು
ಮುಡಾದಿಂದ ಬೋಗಾದಿಯ ಪಟ್ಟಣ ಪಂಚಾಯ್ತಿಯಲ್ಲಿ ವರ್ಗಾಯಿಸಲು ೧೧.೦೮.೨೦೨೨ ರಲ್ಲಿ ಅರ್ಜಿಯನ್ನು ಕೊಟ್ಟು ಮೂರು ತಿಂಗಳೇ ಆಗಿದೆ. ಬೋಗಾದಿ ಪಟ್ಟಣ ಪಂಚಾಯ್ತಿ ಕಚೇರಿಯು ಇನ್ನೂ ನನ್ನ ನಿವೇಶನದ ಖಾತಾ ಬದಲಾವಣೆಯನ್ನು ಮಾಡುತ್ತಲೇ ಇದೆ! ಅರ್ಜಿಯಲ್ಲಿ ನಮ್ಮ ಫೋನ್ ಸಂಖ್ಯೆ ಸಹಾ ನಮೂದಿಸಿದ್ದೇನೆ. ಅರ್ಜಿಯ ಕಥೆ ಏನಾಯಿತೆಂಬುವುದನ್ನು ಪಟ್ಟಣ ಪಂಚಾಯ್ತಿ ಕಚೇರಿಯವರು ತಿಳಿಸಲಾಗದೇ? ನಾವೇ ಐದು ಕಿಲೋಮೀಟರ್ ಹೋಗಿ ವಿಚಾರಿಸಲಾದೀತೇ? ಆದುದರಿಂದ ಸಬೂಬು ಹೇಳದೇ ಪಟ್ಟಣ ಪಂಚಾಯ್ತಿಯು ಖಾತಾ ವರ್ಗಾವಣೆಯನ್ನು ಮಾಡಿ ಕಂದಾಯ ಕಟ್ಟಿಸಿಕೊಳ್ಳಬೇಕೆಂದು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ.

-ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.


ಭತ್ತ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

ರಾಜ್ಯದ ಬಹುತೇಕ ಕಡೆ ಭತ್ತ ಕಟಾವು ಅಂತಿಮ ಹಂತ ತಲುಪಿದ್ದರೂ, ರಾಜ್ಯ ಸರ್ಕಾರ ಖರೀದಿ ಕೇಂದ್ರವನ್ನೂ ಆರಂಭಿಸಿಲ್ಲ, ಹೀಗಾಗಿ ಕಳೆದ ಬಾರಿಯಂತೆ ರೈತರು ಮಿಲ್‌ಗಳಿಗೆ ತಾವು ಬೆಳೆದ ಬಹುಪಾಲು ಭತ್ತ ನೀಡಲು ಆರಂಭಿಸುತ್ತಿದ್ದಾರೆ. ಪ್ರತಿ ಬಾರಿಯೂ ಸರಕಾರ ರೈತರು ಕಟಾವು ಮಾಡಿದ ಭತ್ತ ಮಧ್ಯವರ್ತಿಗಳ ಕೈಸೇರಿದ ಬಳಿಕ ಬೆಂಬಲ ಬೆಲೆ ಘೋಷಿಸುವುದು, ಖರೀದಿ ಕೇಂದ್ರ ಆರಂಭಿಸುವುದು ಮಾಡಿಕೊಂಡು ಬಂದಿದೆ. ಈ ಬಾರಿಯೂ ಇಂತಹುದೆ ಕಥೆ. ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಬಹಳ ಕಡೆ ಸಣ್ಣ ಹಿಡುವಳಿದಾರರಿಗೆ ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿ ಇಟ್ಟುಕೊಂಡು ಸರ್ಕಾರ ಖರೀದಿ ಕೇಂದ್ರ ತೆರೆಯುವವರೆಗೂ ಕಾಯಲು ಬೇಕಾದ ವ್ಯವಸ್ಥೆ ಇಲ್ಲದಿರುವುದರಿಂದ ಕಟಾವು ಆಗುತ್ತಿದ್ದಂತೆ ಭತ್ತ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಸರ್ಕಾರ ಭತ್ತ ಬೆಳೆಗಾರರನ್ನು ಕಡೆಗಣಿಸುತ್ತಿದೆ. ಸಣ್ಣ ರೈತರು ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಹೊಂದಿರದ ಕಾರಣ ಮಧ್ಯವರ್ತಿಗಳಿಗೆ ಲಾಭ ಆಗುತ್ತಿದೆ. ತಕ್ಷಣವೇ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ನೆರವಾಗಬೇಕು.

-ವಿಜಯಕುಮಾರ್ ಎಚ್.ಕೆ. ಮೈಸೂರು.


ಪ್ರತಿಮೆ- ಪ್ರಶ್ನೆ…?!

 

ಅಲ್ಲಲ್ಲಿ ನಿಂತಿವೆ

ಮುಗಿಲೆತ್ತರಕ್ಕೆ..

ಬುದ್ಧ ಬಸವ ಅಂಬೇಡ್ಕರ

ಕನಕ ಗಾಂಧಿ ನೆಹರು ಪಟೇಲ್

ಕೆಂಪೇಗೌಡರ ಪ್ರತಿಮೆಗಳು

ಎತ್ತರ ಮಹತ್ತರ !

ನಮ್ಮ ತತ್ವಾದರ್ಶಗಳು…

ಎಲ್ಲಿ ಹೋದವು ?!

ಎಂದು
ಕೇಳಿಬಿಟ್ಟರೆ

ಆ ಪ್ರತಿಮೆಗಳು

ಇದೆಯಾ ನಮ್ಮಲ್ಲಿ ಉತ್ತರ ?!

-ಮ.ಗು.ಬಸವಣ್ಣ, ಜೆ ಎಸ್ ಎಸ್ ಸಂಸ್ಥೆ, ಸುತ್ತೂರು.


ಪೇ ಆಂಡ್ ಪಾರ್ಕ್ ಬೇಡ

ಮೈಸೂರಿನ ಪ್ರಮುಖ ರಸ್ತೆಗಳಾದ ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಹಾಗೂ ಅಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆಗಾಗಿ ಪೇ ಆಂಡ್ ಪಾರ್ಕ್ ಜಾರಿಗೆ ತರುವುದಾಗಿ ಇತ್ತೀಚೆಗೆ ಮಹಾಪೌರರು ತಿಳಿಸಿರುತ್ತಾರೆ .
ಈಗಾಗಲೇ ಪುರಭವನದ ಆವರಣದಲ್ಲಿ ವಾಹನ ನಿಲುಗಡೆಗಾಗಿಯೇ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ, ಅರಸು ರಸ್ತೆಯ ಅನತಿ ದೂರದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದೆ, ಸಮೀಪದಲ್ಲಿಯೇ ಗಾಡಿ ಚೌಕದ ಜಾಗವೂ ಸಹ ಖಾಲಿ ಇದೆ. ಇಲ್ಲೆಲ್ಲಾ ವಾಹನ ನಿಲುಗಡೆ ವ್ಯವಸ್ಥೆಯಾದ ನಂತರವೂ ಸಮಸ್ಯೆ ಮುಂದುವರೆದರೆ ಮಾತ್ರ ಸಾರ್ವಜನಿಕರಿಂದ ಹಣ ಪಡೆದು ಪೇ ಆಂಡ್ ಪಾರ್ಕ್ ಮಾಡುವ ಬಗ್ಗೆ ಯೋಚನೆ ಮಾಡುವುದು ಸೂಕ್ತ.
ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಯಾವುದೇ ಸೂಕ್ತ ವ್ಯವಸ್ಥೆ ಹಾಗೂ ಸುರಕ್ಷತೆ ಕಲ್ಪಿಸದೇ, ಈಗಾಗಲೇ ರಸ್ತೆ ತೆರಿಗೆ ಪಾವತಿಸಿ ವಾಹನ ಖರೀದಿಸಿರುವ ಸಾರ್ವಜನಿಕರಿಗೆ ಹಾಗೂ ಅತಿ ಹೆಚ್ಚು ಉದ್ದಿಮೆ ಹಾಗೂ ಆಸ್ತಿ ತೆರಿಗೆ ಪಾವತಿಸುತ್ತಿರುವ ಈ ರಸ್ತೆಗಳ ಕಟ್ಟಡ ಮಾಲಿಕರು ಹಾಗೂ ವ್ಯಾಪಾರಿಗಳಿಂದ ಪೇ ಆಂಡ್ ಪಾರ್ಕ್ ಹೆಸರಿನಲ್ಲಿ ಸುಲಿಗೆ ಮಾಡಲು ಯೋಚಿಸುತ್ತಿರುವುದನ್ನು ಖಂಡಿಸುತ್ತೇವೆ.

-ಮೈ.ಕಾ.ಪ್ರೇಮ್ ಕುಮಾರ್/ ರಾಕೇಶ್ ಭಟ್, ಮೈಸೂರು ರಕ್ಷಣಾ ವೇದಿಕೆ.

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago