ಓದುಗರ ಪತ್ರ
ಘಸ್ನಿ ಮೊಹಮ್ಮದ್ ಸರ್ಕಾರ?
ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡುತ್ತದೆಯೆಂಬ ಭಾ.ಜ.ಪ. ಸರ್ಕಾರದ ನಡೆಯು, ದೆಹಲಿಯಿಂದ ದೇವಗಿರಿಗೆ ಹೋಗಿ ಮತ್ತೆ ಅಲ್ಲಿಂದ ದೆಹಲಿಗೇ ರಾಜಧಾನಿಯನ್ನು ಬದಲಿಸಿದ ಘಸ್ನಿ ಮೊಹಮ್ಮದ್ ಆಡಳಿತವನ್ನು ನೆನಪಿಸುತ್ತಿದೆ.
ಹಲವಾರು ಆದೇಶಗಳನ್ನು ಬೆಳಗ್ಗೆ ಹೊರಡಿಸಿ ರಾತ್ರಿಯ ವೇಳೆಗೆ ಅದನ್ನು ವಾಪಸ್ಸು ಪಡೆಯುವ ಕೆಟ್ಟ ಚಾಳಿ ಈ ಸರ್ಕಾರದ್ದಾಗಿದೆ.
ಇದೀಗ ಮಕ್ಕಳ ಪೋಷಕರಿಂದ ದೇಣಿಗೆ ಪಡೆಯುವ ಸುತ್ತೋಲೆಯನ್ನು ವಾಪಸ್ ಪಡೆದ ಸರ್ಕಾರ ಥೇಟ್ ಘಸ್ನಿ ಮೊಹಮದನ ಆಡಳಿತವನ್ನೇ ಮೀರಿಸುವಂತಿದೆ. ಹುಚ್ಮುಂಡೆ ಮದುವೆಯಲ್ಲಿ ಉಂಡೋನೇ ಜಾಣವೆನ್ನುವಂತೆ ಸರ್ಕಾರವೇ ಭ್ರಷ್ಟ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಾ ದುರಾಡಳಿತ ಮಾಡುತ್ತಾ ಇದ್ದರೆ, ಈ ಪಕ್ಷಕ್ಕೆ ಹೆಚ್ಚು ಮತನೀಡಿ ಕೈಸುಟ್ಟುಕೊಂಡ ಮತದಾರರು ಕೈ ಕೈ ಹಿಸಕಿಕೊಳ್ಳುತ್ತಾ ಸಕಾಲಕ್ಕಾಗಿ ಕಾಯುತ್ತಿದ್ದಾರೆ!
–ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.
ಉತ್ಕೃಷ್ಟ ನಾಯಕನ ರಾಜಕೀಯ ವಿದಾಯ!
ನಾನು ಸುಮಾರು ೩೦ ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮೈಸೂರಿಗೆ ಬಂದವನು. ಮೈಸೂರಿನ ಸ್ಥಳೀಯ ಪತ್ರಿಕೆ ಓದುವುದು ತುಂಬಾ ಆಸಕ್ತಿದಾಯಕವಾಗಿತ್ತು. ಅಂದಿನಿಂದಿಲೂ ಬಹಳ ಕುತೂಹಲದಿಂದ ಸ್ಥಳೀಯ ಮತ್ತು ರಾಜ್ಯ ರಾಜಕಾರಣದ ವಿದ್ಯಮಾನಗಳನ್ನು ಗಮನಿಸುತ್ತಿದ್ದೆ. ನಿಜಲಿಂಗಪ್ಪ, ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆಯವರ
ಬಗ್ಗೆ ಕೇಳಿ ತಿಳಿದು ಅಭಿಮಾನಿಸುತ್ತಿದ್ದ ನಮಗೆ ಅಂದಿನ ದಿನಗಳಲ್ಲಿ ಕಂಡಿದ್ದು ಓರ್ವ ದಕ್ಷ ನಾಯಕನಾಗಿ ಬೆಳೆಯುತ್ತಿದ್ದ ಶ್ರೀನಿವಾಸ್‌ಪ್ರಸಾದ್ ಅವರು. ಬಡವರು ಮತ್ತು ಶೋಷಿತರ ಪರವಾಗಿ ಜಾತ್ಯಾತೀತವಾಗಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಸಾರ್ವಜನಿಕವಾಗಿ ಜನಮನ್ನಣೆಗಳಿಸುತ್ತಿದ್ದವು. ಅಂದಿನಿಂದ ಇಂದಿನವರೆಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ
ಸಿಡಿದೆದ್ದು ವಿರೋಧಿಸಿದ್ದನ್ನು ನಾನು ನೋಡಿದ್ದೇನೆ. ಇಂತಂಹ ಪ್ರಾಮಾಣಿಕ ರಾಜಕೀಯ ನಾಯಕ ಇತ್ತೀಚಿಗೆ ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ.ಸಂತೋಷ್‌ಹೆಗ್ಡೆಯವರ ಉಪಸ್ಥಿತಿಯಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದು ನಮ್ಮ ಅಚ್ಚು-ಮೆಚ್ಚಿನ ಮೇಷ್ಟ್ರು ನಮ್ಮ ಶಾಲೆಯನ್ನು ಬಿಟ್ಟು ಹೋಗುವಂತೆ ಭಾಸವಾಯಿತು. ನನ್ನ ಮನಸ್ಸಿಗೆ ಮತ್ತೊಬ್ಬ ಪ್ರಸಾದರು ಈ ಸಮಾಜಕ್ಕೆ ಸಿಗಲು ಸಾಧ್ಯವೇ? ಎಂದೆನಿಸಿದಾಗ
ನನಗರಿವಿಲ್ಲದೆ ನನ್ನಕಣ್ಣಲ್ಲಿ ಕಂಬನಿ ಜಿನುಗಿತು.
–ಶಾಂತರಾಮ್ ಶೆಟ್ಟಿ, ಮೈಸೂರು.
ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗಿರಲಿ!
ರಾಜ್ಯೋತ್ಸವ ಪ್ರಶಸ್ತಿಗೆ
೨೮,೦೦೦ ಅರ್ಜಿಯಂತೆ!
೨೯ಕ್ಕೆ ಪಟ್ಟಿ ಬಿಡುಗಡೆ
ಆಗಲಿದೆಯಂತೆ.
ಪ್ರಶಸ್ತಿಗಾಗಿ ನಡೆಯದಿರಲಿ ಲಾಬಿ.
ಅರ್ಹರಿಗಷ್ಟೆ ಸಿಗಲಿ ಪ್ರಶಸ್ತಿಯ ಗರಿ.
ಇದರಿಂದ ಹೆಚ್ಚಾಗಲಿ ಕನ್ನಡಿಗರ ಸಿರಿ!
–ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಇದೇ ಅಲ್ಲವೇ ರಾಜಕೀಯ ಎಂದರೆ!!
ವಸತಿ ಸಚಿವ ಸೋಮಣ್ಣ, ತನ್ನ ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದು, ಎಲ್ಲಾ ಕಡೆ ವೈರಲ್ ಆಗಿದೆ. ಒಂದು ತಾಸಿನ ನಂತರ ಕಪಾಳಕ್ಕೆ ಹೊಡೆಸಿಕೊಂಡ ಮಹಿಳೆ ಮಾತ್ರ ಅವರು ನನಗೆ ಹೊಡೆದೇ ಇಲ್ಲ, ನನಗೇನು ಆಗಿಲ್ಲ
ಅವರದೇನು ತಪ್ಪಿಲ್ಲ ಎನ್ನುತ್ತಾರೆ. ಕಣ್ಣಾರೆ ಕಂಡ ದೃಶ್ಯವನ್ನೇ ಇಲ್ಲ ಎನ್ನುತ್ತಾರಲ್ಲ? ಇದೇ ಅಲ್ಲವೇ ರಾಜಕೀಯ ಎಂದರೆ!!
–ಬೂಕನಕೆರೆ ವಿಜೇಂದ್ರ ಮೈಸೂರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…