ಟ್ಯುಟೋರಿಯಲ್ ವ್ಯವಸ್ಥೆಯನ್ನು ಕಾನೂನು ಚೌಕಟ್ಟಿನೊಳಕ್ಕೆ ತರಬೇಕು
ಮಂಡ್ಯ ಜಿಲ್ಲೆಯ ಮಳವಳ್ಳಿ ಯಲ್ಲಿ ಇತ್ತೀಚಿಗೆ ಕೋಚಿಂಗ್ ಕೇಂದ್ರದ ಒಬ್ಬ ವ್ಯಕ್ತಿ ಹತ್ತು ವರ್ಷದ ಹೆಣ್ಣು ಮಗುವಿನ ಅತ್ಯಾಚಾರ ಮತ್ತು ಕೊಲೆ ಮಾಡಿದ ಘಟನೆ ಕರ್ನಾಟಕವನ್ನು ಧಿಗ್ಭ್ರಮೆಗೊಳಿಸಿದೆ. ಜನಪರ ಸಂಘಟನೆಗಳು ತಕ್ಷಣ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶವನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರವು ಸಂತ್ರಸ್ತ ಕುಟುಂಬಕ್ಕೆ ಹಣದ ಪರಿಹಾರ ಘೋಷಿಸಿದೆ.
ಈ ಘಟನೆಯನ್ನು ಪೋಸ್ಕೊ ಪ್ರಕರಣದ ಹಿನ್ನಲೆಯಲ್ಲಿ ನೋಡಬೇಕಾಗುತ್ತದೆ. ಇಲ್ಲಿಯ ಸಂತ್ರಸ್ತರು ಸಾಮಾನ್ಯ ಪ್ರಜೆಗಳ ಹೆಣ್ಣು ಮಕ್ಕಳಾಗಿದ್ದಾರೆ. ಇವರ ಆರ್ಥಿಕ ಸಾಮಾಜಿಕ ಪರಿಸ್ಥಿತಿಯನ್ನು ವಿಮರ್ಶಿಸಿ, ಗಮನಿಸುವುದಾದರೆ ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆಯ ಕೊರತೆಗಳೆ ಮೂಲ ಕಾರಣವಾಗಿವೆ. ಸರ್ಕಾರಿ ಶಾಲೆಗಳ ಹೀನಾಯ ಪರಿಸ್ಥಿತಿಯಿಂದಾಗಿ ಖಾಸಗೀ ಕೋಚಿಂಗ್ ಬೆಳೆದಿವೆ. ಇಡೀ ಕರ್ನಾಟಕದಲ್ಲಿ ಬಹುಪಾಲು ಕೋಚಿಂಗ್ ಸಂಸ್ಥೆಗಳು ನೊಂದಣಿ ಆಗಿಲ್ಲ. ಕರ್ನಾಟಕ ಶಿಕ್ಷಣ ಕಾನೂನು ೧೯೮೩ರ ಅನುಬಂಧ ೩೫ರ ಮತ್ತು ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಷನ್ ಕಾನೂನು ೨೦೦೧ರ ಪ್ರಕಾರ ಸ್ಥಳೀಯ ಬ್ಲಾಕ್ ಎಜುಕೇಷನ್ ಅಧಿಕಾರಿಗಳು ಈ ಕೋಚಿಂಗ್ ಕೇಂದ್ರಗಳನ್ನು ನೊಂದಣಿ ಮಾಡಲು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಳವಳ್ಳಿಯ ಘಟನೆ ಇಡೀ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಕರ್ನಾಟಕದಲ್ಲಿ ಒಂದು ಅಂದಾಜಿನ ಪ್ರಕಾರ, ಒಂದು ಕೋಟಿಯಷ್ಟು ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ. ಇವರಲ್ಲಿ ಸರ್ಕಾರಿ ಶಾಲೆಗಳಲ್ಲೇ ೫೪ ಲಕ್ಷ ಮಕ್ಕಳು ಓದುತ್ತಿದ್ದಾರೆ. ೨೦ಲ ಕ್ಷ ಮಕ್ಕಳು ಕೋಚಿಂಗ್ ಕೇಂದ್ರಗಳಿಗೆ ಹೋಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರತಿಯೊಂದು ಕೋಚಿಂಗ್ ಕೇಂದ್ರಕ್ಕೆ ೫೦೦ ಜನ ಮಕ್ಕಳು ಹೋದರು ಎಂದು ಅಂದಾಜಿಸಿದರೂ ಇಂದು ೪,೦೦೦ ಖಾಸಗೀ ಕೋಚಿಂಗ್ ಕೇಂದ್ರಗಳಿವೆ. ಜತೆಗೆ ನೂರಾರು ಆನ್‌ಲೈನ್ ಕೋಚಿಂಗ್ ಕೇಂದ್ರಗಳಿವೆ.
ಈ ಶೈಕ್ಷಣಿಕ ದಂಧೆಯನ್ನು ಕಾನೂನಿನ ಚೌಕಟ್ಟಿನ ಒಳಗೆ ತರುವ ಅವಶ್ಯಕತೆ ಇದೆ. ಹೀಗಾದಾಗ ಮಾತ್ರ ಇಂತಹ ಭಯಂಕರ ಮಾರಣಾಂತಿಕ ಘಟನೆಗಳನ್ನು ತಪ್ಪಿಸಬಹುದು.
ಜತೆಗೆ, ಚಿತ್ರದುರ್ಗದ ಮುರುಘಾ ಮಠದ ಪ್ರಕರಣದ ಹಿನ್ನೆಲೆಯಲ್ಲಿ, ಕರ್ನಾಟಕದ ಮಠ ಮಾನ್ಯಗಳ ವಸತಿ ಶಾಲೆಗಳನ್ನು ಸಹ ಅರೆ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಈ ವರೆಗೆ ಸರ್ಕಾರದಿಂದ ಈ ವಿಷಯದಲ್ಲಿ ಆಗಿರುವ ಕಾನೂನು ಜಾರಿಯ ಲೋಪವನ್ನು ಸರಿಪಡಿಸಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.
–ರತಿರಾವ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಮೈಸೂರು. -ಸಬಿಹಾ ಭೂಮಿ ಗೌಡ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಮೈಸೂರು, -ಡಾ. ವಿ. ಲಕ್ಷ್ಮೀ ನಾರಾಯಣ, ಅಖಿಲ ಭಾರತ ಪ್ರಜಾ ವೇದಿಕೆ, ಮೈಸೂರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…