ಓದುಗರ ಪತ್ರ
ಪಟಾಕಿಗಳನ್ನು ಹೊಡೆಯುವ ಮುನ್ನ ಯೋಚಿಸಿ!
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಆದರೆ ಪಟಾಕಿ ಇಲ್ಲದ ದೀಪಾವಳಿಯನ್ನು ಇಂದು ಊಹಿಸುವುದೇ ಕಷ್ಟವಾಗಿದೆ. ಪಟಾಕಿಯಲ್ಲಿರುವ ತಾಮ್ರ, ಕ್ಯಾಡ್ಮಿಯಂ, ಸೀಸ, ಮೆಗ್ನೀಷಿಯಂ ಸತು, ಸೋಡಿಯಂ ಮೊದಲಾದ ರಾಸಾಯನಿಕಗಳು ಗಾಳಿಗೆ ಸೇರಿದಾಗ ನಮ್ಮ ಉಸಿರಾಟದ ನಾಳಗಳಲ್ಲಿ ಉರಿ ತರಿಸುತ್ತದೆ, ರಕ್ತದಲ್ಲಿ ಸೇರಿ ರಕ್ತ ಆಮ್ಲಜನಕವನ್ನು ಹೊರುವ ಕ್ಷಮತೆಯನ್ನು ಕುಗ್ಗಿಸುತ್ತದೆ, ತನ್ಮೂಲಕ ರಕ್ತಹೀನತೆ ಎದುರಾಗುತ್ತದೆ. ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ. ಅಲ್ಲದೇ ಪಟಾಕಿಗಳ ಹೊಗೆಯ ಸೇವನೆಯಿಂದ ಕೆಲವರಲ್ಲಿ ಜ್ವರ ಹಾಗೂ ವಾಂತಿ ಎದುರಾಗುತ್ತದೆ. ಇದಲ್ಲದೆ ಪಟಾಕಿಗಳಿಂದ ಆಗುವ ಅಗ್ನಿ ಅನಾಹುತ, ಶಬ್ದಮಾಲಿನ್ಯ, ವಾಯುಮಾಲಿನ್ಯ ಹಾಗೂ ಪಟಾಕಿಗಳಿಂದ ಪ್ರಾಣಿಗಳಿಗೆ ಎದುರಾಗುವ ಕುತ್ತು ಸಹ ಅಷ್ಟಿಷ್ಟಲ್ಲ. ಈ ಅನಾಹುತಗಳು ಇರುವುದನ್ನು ಅರಿತು, ಈ ಬಾರಿಯ ದೀಪಾವಳಿಯಲ್ಲಿ ದೀಪಗಳನ್ನು ಮಾತ್ರ ಬೆಳಗಿಸಿ ಸಂಭ್ರಮ ಸಡಗರ ಪಡೋಣ. ಹಾನಿಕಾರಕ ಪಟಾಕಿಗಳಿಂದ ದೂರವಿರೋಣ!
–ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಉತ್ತಮ ಆಯ್ಕೆ
ಇವತ್ತು ಯಾರೂ ಏನೆ ಹೇಳಿದರೂ ಎಐಸಿಸಿಯ ಅಧ್ಯಕ್ಷ ಸ್ದಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತಮ ಆಯ್ಕೆ ಎನ್ನಲೇ ಬೇಕು, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಇದರಿಂದಾಗುವ ಪ್ರಯೋಜನ ದಲಿತ ಮತಗಳನ್ನು ಒಗ್ಗುಡಿಸಬಹುದು. ಕರ್ನಾಟಕದ ಪಾಲಿಗಂತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಇನ್ನೂ ಹತ್ತಿರಕ್ಕೆ ತರಬಹುದು.
–ಬೂಕನಕೆರೆ ವಿಜೇಂದ್ರ,ಲೇಖಕರು ಮೈಸೂರು
ಕೆರೆಗಳ ನಿರ್ಮಾತೃ ಇನ್ನಿಲ್ಲ
ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದಲ್ಲಿ ೧೫ ಕಟ್ಟೆಗಳ ನಿರ್ಮಾತೃ ಕಲ್ಮನೆ ಕಾಮೇಗೌಡರು ವಿಧಿವಶರಾಗಿದ್ದಾರೆ. ಅವರಲ್ಲಿದ್ದ ಪರಿಸರ ಕಾಳಜಿಯನ್ನು ಮೆಚ್ಚಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅವುಗಳಿಂದ ಬಂದ ಹಣವನ್ನು ಕಟ್ಟೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಿದ್ದಾರೆ. ಇಂತಹ ಸಾಧಕನಿಗೆ ಸರ್ಕಾರ ಗೌರವ ಸಲ್ಲಿಸುವಲ್ಲಿ ಮೀನಮೇಷ ಎಣಿಸಿ ಸಂತಾಪಕ್ಕೆ ಸೀಮಿತವಾಗಿರುವುದು ತುಂಬಾ ವಿಷಾದಕರ ಸಂಗತಿ. ಎಂದಿಗೂ ಮರೆಯಲಾಗದ ಕೆಲಸವನ್ನು ಮಾಡಿ ಮತ್ತೇ ಬಾರದೂರಿಗೆ ನಡೆದಿದ್ದೀರಿ… ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.
ಶ್ರೀನಿವಾಸ ಪ್ರಸಾದರ ನಿರ್ಧಾರ ಸ್ವಾಗತಾರ್ಹ
ಹಿರಿಯ ರಾಜಕಾರಿಣಿ, ಮಾಜಿ ಕೇಂದ್ರ ಸಚಿವ, ಹಾಲಿ ಚಾಮರಾಜನಗರ ಕ್ಷೇತ್ರದ
ಲೋಕಸಭಾ ಸದಸ್ಯ, ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ತಮ್ಮ ಮುಂದಿನ ಒಂದೂವರೆ ವರ್ಷಗಳ ಅವಧಿ ಮುಗಿದ ನಂತರ, ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ
ಹೇಳಿರುವ ಶ್ರೀನಿವಾಸ್ ಪ್ರಸಾದ್, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ದುಡಿದಿದ್ದಾರೆ. ಜಿಲ್ಲಾ
ಉಸ್ತುವಾರಿ ಸಚಿವರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ ೧೪ ಚುನಾವಣೆಯಲ್ಲಿ ಸ್ಪರ್ಧಿಸಿ, ೧೧ ಚುನಾವಣೆಗಳಲ್ಲಿ
ಜಯಭೇರಿ ಬಾರಿಸಿರುವ ಶ್ರೀನಿವಾಸ ಪ್ರಸಾದ್ ಕಳಂಕ ರಹಿತ ರಾಜಕಾರಿಣಿಗಳ ಪೈಕಿ ಒಬ್ಬರಾಗಿದ್ದಾರೆ.
ರಾಜಕಾರಿಣಿಗಳಿಗೂ ಇತರ ಕ್ಷೇತ್ರಗಳಲ್ಲಿ ಇರುವ ಹಾಗೆ ನಿವೃತ್ತಿ ಇರಬೇಕು. ಈ ಹಿನ್ನಲೆಯಲ್ಲಿ ತಮ್ಮ ರಾಜಕೀಯ ನಿವೃತ್ತಿ ಘೋಷಿಸಿ ಹೊಸ ಪೀಳಿಗೆಗೆ ಅವಕಾಶ ಮಾಡಿಕೊಟ್ಟಿರುವ ಶ್ರೀನಿವಾಸ ಪ್ರಸಾದ್‌ಅಭಿನಂದನಾರ್ಹರು. ಅವರ ಮೇಲ್ಪಂಕ್ತಿಯನ್ನು
ಇತರ ರಾಜಕಾರಿಣಿಗಳು ಅನುಸರಿಸಲಿ.
–ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…