ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 18 ಮಂಗಳವಾರ 2022

ಓದುಗರ ಪತ್ರ

ರೋಗಿಗಳಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ

ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರ ಮೈಸೂರಿನ ಕ್ಯಾನ್ಸರ್ ಆಸ್ಪತ್ರೆಗೆ ದಡದಕಲ್ಲಹಳ್ಳಿ ಬಳಿ ೧೮ ಎಕರೆ ಜಮೀನನ್ನು ಮಂಜೂರು ಮಾಡಿದೆ ಎನ್ನುವ ಬ್ರೇಕಿಂಗ್ ನ್ಯೂಸ್ ನೀಡಿದರು. ಅದಕ್ಕೆ ತಾವೇ ಕಾರಣ ಎನ್ನುವುದನ್ನು ಕೂಡ ಸೂಚ್ಯವಾಗಿ ಘೋಷಿಸಿಕೊಂಡರು. ದುರಂತವೆಂದರೆ, ಈ ೧೮ ಎಕರೆಯ ಕುರಿತಾದ ಸರ್ಕಾರಿ ಆದೇಶವನ್ನು ಸ್ವತಃ ಪ್ರತಾಪ್ ಸಿಂಹ ಅಥವಾ ಅವರ ಬೆಂಬಲಿಗರು ಸರಿಯಾಗಿ ಓದಿಕೊಂಡಿದ್ದರೆ, ಅವರು ತಮ್ಮದೇ ಪಕ್ಷದ ರಾಜ್ಯ ಸರ್ಕಾರವನ್ನು ನೇರವಾಗಿ ಟೀಕಿಸಬೇಕಿತ್ತು. ಏಕೆಂದರೆ ಸರ್ಕಾರ ನೀಡುತ್ತಿರುವುದು ೧೮ ಎಕರೆ ಗೋಮಾಳ ಜಮೀನನ್ನು. ಆದರೆ ಈ ಉಚಿತ ಆಸ್ಪತ್ರೆ ಆರಂಭಿಸಬೇಕಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾರುಕಟ್ಟೆ ದರದ ಶೇಕಡಾ ಐವತ್ತರಷ್ಟು ಬೆಲೆಯನ್ನು ಸರ್ಕಾರಕ್ಕೆ ಕಟ್ಟಬೇಕಂತೆ. ಸರಕಾರಿ ಆಸ್ಪತ್ರೆಗೆ ಗೋಮಾಳ ಮಾರುತ್ತಿರುವ ಕುಖ್ಯಾತಿಯ ನಿರ್ಣಯ ಇದು. ಇದನ್ನು ಸಾಧನೆ ಎನ್ನುವವರಿಗೆ ಏನೆನ್ನಬೇಕು? ಇದು ಕ್ಯಾನ್ಸರ್ ರೋಗಿಗಳಿಗೆ ಮಾಡಿದ ದ್ರೋಹ ಅಲ್ಲವೇ? ಪ್ರತಾಪ್ ಸಿಂಹ ಅವರು ತಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. ಈಗ ವೈದ್ಯಕೀಯ ಶಿಕ್ಷಣ ಇಲಾಖೆ ಈ ಜಮೀನಿಗೆ ಹಣ ನೀಡಿದರೆ, ಅದರ ಪರಿಣಾಮ ಚಿಕಿತ್ಸಾ ವೆಚ್ಚ ಜಾಸ್ತಿಯಾಗುತ್ತದೆ. ವ್ಯವಸ್ಥೆಗಳು ಕಡಿಮೆಯಾಗುತ್ತವೆ. ಮೊದಲೇ ಅರೋಗ್ಯ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಬಕಾಸುರನ ಹೊಟ್ಟೆಗೆ ಮಜ್ಜಿಗೆಯಂತಿದೆ. ಗೋಮಾಳವನ್ನು ಆಸ್ಪತ್ರೆಗೆ ಉಚಿತವಾಗಿ ನೀಡಲಾಗದಷ್ಟೂ ಸಂವೇದನೆ ಕಳೆದುಕೊಂಡಿದೆಯೇ ರಾಜ್ಯ ಸರ್ಕಾರ?

ಸಿಂಚನ ಅಧಿಕಾರಿ, ವಿಜಯನಗರ, ಮೈಸೂರು.


ಕಾಮುಕನಿಗೆ ಗಲ್ಲು ಶಿಕ್ಷೆಯಾಗಲಿ

ಗುರು ದೇವೊ ಭವ ಎನ್ನುವ ಕಾಲವೊಂದಿತ್ತು. ಪಾಠ ಹೇಳಿ ಕೊಡುವ ಗುರು ದೇವರಿಗೆ ಸಮಾನ. ಮೊನ್ನೆ ಮಳವಳ್ಳಿಯ ಕಾಮುಕ ಶಿಕ್ಷಕನೊಬ್ಬ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಆಘಾತಕಾರಿ ಸಂಗತಿ. ಪ್ರಜ್ಞಾವಂತ ಶಿಕ್ಷಕರೇ ಈತನಿಗೆ ಗಲ್ಲು ಶಿಕ್ಷೆ ಯಾಗುವಂತೆ ಪ್ರತಿಭಟಿಸಿದರೆ ಮಾತ್ರ ಸಮಾಜವೇ ಶಿಕ್ಷಕರ ಬಗ್ಗೆ ಹೆಮ್ಮೆಪಡುವಂತಾಗುತ್ತದೆ.

ಬೂಕನಕೆರೆ ವಿಜೇಂದ್ರ, ಮೈಸೂರು.


ಟಿಕೆಟ್ ವಿತರಣೆ ಪುನಾರಂಭಿಸಿ

ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಮತ್ತು ಹಲವಾರು ಕಡೆಗಳಿಗೆ ಹೋಗುವ ದೈನಂದಿನ ರೈಲುಗಳ ಟಿಕೆಟ್‌ಗಳನ್ನು ನೀಡುತ್ತಿದ್ದರು. ಕುವೆಂಪುನಗರ, ಸರಸ್ವತಿಪುರಂ, ಜಯನಗರ, ಕೃಷ್ಣಮೂರ್ತಿಪುರಂ ಸೇರಿದಂತೆ ಹಲವಾರು ಬಡಾವಣೆಗಳ ಜನಗಳು ಇಲ್ಲಿ ಟಿಕೆಟ್ ಖರೀದಿಸುತ್ತಿದ್ದರು. ಇದರಿಂದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಸರತಿಸಾಲಿನಲ್ಲಿ ನಿಲ್ಲುವ ಕೆಲಸ ತಪ್ಪುತ್ತಿತ್ತು. ಶೀಘ್ರವಾಗಿ ಪ್ರಯಾಣ ಮಾಡಲು ಅನುಕೂಲವಾಗುತ್ತಿತ್ತು. ಆದರೆ ಇದ್ದಕಿದ್ದಂತೆ ಇಲ್ಲಿ ಟಿಕೆಟ್ ನೀಡುವುದನ್ನು ನಿಲ್ಲಿಸಿದ್ದಾರೆ. ಕಾರಣ ತಿಳಿಯದು. ದಿನದಿಂದ ದಿನಕ್ಕೆ ಜನರಿಗೆ ಅನುಕೂಲ ಮಾಡುವ ಬದಲು ಅನಾನುಕೂಲ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣದಿಂದ ಟಿಕೆಟ್ ನೀಡುವುದನ್ನು ಪ್ರಾರಂಭಿಸಬೇಕು.

ಶ್ರೀಕಂಠ ಹೆಚ್.ಜಿ., ಜಯನಗರ, ಮೈಸೂರು.


ಪಿತೂರಿಯ ತನಿಖೆಯೂ ಆಗಲಿ

ಫೋಕ್ಸೋ ಕಾಯಿದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರಾಘಮಠದ ಶಿವಮೂರ್ತಿ ಶರಣರ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆದರೆ ಚಿತ್ರ ದುರ್ಗದಲ್ಲೇ ದೂರು ನೀಡದೇ ಮತ್ತೆ ಮೈಸೂರಿಗೆ ಬಂದು ದೂರು ನೀಡಿದ್ದೇಕೆ? ಎನ್ನುವ ಅನುಮಾನಗಳೂ ಕಾಡುತ್ತವೆ. ಅಲ್ಲದೆ ಪ್ರಕರಣ ದಾಖಲಾಗಿ ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಹೀಗಿರುವಾಗ ಆಗಲೇ ದೂರು ನೀಡದೆ ಈಗ ದೂರು ನೀಡುತ್ತಿರುವುದರ ಹಿಂದೆ ಯಾರದಾದರೂ ಪಿತೂರಿ / ಚಿತಾವಣೆ ಇದೆಯೇ? ಹಾಗಿದ್ದರೆ ಕಾರಣವೇನು ಎನ್ನುವುದೂ ತನಿಖೆ ಯಾಗಬೇಕು.

ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.

andolanait

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

20 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

20 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

20 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

20 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

20 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

23 hours ago