ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 15 ಶನಿವಾರ 2022

ಓದುಗರಪತ್ರ

ಸುಳ್ಳು ಹೇಳಿದ ಸರಕಾರ !

ದಸರೆಗೆ ಮಾಡಿದ ದೀಪಾಲಂಕಾರವನ್ನು ಅಕ್ಟೋಬರ್ ೧೦ ರವರೆಗೆ ವಿಸ್ತರಣೆ ಮಾಡಲಾಗಿದೆಯೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚೆಸ್ಕಾಂ ಎಂ.ಡಿ. ಜಯವಿಭವ ಸ್ವಾಮಿಯವರು ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಕಂಡು ನಾವು ದಿನಾಂಕ ೭ರ ಶುಕ್ರವಾರ ರಾತ್ರಿ ಎಂಟರ ನಂತರ ಮೈಸೂರು ನಗರದ ದೀಪಾಲಂಕಾರ ನೋಡಲು ಕೃಷ್ಣರಾಜ ಬೂಲ್‌ವಾರ್ಡ್ ರಸ್ತೆಯಿಂದ ಹೊರಟು

ಹುಣಸೂರು ರಸ್ತೆಗೆ ಸೇರಿದೆವು. ಅಲ್ಲಿಂದಲೇ ಉರಿಯದ ದೀಪಸಾಲುಗಳು ನಮ್ಮನ್ನು ಸ್ವಾಗತಿಸಿದವು. ಹಾಗೇ ಮುಂದೆ ಸಾಗಿ ಬಿ.ಎಂ. ಆಸ್ಪತ್ರೆಯ ಬಳಿ ತಿರಗಿಕೊಂಡು ಕೆ.ಆರ್.ಎಸ್. ರಸ್ತೆಯ ಕಡೆ ಸಾಗಿದೆವು. ಅಲ್ಲಿಂದ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಗೆ ತಿರುಗಿ ರೈಲ್ವೇ ಸ್ಟೇಶನ್ ದಾಟಿ ಆರ್.ಎಂ.ಸಿ. ಕಡೆಯಿಂದ ಮಿಲೇನಿಯಂ ಸರ್ಕಲ್ ಕಡೆ ಹೋದೆವು.ಅಲ್ಲಿಂದ ಗ್ರಾಮಾಂತರ ಬಸ್ ನಿಲ್ದಾಣದ ಕಡೆ ಹೋದೆವು. ಮುಖ್ಯ ರಸ್ತೆಗಳಲ್ಲಿ ದೀಪಾಲಂಕಾರವಿತ್ತಾದರೂ ಬಹಳಷ್ಟು ರಸ್ತೆಯಲ್ಲಿ ಹಾಕಿದ್ದ ಸಾಲು ದೀಪಗಳು ಉರಿಯುತ್ತಿರಲಿಲ್ಲ. ಶೇ.೮೫ ರಷ್ಟು ಉರಿಯದ ಸಾಲು ದೀಪಗಳನ್ನು ನೋಡಿ ಬೇಸರವಾಯಿತು. ಎರಡು ದಿವಸ ದೀಪಾಲಂಕಾರ ಮುಂದುವರೆಸಲಾಗುತ್ತದೆಯೆಂಬ ಉಸ್ತುವಾರಿ ಸಚಿವರ ಮಾತನ್ನು ನಂಬಿ ನಾವು ಮೂರ್ಖರಾದೆವು. ದೀಪಾಲಂಕಾರವನ್ನು ಪೂರ್ಣಪ್ರಮಾಣದಲ್ಲಿ ಮುಂದುವರೆಸಲಾಗದಿದ್ದರೆ ಸಚಿವರು ಹಾಗೂ ಚೆಸ್ಕಾಂ ಎಂ.ಡಿ .ಸುಮ್ಮನಿರಬೇಕಿತ್ತು.
ಸುಳ್ಳು ಹೇಳಿ ಜನರಿಗೆ ಮೋಸಮಾಡಬಾರದಾಗಿತ್ತು !
ಕೊ.ಸು.ನರಸಿಂಹ ಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು. .


ಅವರೂ ಮನುಷ್ಯರಲ್ಲವೇ?

ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳು ಹರಿಜನರ ಮನೆಯಲ್ಲಿ ಊಟ ಮಾಡುವುದು ಮಾಧ್ಯಮಗಳಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿರುವುದು ದುರಂತದ ವಿಷಯ. ಹರಿಜನರು ಮನುಷ್ಯರಲ್ಲವೇ ? ಅವರ ಮನೆಯಲ್ಲಿ ಊಟ ಮಾಡುವುದನ್ನೇಕೆ ವೈಭಿಕರಿಸಬೇಕು? ಇದರಿಂದ ಮುಂದಿನ ಪೀಳಿಗೆಗೆ ಕೊಡುವ ಸಂದೇಶವೇನು?

-ಬೂಕನಕೆರೆ ವಿಜೇಂದ್ರ, ಮೈಸೂರು 


ಪರಿಣತಿಮತಿಗಳ್?!

ಆ ಕವಿರಾಜಮಾರ್ಗಕಾರ

ಈಗೇನಾದರೂ ಇದ್ದಿದ್ದರೆ

ಹೇಳುತ್ತಿದ್ದರೇನೊ!

(ಕ್ಷಮಿಸಿ)

ಕನ್ನಡಿಗರ್

ನುಡಿ ಸಮ್ಮೇಳನವಂ

ಮತ್ತೆ ಮತ್ತೆ
ಮುಂದೂಡಬಲ್ಲ

ಪರಿಣತಿಮತಿಗಳ್ ?!

-ಮ ಗು ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ದೇವರ ದುಬಾರಿ ದರ್ಶನ

ಹಾಸನಾಂಬ ದೇವಾಲಯದ ಬಾಗಿಲು ೧೪ ದಿನಗಳವರೆಗೆ ತೆರೆದಿದೆ. ಆದರೆ ದೇವರ ದರ್ಶನಕ್ಕೆ ಸಾವಿರ, ಮುನ್ನೂರು ರೂ. ವಿಶೇಷ ದರ್ಶನ ಶುಲ್ಕ ವಿಧಿಸಿರುವುದು ದೇವಾಲಯಗಳ ಮಾರುಕಟ್ಟೆ ಮುಖವನ್ನು ತೆರೆದಿಡುತ್ತವೆ!
ಅಲ್ಲದೆ ದೇವರ ದರ್ಶನವನ್ನು ಕೆಲವೇ ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆದರೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ ಮದ್ಯಹ್ನ ೨ ಗಂಟೆ ದೇವಸ್ಥಾನದ ಬಾಗಿಲು ಮುಚ್ಚಿ ಭಕ್ತರನ್ನು ಕಾಯಿಸುವುದು ಏಕೆ? ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅಲ್ಲಿ ಊಟ, ಶೌಚಾಲಯದ ವ್ಯವಸ್ಥೆ ಯನ್ನು ಜಿಲ್ಲಾಡಳಿತ ಮಾಡಿದೆಯೇ?
ಇನ್ನು ಹಾಸನಾಂಬ ದೇವಾಲಯದಲ್ಲಿ ಹಚ್ಚಿದ ದೀಪ ವರ್ಷವಿಡೀ ಆರದೆ ಉರಿಯುತ್ತಿರುತ್ತದೆ ಎಂದು ಭಕ್ತರನ್ನು ನಂಬಿಸಲಾಗಿದೆ. ವಿಪರ್ಯಾಸವೆಂದರೆ ಇದನ್ನು ನಮ್ಮ ಬಹಳಷ್ಟು ವಿದ್ಯಾವಂತ ಭಕ್ತರೇ ನಂಬುತ್ತಾರೆ! ಅಲ್ಲಿ ವರ್ಷವಿಡೀ ದೀಪ ಉರಿಯುತ್ತದೆ ಎನ್ನುವುದನ್ನು ಕಳೆದ ವರ್ಷ ಅಲ್ಲಿನ ಆಡಳಿತ ಮಂಡಳಿಯೇ ನಿರಾಕರಿಸಿತ್ತು. ದೇವಾಲಯದ ಬಾಗಿಲು ತೆರೆದ ದಿನದಿಂದ ದೇವಾಲಯದ ಬಾಗಿಲು ಮುಚ್ಚುವವರೆಗಿನ ದಿನಗಳವರೆಗೆ ಹಗಲು -ರಾತ್ರಿ ದೀಪ ಆರದಂತೆ ನೋಡಿ ಕೊಳ್ಳ ಲಾಗು ತ್ತದೆ ಎನ್ನುವುದು ಮಾತ್ರ ವಾಸ್ತವ.

-ಮುಳ್ಳೂರು ಪ್ರಕಾಶ್, ಕನಕ ದಾಸ ನಗರ, ಮೈಸೂರು

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

7 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

7 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

8 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

8 hours ago