ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 06 ಗುರುವಾರ 2022

  1. ಜೋಡೊ ರಸ್ತೆ
    ಬದನವಾಳುವಿನಲ್ಲಿರುವ ಮಹಾತ್ಮ ಗಾಂಧೀಜಿ ಅವರು 1927 ರಲ್ಲಿ ಭೆೇಟಿ ನೀಡಿದ್ದ ರಸ್ತೆಯನ್ನು  ಕಳೆದ 29 ವರ್ಷಗಳ ಹಿಂದಿನ ಅಹಿತಕರ ಘಟನೆಯಿಂದ ಸಂಪರ್ಕವೇ ಇಲ್ಲದೆ ಮುಚ್ಚಲಾಗಿತ್ತು. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಕೈಗೊಂಡು ಈ ರಸ್ತೆಯನ್ನು ಜನಸಂಪರ್ಕಕ್ಕೆ ಮುಕ್ತಗೊಳಿಸಿ ‘ಜೋಡೊ ರಸ್ತೆ’ ಎಂದು ನಾಮಕರಣ ಮಾಡಿ ಐತಿಹಾಸಿಕ ಕ್ಷಣಕ್ಕೆ ಕಾರಣರಾಗಿದ್ದಾರೆ. 29 ವರ್ಷಗಳ ನಂತರ ಎಲ್ಲಾ ಸಮುದಾಯದವರು ಒಂದೆಡೆ ಕಲೆತು ಸಹಭೋಜನ ಮಾಡಿರುವುದು ತುಂಬಾ ಮನಮೆಚ್ಚುವ ಸಂಗತಿ ಮತ್ತು ಇಲ್ಲಿ ಆಚರಿಸಿದ ಗಾಂಧಿ ಜಯಂತಿ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದೆ. ಯಾವುದೇ ನಾಯಕರು ಸಮುದಾಯಗಳನ್ನು ಒಂದು ಮಾಡುವುದು ಉತ್ತಮವಾದ ಕೆಲಸ. ರಾಹುಲ್ ಗಾಂಧಿ ಅವರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು.
    -ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.

ಯಾವ ನೈತಿಕ ಶಿಕ್ಷಣವಿದೆ?
ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಬಾರದೆಂದು ವಿವಾದ ಸೃಷ್ಟಿಯಾದಾಗ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲಾ
ಕಾಲೇಜುಗಳಲ್ಲಿ ಧರ್ಮವನ್ನು ಆಚರಿಸಬಾರದು ಎಂಬ ಹೇಳಿಕೆ ನೀಡಿದರು. ವಿವಿಧ ಧರ್ಮಗಳ ಹಿನ್ನೆಲೆಯ ಮಕ್ಕಳು ಒಟ್ಟಿಗೆ ಕೂರುವಾಗ ಹಿಜಾಬ್ ಹಾಕಿಕೊಳ್ಳುವುದು ಸರಿಯಲ್ಲ, ಅದು ಸಮವಸ್ತ್ರ ಸಂಹಿತೆಯ
ಉಲ್ಲಂಘನೆ ಎಂಬ ವಾದವನ್ನು ಹೂಡಲಾಯಿತು. ಈಗ ಇದೇ ಸಚಿವ ಬಿ.ಸಿ.ನಾಗೇಶ್, ನೈತಿಕ ಶಿಕ್ಷಣ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಿ, ಡಿಸೆಂಬರ್‌ನಿಂದ  ಮಕ್ಕಳಿಗೆ ಬೋಧಿಸಲು
ಪ್ರಯತ್ನಿಸಲಾಗುವುದು. ಹಾಗೆಯೇ, ಪಠ್ಯಗಳಲ್ಲಿರುವ ಇತಿಹಾಸದ ತಪ್ಪುಗಳನ್ನು ಸರಿ ಮಾಡಲಾಗುವುದು ಎಂದು ಭಗವದ್ಗೀತೆಯನ್ನು ಬೋಧಿಸುತ್ತೇವೆ ಎನ್ನುತ್ತಿದ್ದಾರೆ. ಪಠ್ಯಪುಸ್ತಕವನ್ನು ತಮ್ಮ ಸಿದ್ಧಾಂತಕ್ಕನುಗುಣವಾಗಿ ತಿರುಚುವುದು, ಇತಿಹಾಸಕ್ಕೆ ಅಪಚಾರವೆಸಗುವುದು, ಮಕ್ಕಳ ಮೇಲೆ ವೈದಿಕ ಪರಂಪರೆಯ ಆಲೋಚನೆಗಳನ್ನು ಹೇರುವುದು, ವೇದಗಣಿತವನ್ನು ದಲಿತ ಮಕ್ಕಳಿಗೆ ಕಲಿಸುತ್ತೇವೆ ಎನ್ನುವುದು- ಈ ರೀತಿಯ ವಿಚಾರಗಳಲ್ಲೇ ಸರ್ಕಾರ ಕಾಲಕ್ಷೇಪ ಮಾಡುತ್ತಿರುವಂತೆ ಕಾಣುತ್ತಿದೆ. ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸುವ ಉದ್ದೇಶವಾದರೂ ಏನು? ಇದರಿಂದ ಯಾವ ಪ್ರಯೋಜನವಾಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.
-ಮದನ್ ಹಾದನೂರು, ಮೈಸೂರು.

ಪಿಎಮ್ ಕಿಸಾನ್ ಯೋಜನೆ ಖಜಾನೆ ಲೂಟಿ?
ಪ್ರಧಾನಮಂತ್ರಿ ಕಿಸಾನ್ ಯೋಜನೆ ಕುರಿತಂತೆ  ವೃತ್ತ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿ ಈ ಕಳೆಕಂಡಂತೆ ಇದೆ:
(1) 3.97ಲಕ್ಷ ಅನರ್ಹ ರೈತರಿಗೆ 442 ಕೋಟಿ ರೂ.ಪಾವತಿ. (2) 3312 ಮೃತ ರೈತರ ಖಾತೆಗಳಿಗೆ ಹಣ ಜಮಾ ಆಗಿದೆ.
(3) 9,1969 ಮಂದಿ ಫಲಾನುಭವಿಗಳು ಆದಾಯ ತೆರಿಗೆ ಕಟ್ಟುತ್ತಿದ್ದಾರೆ. (4) 1.06 ಲಕ್ಷ ರೈತರು ಅನರ್ಹರೆಂದು ಪತ್ತೆ ಆಗಿದೆ.
(5) ಸ್ವಯಂ ನೋಂದಣಿ ವಿಚಾರದಲ್ಲಿ ಸರ್ಕಾರಕ್ಕೆ ವಂಚಿಸಿ ನೋಂದಣಿಯಾಗಿರುವ ರೈತರ ಸಂಖ್ಯೆ 1,06,416
ದೇಶದ ಪ್ರತಿಯೊಬ್ಬ ರೈತನೂ ಉದ್ಧಾರವಾಗಲೆಂದೇ 6ಸಾವಿರ ರೂ.ಗಳನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ತನ್ನ ಪಾಲಾದ 4 ಸಾವಿರ ರೂ.ಗಳನ್ನು ಈ ಯೋಜನೆಗೆ ಜಮಾ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸರ್ಕಾರದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪಾತ್ರವಿಲ್ಲದೇ ಅಕ್ರಮ ನಡೆಯಲು ಸಾಧ್ಯವಿಲ್ಲ. ಹೀಗಾಗಿ  ಕೇವಲ ರೈತರೇ ತಪ್ಪೆಸಗಿದ್ದಾರೆ ಎಂದು ಹೇಳಲಾಗದು. ಕಾಣದ ಕೈಗಳು  ಈ ಕೃತ್ಯದ ಹಿಂದೆ ಕೆಲಸ ಮಾಡುತ್ತಿರುವುದಂತೂ  ಸತ್ಯ.  ದುರುಪಯೋಗವಾಗಿರುವ ಹಣವನ್ನು ರೈತರ ಖಾತೆಗಳಿಂದ ಹಿಂಪಡೆಯುವ ಬಗ್ಗೆ ಬ್ಯಾಂಕ್
ಅಧಿಕಾರಿಗಳಿಗೆ ಸೂಚನೆ ಹೋಗಿದೆಯಂತೆ, ಸ್ವಲ್ಪ
ಭಾಗದಲ್ಲಿ ರೈತರುಗಳಿಂದ ವಾಪಸ್ಸು ಬಂದಿದೆ ಎಂತಲೂ ಸುದ್ದಿ ಇದೆ. ಇಂತಹ ಕೃತ್ಯಗಳಿಗೆ ಕೊನೆ ಎಂದು ?
– ಎ.ಎಸ್.ಗೋಪಾಲಕೃಷ್ಣ ,ರಾಮಕೃಷ್ಣನಗರ, ಮೈಸೂರು.

ಕ್ಯಾ- ರೇಟ್ ?!
ಆಗಿಹುದಂತೆ
ತರಕಾರಿಗಳ
ಬೆಲೆ
ಭಾರಿ ತುಟ್ಟಿ!
ಏನಿದೆ ಬೇರೆ ದಾರಿ?
ಮೊನ್ನೆಯಿಂದ ಖಾಲಿ
ಖಾಲಿಯಾಗಿಹುದು
ಅಡುಗೆ ಮನೆಯಲ್ಲಿ
ತರಕಾರಿಗಳ ಬುಟ್ಟಿ !!
-ಮ ಗು ಬಸವಣ್ಣ, , ಜೆಎಸ್‌ಎಸ್ ಸಂಸ್ಥೆ, ಸುತ್ತೂರು.
andolanait

Recent Posts

ಮಂಡ್ಯದಲ್ಲಿ ಭಿಕ್ಷುಕಿ ನಿಧನ : ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ. ಮಂಡ್ಯ ನಗರದ…

3 hours ago

ಜಿಲ್ಲೆಗೊಂದು ಕೈಗಾರಿಕೆ ತರುತ್ತೇನೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು…

4 hours ago

ನಕಲಿ ಔಷಧ ತಯಾರಿಕಾ, ಮಾರಾಟ ಜಾಲ ; ವಿದೇಶದಲ್ಲಿ ಕಿಂಗ್‌ಪಿನ್ ಬಂಧನ

ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್, ವಿದೇಶದಲ್ಲಿ ಅಡಗಿದ್ದ…

5 hours ago

ಗೋಣಿಕೊಪ್ಪ | ಮಾರುಕಟ್ಟೆಯಲ್ಲಿ ಗಸ್ತು ತಿರುಗಿದ ಪೊಲೀಸರು ; ಅಕ್ರಮ ಚಟುವಟಿಕೆ ಮೇಲೆ ನಿಗಾ

ಗೋಣಿಕೊಪ್ಪ : ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ರಸ್ತೆ ಅತಿಕ್ರಮಣ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ…

6 hours ago

ಪಾರದೀಪ್ ಕರಾವಳಿಯಲ್ಲಿ ಹಡಗು ಮುಳುಗಡೆ ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ

72,100 ಟನ್‌ ಕಬ್ಬಿಣದ ಅದಿರು ಇದ್ದ ಹಡಗು ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯ ಆಳ ಸಮುದ್ರದಲ್ಲಿ ಶನಿವಾರ ಭೀಕರ ನೌಕಾ…

7 hours ago

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಬಾಗಿಲು ಒಡೆದು ಇಡಿ ದಾಳಿ

ಬೆಂಗಳೂರು : ಕೆಪಿಎಸ್‌ಸಿ ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನುಪಸ್ಥಿತಿಯಲ್ಲಿ ಅವರ…

8 hours ago