ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 01 ಶನಿವಾರ 2022

ಜಯಲಕ್ಷ್ಮಿವಿಲಾಸ ಅರಮನೆಗಿಲ್ಲ ದಸರೆ ವೈಭವ
ಈ ಬಾರಿ ಮೈಸೂರು ನಗರದಲ್ಲಿ ದಸರೆ ವೈಭವವು ಇಮ್ಮಡಿಯಾಗಿದೆ. ಇಡೀ ನಗರವೇ ದೀಪದ ಬೆಳಕಿನಲ್ಲಿ ಜಗಮಗಿಸುತ್ತಿದೆ. ವೃಕ್ಷಗಳು, ರಸ್ತೆಗಳು, ವಿವಿಧ ಕಟ್ಟಡಗಳು, ಸ್ಮಾರಕಗಳು, ಪ್ರತಿಮೆಗಳು, ಪಾರಂಪರಿಕ ಕಟ್ಟಡಗಳು ಹೀಗೆ ಎಲ್ಲಾ ಕಡೆ ದೀಪಾಲಂಕೃತಗೊಂಡು ಪಾರಂಪರಿಕ ಕಟ್ಟಡಗಳು ಅದ್ಭುತವಾಗಿ ಕಾಣುತ್ತಿವೆ. ಆದರೆ, ಏನು ಶಾಪವೋ ಕಾಣೆ ಮೈಸೂರಿನ ಅರಮನೆಗೂ ಮುಂಚೆಯೇ ನಾಲ್ವಡಿ ಕೃಷ್ಣರಾಜ ಒಡೆಯರಿಂದ ನಿರ್ಮಾಣಗೊಂಡ ಜಯಲಕ್ಷ್ಮಿವಿಲಾಸ ಅರಮನೆ ಯಾವುದೇ ವೈಭವವಿಲ್ಲದೆ ಹಳೆಯ ಬಂಗಲೆಯಂತೆ ಕಾಣುತ್ತಿದೆ. ಜಯಲಕ್ಷ್ಮಿ ವಿಲಾಸ ಅರಮನೆಯು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿದ್ದು ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ವಸ್ತು ಸಂಗ್ರಹಾಲಯವಾಗಿಯೂ ಮಾರ್ಪಾಡು ಮಾಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅರಮನೆಯು ಶಿಥಿಲಾವಸ್ಥೆ ತಲುಪಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಅರಮನೆಯ ಮಾಳಿಗೆಗಳು ಸೋರುತ್ತಿವೆ. ದಸರಾ ಸಂದರ್ಭದಲ್ಲಿ ಇದನ್ನು ಸರಿಪಡಿಸುವ ಕೆಲಸ ಮಾಡಬೇಕು. ಸರ್ಕಾರ ಹಾಗೂ ಸಂಬಂಧಪಟ್ಟವರು ಈ ಪಾರಂಪರಿಕ ಕಟ್ಟಡವನ್ನು ಉಳಿಸುವ ಕಡೆ ಗಮನ ನೀಡಬೇಕು ಹಾಗೂ ದಸರೆ ಸಂದರ್ಭದಲ್ಲಿ ಅರಮನೆಗೆ ದೀಪಾಲಂಕಾರ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
-ಲಕ್ಷ್ಮಿ ಕಿಶೋರ್ ಅರಸ್, ಮಾನಸಗಂಗೋತ್ರಿ, ಮೈಸೂರು.


ತ್ಯಾಗ
ದೇಶಕ್ಕಾಗಿ,
ಸ್ವಾತಂತ್ರ್ಯಕ್ಕಾಗಿ
ಹುತಾತ್ಮರಾದರು ಅಂದು
ಮಹಾತ್ಮ ಗಾಂಧಿ
ಹೋಗಿ ಹೋಗಿ..,
ಬಂತಲ್ಲ ಅವರ ಜಯಂತಿ
ರ(ಜೆ)ವಿ ವಾರವೆಂದು
ಕೊರಗುತ್ತಿಹರು ಇಂದು
ಹಲವಾರು ಮಂದಿ !
ಮ.ಗು.ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ಭಣಗುಟ್ಟುತ್ತಿರುವ ಗಾನಭಾರತಿ ಸಭಾಂಗಣ
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ, ಕುವೆಂಪು ನಗರದ ಗಾನಭಾರತೀ ಸಭಾಂಗಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಲ್ಲದೇ ಇಡೀ ಸಭಾಂಗಣವೇ ಭಣಗುಟ್ಟುತ್ತಿದೆ. ವೇದಿಕೆಯ ಕೆಳಗೆ ಕೇವಲ ಹದಿನೈದರಿಂದ ಇಪ್ಪತ್ತು ಜನರೂ ಇರಲಿಲ್ಲ (ಗುರುವಾರದಂದು) ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ಯಾರ ಹಿತಕ್ಕಾಗಿ? ಇದು ಆಯೋಜಕರ ಪ್ರಚಾರದ ಕೊರತೆಯಿಂದ ಹೀಗಾಗುತ್ತಿರಬಹುದು. ಇದು ಕಲಾವಿದರಿಗೆ ಮಾಡುತ್ತಿರುವ ಅವಮಾನವೂ ಹೌದು. ಕಾರ್ಯಕ್ರಮ ಆಯೋಜಿಸಿರುವ ಸಮಿತಿಯವರನ್ನು ಕೇಳಿದರೆ, ಅವರಿಂದ ಸಮರ್ಪಕವಾದ ಉತ್ತರವೇ ಇಲ್ಲ.
ಬೂಕನಕೆರೆ ವಿಜೇಂದ್ರ. ಮೈಸೂರು.


ಪುಸ್ತಕ ಪ್ರೇಮಿಗಳಿಗೆ ನಿರಾಸೆ
ಈ ಬಾರಿಯ ನಾಡಹಬ್ಬ ದಸರಾ ಉತ್ಸವದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸದಿರುವುದು ತುಂಬಾ ಬೇಸರದ ಸಂಗತಿ. ‘ದೇಶ ಸುತ್ತು ಕೋಶ ಓದು’ ಎಂಬ ಒಂದು ಮಾತಿದೆ. ಪುಸ್ತಕಗಳು ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ. ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ಪರಂಪರೆಗೆ ಪುಸ್ತಕಗಳು ತುಂಬಾ ಕೊಡುಗೆ ನೀಡಿವೆ. ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಮನ ಹರಿಸಬೇಕು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಕಡೆ ಸಭೆ ಸಮಾರಂಭಗಳಲ್ಲಿ ಪುಸ್ತಕ ನೀಡುವ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಇಷ್ಟಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರುವುದು ತುಂಬಾ ವಿಷಾದದ ಸಂಗತಿ. ಇನ್ನು ಮುಂದಾದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.

andolanait

Recent Posts

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

4 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

8 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

8 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

8 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

11 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

11 hours ago