ಎಡಿಟೋರಿಯಲ್

ಆಂದೋಲನ ಓದುಗರ ಪತ್ರ :11 ಭಾನುವಾರ 2022

ನಂಜನಗೂಡು ಮೀಸಲು ಕ್ಷೇತ್ರದ ಮೇಲೆ ಮಹದೇವಪ್ಪ ಕಣ್ಣು..! ಎಲ್ಲಿದೆ ಸಾಮಾಜಿಕ ನ್ಯಾಯ.?

ಮುಂಬರಲಿರುವ ೨೦೨೩ರ ವಿಧಾನಸಭೆ ಚುನಾವಣೆಯ ಕಾವೇರಿದಂತೆ ಇತ್ತ ಪ.ಜಾತಿ ಮೀಸಲು ಕ್ಷೇತ್ರವಾದ ನಂಜನಗೂಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ಜೋರಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಬಿ.ಹರ್ಷವರ್ಧನ್‌ರವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ಇತ್ತ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಆರ್.ಧ್ರುವನಾರಾಯಣ ಹಾಗೂ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಎಚ್.ಸಿ.ಮಹದೇವಪ್ಪನವರು ಟಿ.ನರಸೀಪುರ ಪ.ಜಾತಿ ಮೀಸಲು ಕ್ಷೇತ್ರದಿಂದ ೫ ಬಾರಿ ಗೆದ್ದು ಶಾಸಕರಾಗಿದ್ದಾರೆ. ಮತ್ತು ಸಚಿವರು ಕೂಡ ಆಗಿದ್ದಾರೆ. ೨೦೧೮ರ ಚುನಾವಣೆಯಲ್ಲಿ ಸೋತ ಬಳಿಕ ಈಗ ತಮ್ಮ ಪುತ್ರ ಸುನೀಲ್ ಬೋಸ್ ರವರಿಗೆ ತಮ್ಮ ಸ್ವಕ್ಷೇತ್ರವನ್ನು ಬಿಟ್ಟು ತಾವು ಮತ್ತೊಂದು ಮೀಸಲು ಕ್ಷೇತ್ರವಾದ ನಂಜನಗೂಡಿನಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಅವರು ಮಗನಿಗೊಂದು ಮೀಸಲು ಕ್ಷೇತ್ರ, ಅಪ್ಪನಿಗೊಂದು ಮೀಸಲು ಕ್ಷೇತ್ರ ಕೇಳುತ್ತಿರುವುದು ಸಾಮಾಜಿಕ  ನ್ಯಾಯವೇ?
ಕಳಲೆ ಕೇಶವಮೂರ್ತಿರವರು ಕ್ಷೇತ್ರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ ಆರ್.ಧ್ರುವನಾರಾಯಣ ರವರು ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಕ್ರಿಯಾಶೀಲರಾಗಿದ್ದಾರೆ.  ಇಂತಹ ಸಮರ್ಥ ನಾಯಕರು ಕ್ಷೇತ್ರದಲ್ಲಿ ಇರುವಾಗ ಮಹದೇವಪ್ಪನವರು ಟಿಕೆಟ್ ಕೇಳುವುದು ಸರಿಯಲ್ಲ. ನಂಜನಗೂಡು, ಟಿ.ನರಸೀಪುರ ಎರಡೂ ಪ್ರಮುಖ ಮೀಸಲು ಕ್ಷೇತ್ರದ ಟಿಕೆಟ್‌ಗಳನ್ನ ತಮ್ಮ ಕುಟುಂಬಕ್ಕೆ ಬೇಡಿಕೆ ಇಟ್ಟಿರುವ ನೀವು ತನ್ನದೇ ಸಮುದಾಯದ ಇತರೆ ಸಮರ್ಥ ನಾಯಕರಿಗೆ ಮಾಡುತ್ತಿರುವ ಅನ್ಯಾಯ.

-ರಮೇಶ್ ಮೌರ್ಯ, ಹೆಡಿಯಾಲ, ನಂಜನಗೂಡು ತಾ.


ಡಾ.ಟಿ.ಜೆ.ತಾರ ಅವರಿಗೆ ದೇವಮ್ಮ ಇಂಡವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ.ಟಿ.ಜೆ.ತಾರ ಅವರು ಕಳೆದ ೨೫ ವರ್ಷಗಳಿಂದ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ, ಚಿಕ್ಕಮಗಳೂರಿನ ಜೇನುಗದ್ದೆ, ಹಾಗೂ ಕೊಪ್ಪ, ಈಗ ಟಿ.ಎಂ.ಹೊಸೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಬಡವರು, ಕೂಲಿ ಕಾರ್ಮಿಕರು, ರೈತಾಪಿವರ್ಗ ಹಾಗೂ ದೀನದಲಿತರ ಆಶಾಕಿರಣವಾಗಿ ಇದುವರೆಗೂ ಹಣವನ್ನು ತೆಗೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ನುಡಿಯಂತೆ ಸರ್ಕಾರಿ ಕೆಲಸ ದೇವರ ಕೆಲಸ ಮತ್ತು ವೈದ್ಯ ನಾರಾಯಣೋ ಹರಿ ಎಂಬ ಮಾತಿಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿರುವ ಇವರ ಸೇವೆಯನ್ನು ಗುರುತಿಸಿ ೨೦೨೨ ಸಾಲಿನಲ್ಲಿ ಮಂಡ್ಯದ ಜನಧನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ದೇವಮ್ಮ ಇಂಡವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ೨೫೦೦೦ ರೂ ನಗದು ಗೌರವ ನೀಡಿ ಗೌರವಿಸಿರುವುದು ಅಭಿನಂದನಾರ್ಹವಾಗಿದೆ.

-ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು


ಕಸದ ಹೆಸರಿನಲ್ಲಿ ವಸೂಲಿಯೋ ಅಥವಾ ನಿಯಂತ್ರಣವೋ ?

ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲೂ ಪ್ರತಿಬಾರಿಯೂ ಸ್ಥಾನ ಪಡೆಯುವ ಮೈಸೂರಿನ ಸ್ವಚ್ಛತೆಗೆ ನಮ್ಮ ಪೌರಕಾರ್ಮಿಕರು, ನಾಗರಿಕರು ಹಾಗೂ ಅಧಿಕಾರಿಗಳು ಕಾರಣ ಎಂದರೆ ತಪ್ಪಾಗಲಾರದು. ಆದರೆ, ಇತ್ತೀಚೆಗೆ ನಗರದಲ್ಲಿ ಅಲ್ಲಲ್ಲಿ ಕಸ ಎಸೆಯುವುದು, ಒಂದೇ ಜಾಗದಲ್ಲಿ ಕಸ ಗುಡ್ಡೆ ಹಾಕುವುದು ಹೆಚ್ಚಾಗಿದೆ. ಅದರಲ್ಲೂ ಪ್ಲಾಸ್ಟಿಕ್‌ನಂತಹ ವಸ್ತುಗಳು ಹೆಚ್ಚಾಗಿದ್ದು, ಪರಿಸರ ಹಾಳಾಗುವ ಸನ್ನಿವೇಶ ಎದುರಾಗಿದೆ. ಇದು ನಮ್ಮ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಾಣದೇ ಇರುವಂತಹದೆನ್ನಲ್ಲ. ಪಾಲಿಕೆಯು ಪ್ರತಿ ಮನೆಯಿಂದ ಕಸ ಸಂಗ್ರಹಿಸಿ ಸಂಗ್ರಹವಾದ ಕಸವನ್ನು ವಿದ್ಯಾರಣ್ಯಪುರಂನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುತಿದೆ. ಅಲ್ಲಿ ಹಸಿ ಮತ್ತು ಒಣ ಕಸದ ಪ್ರತ್ಯೇಕಗೊಳಿಸಿದ್ದಾರೆ. ಆದರೆ ಅಲ್ಲಿರುವ ಕಸದ ರಾಶಿಯಿಂದ ಬರುತ್ತಿರುವ ದುರ್ವಾಸನೆಯಿಂದ ಅಲ್ಲಿನ ಜನರು ನರಕಾಂತನೆ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಸ ನಿಯಂತ್ರಣ ಯೋಜನೆಗಳನ್ನು ನುರಿತ ಅಧಿಕಾರಿಗಳು ರೂಪಿಸಬೇಕು ಮತ್ತು ಅದಕ್ಕಾಗಿ ಸಾರ್ವಜನಿಕರ ಅಭಿಪ್ರಾಯಕ್ಕೆ ಸಂಗ್ರಹಿಸಬೇಕು. ಮುಖ್ಯವಾಗಿ ಪ್ಲಾಸ್ಟಿಕ್ ಉತ್ಪಾದನೆಯಾಗುವ ಘಟಕವನ್ನು ಜಪ್ತಿ ಆಗಬೇಕು. ಆಗ ಮಾತ್ರ ದಂಡ ವಸೂಲಿಯಂತಹ ಕಾಯ್ದೆ ರೂಪಿಸಬಹುದು. ಹೀಗೆ ಏಕಾಏಕೀ ದಂಡ ವಿಧಿಸಲು ಮುಂದಾದರೆ ಅದು ಪ್ಲಾಸ್ಟಿಕ್ ನಿಯಂತ್ರಿಸುವ ಬದಲಿಗೆ ವಸೂಲಿಯಾಗುತ್ತದೆ. ಆದ್ದರಿಂದ, ಮೈಸೂರು ಮಹಾನಗರ ಪಾಲಿಕೆ ಕೇವಲ ದಂಡ ವಿಧಿಸುವ ಕಾಯ್ದೆ ಬದಲಾಗಿ ಮುಖ್ಯವಾಗಿ ಪ್ಲಾಸ್ಟಿಕ್ ನಿಯಂತ್ರಣದ ಯೋಜನೆಯತ್ತ ಗಮನಹರಿಸಬೇಕಾಗಿದೆ.

-ಎನ್.ಪುನೀತ್, ವಕೀಲರು, ಅಶೋಕಪುರಂ, ಮೈಸೂರು


ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಿ.

ಪ್ರಸ್ತುತ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಹಾವಳಿ ಹೆಚ್ಚಾಗಿದ್ದು, ರೈತರು ವ್ಯವಸಾಯ ಮಾಡಲು ಹೆದರಿ ಹಿಂದೆ ಸರಿಯುವಂತಾಗಿದೆ. ವ್ಯವಸಾಯಕ್ಕಾಗಿ ಸಾಕಷ್ಟು ಶ್ರಮಿಸಿದರೂ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆ ಬರುವುದೇ ಇಲ್ಲ. ಈ ಹಿಂದೆ ಯಾವುದೇ ಕೀಟನಾಶಕ, ಬಿತ್ತನೆ ಬೀಜ ಪಡೆಯದೆ ರೈತರು ಸ್ವತಃ ತಾವೇ ತಯಾರಿಸಿದ ಬಿತ್ತನೆ ಬೀಜಗಳನ್ನು ಬಳಸಿ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಈಗ ವೈವಿಧ್ಯಮಯ ಔಷಧಿ, ಬಿತ್ತನೆ ಬೀಜದ ಕಂಪನಿಗಳು ಮಾರುಕಟ್ಟೆಗೆ ಬಂದು ರೈತರಿಗೆ ಹೆಚ್ಚಿನ ಇಳುವರಿಯ ಆಸೆ ತೋರಿಸಿ ಕಳಪೆ ಗುಣಮಟ್ಟದ ಬೀಜಗಳು, ರಸಗೊಬ್ಬರಗಳನ್ನು ನೀಡಿ ರೈತರಿಗೆ ಮೋಸ ಮಾಡುತ್ತಿವೆ. ಇದರಿಂದ ರೈತರು ವ್ಯವಸಾಯ ಮಾಡಲು ಸಹ ಹೆದರು ಪರಿಸ್ಥಿತಿ ನಿರ್ಮಾಣವಾಗಿದೆ.. ರೈತರು ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಸಧ್ಯ ಬರುವ ಸರ್ಕಾರಗಳೆಲ್ಲವು ತಾವು ರೈತರ ಪರವಾಗಿದ್ದೇವೆ ಎಂದು ಬೊಬ್ಬೆ ಹಾಕುತಿರುತ್ತಾರೆ. ಆದರೆ ರೈತರ ಸಂಕಷ್ಟಗಳು ಎಂದಾದರೂ ದೂರವಾಗಿವಿಕೆಯೇ? ಮೊದಲು ಸರ್ಕಾರಗಳು ಇಂತಹ ಕಳಪೆ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರೈತರಿಗೆ ಉತ್ತಮ ಯೋಜನೆಗಳನ್ನು ರೂಪಿಸುವ ಜೊತೆಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು.

-ಎಂ.ವಿ.ಪ್ರಕಾಶ್, ಮಚ್ಚರೆ, ಎಚ್.ಡಿ.ಕೋಟೆ ತಾ.

andolanait

Recent Posts

ಹುಣಸೂರಿನಲ್ಲಿ ಹಾಡಹಗಲೇ ಚಿನ್ನಭರಣ ದರೋಡೆ : ಐಜಿಪಿ ಬೋರಲಿಂಗಯ್ಯ ಹೇಳಿದ್ದೇನು?

ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌…

1 hour ago

ವರುಣಾ ನಾಲೆಯಲ್ಲಿ ಮಹಿಳೆ ಶವ ಪತ್ತೆ : ಚಿನ್ನಕ್ಕಾಗಿ ಕೊಲೆ ಶಂಕೆ?

ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…

1 hour ago

ವಾಯುನೆಲೆ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…

2 hours ago

ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ : ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?

ಚೆನ್ನೈ : ದಳಪತಿ ವಿಜಯ್‌ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…

2 hours ago

ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ.ಸಿದ್ದರಾಮಯ್ಯ ಕರೆ

ಬೆಂಗಳೂರು : ಕಾಂಗ್ರೆಸ್‌ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

2 hours ago

ಬೀದಿನಾಯಿ ದಾಳಿ : ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರಿಗೆ ಗಾಯ

ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು…

2 hours ago