ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 04 ಸೋಮವಾರ 2022

ಇಡಬ್ಲ್ಯೂಎಸ್‌ಗೆ ಮೀಸಲಾತಿ ಕುರಿತು ಪೂರ್ವಗ್ರಹ ಸರಿಯಲ್ಲ

ಚಾಮರಾಜನಗರ ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿನ ಸವಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರವು ಯಾವುದೇ ಹೋರಾಟ ಮಾಡದೆ ಇರುವ ಬ್ರಾಹ್ಮಣರಿಗೆ ಶೇ.೧೦ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಅತ್ಯಂತ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.

ಆದರೆ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.೧೦ ಮೀಸಲಾತಿಯನ್ನು ನೀಡಿದೆಯೇ ವಿನಃ ಅಲ್ಲಿ ಯಾವ ಜಾತಿಯ ಬಗ್ಗೆ ಉಲ್ಲೇಖವಿರುವುದಿಲ್ಲ. ಜೊತೆಗೆ ಯಾವುದೇ ಮೀಸಲಾತಿಯ ವರ್ಗಕ್ಕೆ ಸೇರದೆ, ಕೇವಲ ಆರ್ಥಿಕವಾಗಿ ಹಿಂದುಳಿದ ಸಮುದಾಯದವರು ಸದರಿ ಸೌಲಭ್ಯಕ್ಕೆ ಅರ್ಹರು ಎಂಬುದಾಗಿದೆಯೇ ಹೊರತು, ಅದು ಕೇವಲ ಬ್ರಾಹ್ಮಣ ವರ್ಗಕ್ಕೆ ಮಾತ್ರ ಎಂಬುದು ಕೇವಲ ಪೂರ್ವಗ್ರಹ ಪೀಡಿತ ಹೇಳಿಕೆಯಾಗಿದೆ. ಜನಪ್ರತಿನಿಧಿಗಳಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕೇವಲ ಒಂದು ಸಮುದಾಯವನ್ನು ದೂಷಿಸುವುದನ್ನೇ ಕಾಯಕ ಮಾಡಿಕೊಳ್ಳಬಾರದು. -ಬ್ಯಾಂಕ್ ಶಿವಕುವಾರ್, ಜೆ.ಪಿ.ನಗರ, ಮೈಸೂರು


ಕಾಡು-ಕಾಡಿನ ನಡುವೆ ಸಂಪರ್ಕ ಬಲಪಡಿಸಿ

ಪ್ರಸ್ತುತ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿ, ದಾಳಿ ನಿರಂತರವಾಗಿಬಿಟ್ಟಿದೆ. ಚಿರತೆಯಂತಹ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಈಗಾಗಲೇ ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಇಬ್ಬರನ್ನು ಚಿರತೆ ಕೊಂದಿದೆ. ಈ ಬಗ್ಗೆ ಪತ್ರಿಕೆಗಳು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ.

ಕೆಲ ದಶಕಗಳ ಹಿಂದಷ್ಟೇ ಕಾಡಿನ ಪ್ರಮಾಣ ಹಿರಿದಾಗಿತ್ತು. ಪ್ರತಿ ಕಾಡಿಗೂ ಇದ್ದ ಸಂಪರ್ಕದ ಕೊಂಡಿ ತೀರ ಬಲವಾಗಿತ್ತು. ಕಾಡಿನಿಂದ ಕಾಡಿಗೆ ಪ್ರಾಣಿಗಳು ನಿರಾಯಸವಾಗಿ ಸಂಚಾರ ಮಾಡುತ್ತಿದ್ದವು. ಆದರೆ ಈಗ ಅತಿಯಾದ ನಗರೀಕರಣದ ಜೊತೆಗೆ ಅಕ್ರಮ-ಸಕ್ರಮದ ಹೆಸರಿನಲ್ಲಿ ಕಾಡಿನ ಭೂಮಿಗಳೆಲ್ಲ ಮನುಷ್ಯನ ಸ್ವತ್ತಾಗುತ್ತಿವೆ. ಅದರಿಂದ ಕಾಡಿನ ಪರಿಸರ ನಾಶವಾಗುತ್ತಿದೆ. ಹಾಗಾಗಿ ವನ್ಯಜೀವಿಗಳು ಆಹಾರ ಸಂಪಾದಿಸುವ ದೃಷ್ಟಿಯಿಂದ ನಾಡಿನತ್ತ ಮುಖ ಮಾಡುವಂತಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಮೊದಲು ಕಾಡು- ಕಾಡುಗಳ ನಡುವಿನ ಸಂಪರ್ಕ ಕೊಂಡಿಗಳು ಬಲವಾಗಬೇಕಿದೆ. ಇದರಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅವಕಾಶ ಸಿಗುತ್ತದೆ. ಮಾನವ- ವನ್ಯಜೀವಿ ಸಂಘರ್ಷವು ನಿಯಂತ್ರಿಸಬಹುದು. ಇದರೊಂದಿಗೆ ಕಾಡಿನ ಪ್ರಾಣಿಗಳು ನಾಡಿನತ್ತ ಬಂದಾಗ ಅಲ್ಲಿನ ಜನರು ಜಾಗ್ರತೆವಹಿಸಬೇಕು. ಆ ಮೂಲಕ ಅನಾಹುತವನ್ನು ತಪ್ಪಿಸಲು ಮುಂದಾಗಬೇಕು.
-ಭೂಮಿಕಾ ಪೂಜಾರಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ.


ಪ್ರೊ.ಕೆ.ಎಸ್.ರಂಗಪ್ಪಗೆ ಫೆಲೋಶಿಪ್ ಶ್ಲಾಘನೀಯ

ರಾಷ್ಟ್ರೀಯ ಫೆಲೋಶಿಪ್ ಯುನೆಸ್ಕೋ ಅಂಗ ಸಂಸ್ಥೆಯಾದ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್‌ನ ೨೦೨೨ನೇ ಸಾಲಿನ ಫೆಲೋಷಿಪ್‌ಗೆ ಪ್ರೊ.ಕೆ.ಎಸ್.ರಂಗಪ್ಪ ಅವರು ಭಾಜನರಾಗಿರುವುದು ಶ್ಲಾಘನೀಯ ವಿಚಾರ. ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಮಹಮ್ಮದ್ ಎಚ್.ಎ.ಹಸನ್ ಅವರು ಪ್ರೊ.ಕೆ.ಎಸ್.ರಂಗಪ್ಪ ರವರಿಗೆ ಬರೆದಿರುವ ಪತ್ರದಲ್ಲಿ ವಿಜ್ಞಾನಕ್ಕೆ ನಿಮ್ಮ ಅತ್ಯುತ್ತಮ ಕೊಡುಗೆ ಮತ್ತು ಅಭಿವೃದ್ಧಿಶೀಲ ಜಗತ್ತಿನಲ್ಲಿ ಅದರ ಪ್ರಚಾರಕ್ಕೆ ಸ್ಪಷ್ಟವಾದ ಮನ್ನಣೆ ದೊರೆತಿದೆ.

ವಿಜ್ಞಾನಿಗಳಾದ ಪ್ರೊ.ಸಿ.ಎನ್.ಆರ್.ರಾವ್ ಮತ್ತು ಪ್ರೊ.ಗೋವರ್ಧನ್ ಮೆಹ್ತಾ ಅವರ ನಂತರ ಬಹಳ ವರ್ಷಗಳ ಬಳಿಕ ಮೈಸೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ ಹಾಗೂ ಉಪಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಈ ಫೆಲೋಶಿಪ್ ದೊರಕಿರುವುದು ಮೈಸೂರು ವಿವಿಗೆ ಮತ್ತೊಂದು ಗರಿಮೆ. ಇದರಿಂದಾಗಿ ಮೈಸೂರಿನ ಯುವ ವಿಜ್ಞಾನಿಗಳ ಉನ್ನತ ಅಧ್ಯಯನಕ್ಕೆ ವಿವಿದೆಡೆ ಕಳುಹಿಸಲು ಶಿಫಾರಸು ಮಾಡಲು ಅವಕಾಶ ಲಭಿಸಿದೆ ಎಂಬುದು ಸಂತಸದ ಸಂಗತಿ.
-ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು


ಗೋಹತ್ಯೆ ನಿಷೇಧದಿಂದ ರೈತರಿಗೆ ಸಮಸ್ಯೆ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವುದು ಯಾರಿಗೆ ಲಾಭವಾಗಿದೆಯೇ? ಗೊತ್ತಿಲ್ಲ. ಆದರೆ, ಕೃಷಿಯನ್ನೇ ನಂಬಿ ಜಾನುವಾರುಗಳಿಂದ, ವ್ಯವಸಾಯ ಮಾಡುವ ರೈತಾಪಿ ವರ್ಗಕ್ಕಂತೂ ತೀವ್ರ ತೊಂದರೆಯಾಗಿದೆ. ವಯಸ್ಸಾದ ಜಾನುವಾರುಗಳನ್ನು ನಿರ್ವಹಣೆ ಮಾಡುವುದಾದರೂ ಹೇಗೆ? ತಾವೇ ಸಾಕಿದಂತಹ ಜಾನುವಾರುಗಳು ತಮ್ಮ ಕಣ್ಣ ಮುಂದೆಯೇ ಪ್ರಾಣ ಬಿಡುವುದನ್ನು ರೈತರು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ವುಂಸ್ಸಾಗಿ ಉಳುಮೆ ವಾಡಲು ಶಕ್ತವಿಲ್ಲದ ಜಾನುವಾರುಗಳಿಗೆ ತಲಾ ೧೦,೦೦೦ ರೂ.ಗಳನ್ನು ಜಾನುವಾರುಗಳ ನಿರ್ವಹಣಾ ವೆಚ್ಚವನ್ನು ಸರ್ಕಾರವೇ ರೈತರಿಗೆ ವಿತರಿಸಬೇಕು. ಆಗ ರೈತರು ವುಂಸ್ಸಾದ ಗೋವುಗಳ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಇಲ್ಲವೇ ಈಗಾಗಲೇ ಇರುವ ಸರ್ಕಾರದ ಪುಣ್ಯ ಕೋಟಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಂತಾಗಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು .

andolana

Share
Published by
andolana

Recent Posts

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

16 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

27 mins ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

32 mins ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

1 hour ago

ಮಂಡ್ಯದಲ್ಲಿ ಬರ್ಬರ ಕೊಲೆ ಪ್ರಕರಣ: ಸಾಲ ತೀರಿಸಲು ದರೋಡೆಗೆ ಇಳಿದಿದ್ದ ಪಾತಕಿ

ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್‌ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್‌ ವಿಚಾರ ಬಾಯ್ಬಿಟ್ಟಿದ್ದಾನೆ.…

2 hours ago

ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…

3 hours ago