ಪಾರಂಪರಿಕ ತಾಣದಲ್ಲಿ ಅಪಚಾರ ಸಲ್ಲ
ಹೆಸರಾಂತ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವಾದ ಶ್ರೀವೈಷ್ಣವರ ದಿವ್ಯಕ್ಷೇತ್ರ ಮೇಲುಕೋಟೆಯಲ್ಲಿ ಇತ್ತೀಚೆಗೆ ತೆಲುಗು ಸಿನಿಮಾ ಚಿತ್ರೀಕರಣ ತಂಡವೊಂದು ಅಲ್ಲಿಯ ಪ್ರಾಚ್ಯ ಸ್ಮಾರಕವಾದ ರಾಯಗೋಪುರವನ್ನು ಬಾರ್ ಆಗಿ ಪರಿವರ್ತಿಸಿತ್ತು. ಇದರಿಂದ ಐತಿಹಾಸಿಕ ಪರಂಪರೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರು ಈಗಾಗಲೇ ದೂರನ್ನು ದಾಖಲಿಸಿದ್ದಾರೆ. ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ಭವ್ಯ ಸ್ಮಾರಕ ರಾಯಗೋಪುರದ ಬಳಿ ಬಾರ್ ಸೆಟ್ ನಿರ್ಮಿಸಲು ಅನುಮತಿ ನೀಡಿರುವ ಬಗ್ಗೆ ಹಲವಾರು ಗುಮಾನಿಗಳಿವೆ. ಇನ್ನು ಮುಂದೆ ಯಾವುದೇ ಸಿನಿಮಾ ಚಿತ್ರೀಕರಣ ನಡೆಯುವ ಮುನ್ನ ಅನುಮತಿ ಪಡೆಯುವಾಗ ಸಂಬಂಧಿಸಿದ ಇಲಾಖೆ, ಯಾವ ದೃಶ್ಯಕ್ಕಾಗಿ ಚಿತ್ರೀಕರಣ ನಡೆಯುತ್ತಿದೆ ಮತ್ತು ಸಂಸ್ಕೃತಿಗೆ ಧಕ್ಕೆ ತರುವುದಿಲ್ಲ ಎಂಬ ಪ್ರಮಾಣಪತ್ರವನ್ನು ತಂಡದಿಂದ ಪಡೆಯಬೇಕು. ಜತೆಗೆ ಖುದ್ದು ಇಲಾಖೆಯ ಪ್ರತಿನಿಧಿ ಚಿತ್ರೀಕರಣದ ಸಮಯದಲ್ಲಿ ಹಾಜರಿರುವಂತೆ ನಿಯಮ ಜಾರಿಮಾಡಬೇಕು. ಇಲ್ಲದೇ ಹೋದಲ್ಲಿ ದೇವಾಲಯಗಳು ಬಾರ್ ಆಗಿ ಪರಿವರ್ತಿಸಿ, ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಇಂಥಹ ಘಟನೆಗಳು ಮುಂದೆ ನಡೆಯಬಹುದು. ಅಷ್ಟಕ್ಕೂ ಕೋಟಿ ಕೋಟಿ ರೂ.ಗಳನ್ನು ವ್ಯಯ ಮಾಡುತ್ತೇವೆಂದು ಬೊಗಳೆ ಬಿಡುವ ನಿರ್ಮಾಪಕರಿಗೆ ಅಂಥಹದೇ ಒಂದು ಸೆಟ್ ನಿರ್ಮಿಸಲು ತೊಂದರೆ ಏನು ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ತಕ್ಷಣ ಕ್ರಿಯಾಶೀಲರಾದ ಮೇಲುಕೋಟೆಯ ಸ್ಥಳೀಯರಿಗೆ ಅಭಿನಂದನೆಗಳು.
-ವಿಜಯ್ ಹೆಮ್ಮಿಗೆ, ಮೈಸೂರು.
ಭಾರತ್ ಜೋಡೋ ಯಾತ್ರೆ
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿರುವುದು ಆ ಪಕ್ಷಕ್ಕೆ ಸ್ವಲ್ಪ ಸಮಾಧಾನ ತರುವ ವಿಷಯ. ರಾಹುಲ್ ಗಾಂಧಿ ಹೋದಡೆಯೆಲ್ಲಾ ಜನರೊಡನೆ ಬೆರೆತು ಅವರ ಕಷ್ಟ ಸುಖಗಳಿಗೆ ಧ್ವನಿಯಾಗುತ್ತಿದ್ದಾರೆ. ಒಂದು ಗ್ರಾಮದಲ್ಲಿ ಮಳೆ ಬೀಳುತ್ತಿದ್ದರೂ ಸಹ, ವಿಚಲಿತರಾಗದೇ ಸಭೀಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅವರ ವಹಿಸಿಕೊಳ್ಳಲು ನಿರಾಕರಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿಯವರಿಗೆ ನೇರವಾಗಿ ಜನರೊಡನೆ ಬೆರೆಯುವ ಹಾಗೂ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಅವಕಾಶ ಸಿಕ್ಕಿದೆ. ಒಳ್ಳೆಯ ನಾಯಕನಾಗಿ ಬೆಳೆಯಲು ಇದು ಅವರಿಗೆ ಸಹಕಾರಿ. ಇದನ್ನು ಅವರು ಯಶಸ್ವಿಯಾಗಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲಿ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
ಪೋಲಿಸರಿಗೆ ಕೃತಜ್ಞತೆಗಳು
ವಿಶ್ವ ವಿಖ್ಯಾತ ಮೈಸೂರು ಹತ್ತು ದಿನಗಳ ದಸರಾ ಉತ್ಸವ ಸಂಭ್ರಮ, ಸಡಗರದೊಂದಿಗೆ ಮುಕ್ತಾಯವಾಗಿದೆ. ದಸರಾ ಉತ್ಸವ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆದಿದ್ದು ಪೊಲೀಸರ ಅವಿರತ ಶ್ರಮದಿಂದಾಗಿ.
ಮೈಸೂರು ಮತ್ತು ನೆರೆಯ ಜಿಲ್ಲೆಗಳಿಂದ ಪೊಲೀಸರು ಆಗಮಿಸಿ, ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಕಾಯ್ದಿದ್ದಾರೆ.
ಹಗಲು, ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸಿದ್ದಾರೆ. ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ವರ್ತಿಸಿದ್ದಾರೆ. ಪ್ರವಾಸಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ದಸರಾ ಯಶಸ್ಸಿಗೆ ಕಾರಣರಾದ ಎಲ್ಲಾ ಪೊಲೀಸರಿಗೂ ಕೃತಜ್ಞತೆಗಳು
-ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾಲ್ಲೂಕು.
ಡಾಂಬರಿನ ಮೇಲೆ ಡಾಂಬರು!
ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ಕೆಲವು ಚನ್ನಾಗಿದ್ದ ಡಾಂಬರು ರಸ್ತೆಯ ಮೇಲೆ ಮತ್ತೇ ಡಾಂಬರು ಹಾಕಿದ್ದಾರೆ. ಉದಾಹರಣೆಗೆ ಕುವೆಂಪು ನಗರದ ಅಮ್ಮ ಕಾಂಪ್ಲೆಕ್ಸ್ ನಿಂದ, ಆಂದೋಲನ ಸರ್ಕಲ್, ಹೀಗೆ ಇನ್ನೂ ಹಲವಾರು ಕಡೆ ಚೆನ್ನಾಗಿದ್ದ ರಸ್ತೆ ಗೇ ಮತ್ತೆ ಡಾಂಬರು ಹಾಕಿದ್ದಾರೆ, ಆದರೆ ಕಳೆದ ಮೂರು ತಿಂಗಳ ಹಿಂದೆ ಯುಜಿಡಿ ಹೊಸ ಪೈಪ್ ಲೈನ್ ಹಾಕಲು ಆಪೋಲೊ ಆಸ್ಪತ್ರೆ ಮುಂಭಾಗದಿಂದ ಆದಿಚುಂಚನಗಿರಿ ರಸ್ತೆಯ ಕಡೆಯ ತನಕವೂ ರಸ್ತೆಯನ್ನು ಆಗೆದು ಹಾಗೆಯೇ ಬಿಟ್ಟಿರುವುದರಿಂದ, ರಸ್ತೆಯಲ್ಲಿ ಸಾರ್ವಜನಿಕರು ಓಡಾಡದಂತ ಪರಿಸ್ಥಿತಿ ಇದೆ. ಇಲ್ಲಿ ವಾಹನ ಸಂಚಾರಕ್ಕೂ ತೊಂದರೆ ಆಗಿದೆ, ಸಂಚಾರ ಮಾಡುವವರಿಗೆ ಅರ್ಧ ಇಂಚು ಧೂಳು ಮುಖಕ್ಕೆ ಮೆತ್ತುಕೊಳ್ಳುತ್ತದೆ. ಇಲ್ಲಿ ಓಡಾಡುವ ಸಾರ್ವಜನಿಕರು ನಗರ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ದಯಮಾಡಿ ಈ ರಸ್ತೆಗೆ ಕೂಡಲೇ ಡಾಂಬರು ಹಾಕಿಸಿ ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡಬೇಕು.
-ಬೂಕನಕೆರೆ ವಿಜೇಂದ್ರ, ಮೈಸೂರು.
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…