ಯುವ ಸಾಧಕರೇ ಉದ್ಘಾಟಿಸಲಿ
ಯುವ ದಸರಾಗೆ ಆಹ್ವಾನಿಸಿದ್ದ ನಟ ಬರಲಿಲ್ಲವೆಂದು ಪರ್ಯಾಯ ವ್ಯಕ್ತಿಯನ್ನು ಹುಡುಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಯುವ ದಸರೆಗೆ ಕೇವಲ ಸಿನಿಮಾ ನಟರನ್ನು ಆಹ್ವಾನಿಸಿ ಯುವಕರಿಗೆ ಸಿನಿಮಾ ನಟರನ್ನು ಮಾದರಿಯೆಂದು ತೋರಿಸುವ ಕ್ರಮ ನಿಜಕ್ಕೂ ಖಂಡನೀಯ. ಯುವ ದಸರಾ ಉದ್ಘಾಟನೆಗೆ ಸಾಧಕ ಯುವ ರೈತರನ್ನು, ಯುವ ವಿಜ್ಞಾನಿಯನ್ನು ಅಥವಾ ಯುವ ಸೈನಿಕರನ್ನು ಕರೆಯುವ ಪರಿಪಾಟ ಬೆಳೆಯಲಿ. ಅದರ ಮೂಲಕ ಯುವಕರಿಗೆ ತಮ್ಮ ಜೀವನದ ಮಾದರಿ ಯಾರಾಗಬೇಕು? ಎಂದು ತಿಳಿಯುತ್ತದೆ. ಹಾಗೆಯೇ ಸಾಧಿಸಿದ ಯುವಕರನ್ನು ಸಮಾಜ ಗುರುತಿಸುವುದರಿಂದ ಅಂತಹವರು ಹೆಚ್ಚಿನ ಕೆಲಸದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಮನರಂಜನಾ ಕಾರ್ಯಕ್ರಮಗಳಿಗೆ ಸಿನಿಮಾ ನಟರನ್ನು ಕರೆಸಿ ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಿಕೊಳ್ಳಿ. ಆದರೆ ಯುವ ದಸರಾ ಉದ್ಘಾಟನೆ ಗೆ ಸಾಧಕರೇ ಬರಲಿ.
-ಎಸ್.ರವಿ, ಮೈಸೂರು.
ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…