ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 23 ಶುಕ್ರವಾರ 2022

ಅಮಾನವೀಯತೆಗೆ ಕೊನೆಯೇ ಇಲ್ಲವೇ?

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಮೆರಹಳ್ಳಿಯಲ್ಲಿ ಗ್ರಾಮ ದೇವತೆ ಮೆರವಣಿಗೆ ವೇಳೆ ದೇವರ ವಿಗ್ರಹಕ್ಕೆ ಅಡಿಪಾಯವಾಗಿರುವ ಗುಜ್ಜುಕೋಲು ಕೆಳಗೆ ಬಿದ್ದದನ್ನು ದಲಿತ ಬಾಲಕ ಎತ್ತು ಕೊಟ್ಟಿದ್ದಕ್ಕೆ ದೇವರಿಗೆ ಮೈಲಿಗೆ ಆಯಿತು ಎಂದು ಅನಾಗರಿಕ ರೀತಿಯಲ್ಲಿ ಆ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಿ, ೬೦ ಸಾವಿರ ರೂ. ದಂಡ ವಿಧಿಸಿರುವ ಘಟನೆ ನೋವು ತರಿಸುತ್ತಿದೆ. ಜಾತಿಯೇ ಶ್ರೇಷ್ಠ ಎಂಬ ಕ್ಷುಲ್ಲಕ ಮನಸ್ಸಿನ ಕಿಡಿಗೇಡಿಗಳ ನೀಚ ಕೃತ್ಯದ ಕೆಲಸದಿಂದಾಗಿ ಆಗಾಗ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ದೇಶಾದ್ಯಂತ ಒಂದಲ್ಲ ಒಂದು ಕಡೆ ಈ ರೀತಿ ದೌರ್ಜನ್ಯಗಳು ದಿನ ನಿತ್ಯ ನಡೆಯುತ್ತಿವೆ. ದಲಿತ ಜನಾಂಗಕ್ಕೆ ದೇಶದಲ್ಲಿ ವಾಸ ಸ್ಥಳವೇ ಇಲ್ಲವೇ? ಅಥವಾ ಇವರು ವಾಸಿಸಲು ಯೋಗ್ಯರಲ್ಲವೇ? ದಲಿತರ ಜಾತಿ ಪ್ರಮಾಣ ಪತ್ರಗಳಲ್ಲಿ ಆದಿ ಎಂಬ ಮೊದಲ ಪದವನ್ನಾದರೂ ಸರ್ಕಾರವು ಸೇರಿಸಿರುವ ಉದ್ದೇಶವೇನು? ಇತಿಹಾಸವನ್ನು ಅವಲೋಕಿಸಿದರೆ ದೇಶದ ಮೂಲ ನಿವಾಸಿಗಳು ಎಂದು ಇವರನ್ನೇಕೆ ಕರೆಯುತ್ತಾರೆ. ಆಡಳಿತ ನಡೆಸುವ ಯಾವುದೇ ಸರ್ಕಾರವೂ ಇಂತಹ ಪ್ರಕರಣಗಳು ನಡೆದರೆ ತಕ್ಷಣವೇ ಎಸ್ಸಿ, ಎಸ್‌ಟಿ ದೌರ್ಜನ್ಯಗಳ ತಡೆಗಟ್ಟುವಿಕೆ ಕಾನೂನಿನನ್ವಯ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಸಾಕಷ್ಟು ಶತಮಾನಗಳು ಕಳೆದರೂ ಇಂತಹ ಅಮಾನವೀಯತೆಗೆ ಅಂತ್ಯವೇ ಇಲ್ಲದಂತಾಗುತ್ತದೆ.

– ಅನಿಲ್ ಕುಮಾರ್, ನಂಜನಗೂಡು.


ಪೌರಕಾರ್ಮಿಕರಿಗೂ ಅವಕಾಶ ನೀಡಬಹುದಾಗಿತ್ತು!

ವಿಶ್ವ ವಿಖ್ಯಾತ ದಸರೆಯನ್ನು ಉದ್ಘಾಟಿಸಲು ರಾಷ್ಟ್ರಪತಿಯವರೇ ಬರುತ್ತಿರುವುದು ಮೈಸೂರಿನ ಹೆಮ್ಮೆಯ ಸಂಗತಿ. ಒಂದು ರಾಷ್ಟ್ರದ ಅಧ್ಯಕ್ಷರಾಗಿ ದಲಿತ ಮಹಿಳೆ ಆಯ್ಕೆಯಾಗಿರುವುದೂ ನಮ್ಮ ಪ್ರಜಾಪ್ರಭುತ್ವದ ಭಾಗ್ಯ. ನಾಡಿನ ಉತ್ಸವವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಪೌರಕಾರ್ಮಿಕರೊಬ್ಬರು ಅತಿಥಿಯಾಗಿ ಉತ್ಸವದಲ್ಲಿರಬಹುದಾಗಿತ್ತಲ್ಲವೇ? ಇಂತಹ ಆಲೋಚನೆ ಸರಕಾರವನ್ನು ನಡೆಸುವ ಯಾರೊಬ್ಬರಿಗೂ ಹೊಳೆಯದಿರುವುದು ಶೋಚನೀಯ ಸಂಗತಿ. ಈಗಲೂ ಕಾಲ ಮಿಂಚಿಲ್ಲ. ಉದ್ಘಾಟನೆಯ ವೇಳೆ ಆಯ್ದ ವಿಚಾರವಂತ ಕಾರ್ಮಿಕರೊಬ್ಬರನ್ನೂ ಜೊತೆಗೆ ಸೇರಿಸಿಕೊಳ್ಳುವ ದೊಡ್ಡ ಮನಸ್ಸು ಮಾಡಬೇಕು ಜಿಲ್ಲಾಡಳಿತ.

-ಕೊ.ಸು.ನರಸಿಂಹಮೂರ್ತಿ, ಹಿರಿಯ ನಾಗರಿಕ, ಚಾಮರಾಜಪುರಂ, ಮೈಸೂರು.


ಇದು ಗುಲಾಮಗಿರಿಯ ಪುಷ್ಟೀಕರಣವಲ್ಲವೇ?

ಬ್ರಿಟನ್ ರಾಣಿ ಎಲಿಜಬೆತ್‌ರವರ ಅಂತ್ಯ ಸಂಸ್ಕಾರದಲ್ಲಿ ನಮ್ಮ ದೇಶದದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮ ಭಾಗವಹಿಸಿದ್ದುದು ಸರಿಯಷ್ಟೇ. ಆದರೆ ಇದೇ ಮಹಾರಾಣಿಯವರು ಭಾರತದ ಭೇಟಿ ವೇಳೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕುರಿತು ಕನಿಷ್ಠ ವಿಷಾದ ವ್ಯಕ್ತಪಡಿಸಲೂ ನಿರಾಕರಿಸಿದ್ದರು .ಇದೊಂದು ಭಾರತೀಯರು ಖಂಡಿಸಬೇಕಾದ ಸಂಗತಿ. ಬ್ರಿಟಿಷರ ಕಾಲದ ಗುಲಾಮಗಿರಿಯ ಸಂಕೇತ ಎಂದು ಹಲವು ಬ್ರಿಟಿಷರ ಪ್ರತಿಮೆ/ಹೆಸರುಗಳನ್ನು ಬದಲಾಯಿಸಿ ಮರು ನಾಮಕರಣ ಮಾಡಲಾಗಿದೆ. ಭಾರತ ನೂರಾರು ಸ್ಥಳೀಯ ಭಾಷೆಗಳ ಸಂಗಮವಾಗಿದ್ದರೂ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಆದ್ಯತೆ ಕೊಡದೆ ಇಂಗ್ಲೀಷ್ ಒಂದು ಗುಲಾಮಿ ಭಾಷೆ ಎಂದು ಹೇಳಿ ಹಿಂದಿಯನ್ನು ದೇಶಾದ್ಯಂತ ಅದರಲ್ಲೂ ಮುಖ್ಯವಾಗಿ ದಕ್ಷಿಣದ ರಾಜ್ಯಗಳ ಮೇಲೆ ಹೇರಲು ಅವಿರತವಾಗಿ ಒತ್ತಡ ಹೇರಲಾಗುತ್ತಿದೆ. ಬ್ರಿಟಿಷರ ಹೆಸರು, ಪ್ರತಿಮೆ ಗುಲಾಮಗಿರಿ ಎಂದು ಖಂಡಿಸುವವರು ಜಲಿಯನ್ ವಾಲಾಬಾಗ್ ಹತ್ಯಾ ಕಾಂಡಕ್ಕೆ ವಿಷಾದ ವ್ಯಕ್ತ ಪಡಿಸದ ರಾಣಿಯ ಅಂತ್ಯ ಸಂಸ್ಕಾರಕ್ಕೆ ರಾಷ್ಟ್ರಪತಿಗಳನ್ನೇ ಏಕೆ ಕಳುಹಿಸಿದರು? ಇದು ಗುಲಾಮಗಿರಿಯ ಪುಷ್ಟೀಕರಣವಾಗಲಿಲ್ಲವೇ? ಕೇವಲ ಪ್ರತಿನಿಧಿಯಾಗಿ ಯಾರಾದರೂ ಮಂತ್ರಿಗಳನ್ನು ಕಳುಹಿಸಿದ್ದರೆ ಆಗುತ್ತಿತ್ತಲ್ಲವೇ? ಹಾಗಾದರೆ ನಮಗೂ ಇಂಗ್ಲೀಷ್ ಗುಲಾಮಿ ಭಾಷೆಯಾದರೂ ದೇಶದ ಆಡಳಿತ ಭಾಷೆಯಾಗಿ ಇಂಗ್ಲೀಷ್ ಅನ್ನೇ ಉಪಯೋಗಿಸಲಿ. ಅದಾಗದಿದ್ದರೆ, ರಾಜ್ಯ ಗಳು ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಕೇಂದ್ರದ ಜೊತೆ ವ್ಯವಹರಿಸುವಂತಾಗಲಿ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.

andolana

Recent Posts

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ: ಇರಾನಿನ ಕೆಲ ಬೇಡಿಕೆಗಳಿಗೆ ಅಮೇರಿಕಾ ತಾತ್ವಿಕ ಒಪ್ಪಿಗೆ

ಇಸ್ಲಾಮಾಬಾದ್:‌ ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್‌ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್‌ ಮೊಹಮ್ಮದ್‌…

6 hours ago

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

9 hours ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

9 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

9 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

9 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

9 hours ago