ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 14 ಬುಧವಾರ 2022

ವೈದ್ಯರಿಗೆ ಅಭಿನಂದನೆಗಳು

ಬೆಂಗಳೂರು ಟ್ರಾಫಿಕ್ನಿಂದಾಗಿ ಮೂರು ಕಿಲೋಮೀಟರ್ ದೂರ ಓಡುತ್ತಾ ಹೋಗಿ ರೋಗಿಯೊಬ್ಬರಿಗೆ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಗ್ಯಾಸ್ಟ್ರೋಎಂಟೆರಾಲಜಿ ತಜ್ಞ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರಿಗೆ ಸಹಸ್ರ ಪ್ರಣಾಮಗಳು. ಅವರ ಕರ್ತವ್ಯ ಕ್ಷಮತೆ ಇಂದಿನ ದಿನಗಳಲ್ಲಿ ಅಪರೂಪದ್ದೇ ಸರಿ.

ಆಸ್ಪತ್ರೆಗಳೆಂದರೆ ಹಣ ಕೀಳುವ ರಾಕ್ಷಸ ಸಂಸ್ಥೆಗಳೆಂದು ಕುಖ್ಯಾತಿ ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ತಪ್ಪು ತಪ್ಪು ರಿಪೋರ್ಟ್ ನೀಡಿ ರೋಗಿಯ ಕಡೆಯವರನ್ನು ಮಾನಸಿಕವಾಗಿ ಬೆದರಿಸಿ, (ನನ್ನದೇ ಉದಾಹರಣೆ ಇದೆ) ಆಸ್ಪತ್ರೆಗಳ ಬಿಲ್ ಕಟ್ಟಿಸಿಕೊಳ್ಳುವ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿರುವಾಗ ಡಾ.ಗೋವಿಂದ ನಂದಕುಮಾರ್‌ರಂತಹ ವೈದ್ಯರ ಕರ್ತವ್ಯ ಪ್ರಜ್ಞೆ ಅತ್ಯಂತ ಶ್ಲಾಘನೀಯ, ಅನುಕರಣೀಯ. ಕೇವಲ ದುಡ್ಡು ಮಾಡುವುದೊಂದೇ ತಮ್ಮ ಗುರಿ ಎಂದು ತಿಳಿದಿರುವ ವೈದ್ಯಕೀಯ ಸಂಸ್ಥೆಗಳು ಇನ್ನಾದರೂ ಸ್ವಲ್ಪ ಮಾನವೀಯತೆ ಕಲಿಯಲಿ. ಡಾ. ಗೋವಿಂದ ನಂದಕುಮಾರ ಅಂತಹವರ ಸಂತತಿ ಸಾವಿರವಾಗಲಿ. ‘ವೈದ್ಯೋ ನಾರಾಯಣೋ ಹರಿಃ’ ಎಂಬುದಕ್ಕೆ ಇವರು ಅನ್ವರ್ಥರು.

-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.


ಸಂಪತ್ತು ಯಾರ ಪಾಲಾಯ್ತು?

ದೇಶ ಸ್ವಾತಂತ್ರ್ಯಗಳಿಸಿದ ೭೫ನೇ ವರ್ಷಗಳಲ್ಲಿ ನಾವು ಏನು ಸಾಧಿಸಿದ್ದೇವೆ ಎಂದು ಹಿಂತಿರುಗಿ ನೋಡಿದರೆ ನಿರಾಶೆಯೇ ಆಗುತ್ತದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ವಿಶ್ವದ ಪ್ರಸಿದ್ಧ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಕೆಲವು ಕಂಪೆನಿಗಳು ಸ್ಥಾನ ಪಡೆದಿವೆ. ನಿಜ, ಆದರೆ ಭಾರತ ಅದ್ಭುತ ಪ್ರಗತಿ ಸಾಧಿಸಿದೆ ಎನ್ನುವುದು ಮಾತ್ರ ಅರ್ಧ ಸತ್ಯ. ವಾಸ್ತವವಾಗಿ ದೇಶದ ಬಹುಭಾಗ ಹಿಂದುಳಿದ ಜನರು ಅಕ್ಷರದ ಬೆಳಕಿನಲ್ಲಿದ್ದೇ ಅಂಧರಾಗಿಯೇ ಇದ್ದಾರೆ. ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದರೆ, ಒಂದು ಹೊತ್ತಿನ ಕೂಲಿಗೂ ಗತಿ ಇಲ್ಲದಂತಹ ಸ್ಥಿತಿಯಲ್ಲಿ ಕೋಟ್ಯಂತರ ಭಾರತೀಯರು ದಿನ ನೂಕುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಕೆಲವರು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಯಾರಿಗೆ? ಎಲ್ಲ ಜನರಿಗೋ ಅಥವಾ ಕೆಲವೇ ಕೆಲವೇ ಪ್ರತಿಷ್ಠಿತ ಪ್ರಭಾವಿಗಳಿಗೋ?

-ಕೀರ್ತಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.


‘ಸಾಹೇಬರು’ ಪದ ತೆಗೆದು ಹಾಕಿ

ಭಾರತದ ಪ್ರಧಾನಿ ನರೇಂದ್ರ ಮೋದಿ ರಾಜಪಥದಲ್ಲಿನ ರಾಜಪದವು ಬ್ರಿಟಿಷ್ ವಸಾಹತು ಪದವಾಗಿರುವ ಕಾರಣ ಕೊಟ್ಟು ಅದನ್ನು ತೆಗೆದು ರಸ್ತೆಯ ಹೆಸರನ್ನು ‘ಕರ್ತವ್ಯಪಥ’ ಎಂದು ವಿಧ್ಯುಕ್ತವಾಗಿ ಬದಲಾಯಿಸಿದ್ದಾರೆ. ಅವರ ವಸಾಹತು ವಿರೋಧಿ ದೃಷ್ಟಿಯು ಮೆಚ್ಚುವಂಥದ್ದು. ಭಾರತಾಂದ್ಯತ ಕಚೇರಿಗಳಲ್ಲಿ, ಅಧಿಕಾರ ಕೇಂದ್ರಗಳಲ್ಲಿ ಮೇಲಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಅವರ ನೌಕರರು ಮತ್ತು ಹಿಂಬಾಲಕರು ಸಂಬೋಧಿಸುವಾಗ ಮತ್ತು ಇತರರೊಂದಿಗೆ ಪ್ರಸ್ತಾಪಿಸುವಾಗ ‘ಸಾಹೇಬರು’ ಎಂದು ಹೇಳುವುದು ರೂಢಿಯಲ್ಲಿದೆ. ಪ್ರಧಾನಿಗಳು ಈ ಪದದ ಬಳಕೆಯನ್ನು ಕೂಡಲೇ ನಿಷೇಧಿಸಬೇಕೆಂದು ಕೋರುತ್ತೇನೆ. ‘ಸಾಹೇಬರು’ ಎಂಬ ಪದ ಬ್ರಿಟಿಷ್ ವಸಾಹತುಶಾಹಿ ಮಾತ್ರವಲ್ಲ ಮೊಗಲರ ಆಳ್ವಿಕೆಯ ಪದ. ಹಾಗೆಯೇ ರಾಜಭವನ, ರಾಜಕಾಲುವೆ, ಮುಂತಾದ ನೂರಾರು ಪದಗಳನ್ನು ತೆಗೆದು ಬದಲಿ ಪದಗಳನ್ನು ಜಾರಿಗೆ ತರುವ ಕೆಲಸವನ್ನೂ ಪ್ರಧಾನಿಗಳು ಅವರಿಗೆ ಬಿಡುವಾದಾಗ ಮಾಡಬಹುದು.

-ವಿ. ಎನ್. ಲಕ್ಷ್ಮೀನಾರಾಯಣ, ಮೈಸೂರು.

andolana

Share
Published by
andolana

Recent Posts

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

14 mins ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

30 mins ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

53 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

1 hour ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

1 hour ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

2 hours ago