ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗಿನಲ್ಲಿ ಮಳೆಹಾನಿ ಸಂಸ್ತಸ್ತರನ್ನು ಭೇಟಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಮೊಟ್ಟೆ ಎಸೆದು ಪ್ರತಿಭಟಿಸಲಾಗಿದೆ. ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಆದರೆ, ಪ್ರತಿಭಟನೆ ಶಾಂತಿರೂಪದಲ್ಲಿ ಇರಬೇಕು. ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ ರೀತಿ ನೋಡಿದರೆ, ಸಿದ್ದರಾಮಯ್ಯ ಅವರು ಜನರನ್ನು ಸಂತೈಸುವುದು ಆಡಳಿತಾರೂಢ ಪಕ್ಷಕ್ಕೆ ಬೇಕಾಗಿರಲಿಲ್ಲ ಎನಿಸುತ್ತದೆ. ವಾಸ್ತವವಾಗಿ ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕಿತ್ತು. ಆ ನೈತಿಕ ಜವಾಬ್ದಾರಿಯನ್ನು ನಿರ್ವಹಿಸದೇ, ವಿರೋಧ ಪಕ್ಷದ ನಾಯಕರ ವಿರುದ್ಧ ಮೊಟ್ಟೆ ಎಸೆದದ್ದು ನಾಚಿಗೆಗೇಡಿನ ಸಂಗತಿ.
ಸಂತೋಷ್ ಕುಮಾರ್, ಬನ್ನಿಮಂಟಪ, ಮೈಸೂರು.
ಇತ್ತೀಚೆಗೆ ಮಾಜಿ ಪ್ರಧಾನಿ ನೆಹರೂ ಅವರು ಕುರಿತಾಗಿ ನಡೆಯುತ್ತಿರುವ ವಿವಾದದ ಬಗ್ಗೆ ನೆನಪಿಸಿಕೊಂಡರೆ ನೋವಾಗುತ್ತದೆ. ದೇಶದಲ್ಲಿ ಸ್ವಾತಂತ್ರ್ಯ ಒಂದು ಸ್ಪಷ್ಟ ರೂಪ ಪಡೆಯುತ್ತಿದ್ದ ಹೊತ್ತಿನಲ್ಲಿ ನೆಹರೂ ಅವರು ದೇಶದ ಮೊದಲ ಪ್ರಧಾನಿಯಾಗಿದ್ದವರು. ನವಭಾರತದ ಮೇಲೆ ಅವರ ಪ್ರಭಾವ ಗಾಂಧೀಜಿಯವರ ಪ್ರಭಾವದಷ್ಟೇ ಮಹತ್ತರವಾದದ್ದು. ೧೯೫೭ರಲ್ಲಿ ಕೆನಡಾದ ರಾಜತಂತ್ರಜ್ಞರೊಬ್ಬರು ನೆಹರೂ ಬಗ್ಗೆ ಹೀಗೆ ಬರೆದಿದ್ದಾರೆ. ‘ನೆಪೊಲಿಯನ್ ನಂತರ ತನ್ನ ದೇಶದ ಇತಿಹಾಸದಲ್ಲಿ ಇಷ್ಟು ದೊಡ್ಡ ಪಾತ್ರ ವಹಿಸಿದ ಇನ್ನೊಬ್ಬ ವ್ಯಕ್ತಿ ಎಂದರೆ ನೆಹರೂ. ಅಲ್ಲದೇ ದೇಶಬಾಂಧವರ ಹೃನ್ಮನಗಳಲ್ಲಿ ನೆಪೊಲಿಯನ್ ರಷ್ಟೇ ಪ್ರೀತಿ ಗೌರವಗಳ ಸ್ಥಾನವನ್ನು ನೆಹರೂ ಗಳಿಸಿದ್ದರು. ಭಾರತೀಯರ ಪಾಲಿಗೆ ನೆಹರೂ ಜಾರ್ಜ್ ವಾಷಿಂಗ್ಟನ್, ಲಿಂಕನ್, ರೂಸ್ವೆಲ್ಟ್, ಐಸೆನ್ ಹೋರ್ವ ಇವರೆಲ್ಲ ಏಕೀಭವಿಸಿದ ನಾಯಕರಾಗಿದ್ದರು’. ನೆಹರೂ ಅವರಿಗೆ ಗೌರವ ನೀಡಲು ಇಷ್ಟು ಸಾಕಲ್ಲವೇ? (ಆಧಾರ- Envoy to Nehru by Escott Reid : (೧೯೮೧) )
-ಶಿವನಾಗು, ಅಶೋಕಪುರಂ, ಮೈಸೂರು.
ಸುವರ್ಣ ಸ್ವಾತಂತ್ರ್ಯ ಮಹೋತ್ಸವದ ಸಂಧರ್ಭದಲ್ಲಿ ರಾಜ್ಯ ಸರ್ಕಾರದ ಜಾಹಿರಾತುಗಳಲ್ಲಿ ಪ್ರಥಮ ಪ್ರಧಾನಿ, ಆಧುನಿಕ ಭಾರತದ ಶಿಲ್ಪಿ ದಿವಂಗತ ಪಂಡಿತ್ ಜವಹರಲಾಲ್ ನೆಹರು ಅವರ ಹೆಸರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಬೆಕಂತಲೇ ನೆಹರೂ ರವರ ಹೆಸರನ್ನು ಕೈಬಿಟ್ಟಿದ್ದಾಗಿ ಹೇಳಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಾತಂತ್ರ ಹೋರಾಟದಲ್ಲಿ ನೆಹರೂರವರ ಕೊಡುಗೆಗಳ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಬೇಕಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಯವರ ನಂತರದ ಸ್ಥಾನ ನೆಹರೂರವರಿಗೆ ಸಲ್ಲುತ್ತದೆ. ನೆಹರೂ ನಿಧನದ ಸಂಧರ್ಭದಲ್ಲಿ ಅಂದಿನ ಜನಸಂಘದ ನಾಯಕ ಹಾಗೂ ಮತ್ತ್ತಬ್ಬ ಹಿರಿಯ ರಾಜಕೀಯ ಮುತ್ಸದ್ದಿ ದಿವಂಗತ ಅಟಲ ಬಿಹಾರಿ ವಾಜಪೇಯಿಯವರು ರಾಜ್ಯಸಭೆಯಲ್ಲಿ ನೆಹರುರವರ ಗುಣಗಾನ ಮಾಡಿ ಅವರ ಸೇವೆಯನ್ನು ಅತ್ಯಂತ ಅತ್ಮೀಯತೆಯಿಂದ ಸ್ಮರಿಸಿರುವುದನ್ನು ದಾಖಲೆಗಳಲ್ಲಿ ನೋಡಬಹುದು.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
೨೦೨೧-೨೨ ನೇ ಸಾಲಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಪ್ರವೇಶ ಪಡೆದಿರುವ ಪದವಿ ವಿದ್ಯಾರ್ಥಿಗಳಿಗೆ ಮೊದಲನೇ ಸೆಮಿಸ್ಟರ್‌ನ ಪರೀಕ್ಷೆಗಳು ಮುಗಿದು ನಾಲ್ಕು ತಿಂಗಳಾದರೂ ಫಲಿತಾಂಶ ಪ್ರಕಟಿಸದ ಮೈವಿವಿಗೆ ಎರಡನೇ ಸೆಮಿಸ್ಟರ್‌ನ ಪರೀಕ್ಷೆಗೆ ಸುತ್ತೋಲೆ ಹೊರಡಿಸಬೇಕೆಂಬ ಮೂರ್ಖತನದ ಯೋಚನೆಗಳು ಬಂದಿದ್ದಾದರೂ ಹೇಗೆ? ತರಗತಿಗಳು ಆರಂಭವಾಗಿ ಪರೀಕ್ಷೆಗಳು ಸಮೀಪಿಸಿದರೂ ಭಾಷಾ ವಿಷಯಗಳ ಪಠ್ಯಪುಸ್ತಕಗಳನ್ನು ಸಿದ್ಧಪಡಿಸದೇ ನಿರ್ಲಕ್ಷ್ಯ ಮಾಡುವುದಲ್ಲದೇ ಪಠ್ಯಕ್ರಮವನ್ನು ಮುಗಿಸಲು ಕೊನೆಯ ದಿನಾಂಕ ನಿಗದಿ ಮಾಡುವುದು ಸರಿಯೇ? ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎರಡೆರಡು ಸೆಮಿಸ್ಟರ್‌ಗಾಗುವಷ್ಟು ಪಠ್ಯಕ್ರಮವನ್ನು ಒಂದೇ ಸೆಮಿಸ್ಟರ್‌ಗೆ ತುಂಬಿರುವುದರಿಂದಾಗಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪಾಠ ಮಾಡಲಾಗದೇ ಹೆಣಗಾಡುವ ಪ್ರಾಧ್ಯಾಪಕರಿಗೆ ಮಾನಸಿಕ ಒತ್ತಡ ಹೇರಲಾಗುತ್ತಿದೆ. ವಿದ್ಯಾರ್ಥಿ ಪ್ರಾಧ್ಯಾಪಕರ ಅನುಪಾತದಂತೆ ನೇಮಕಾತಿ ನಡೆಸದ ಮೈವಿವಿ ಪಠ್ಯಕ್ರಮವನ್ನು ಮುಗಿಸಲು ಆಗಸ್ಟ್ ೩೦ನ್ನು ನಿಗದಿಗೊಳಿಸಿರುವುದು ಅವಿವೇಕದ ನಿರ್ಧಾರವಾಗಿದೆ. ವಿವಿಯ ಕಾರ್ಯಸೌಧದಲ್ಲಿ ಕುಳಿತು ತರ್ಕರಹಿತ ನಿರ್ಧಾರಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವವರಿಗೆ ವಿದ್ಯಾರ್ಥಿ- ಪ್ರಾಧ್ಯಾಪಕರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲವೇ?
-ಮಲ್ಲಿಕಾರ್ಜುನಪ್ಪ ಪಿ, ಮಹಾರಾಜ ಕಾಲೇಜು, ಮೈಸೂರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…