ಬರ್ಮಿಟಗ್ ಹ್ಯಾಂನಲ್ಲಿ ನಡೆದ ಕಾಮನ್ವೆಲ್ತ್ ಪದಕಪಟ್ಟಿಯಲ್ಲಿ ೪ನೇ ಸ್ಥಾನ ಪಡೆದುಕೊಂಡಿದೆ. ೨೨ ಚಿನ್ನ,೧೬ಬೆಳ್ಳಿ,೨೩ ಕಂಚಿನ ಪದಕಗಳನ್ನು ಯಶಶ್ವಿಯಾಗಿದೆ. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕೊನೆಯ ದಿನವಾದ ಸೋಮವಾರವೂ ಚಿನ್ನದ ಪದಕಗಳ ಬೇಟೆ ಮಾಡುವ ಮೂಲಕ ಭಾರತ ಅಪೂರ್ವವಾಗಿ ಅಭಿಯಾನ ಮುಗಿಸಿತು. ಸೋಮವಾರ ಪಂಚ ಸ್ವರ್ಣ, ತ್ರಿವಳಿ ರಜತ ಮತ್ತು ೨ಕಂಚಿನ ಪದಕಗಳನ್ನು ಒಳ್ಳಿಸಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ ೪ನೇ ಸ್ಥಾನದ ಸಾಧನೆ ಮಾಡಿದ್ದೆ. ಕಾಮನ್ವೆಲ್ತ್ ನಲ್ಲಿ ಗೆದ್ದಿರುವ ಎಲ್ಲಾರಿಗೂ ಅಭಿನಂದನೆಗಳು
-ಲಾವಣ್ಯ, ಮಹಾರಾಜಾ ಕಾಲೇಜು, ಮೈಸೂರು.
ಭಾರತದ ರ್ಸ್ಟಾ ಶಟ್ಲರ್ ಪಿವಿ ಸಿಂಧು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ. ೨೦೧೪ರಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಸಿಂಧು, ೨೦೧೮ರ ಇದೇ ಕೂಟದಲ್ಲಿ ಬೆಳ್ಳಿ ಜಯಿಸಿದ್ದರು. ಈ ಬಾರಿ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಿಂಧು ಸಾಬೀತುಪಡಿಸಿದ್ದಾರೆ. ಹಲವಾರು ಯುವ ಪ್ರತಿಭೆಗಳಿಗೆ ಸಿಂಧು ಅವರು ಮಾರ್ಗದರ್ಶಿ ಯಾಗಿದ್ದರೆ.
-ಪ್ರಸನ್ನಕುಮಾರ್, ಮಹಾರಾಜ ಕಾಲೇಜು, ಮೈಸೂರು.
ರಾಜ್ಯದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಇದೆ. ಹತ್ತಾರು ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆ ಪ್ರದೇಶ ಮುಳುಗಡೆಯಾಗಿದ್ದು ರೈತರಿಗೆ ಭಾರಿ ನಷ್ಟವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮನೆಮನೆಗಳಲ್ಲಿ ನೀರು ತುಂಬಿಕೊಂಡು ಮನೆ ಇದ್ದೂ ನಿರಾಶ್ರಿತರಾಗಿದ್ದಾರೆ. ಇಡೀ ರಾಜ್ಯದಲ್ಲಿ ಇಂತಹ ಕಠಿಣ ಪರಿಸ್ಥಿತಿ ಇರುವ ಹೊತ್ತಿನಲ್ಲಿ ಪರಿಹಾರ ಕಾರ್ಯಕ್ಕಾಗಿ ಒತ್ತಾಯಿಸಬೇಕಿದ್ದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿಗಳ ಬದಲಾವಣೆ ವಿಷಯವನ್ನು ಮುನ್ನೆಲೆ ತಂದು ತಮಾಷೆ ನೋಡುತ್ತಿದೆ. ಆಡಳಿತಾರೂಢ ಪಕ್ಷವಾದರೂ ಕಾಂಗ್ರೆಸ್ ನ ಬೇಜವಾಬ್ದಾರಿ ನಡೆಯನ್ನು ನಿರ್ಲಕ್ಷಿಸಿ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಆದ್ಯತೆ ನೀಡುವ ಬದಲು ಪ್ರತಿಕ್ರಿಯೆ ನೀಡುತ್ತಾ ಕೂತಿದೆ. ಉಭಯ ರಾಜಕೀಯ ಪಕ್ಷಗಳ ಈ ನಡೆ ಅಕ್ಷಮ್ಯ. ಇಡೀ ರಾಜ್ಯವೇ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವಾಗ ಈ ಪಕ್ಷಗಳ ನಾಯಕರು ಅದು ಹೇಗೆ ಮುಖ್ಯಮಂತ್ರಿ ಕುರ್ಚಿ ವಿಷಯದ ಬಗ್ಗೆ ಚರ್ಚೆ ಮಾಡುತ್ತಾ ಕಾಲಕಳೆಯುತ್ತಾರೆ? ಬೇಜವಾಬ್ದಾರಿಗೊಂದು ಮಿತಿ ಬೇಡವೇ? ಆಡಳಿತಾರೂಢ ಪಕ್ಷದವರು ಮನೆ ಮನೆಗೆ ತೆರಳಿ ಸಂತ್ರಸ್ತರಿಗೆ ಆಹಾರ, ಹೊದಿಕೆ ಮತ್ತಿತರ ಅಗತ್ಯವಸ್ತುಗಳನ್ನು ಒದಗಿಸುವ ಪರಿಪಾಠ ಹಿಂದ ಇತ್ತು. ಆಗ ನೈತಿಕತೆ ಮೇಲೆ ಎಲ್ಲರೂ ರಾಜಕೀಯ ಮಾಡುತ್ತಿದ್ದರು. ಈಗ ಹಣದ ಬಲದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಮಾನವೀಯತೆಯೇ ಇಲ್ಲದಾಗಿದೆ. ಇಂತಹ ನಾಯಕರಿಂದ ಏನುತಾನೆ ನಿರೀಕ್ಷಿಸಲು ಸಾಧ್ಯ?
-ನಂದಕುಮಾರ್, ಸರಸ್ವತಿಪುರಂ, ಮೈಸೂರು.
ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ಜನತಾದಳ (ಯು) ಪಕ್ಷವು ಬಿಜೆಪಿ ಮೈತ್ರಿಯನ್ನು ಕಡಿದುಕೊಂಡಿದೆ. ಆರ್‌ಜೆಡಿ ಮತ್ತಿತರ ಮಿತ್ರ ಪಕ್ಷಗಳೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಒಡೆದು ಆಳುವ ನೀತಿಯ ಮೂಲಕವೇ ತನ್ನ ಬುಡವನ್ನು ಭದ್ರ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ನಿತಿಶ್ ಕುಮಾರ್ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಪಕ್ಷ ಒಡೆಯುವ ಕೆಲಸವನ್ನು ಬಿಜೆಪಿ ಬಿಹಾರದಲ್ಲೂ ಮುಂದುವರೆಸುವ ಪ್ರಯತ್ನ ನಡೆಸಿದ್ದರಿಂದಾಗಿಯೇ ನಿತಿಶ್ ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ೨೦೨೪ನೇ ಸಾಲಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ನಿತಿಶ್ ನಡೆ ನಿರ್ಣಾಯಕವಾಗಿದೆ. ಬಹುಮತದ ಹಮ್ಮಿನಿಂದ ಜನಸಾಮಾನ್ಯರ ಆಶೋತ್ತರಗಳನ್ನು ನಿರ್ಲಕ್ಷಿಸಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಯಾಗಿ ನಿಲ್ಲುವ ಸಾಮರ್ಥ್ಯ ನಿತಿಶ್ ಕುಮಾರ್ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ನಿತಿಶ್ ಅವರ ಮುಂದಿನ ನಡೆಗಳು ಕುತೂಹಲಕಾರಿಯಾಗಲಿವೆ. ಮೋದಿಗೆ ಪರ್ಯಾಯ ಯಾರು ಎಂದು ಪ್ರಶ್ನಸುವ ಮೋದಿ ಅಭಿಮಾನಿಗಳಿಗೆ ಉತ್ತರ ಸಿಕ್ಕಂತಾಗಿದೆ. ವಿರೋಧಪಕ್ಷದಲ್ಲಿನ ನಾಯಕರು ದೇವೇಗೌಡರಂತಹ ಉತ್ತಮ ನಾಯಕತ್ವ ಗುಣವನ್ನು ನಿತಿಶ್ ಕುಮಾರ್ ಅವರಲ್ಲಿ ಕಂಡರೆ ಅಚ್ಚರಿಯೇನಿಲ್ಲ!
-ಚಂದ್ರೇಗೌಡ, ಕನ್ನೇಗೌಡನಕೊಪ್ಪಲು, ಮೈಸೂರು.
ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…
ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…
ಅಮೆರಿಕದ ಸಿಯಾಟಲ್ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…
ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…
ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…
ಒಂದೆಡೆ ತಂಪಿನ ವಾತಾವರಣ : ಮತ್ತೊಂದೆಡೆ ಕಿರಿಕಿರಿ ಉಂಟುಮಾಡುವ ಕೆಸರುಮಯ ತಾಣ ಜಿ. ತಂಗಂ ಗೋಪಿನಾಥಂ ಮಂಡ್ಯ: ಕಳೆದ ಎರಡು…