ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 02 ಮಂಗಳವಾರ 2022

‘ಆಂದೋಲನ’ ದಿನಪತ್ರಿಕೆಗೆ ಧನ್ಯವಾದಗಳು!

ಎಚ್ ಡಿ ಕೋಟೆ ತಾಲ್ಲೂಕಿನಲಿ ಜರುಗಿದ ‘ಆಂದೋಲನ’ ದಿನಪತ್ರಿಕೆಯ ೫೦ ವರ್ಷಗಳ ಸಾರ್ಥಕ ಪಯಣದ ಮುನ್ನೋಟ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾಧಕರಿಬ್ಬರಿಗೆ ಸನ್ಮಾನಿಸಿರುವುದು ಸಂತಸವಾಗಿದೆ. ಪತ್ರಿಕೆಯು ಎರಡು ತಾಲೂಕುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಕಣ್ತೆರೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಓದುಗರ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ವಿಶೇಷ ಪುಟಗಳಲ್ಲಿ ವೈವಿಧ್ಯಮಯವಾಗಿ ತಾಲೂಕಿನ ಹಿರಿಮೆಯನ್ನು ಪ್ರಕಟಿಸಿದ್ದೀರಿ. ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಹಿಂದುಳಿದ ತಾಲ್ಲೂಕಿನ ಬಗ್ಗೆ ತೋರಿದ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದಗಳು.

-ಪರಶಿವಮೂರ್ತಿ ಎ್.ಪಿ, ನಂಜೀಪುರ, ಸರಗೂರು ತಾಲ್ಲೂಕು.


ಮೇ(ಲ್)ಲುಗೈ!!

ಸಿಇಟಿ ಫಲಿತಾಂಶ: ಬಾಲಕರು ಮೇಲುಗೈ

(ಆಂದೋಲನ, ಜು.೩೧)

ಪ್ರತಿ ಬಾರಿಯೂ ಪಿಯುಸಿ,

ಎಸ್ಸೆಸ್ಸೆಲ್ಸಿ ಪರೀಕ್ಷಾ

ಫಲಿತಾಂಶಗಳಲ್ಲಿ

ಬಾಲಕಿಯರೇ ಮೇಲುಗೈ!

ಸದ್ಯ , ಈ ಸಾರಿ

ಸಿಇಟಿಯಲ್ಲಾದರೂ

ತೋರಿಸಿ ಬಿಟ್ಟರಲ್ಲಾ

ನಮ್ಮಹುಡುಗರು
ನಾವೂ ಸೈ!!
-ಮ.ಗು.ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ಧ್ವಜ ನೀತಿ ನಿಯಮ ಪಾಲನೆ ಅಗತ್ಯ

‘ಹರ್ ಘರ್ ತಿರಂಗ’ ಭಾರತ ಸರ್ಕಾರದ ಮಹತ್ವದ ಯೋಜನೆಯೇ ಸರಿ. ಆದರೆ ಜನರಿಗೆ ರಾಷ್ಟ್ರೀಯ ದ್ವಜ ಬಳಸುವಿಕೆ ಕುರಿತಾಗಿ ಇರುವ ನಿಯಮಗಳನ್ನು ತಿಳಿಸುವುದು ಮತ್ತು ಅವುಗಳನ್ನು ಪಾಲಿಸುವಂತೆ ಸೂಚಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರ್ತವ್ಯ. ದೇಶದ ಗೌರವ, ಸ್ವಾಭಿಮಾನ, ಸರ್ವಭೌಮತೆಯನ್ನು, ಪ್ರದರ್ಶಿಸುವ ದೇಶದ ತ್ರಿವರ್ಣಧ್ವಜವನ್ನು ಹಾರಿಸಲು ಸ್ಪಷ್ಟ ನೀತಿ ನಿಯಮಗಳನ್ನು ರೂಪಿಸಲಾಗಿದೆ.Flag code of India 2000  ಮತ್ತು Prevention of insults to national honour act 1971 ಇದರ ಕುರಿತು ತಿಳಿಸುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ತಿಳುವಳಿಕೆ ಹೇಳಬೇಕು. ಈ ಮಹತ್ವಕಾಂಕ್ಷಿ ಯೋಜನೆಯಡಿ ಮೇಲಿನ ನೀತಿ ನಿಯಮಗಳನ್ನು ಪಾಲಿಸಿ ದೇಶ ಧ್ವಜದ ಗೌರವ ಉಳಿಸುವುದು ಅಗತ್ಯ.

-ಪ್ರಶಾಂತ. ಜಿ, ಮಹಾರಾಜ ಕಾಲೇಜು ಮೈಸೂರು.


ಕುಡಿಯುವ ನೀರಿಗೂ ಬರ!

ಮೈಸೂರಿನ ವಿಜಯನಗರ ೪ನೇ ಹಂತದಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ನಮ್ಮ ಮನೆ ಇರುವುದು ವಿಜಯನಗರ ೪ನೇ ಹಂತ, ೨ನೇ ಫೇಸ್. ಇಲ್ಲಿ ೨ ದಿನಕ್ಕೆ ಒಮ್ಮೆರಾತ್ರಿ ೩-೦೦ ಗಂಟೆಯಿಂದ ಬೆಳಿಗ್ಗೆ ೬.೦೦ ರವರೆಗೆ ನೀರು ಬಿಡುತ್ತಾರೆ. ಅಂದರೆ ೩ ಗಂಟೆ ಮಾತ್ರ ನೀರು ಸೋರುತ್ತದೆ. ಅರ್ಧ ಸಂಪೂ ತುಂಬುವುದಿಲ್ಲ. ಕೆಲವೊಮ್ಮೆ ೨ನೇ ದಿನವು ನೀರು ಬಿಡುವುದಿಲ್ಲ. ವಾಟರ್ಮೆನ್ ಕೇಳಿದರೆ ೨ ಬೋರ್ವೆಲ್ ಮಾತ್ರ ಇರುವುದು ನೀರು ಸಾಕಾಗುವುದಿಲ್ಲ ಎನ್ನುತ್ತಾರೆ. ನಮಗೂ ಟ್ಯಾಂಕರ್ ನೀರು ಹಾಕಿಸಿ ಸಾಕಾಗಿ ಹೋಗಿದೆ. ನಾನು ಏರಿಯಾ ಇಂಜಿನಿಯರ್ ಗಮನಕ್ಕೂ ತಂದೆ ಏನು ಪ್ರಯೋಜನವಾಗಿಲ್ಲ. ಮೂಲಭೂತ ಸೌಲಭ್ಯ ಕೊಡುವುದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ಸಮರ್ಪಕವಾಗಿ ಪ್ರತಿದಿನ ನೀರು ಒದಗಿಸುವಂತೆ ಪ್ರಾಧಿಕಾರದ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

– ಬಿ.ಜಿ.ರಂಗೇಗೌಡ, ವಿಜಯನಗರ ಮೈಸೂರು. 

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

9 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

10 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago