ಯಾವ ಧರ್ಮ ಆದರೇನು? ಯಾವ ಜಾತಿ ಆದರೇನು ಎಲ್ಲರೂ ಭಾರತೀಯರಾಗಬೇಕಲ್ಲವೆ? ಜಾತಿ ಜಾತಿ ಅಂತ ಬೆಂಕಿ ಹಚ್ಚಿ ಕುಟುಂಬಗಳ ಆಧಾರಸ್ತಂಭಗಳ ಕೊಲೆಗಳಿಗೆ ಕಾರಣ ಆಗುತ್ತಿರುವುದು ಪಕ್ಷಗಳ ನಾಯಕರೇ ಹೊರತು ಕಾರ್ಯಕರ್ತರಲ್ಲ. ನಾಯಕರು ಧರ್ಮಗಳ ನಡುವೆ ವೈಷಮ್ಯದ ಭಾಷಣ ಬಿಡಿ. ಇನ್ನಾದರು ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂಬುದರಲ್ಲಿ ನಂಬಿಕೆ ಇಡಿ. ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದೇಕೆ? ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಎಷ್ಟು ಕೊಲೆಗಳು ಆಯಿತು, ಬಿಜೆಪಿ ಸರ್ಕಾರ ಬಂದಾಗಲು ಸಹ ಕೊಲೆಗಳು ನಿಂತಿಲ್ಲ. ಇದಕ್ಕೆ ಯಾರು ಹೊಣೆ? ಅಂದು ಏನ್ ಹೋರಾಟ? ನಾವು ಅಧಿಕಾರಕ್ಕೆ ಬಂದ್ರೆ ನಾವು ಹಂಗೆ ಮಾಡ್ತೀವಿ, ಇಂಗ್ ಮಾಡ್ತೀವಿ, ಅಂತೆಲ್ಲ ಭರವಸೆ ಕೊಟ್ಟು, ಈಗ ಸ್ವಾರ್ಥ ರಾಜಕೀಯ ಮಾಡುತ್ತಿರುವ ನಿಮಗೆ ಏನನ್ನಬೇಕು ನಾಯಕರುಗಳೇ? ಈ ದೇಶದಲ್ಲಿ ಕಾನೂನು ಎತ್ತ ಸಾಗುತ್ತಿದೆ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ, ಅಧಿಕಾರದ ಹುಚ್ಚು ಬಿಟ್ಟು ದೇಶದ ಜನರ ಚಿಂತನೆ ಮಾಡುವಿರಾ? ಈ ದೇಶದಲ್ಲಿ ಜಾತಿಗಳು ಮುಖ್ಯ ಅಲ್ಲ ಮಾನವೀಯತೆ ಮುಖ್ಯ! -ನಂಜುಂಡಸ್ವಾಮಿ, ಮೈಸೂರು.
ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಾಧ್ಯವೇ? ಕಾರಣಾಂತರಗಳಿಂದ ಹಿಂದೂಧರ್ಮವನ್ನು ಬಿಟ್ಟು ಅನ್ಯಧರ್ಮಕ್ಕೆ ಹೋದವರನ್ನು ‘ ಘರ್ ವಾಪ್ಸಿ’ – ಮತ್ತೆ ಹಿಂತಿರಬಹುದೇ? ಹಿಂದೂಗಳು ಚತುರ್ವರ್ಣ ಪದ್ಧತಿಯಲ್ಲಿ ವಿಶ್ವಾಸವುಳ್ಳವರು. ಹೊರಗಿನಿಂದ ಈ ಧರ್ಮ/ಮತಕ್ಕೆ ಬರಲು ವ್ಯಕ್ತಿಯೊಬ್ಬ(ಳು) ಬಯಸಿದಲ್ಲಿ, ಅಂತಹವರು ಯಾವ ಜಾತಿಗೆ ಸೇರುತ್ತಾರೆ? ಮತಾಂತರಗೊಂಡು ಬರುವವರಿಗೆ ಆಯ್ಕೆಯ ಅವಕಾಶವಿರಬೇಕು. ವರ್ಣಗಳಾದ : ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ…ಇವುಗಳಲ್ಲಿ ತನಗೆ ಇಚ್ಛೆ ಬಂದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು. ಬರಿದೆ ಶಾಸ್ತ್ರೋಕ್ತವಾಗಿ (್ಟಜಿಠ್ಠಿಚ್ಝ) ಪರಿವರ್ತನೆ ಆದರೆ ಸಾಲದು. ಸಾಮಾಜಿಕವಾಗಿಯೂ ಆಗುವುದುಚಿತ. ಅಂದರೆ, ಉದಾಹರಣೆಗೆ, ಒಬ್ಬರು ವೈಶ್ಯರಾಗಲು ಆಯ್ಕೆ ಮಾಡಿಕೊಂಡಲ್ಲಿ, ಆತನೊಂದಿಗೆ (ಆಕೆಯೊಂದಿಗೆ) ವೈಶ್ಯಪಂಗಡದವರು ರಕ್ತದ ಸಂಬಂಧ ಬೆಳೆಸಲು ಅವಕಾಶವಿರಬೇಕು. ಅತನು ಇನ್ನೂ ಅವಿವಾಹಿತನಿದ್ದರೆ ಅವನಿಗೆ ವೈಶ್ಯಜಾತಿಯ ಕನ್ಯೆಯನ್ನು ನೀಡಲು ಸಮಾಜ ಸಿದ್ಧವಿರಬೇಕು. ಅಥವಾ ಆತನಿಗೆ ಮಕ್ಕಳಿದ್ದರೆ, ಆ ಮಕ್ಕಳಿಗೆ ವೈಶ್ಯಪಂಗಡದ ವಧು/ವರರು ದೊರಕುವಂತಿರಬೇಕು. ಬರಿಯ ರಿಚುಯಲ್ ಮಾಡಿ ಘರ್-ವಾಪ್ಸಿ ಆಗಿದೆ ಎಂದು ಹೇಳುವುದಲ್ಲಾ; ಸಾಮಾಜಿಕ ವಾಗಿಯೂ ಪರಿವರ್ತನಾಕ್ರಿಯೆಗೆ ಅರ್ಥವಿರಬೇಕು. (ಇಲ್ಲಿ ‘ವೈಶ್ಯ’ವರ್ಣವನ್ನು ಉದಾಹರಣಾರ್ಥವಾಗಿ ಮಾತ್ರ ತೆಗೆದುಕೊಂಡಿರುವುದು) -ಡಿ. ವಿ. ಮೋಹನ ಪ್ರಕಾಶ್, ಗೋಕುಲಂ ರಸ್ತೆ, ಮೈಸೂರು.
ಮನುಷ್ಯನೊಬ್ಬ ಕೊಲೆಯಾದರೆ ಅದರಲ್ಲಿ ಜಾತಿ ಧರ್ಮ ಹುಡುಕುವ ನೀಚತನ ಯಾರಿಗೂ ಇರಬಾರದು. ಏಕೆಂದರೆ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಕೊಲೆಗಳು ಆಗುತ್ತಿವೆಂದು ಬಿಂಬಿಸಿದರೆ ಸಮಾಜದ ಸಾಮರಸ್ಯ ಹದಗೆಡುವುದರ ಜೊತೆಗೆ ಮತೀಯ ಗಲಭೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಇಂತಹ ಜಾತಿ ಹಾಗೂ ಧರ್ಮದವನು ಕೊಲೆಯಾಗಿದ್ದಾನೆ ಅಂತ ಬಿಂಬಿಸಿದರೆ, ಯಾವ ಜಾತಿಯವನು ಕೊಲೆ ಆಗೋಕೆ ಅರ್ಹ ಅಂತ ಬಿಂಬಿಸಿದವರೇ ಹೇಳಬೇಕು!? ದಲಿತ ವ್ಯಕ್ತಿಯೊಬ್ಬ ಕೊಲೆಯಾದರೆ ನಮ್ಮ ಸಮಾಜ ನೋಡುವುದೇ ಬೇರೆ. ಕೊಲೆಯಾದವನು ಹಿಂದೂ ಆದರೆ ಅದಕ್ಕೆ ಮತ್ತೊಂದು ಪ್ರತಿಕ್ರಿಯೆ. ಮುಸ್ಲಿಮನೊಬ್ಬ ಹಿಂದೂವಿನಿಂದ ಕೊಲೆಯಾದರೆ ಒಂದು ಥರದ ಪ್ರತಿಕ್ರಿಯೆ. ಅದೇ ಹಿಂದೂವೊಬ್ಬ ಮುಸ್ಲಿಮನಿಂದ ಕೊಲೆಯಾದರೆ ಜಾಣಮೌನ!? ದಲಿತನಿಂದ ಬ್ರಾಹ್ಮಣ ಕೊಲೆಯಾದರೆ ಅದಕ್ಕೊಂದು ಬಣ್ಣ. ದಲಿತರಿಬ್ಬರೇ ತಮ್ಮಷ್ಟಕ್ಕೆ ತಾವೇ ಹೊಡೆದುಕೊಂಡು ಸತ್ತೋದರೆ ಅದಕ್ಕೊಂದು ವ್ಯಾಖ್ಯಾನ. ಹೀಗೆ ಪ್ರತಿ ಸಾವಿಗೂ ಜಾತಿಧರ್ಮದ ಅನ್ವಯ, ವ್ಯಾಖ್ಯಾನ ಕೊಡುತ್ತಾ ಹೋದರೆ ಸಮಾಜದ ಸಾಮರಸ್ಯ ಹದಗೇಡದೆ ಇನ್ನೇನಾದೀತು? ಸಮಾಜದ ಯಾವುದೇ ವ್ಯಕ್ತಿ ಕೊಲೆಯಾದರೂ, ಆ ವ್ಯಕ್ತಿಯ ಕೊಲೆಗೆ ಕಾರಣ ತಿಳಿಸಬೇಕೆ ವಿನಹ, ಕೊಲೆಯಾದ ವ್ಯಕ್ತಿ ಯಾವ ಜಾತಿ ಹಾಗೂ ಧರ್ಮದವನು ಅಂತ ಬಿಂಬಿಸಬಾರದು. ಇದರಿಂದ ಸಮಾಜದ ನೆಮ್ಮದಿಯೂ ಹಾಳು. ಜೊತೆಗೆ ಕೋಮು ಸಂಘರ್ಷಕ್ಕೆ ನಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ. ಇದು ತಪ್ಪಬೇಕು. -ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…