ನಂದಿನಿ ಮೊಸರು ಕೊಳ್ಳಲು ಹೋಗಿದ್ದೆ. ಅರ್ಧ ಲೀಟರ್ ಮೊಸರಿಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಮಜ್ಜಿಗೆ, ಪನೀರ್ ಬೆಲೆಯೂ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರು ಕೊಳ್ಳುವ ಬದಲಿಗೆ ೨೦೦ ಮಿಲಿ ಮೊಸರು ಖರೀದಿಸಿದೆ. ನಂತರ ಮತ್ತೊಬ್ಬ ಗ್ರಾಹಕರೂ ಅರ್ಧ ಲೀಟರ್ ಬದಲಿಗೆ ೨೦೦ ಮಿಲಿ ಮೊಸರು ಖರೀದಿಸಿದರು. ನಂದಿನಿ ಬೂತ್ ನವರಿಗೆ ಕೇಳಿದೆ ‘ಮೊಸರು ಮಾರಾಟ ಹೇಗಿದೆ’ ಅಂತಾ. ‘ಬೆಲೆ ಏರಿದೆ ಅಂತಾ ಮೊಸರು ತಿನ್ನದೇ ಇರಲು ಸಾಧ್ಯವಿಲ್ಲ. ಆದರೆ, ತಿನ್ನುವ ಪ್ರಮಾಣ ಕಡಮೆಯಾಗುತ್ತಿದೆ. ಒಂದು ಲೀಟರ್ ಮೊಸರು ಕೊಳ್ಳುತ್ತಿದ್ದವರು ಅರ್ಧ ಲೀಟರ್ ಕೊಳ್ಳುತ್ತಿದ್ದಾರೆ. ಅರ್ಧ ಲೀಟರ್ ಕೊಳ್ಳುತ್ತಿದ್ದವರು ೨೦೦ ಮಿಲಿ ಕೊಳ್ಳುತ್ತಿದ್ದಾರೆ’ ಅಂತ ವಿವರಿಸಿದರು. ಕೇಂದ್ರ ಸರ್ಕಾರ ನೀಡಿರುವ ಜಿಎಸ್‌ಟಿ ಏಟು ‘ನಂದಿನಿ’ಯ ಬುಡಕ್ಕೆ ಬಿದ್ದಿದೆ ಎನಿಸಿತು.
ನಂದಿನಿ ಬುಟಕ್ಕೆ ಏಟು ಬಿದ್ದರೆ, ಅದು ಲಕ್ಷಾಂತರ ಹಾಲು ಉತ್ಪಾದರ ಬುಡಕ್ಕೂ ಬಿದ್ದಂತೆಯೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
-ದೊಡ್ಡೇಗೌಡ, ಕುವೆಂಪುನಗರ, ಮೈಸೂರು.
ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷಾರ್ಪನರ್, ರೈಟಿಂಗ್-ಡ್ರಾಯಿಂಗ್-ಪ್ರಿಂಟಿಂಗ್ ಇಂಕ್, ಪೇಪರ್, ಗ್ರಾಫ್ ಪೇಪರ್, ನೋಟ್‌ಬುಕ್ ಮೇಲೆ ಜಿಎಸ್ಟಿ ಹಾಕಿರುವುದು ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಶಿಕ್ಷಣದ ಮೇಲೆ ದಾಳಿಗಳು ಹೆಚ್ಚಾಗಿವೆ. ಶಿಕ್ಷಣದ ವ್ಯಾಪಾರೀಕರಣ ತೀವ್ರಗೊಂಡು ತಳಸಮುದಾಯದ ಮಕ್ಕಳು ಶಿಕ್ಷಣದಿಂದ ಹೊರ ಹೋಗುತ್ತಿರುವ ಹೆಚ್ಚಾಗುತ್ತಿ . ಇಂತಹ ವಿಷಮ ಸಂಧರ್ಭದಲ್ಲಿ ಅಪ್ರಜಾಸತ್ತತ್ಮಕವಾಗಿ, ಅವೈಜ್ಞಾನಿಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಎನ್‌ಇಪಿ ಜಾರಿಗೊಳಿಸುತ್ತಿದೆ. ಇದರ ನಡುವೆಯೇ ಒಕ್ಕೂಟ ಸರ್ಕಾರ ಶಿಕ್ಷಣದ ಸಾಮಾಗ್ರಿಗಳ ಮೇಲೆ ಶೇ.೧೨ರಿಂದ ೧೮ರಷ್ಟು ಜಿಎಸ್‌ಟಿ ಹೇರಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಒಕ್ಕೂಟ ಸರ್ಕಾರದ ಈ ನೀತಿಯು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಶಿಕ್ಷಣದ ವೆಚ್ಚ ವಿಪರೀತ ಏರಿಕೆ ಮಾಡಲಿದೆ. ಇದು ತಳಸಮುದಾಯಗಳ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಕ್ರಮಗಳಾಗಿವೆ.
-ಮದನ್ ಹಾದನೂರು, ಮೈಸೂರು.
ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ತನ್ನ ಪ್ರತಿಷ್ಠೆಯೇ ಮುಖ್ಯ ಎಂಬುದು ಪಠ್ಯ ಪರಿಷ್ಕರಣೆ ಪ್ರಹಸನದಲ್ಲಿ ಬಯಲಾಗಿದೆ. ಇದೀಗ ವಿದ್ಯಾರ್ಥಿಗಳು ಪಠ್ಯಗಳೇ ಇಲ್ಲದೇ ಪರೀಕ್ಷೆ ಬರೆಯುವ ಪರಿಸ್ಥಿತಿ ಎದುರಾಗಿದೆ (‘ಆಂದೋಲನ’ ವರದಿ). ವರದಿಯಲ್ಲಿ ಉಲ್ಲೇಖಿಸಿದಂತೆ ಸಾವಿರಾರು ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕಗಳೇ ತಲುಪಿಲ್ಲ. ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ಮಾಡಿದ ಎಡವಟ್ಟು ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಇನ್ನು ಮುಂದಾದರೂ ಇಂತಹ ಎಡವಟ್ಟು ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಲಿ. ವಿದ್ಯಾರ್ಥಿಗಳ ಹಿತಾಸಕ್ತಿ ಆದ್ಯತೆಯಾಗಲಿ.
-ನಂದಕುಮಾರ್, ಸರಸ್ವತಿಪುರಂ, ಮೈಸೂರು.
ರಾಜ್ಯದಲ್ಲಿ ನರೇಗಾ ಕೂಲಿಗಿಂತಲೂ ಕಡಿಮೆ ವೇತನಕ್ಕೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಅತಿಥಿ ಶಿಕ್ಷಕರದ್ದಾಗಿದೆ. ಒಂದು ಲೆಕ್ಕದಲ್ಲಿ ಬಿಇಡಿ ಪದವಿ ಪಡೆದು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದಕ್ಕಿಂತ ಯಾವುದೇ ಖರ್ಚು ವೆಚ್ಚವಿಲ್ಲದೆ ನರೇಗಾದಲ್ಲಿ ಕೆಲಸ ಮಾಡುವವರ ಜೀವನವೇ ಲೇಸು ಎಂಬಂತಾಗಿದೆ . ಪ್ರಸ್ತುತ ನರೇಗಾ ಕೂಲಿ ದಿನವೊಂದಕ್ಕೆ ೨೮೯ ರೂ ನೀಡಲಾಗುತ್ತಿದೆ. ಆದರೆ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವವರಿಗೆ ದಿನವೊಂದಕ್ಕೆ ೨೫೦ ರೂ. ಮಾತ್ರ ನೀಡಲಾಗುತ್ತಿದೆ. ಇದು ಕನಿಷ್ಠ ವೇತನದ ಅರ್ಧದಷ್ಟು ಕೂಡ ಇಲ್ಲದಂತಾಗಿದೆ. ಕೇವಲ ೭,೫೦೦ ರೂ.ಗಳಿಗೆ ಕಾರ್ಯನಿರ್ವಹಿಸಿದರೆ ಶಿಕ್ಷಕರು ಜೀವನ ನಿರ್ವಹಣೆ ಮಾಡುವುದು ಹೇಗೆ? ಶಿಕ್ಷಣ ಸಚಿವರು ಈ ಬಗ್ಗೆ ಚಿಂತಿಸಬೇಕಿದೆ.
-ಪುಟ್ಟಸ್ವಾಮಿ ಹೆಚ್ ಎಂ, ಮಹಾರಾಜ ಕಾಲೇಜು, ಮೈಸೂರು.
ರಾಜ್ಯದಲ್ಲಿ ನೆರೆಯಿಂದ ಹಲವಾರು ಊರು ಕೇರಿಗಳು ಜಲಾವೃತಗೊಂಡು ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರವು ಅಲ್ಲಿನ ಜನರ ಸ್ಥಿತಿ ಗತಿಗಳ ಬಗ್ಗೆ ಅವಲೋಕನ ಮಾಡಿ ಅವರ ಸಂಕಷ್ಟಗಳಿಗೆ ಪರಿಹಾರ ನೀಡದೆ, ಅದ್ಧೂರಿ ದಸರಾ ಆಚರಣೆಯ ಬಗೆ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರವು ತನ್ನ ಪ್ರತಿಷ್ಠೆಗಾಗಿ ಅದ್ದೂರಿ ದಸರಾ ಆಚರಣೆ ಚಿಂತನೆಯನ್ನು ಬಿಟ್ಟು, ಮೊದಲು ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ. ದಸರಾ ಹಬ್ಬಕ್ಕೆ ಇನ್ನೂ ಹೆಚ್ಚು ಕಾಲವಿದೆ. ಮಳೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ತುರ್ತು ಕೆಲೆಸ ಎಂಬುದನ್ನು ಮರೆಯಬಾರದು.
-ಸ್ವಸ್ತಿಕ್ ಎಸ್, ಮಹಾರಾಜ ಕಾಲೇಜು, ಮೈಸೂರು.
ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…
ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…
ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…
ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…
ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…
ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…