ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 14 ಗುರುವಾರ 2022

ಮೌನ ಮತ್ತು ಘರ್ಜನೆ!?

ಸಂಸತ್ ಭವನ ದ ಮೇಲೆ ಇದೀಗ ನಿರ್ಮಿಸಿರುವ ರಾಷ್ಟ್ರ ಲಾಂಛನ ದ ಸಿಂಹದ ರೂಪ ನೋಡಿದರೆ ನಿಜವಾಗಲೂ ಭಯ ಮೂಡುತ್ತದೆ. ಈ ಬಗ್ಗೆ ಈಗಾಗಲೇ ವ್ಯಾಪಾಕ ವಿರೋಧ ವ್ಯಕ್ತ ವಾಗಿದೆ. ಅದಕ್ಕೆ ಸಮರ್ಥನೆ ನೀಡಿರುವ ಕೇಂದ್ರ ಸಚಿವ ಹರ್ದಿಪ್ ಪುರಿಯವರು ಮೂಲ ಲಾಂಛನದ ಯಥಾವತ್ ಪ್ರತಿಕೃತಿಯನ್ನು ಅಷ್ಟು ಎತ್ತರದಲ್ಲಿ ಇರಿಸಿದರೆ ಅದು ಕಾಣುವುದೇ ಇಲ್ಲಾ. ಹಾಗಾಗಿ ಅದರ ಗಾತ್ರ ವನ್ನು ಹೆಚ್ಚಿಸಲಾಗಿದೆ. ಎಂದಿದ್ದಾರೆ. ಆದರೆ ಗಾತ್ರ ಹೆಚ್ಚುವುದಕ್ಕೂ ಮುಖದ ವಿನ್ಯಾಸಕ್ಕೂ ಸಂಬಂಧವಿಲ್ಲ. ಬಹುಶಃ ಶಿಲ್ಪಗಳು ಎಡವಿರ ಬಹುದು. ಅಥವಾ ಅವರಿಗೆ ಹಾಗೆ ನಿರ್ದೇಶನ ನೀಡಿರಬಹುದು. ಏಕೆಂದರೆ ಈಗ ಜಾಲ ತಾಣ ಗಳ ಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲಿ ಇಷ್ಟು ದಿನಮೌನ ವಾಗಿರುವ ಸಿಂಹಗಳು ನಮ್ಮ ರಾಷ್ಟ್ರ ಲಾಂಛನದಲ್ಲಿದ್ದವು ಇದೀಗ ಘರ್ಜಿಸುತ್ತಿರುವ ಸಿಂಹ ನಮ್ಮ ಸಂಸತ್ತಿನ ಮೇಲೆ ರಾರಾಜಿಸಲಿದೆ. ಜಗತ್ತಿನ್ನೆದುರು ಮೌನವಾಗಿರುವ ಕಾಲ ಸರಿದು ಹೋಗಿದೆ ಘರ್ಜಿಸುವ ಕಾಲ ಬಂದಿದೆ’ ಎಂದು ಬರೆಯಲಾಗಿದೆ. ನಾವು ತಿಳಿಯಬೇಕಾದ ಸಂಗತಿ ಎಂದರೆ ಈಗಿನ ಸರ್ಕಾರವು ಸೇರಿದಂತೆ ಮುಂದೆ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಇನ್ನೂ ಮುಂದೆ ಜನರ ದನಿ ಆಲಿಸದೇ ಘರ್ಜಿಸುತ್ತವೆ ಎನ್ನುವುದಾಗಿದೆ. ಶಿಲ್ಪಿಯಿಂದ ಆಚಾತುರ್ಯವಾಗಿದ್ದರೂ ಇದನ್ನು ಭವಿಷ್ಯದ ಮುನ್ಸೂಚನೆಯ ದಿಕ್ಸುಚಿ ಎಂದರೆ ತಪ್ಪಾಗಲಾರದು!

ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.


ರಾಮಬಾಣ ವಿಷಪೂರಿತವೇ?

‘ಆಂದೋಲನ’ದಲ್ಲಿ ‘ಮಧುಮೇಹ ನಿಯಂತ್ರಣಕ್ಕೆ ಕಡಲಿನ ವಿಷಪೂರಿತ ಶಂಭೂಕ ರಾಮಬಾಣ?’ ಎಂಬ ಹೆಸರಿನ ಲೇಖನವನ್ನು ಕಾರ್ತಿಕ್ ಕೃಷ್ಣ ಅವರು ಬರೆದಿದ್ದಾರೆ. ಅವರು ವೈದ್ಯರೇ ಸಂಶೋಧಕರೇ? ಎಂಬ ಬಗ್ಗೆ ಮಾಹಿತಿ ಇಲ್ಲ. ಲೇಖನದ ಹೆಸರಿನ ಅರ್ಥ ಸಂದಿಗ್ಧವಾಗಿದೆ. ರಾಮಬಾಣ ವಿಷಪೂರಿತವೆ? ಶಂಬೂಕ ಪದದ ಅರ್ಥವೇನು? ಮಾಹಿತಿ ಇಲ್ಲ.
ರಾಮಾಯಣದಲ್ಲಿ ಶಂಬೂಕನೆಂಬ ಶೂದ್ರನೊಬ್ಬ ತಪಸ್ಸು ಮಾಡಿದ್ದರಿಂದ ಒಬ್ಬ ಬ್ರಾಹ್ಮಣ ವಟು ಸಾಯುತ್ತಾನೆ. ಅವನ ತಂದೆ ಶೂದ್ರರಿಗೆ ನಿಷಿದ್ಧವಾದ ತಪಸ್ಸನ್ನು ಶಂಬೂಕ ಮಾಡಿದ್ದರಿಂದ ತನ್ನ ಮಗ ಸತ್ತನೆಂದೂ ತಪ್ಪಿತಸ್ಥ ಶೂದ್ರನನ್ನು ದಂಡಿಸಬೇಕೆಂದೂ ರಾಮನಿಗೆ ಮೊರೆ ಇಡುತ್ತಾನೆ. ರಾಮ ಶೂದ್ರ ತಪಸ್ವಿ ಶಂಬೂಕನನ್ನು ವಧಿಸಿದಾಗ ಸತ್ತ ಬ್ರಾಹ್ಮಣ ವಟು ಜೀವಂತವಾಗುತ್ತಾನೆ. ಇದರ ಪ್ರಕಾರ ಶೂದ್ರನ ತಪಸ್ಸು ವಿಷವಾದ್ದರಿಂದ ಬ್ರಾಹ್ಮಣ ವಟು ಸತ್ತ. ರಾಮಬಾಣ ವಿಷಪೂರಿತ ಶಂಬೂಕನನ್ನು ವಧಿಸಿದ್ದರಿಂದ ಬ್ರಾಹ್ಮಣ ಬದುಕಿದ ಎಂದು ಹೇಳಿ, ಚಾತುರ್ವರ್ಣ ವ್ಯವಸ್ಥೆ ರಕ್ಷಣೆ ರಾಮಬಾಣದ ಕರ್ತವ್ಯ ಎಂದು ಪರಂಪರೆಯಮೌಢ್ಯವನ್ನು ಸಮರ್ಥಿಸುತ್ತದೆ. ಈ ಲೇಖನದ ಲೇಖಕರೂ ಇದನ್ನು ಸಮರ್ಥಿಸುತ್ತಾರೆಯೆ? ಕುವೆಂಪು ಅವರು ಇದೇ ವಸ್ತುವನ್ನು ಕುರಿತು ‘ಶೂದ್ರತಪಸ್ವಿ’ ಎಂಬ ನಾಟಕ ಬರೆದಿದ್ದಾರೆ. ರಾಮ ಬಾಣವನ್ನು ಪ್ರಯೋಗಿಸಿ ಅದಕ್ಕೆ, ‘ಅರಸಿಕೊಲ್ ಅರಗುಲಿಯಂ ’(ಧರ್ಮವನ್ನು ಕೊಲ್ಲುವವನನ್ನು ಹುಡುಕಿ ಕೊಲ್ಲು) ಎಂದು ಆದೇಶಿಸುತ್ತಾನೆ. ಶುದ್ರನ ತಪಸ್ಸಿನ ವಿರುದ್ಧ ದೂರಿತ್ತ ಬ್ರಾಹ್ಮಣನೇ ಧರ್ಮವನ್ನು ಕೊಂದವನು ಎಂದು ರಾಮಬಾಣವು ದೂರಿತ್ತವನನ್ನೇ ಹುಡುಕಿಕೊಂಡು ಕೊಲ್ಲಲು ಬರುತ್ತದೆ! ಬ್ರಾಹ್ಮಣನಿಗೆ ತನ್ನ ತಪ್ಪಿನ ಅರಿವಾಗಿ ರಾಮನಿಗೆ ಮೊರೆಹೋಗಿ ಕ್ಷಮೆ ಬೇಡುತ್ತಾನೆ. ತಪಸ್ಸು ಮಾಡುವ ಶೂದ್ರನನ್ನು ಗೌರವಿಸುತ್ತಾನೆ. ರಾಮ ಬಾಣವನ್ನು ಹಿಂದೆಗೆದುಕೊಳ್ಳುತ್ತಾನೆ. ಈ ಕಾಲದಲ್ಲಿ ‘ಆಂದೋಲನ’ದಂಥ ಪತ್ರಿಕೆಯಲ್ಲಿ ಇಂಥ ತಿರೋಗಾಮಿ ವಿಷಯ ಬರೆಯುವುದೇ ವಿಷಪೂರಿತ ಚಿಂತನೆ. ಇದನ್ನು ಸಂಪಾದಕರು ಪ್ರಕಟಿಸದೆ ಕತ್ತರಿಸಿ ಎಸೆಯಬೇಕಿತ್ತು.

-ಪಂಡಿತಾರಾಧ್ಯ, ಬಸವೇಶ್ವರ ರಸ್ತೆ, ಮೈಸೂರು.


ಲೇಖಕರ ಸ್ಪಷ್ಟನೆ

ಸರಿಯಾದ ಪದ ಶಂಬುಕ. ಅಂದರೆ ಬಸವನ ಹುಳ ಎಂದರ್ಥ. cone snail  ಎಂಬುದಕ್ಕೆ ಕಡಲಿನ ಶಂಬುಕ ಎಂಬ ಪದ ಬಳಕೆ ಮಾಡಿದ್ದೇನೆ. ಹಾಗೆಯೇ ಲೇಖನದಲ್ಲಿ cone snail  ಎಂದೂ ಬಳಸಿದ್ದೇನೆ. ಬಹುಶಃ ಲೇಖನವನ್ನು ಓದದೇ ಶೀರ್ಷಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ನಾನು ಗಮಸಿನಿದ ಇನ್ನೊಂದು ಅಂಶವೇನೆಂದರೆ, ಕಣ್ತಪ್ಪಿನಿಂದ ಶೀರ್ಷಿಕೆಯಲ್ಲಿ ‘ಶಂಬುಕ’ ಪದದ ಬದಲು ‘ಶಂಭೂಕ ’ ಎಂದಾಗಿದೆ. ನಾನು ಕಳುಹಿಸುವಾಗ ‘ಶಂಬುಕ’ ಪದ ಬಳಸಿದ್ದೆ. ಏನೇ ಇರಲಿ, ಈ ತಪ್ಪುಒಪ್ಪುಗಳ ನಡುವೆ ಪುರಾಣದ ಕಥೆಯೊಂದನ್ನು ತಿಳಿದಂತಾಯಿತು! ಅದಕ್ಕಾಗಿ ಪಂಡಿತಾರಾಧ್ಯ ಅವರಿಗೆ ಧನ್ಯವಾದಗಳು.

ಕಾರ್ತಿಕ್ ಕೃಷ್ಣ, ಮೈಸೂರು.

 

 

 

andolanait

Share
Published by
andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

8 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago