ಎಡಿಟೋರಿಯಲ್

ಓದುಗರ ಪತ್ರ : 09 ಶುಕ್ರವಾರ 2022

 

ಖುಷಿ ರವರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಶ್ಲಾಘನೀಯ

ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಹಾದಿಹಿಡಿದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿರುವ ಖುಷಿರವರಿಗೆ ಪ್ರಶಸ್ತಿಗಳು ಅವರನ್ನು ಅರಸಿ ಬರುತ್ತಿರುವುದು ಶ್ಲಾಘನೀಯ ವಿಷಯವಾಗಿದೆ. ಖುಷಿರವರಿಗೆ ೨೦೧೬ರಲ್ಲಿ ರಾಜ್ಯ ಸರ್ಕಾರದಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ೨೦೧೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಈ ಬಾರಿಯ ೨೦೨೨ನೇ ಸಾಲಿನಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿರುವುದು ಪ್ರತಿಭೆಗೆ ತಕ್ಕ ಪ್ರತಿಫಲವಾಗಿದೆ. ಆಕೆಯ ಹೆಸರಿನಂತೆ ಅವರ ಬದುಕು ಕೂಡ ಖುಷಿಯಾಗಿ ಸಾಗಲಿ ಎಂಬುದು ನಮ್ಮೆಲ್ಲರ ಬಯಕೆ. ಮುಂದಿನ ದಿನಗಳಲ್ಲಿ ಯೋಗಾಭ್ಯಾಸ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿ ಉತ್ತಮ ಯೋಗ ಶಿಕ್ಷಕಿಯಾಗುವ ಅವರ ಗುರಿಯ ಜೊತೆಗೆ ಮತ್ತಷ್ಟು ಸಾಧಿಸಬೇಕೆಂಬ ಛಲ ಹೊಂದಿರುವುದು ಸ್ವಾಗತಾರ್ಹ ಸಂಗತಿ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು


ರೈತರಿಗೆ ಆನ್‌ಲೈನ್ ವ್ಯವಹಾರದ ಬಗ್ಗೆ ತರಬೇತಿ ನೀಡಿ

ಸರ್ಕಾರವು ಬೆಳೆಗಳ ವಿತರಣೆ ಹಾಗೂ ಖರೀದಿಗೆ ರಾಜ್ಯದ ರೈತರಿಗೆ ಸಂಪೂರ್ಣ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಬಹುದಾದ ಯೋಜನೆಯನ್ನು ರೂಪಿಸಿರುವುದು ರೈತರಿಗೆ ಉಪಯುಕ್ತವಾಗಿದೆ. ಇದರಿಂದ ರೈತರಿಗೆ ಸಾರಿಗೆ ವೆಚ್ಚ, ಶ್ರಮ ಜೊತೆಗೆ ದಳ್ಳಾಳಿಗಳ ಪಾಲಾಗುತ್ತಿದ್ದ ಹಣ ಉಳಿತಾಯವಾಗುತ್ತದೆ. ಈ ಆನ್‌ಲೈನ್ ಮಾದರಿಯ ಮಾರಾಟ ದೇಶದಲ್ಲಿ ಇದೆ ಮೊದಲಾಗಿದ್ದು, ಆನ್‌ಲೈನ್ ಮಾರಾಟ ಪಾರದರ್ಶಕವಾಗಿರುವುದರಿಂದ ಯಾವುದೆ ಬೆಳೆ ಹಾಗೂ ಬೀಜವು ಮೋಸವಾಗುವುದಿಲ್ಲ. ಒಂದುವೇಳೆ ಮೋಸವಾದರೂ ತಾವು ಇಂತಹವರಿಂದಲೇ ಖರೀದಿಸಿದ್ದೇವೆಂಬ ಮಾಹಿತಿ ರೈತರಿಗೆ ತಿಳಿಯುತ್ತದೆ. ಆದರೆ ಪ್ರತಿಯೊಬ್ಬ ರೈತರಿಗೂ ಮೊಬೈಲ್‌ನಲ್ಲಿ ಹೇಗೆ ಆನ್‌ಲೈನ್ ವ್ಯವಹಾರ ಮಾಡಬೇಕೆಂಬ ವಾಹಿತಿಯ ಕೊರತೆ ಇದ್ದು, ಪ್ರತಿಬ್ಬೊಯ ರೈತರಿಗೂ ಆನ್‌ಲೈನ್ ವ್ಯವಹಾರದ ತರಬೇತಿಯನ್ನು ನೀಡಬೇಕು. ಈ ತರಬೇತಿಯನ್ನು ಸರ್ಕಾರದ ಮಟ್ಟದಲ್ಲಿ ರೈತರಿಗೆ ನೀಡಿದರೆ, ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗುವುದು. ಜೊತೆಗೆ ಆನ್‌ಲೈನ್ ವ್ಯವಹಾರದಿಂದ ರೈತರು ಮೋಸ ಹೋಗುವ ಸನ್ನಿವೇಷಗಳು ಕಡಿಮೆಾಂಗಲಿವೆ. ಇದರಿಂದ ರೈತರು ಜಾಗೃತಗೊಂಡು ಆನ್‌ಲೈನ್ ವ್ಯವಹಾರವನ್ನು ಧೈರ್ಯವಾಗಿ ಕೈಗೊಳ್ಳಬಹುದಾಗಿದೆ.

-ಎಂ.ಎಸ್.ಉಷಾ ಪ್ರಕಾಶ್, ಲೇಖಕಿ ಹಾಗೂ ಕವಯಿತ್ರಿ, ಬಿ.ಎಂ.ಕಾಲೋನಿ, ಮೈಸೂರು.


ವಿದ್ಯಾರ್ಥಿಗಳ ವೇತನ ಕಡಿತಗೊಳಿಸುವುದನ್ನು ನಿಲ್ಲಿಸಿ

ದೇಶದ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲಿದೆ. ಶಿಕ್ಷಣದಿಂದ ಮಾತ್ರ ದೇಶದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಮಹಿಳಾ ಸಬಲೀಕರಣ, ಉದ್ಯೋಗಗಳು, ಜ್ಞಾನ, ಸಂಶೋಧನೆಗಳು, ಪರಿಸರ ಸಂರಕ್ಷಣೆ, ನಾಡು-ನುಡಿಯ ಸಂಸ್ಕೃತಿಯನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳು ಅಭಿವೃದ್ಧಿಯಾಗಲು ಸಾಧ್ಯ. ಆದ್ದರಿಂದ ಸರ್ಕಾರದಿಂದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ಪರಿಶಿಷ್ಟ ಜಾತಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ಸೇರಿದಂತೆ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಸರ್ಕಾರವು ವಿದ್ಯಾರ್ಥಿ ವೇತನವನ್ನು ತಡೆ ಹಿಡಿಯುವ ಮೂಲಕ ವಿದ್ಯಾರ್ಥಿ ಧೋರಣೆ ಎಸೆದಾಗಿದೆ. ಇನ್ನೂ ೨೦೧೪ರಲ್ಲಿ ನರೇಂದ್ರ ಮೋದಿರವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಯಯುವಕರು ಸೇರಿದಂತೆ ವಿದ್ಯಾರ್ಥಿಗಳಿಗೆ ವಾರ್ಷಿಕ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವ ಭರವಸೆ ನೀಡಿದರು. ಆದರೆ ಅದು ಇನ್ನೂ ಬಂದಿಲ್ಲ. ಈಗ ಪ.ಜಾತಿ, ಪ.ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಬಡಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು ಖಂಡನೀಯವಾಗಿದೆ. ವಿದ್ಯಾರ್ಥಿಗಳ ಹಣವನ್ನು ಸರ್ಕಾರ ಏನು ಮಾಡಬೇಕು ಎಂದು ನಿರ್ಧರಿಸಿದೆ? ಕೂಡಲೇ ಈ ಆದೇಶವನ್ನು ಹಿಂಪಡೆದು ವಿದ್ಯಾರ್ಥಿಗಳ ಏಳಿಗೆಗಾಗಿ ಪ್ರಧಾನ ಮಂತ್ರಿಗಳು ಕೈಜೋಡಿಸುವ ಮೂಲಕ ವಿದ್ಯಾರ್ಥಿ ವೇತನವನ್ನು ನೀಡಿ ಮಾದರಿಯಾಗಬೇಕು.

-ನಾಗೇಶ್, ಮಾನಸಗಂಗೋತ್ರಿ


ಚಿಕ್ಕಕೆರೆಯ ಸಂರಕ್ಷಣೆಗೆ ಕೈಜೋಡಿಸಿ

ಗುಂಡ್ಲುಪೇಟೆ ತಾಲ್ಲೂಕಿನ ಪ್ರಮುಖ ಹೊಳೆಯಾಗಿರುವ ಗುಂಡ್ಲುಹೊಳೆಯು ದಶಕಗಳ ನಂತರ ತುಂಬಿ ಹರಿಯುತ್ತಿದೆ. ಅದೇ ರೀತಿ ದೊಡ್ಡಕೆರೆಯೂ (ಅವಾನಿಕೆರೆ) ತುಂಬಿ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚಿಕ್ಕಕೆರೆಗೆ ದೊಡ್ಡಕೆರೆಯು ತುಂಬಿ ಹರಿದ ನೀರು ಬಂದು ಸೇರುತ್ತದೆ. ಆದರೆ ಚಿಕ್ಕಕೆರೆಯು ಹೂಳು ತುಂಬಿ ಹೋಗಿದ್ದು, ಹರಿದು ಬಂದು ನೀರು ಹೆಚ್ಚಿನ ಪ್ರಮಾಣದಲ್ಲಿ ಸರಗವಾಗಿ ಸೇರಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದ ‘ಗುಂಡ್ಲು ಪರಿಸರ ಬಳಗದ’ ಗೆಳೆಯರು ಪ್ರತಿ ಭಾನುವಾರದಂದು ಶ್ರಮದಾನ ಕಾರ್ಯಕ್ರಮ ಆಯೋಜಿಸಿ ಅಲ್ಲಿನ ಕಾಲುವೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೆೆಯೇ ದಶಕಗಳಿಂದ ನೀರಿಲ್ಲದೆ ಬತ್ತಿದ್ದ ಚಿಕ್ಕಕೆರೆಯ ಅಂಗಳ ಮತ್ತು ಕೆರೆಯ ಏರಿ ಹಾಗೂ ಅಲ್ಲಿನ ಹಾಸುಗಲ್ಲಿನ ಮೇಲೆ ಮುಳ್ಳಿನ ಗಿಡಗಳು ಬೆಳೆದು ಸಾರ್ವಜನಿಕರು ಓಡಾಡಲು ಕಷ್ಟವಾಗಿತ್ತು. ಸಧ್ಯ ದಟ್ಟವಾಗಿ ಬೆಳೆದಿದ್ದ ಮುಳ್ಳಿನ ಪೊದೆಗಳನ್ನ ಗುಂಡ್ಲು ಪರಿಸರ ಬಳಗದ ಗೆಳೆಯರು ತೆರೆವುಗೊಳಿಸಿ ಸ್ವಚ್ಛಗೊಳಿಸಿರುವುದು ಹೆಮ್ಮೆಯ ವಿಚಾರವಾಗಿದೆ.

ಸಧ್ಯ ಈ ಬಳಗಕ್ಕೆ ಮತ್ತಷ್ಟು ಕೈಗಳು ಬಂದು ಸೇರುವ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನಪರ ಸಂಘಟನೆಗಳು, ನಾಗರಿಕರು, ರೈತರು, ಯುವಕರು, ವಿದ್ಯಾರ್ಥಿಗಳು, ರಾಜಕಾರಣಿಗಳು ಸ್ವಇಚ್ಛೆಯಿಂದ ಚಿಕ್ಕಕೆರೆ ಸಂರಕ್ಷಣೆಗಾಗಿ ಕೈ ಜೋಡಿಸಬೇಕಾಗಿ ವಿನಂತಿ.

-ಅಪುರಾ, ಗುಂಡ್ಲು ಪರಿಸರ ಬಳಗ, ಗುಂಡ್ಲುಪೇಟೆ ತಾ.

 

andolana

Share
Published by
andolana

Recent Posts

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

13 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

24 mins ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

29 mins ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

1 hour ago

ಮಂಡ್ಯದಲ್ಲಿ ಬರ್ಬರ ಕೊಲೆ ಪ್ರಕರಣ: ಸಾಲ ತೀರಿಸಲು ದರೋಡೆಗೆ ಇಳಿದಿದ್ದ ಪಾತಕಿ

ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್‌ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್‌ ವಿಚಾರ ಬಾಯ್ಬಿಟ್ಟಿದ್ದಾನೆ.…

2 hours ago

ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…

3 hours ago