ಎಡಿಟೋರಿಯಲ್

ನೋಟ ಪ್ರತಿನೋಟ | ಪಕ್ಷ ‘ಹಿತರಕ್ಷಣೆ’ಗಾಗಿ ಬಿಜೆಪಿ ಯಡಿಯೂರಪ್ಪನವರಿಗೆ ಸ್ಥಾನಮಾನ ಕೊಟ್ಟಿದೆಯೇ?

ಯಡಿಯೂರಪ್ಪ ಅವರನ್ನು ನಿರ್ದಾಕ್ಷಿಣ್ಯವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದ ಬಿಜೆಪಿ ನಾಯಕತ್ವವೀಗ ಹಿತದೃಷ್ಟಿ’ಯಿಂದ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರದ ಚುನಾವಣೆ ಸಮಿತಿ ಸದಸ್ಯತ್ವದ ಗೌರವ ಸಲ್ಲಿಸಿದೆ. ಈ ಗೌರವ ಸಲ್ಲಿಕೆಯ ಹಿಂದಿನ ಮರ್ಮ ಕುರಿತಂತೆ ನಾನಾ ರೀತಿಯ ಚರ್ಚೆಗಳು ನಡೆದಿವೆ. ಯಡಿಯೂರಪ್ಪ ಅವರಿಗೆ ಈ ಹೊತ್ತಿನಲ್ಲಿ ಸ್ಥಾನಮಾನ ನೀಡಿದ್ದರ ಕುರಿತಾಗಿ ಭಿನ್ನ ನೆಲೆಯ ವಾದಗಳೆರಡು ಇಲ್ಲಿವೆ. 

ನೋಟ

 ಯಡಿಯೂರಪ್ಪನವರಿಗೆ ನೀಡಿದ  ಗೌರವದಿಂದ ಬಿಜೆಪಿಗೆ ವರದಾನ

ಅಮ್ಮನಪುರ ಮಲ್ಲೇಶ್,  ಬಿಜೆಪಿ ರೈತ ಮುಖಂಡರು

ರಾಜ್ಯದ ಬಿಜೆಪಿಯ ಧುರೀಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರದ ಚುನಾವಣೆ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಿರುವುದರಿಂದ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಬಹಳಷ್ಟು ಅನುಕೂಲವಾಗಲಿದೆ. ಅವರ ಸುದೀರ್ಘ ರಾಜಕೀಯ ಅನುಭವವು ಪಕ್ಷದ ಬೆಳವಣಿಗೆಗೆ ಮತ್ತಷ್ಟು ವರದಾನವಾಗಲಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಯೋಜನಕಾರಿ. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿದ್ದಾರೆ. ಅಂತಹವರಿಗೆ ಪರ್ಯಾಯ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸಲು ಯಡಿಯೂರಪ್ಪ ಅವರ ಅನುಭವ ಮತು ಮಾರ್ಗದರ್ಶನದ ಅವಶ್ಯತೆಯಿದೆ.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಪಕ್ಷದ ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳಲು ಸೂಕ್ತ ಸ್ಥಾನಮಾನ ಬೇಕಿತ್ತು. ಅವರ ಹಿರಿತನ, ರಾಜಕೀಯ ಅನುಭವ ಹೆಚ್ಚಾಗಿರುವುದರಿಂದ ಕೇಂದ್ರದ ಸಮಿತಿಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಅವರಿಗೆ ರಾಜ್ಯಾದ್ಯಂತ ಪ್ರವಾಸ ಮಾಡಲು ಒಂದು ಬಗೆಯ ಸ್ಪೂರ್ತಿ ನೀಡಿದಂತಾಗಿದೆ. ಕಾರ್ಯಕರ್ತರಲ್ಲೂ ಲವಲವಿಕೆ ಬಂದಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಮತ್ತು ಅಧಿಕಾರಕ್ಕೆ ತಂದಂತಹ ಪ್ರಮುಖ ನಾಯಕರು ಯಡಿಯೂರಪ್ಪ.

ಇಡೀ ಕರ್ನಾಟಕವನ್ನು ಸುತ್ತಾಡಿದ್ದಾರೆ. ಯಾವ ಕಡೆ ಪಕ್ಷವನ್ನು ಬಲಪಡಿಸಬೇಕೆಂಬ ಅರಿವು ಅವರಿಗಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಯಶಸ್ವಿಯಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಒತ್ತಡದಲ್ಲಿದ್ದರು. ಹಾಗಾಗಿ ಹಳೇ ಮೈಸೂರು ಭಾಗದಲ್ಲಿ ಕೇಂದ್ರೀಕರಿಸಲು ಆಗಲಿಲಲ್ಲ.

ಈಗ ಅಂತಹ ಪರಿಸ್ಥಿತಿಯಿಲ್ಲ , ಈ ಸಲ ಸಾಕಷ್ಟು ಸಮಯವಿದ್ದು ಪಕ್ಷವನ್ನು ಬಲಪಡಿಸಲು ತಂತ್ರಗಾರಿಕೆ ರೂಪಿಸಲಿಕ್ಕೆ ಅವಕಾಶವಿದೆ. ರಾಜ್ಯವನ್ನು ಸುತ್ತಾಡಿರುವ ಹಿರಿಯ ರಾಜಕಾರಣಿಯಾದ ಅವರಿಗೆ ರಾಜ್ಯದ ಸಮಸ್ಯೆಗಳು ಗೊತ್ತಿದೆ. ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದಾರೆ. ಇದೆಲ್ಲವನ್ನು ಬಳಸಿಕೊಂಡು ಪಕ್ಷವನ್ನು ಹೇಗೆ ಬಲಪಡಿಸಲು ಸಾಧ್ಯ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಏನು ಮಾಡಬೇಕೆಂಬ ಕಾರ್ಯತಂತ್ರ ಅವರಲ್ಲಿವೆ. ಅವುಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗಲಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ತಮ್ಮ ರಾಜಕೀಯ ಅನುಭವವನ್ನು ಧಾರೆಯೆರೆದು ಸಮಾಜದ ಉದ್ದಾರಕ್ಕೆ, ದೀನದಲಿತರ ಏಳಿಗೆಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇವುಗಳನ್ನು ಜನರಿಗೆ ಮನವರಿಕೆ ಮಾಡಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಅನುಕೂಲವಾಗಲಿದೆ.

ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳು ಯಡಿಯೂರಪ್ಪ ಅವರಿಗೆ ತವರು ಜಿಲ್ಲೆಗಳು ಇದ್ದಂತೆ. ಅವರು ೨೦೦೮ ರಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಜೊತೆಗೂಡಿ ಚಾಮರಾಜನಗರ ಜಿಲ್ಲೆಯ ೨೦ ಕೆರೆಗಳಿಗೆ ಕಬಿನಿ ನೀರು ತುಂಬಿಸುವ ಬೃಹತ್ ಯೋಜನೆಗೆ ಅನುಮೋದನೆ ನೀಡಿದ್ದರು. ಸೋಮಣ್ಣ ಅವರಿಗೆ ಮಾರ್ಗದರ್ಶನ ನೀಡಿ ಸರ್ಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಲು ಕಾರಣಕರ್ತರಾದರು.

ಈ ಕಾರಣಕ್ಕೆ ಯಡಿಯೂರಪ್ಪ ಮತ್ತು ಸೋಮಣ್ಣ ಅವರ ಬಗ್ಗೆ ಚಾಮರಾಜನಗರ ಜಿಲ್ಲೆಯ ಜನರು ಅಪಾರ ಪ್ರೀತಿ ಮತ್ತು ಅಭಿಮಾನ ಇಟ್ಟುಕೊಂಡಿದ್ದಾರೆ. ಇವರಿಬ್ಬರು ಸಮಾಜದ ೨ ಕಣ್ಣುಗಳಿದ್ದಂತೆ. ಹಳೇ ಮೈಸೂರು ಭಾಗಕ್ಕೆ ಅವರ ಚಾಣಕ್ಷ ರಾಜಕೀಯ ತಂತ್ರಗಾರಿಕೆಯ ಅಗತ್ಯವಿದೆ. ಅವರೊಬ್ಬ ಚುಂಬಕ ಶಕ್ತಿ ಇರುವ ಮಾಸ್ ಲೀಡರ್. ಅವರು ಬಿಜೆಪಿಗೆ ನೆಲೆ ಇಲ್ಲದ ಕಡೆ ಪ್ರವಾಸ ಮಾಡಬೇಕು. ಜನರನ್ನು ಸಂಘಟಿಸಲು ಅವರಿಗೆ ಸಂಪೂರ್ಣ ಅವಕಾಶ ಸಿಗಬೇಕು. ಅವರಿಗೆ ವಯಸ್ಸಾಗಿರಬಹುದು ಆದರೆ ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಜನನಾಯಕ. ಅವರ ಸೇವೆ, ಪಕ್ಷ ನಿಷ್ಠೆ ಪ್ರಶ್ನಾತೀತ. ಬಿಜೆಪಿಗೆ ಕರ್ನಾಟಕವನ್ನು ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಹೆಬ್ಬಾಗಿಲಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲಬೇಕು.

ಪ್ರತಿನೋಟ

ಚುನಾವಣೆ ಗೆಲ್ಲಲಷ್ಟೇ ಈ ಸ್ಥಾನಮಾನ!

ಎಚ್.ಎ.ವೆಂಕಟೇಶ್, ಕೆಪಿಸಿಸಿ ವಕ್ತಾರ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡುವುದಕ್ಕಾಗಿ ಅವರನ್ನು ಬಿಜೆಪಿ ಸಂಸದೀಯ ಮಂಡಳಿಗೆ ನೇಮಿಸಿಲ್ಲ. ಬಿಜೆಪಿಯಲ್ಲಿ ಅವರಿಗೆ ಹಲವಾರು ಬಾರಿ ಅವಮಾನ ಮಾಡಲಾಗಿದೆ.  ಯಡಿಯೂರಪ್ಪ ಬಹಳ ಕಷ್ಟಪಟ್ಟು ಬಿಜೆಪಿಯನ್ನು ಕಟ್ಟಿದವರು. ಸೈಕಲ್‌ನಲ್ಲಿ  ಪ್ರವಾಸ ಮಾಡಿದವರ ಕಷ್ಟ ಈಗ ಕಾರಿನಲ್ಲಿ ಬಂದವರಿಗೆ ಗೊತ್ತಾಗುವುದಿಲ್ಲ. ಯಡಿಯೂರಪ್ಪ ಸೈಕಲ್ ಹೊಡೆದಿರುವುದನ್ನು ಇವರೆಲ್ಲ ಮರೆತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ಅವರು ಕಣ್ಣಿರು ಹಾಕಿದರು.

ಅವರ ಹೆಸರೇಳಿ ಅಧಿಕಾರ ಅನುಭವಿಸಿದ ಹಲವರು ಕಷ್ಟ ಕೊಡುತ್ತಿದ್ದಾರೆ. ತಮ್ಮ ಪುತ್ರನಿಗೆ ವಿಧಾನ ಪರಷತ್ನಲ್ಲಿ ಒಂದು ಸೀಟ್ ಕೊಡಿಸಲಾಗದ ಮಟ್ಟಿಗೆ ತೊಂದರೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಆದ ಅವಮಾನವನ್ನು ಜನ ಗಮನಿಸುತ್ತಿದ್ದಾರೆ. ಅವರ ಆಡಳಿತ ವೈಖರಿಯನ್ನು ನಾವು ಟೀಕಿಸಿರಬಹುದು. ಆದರೆ, ಅವರ ವ್ಯಕ್ತಿತ್ವವನ್ನು ನಾವು ಯಾವತ್ತೂ ಟೀಕಿಸಲು ಹೋಗಿಲ್ಲ. ಈ ರಾಜ್ಯದ ಒಬ್ಬ ಹಿರಿಯ ರಾಜಕೀಯ ಮತ್ಸದ್ಧಿ ಅವರು. ಅವರಿಗಿದ್ದ ರೈತ ಪರ ಹೋರಾಟ, ರೈತಪರ ಕಾಳಜಿಯನ್ನು ವಿಧಾನಸಭೆಯಲ್ಲಿ ನೋಡಿದ್ದೇವೆ. ಅದನ್ನೆಲ್ಲವನ್ನೂ ಬಿಜೆಪಿ ಈಗ ಮರೆತುಬಿಟ್ಟಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನೆಡೆಯಾಗಿದೆ. ಪದವೀಧರ ಕ್ಷೇತ್ರ, ಸ್ಥಳೀಯ ಚುನಾವಣೆ, ವಿಧಾನಸಭೆಯ ಉಪ ಚುನಾವಣೆಗಳಲ್ಲಿ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿ ಬರಲ್ಲ ಎಂಬ ಮಾಹಿತಿ ನೀಡಿವೆ. ಅದು ಗೊತ್ತಾದ ಮೇಲೆ ಪಕ್ಷದಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪನವರ ವ್ಯಕ್ತಿತ್ವಕ್ಕೆ ಇದು ಬಹಳ ದೊಡ್ಡ ಅಧಿಕಾರವೇನಲ್ಲ. ಬಹಳಷ್ಟು ಜನ ಚುನಾವಣ ಸಮಿತಿಯಲ್ಲಿ, ಕಾರ್ಯಕಾರಿಣಿ ಮಂಡಲಿಯಲ್ಲಿ ಇರುತ್ತಾರೆ. ಇದರಿಂದ ಯಡಿಯೂರಪ್ಪನವರು ಒಬ್ಬರೇ ತೀರ್ಮಾನ ತೆಗೆದುಕೊಲ ಳ್ಳಲು ಸಾಧ್ಯವಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಕಾಗದಕ್ಕೆ ಸಹಿ ಮಾಡಿದರೆ ಅದು ಆದೇಶ ಆಗುತ್ತಿತ್ತು. ಇದು ಕಣ್ಣೋರೆಸೋ ತಂತ್ರ ಅಷ್ಟೇ. ಅವರ ಶಕ್ತಿಯನ್ನು ಬಳಸಿಕೊಳ್ಳಲು ಬಿಜೆಪಿಯವರು ಹೂಡಿರುವ ತಂತ್ರವಷ್ಟೇ.

ಬಿಜೆಪಿಗೆ ಅವರ ಮೇಲೆ ಯಾವುದೇ ರೀತಿಯ ಗೌರವವಿಲ್ಲ. ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಸ್ವತಃ ಪ್ರಧಾನಿಗಳೇ ಯಡಿಯೂರಪ್ಪ ಅವರನ್ನು ತಿರುಗಿಯೂ ನೋಡಿಲ್ಲ. ಇದನ್ನೆಲ್ಲಾ ಜನರು ಗಮನಿಸಿದ್ದಾರೆ. ಆದ್ದರಿಂದ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿ ಮತ್ತೇ ರಾಜ್ಯದಲ್ಲಿ ಬಿಜೆಪಿ ಗದ್ದುಗೆ ಪಡೆಯುವುದು ಕನಸಿನ ಮಾತು. ಯಡಿಯೂರಪ್ಪನವರಿಗೆ ತಮ್ಮ ಪುತ್ರನನ್ನು ವಿಧಾನ ಪರಿಷತ್ತಿಗೆ ಕಳುಹಿಸಿ ಸಚಿವರನ್ನಾಗಿಸುವ ಹಂಬಲವಿತ್ತು. ಶಿಕಾರಿಪುರದಲ್ಲಿ ಅವರ ಮಗನನ್ನು ಅಭ್ಯರ್ಥಿಯಾಗಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಬಿಜೆಪಿ ಇದನ್ನು ಸಹಿಸಲಿಲ್ಲ.

ಬಿಜೆಪಿ ಈಗಾಗಲೆ ಜನರ ವಿಶ್ವಾಸ ಕಳೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದ ಕೋಮುಗಲಭೆಗಳು, ಶಾಂತಿ ವಾತಾವರಣ ಹದಗೆಡಿಸಿರುವುದು, ಶಿವಮೊಗ, ಭದ್ರಾವತಿ, ಬೆಂಗಳೂರಲ್ಲಿ ನಡೆದ ಘಟನೆಗಳು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಜನ ಹಗಲಿನಲ್ಲೇ ಓಡಾಡಲು, ಮನೆಬಿಟ್ಟು ಹೊರಬರಲು ಎದರುತ್ತಿದ್ದಾರೆ. ಇಂತಹ ಒಂದು ಕೆಟ್ಟ ಪರಿಸ್ಥಿತಿ ಕೆಟ್ಟ ಆಡಳಿತವನ್ನು ಕರ್ನಾಟಕ ಯಾವತ್ತು ನೋಡಿರಲಿಲ್ಲ. ಕರ್ನಾಟಕ ಶಾಂತಿ ಪ್ರಿಯ ರಾಜ್ಯ. ಆದರೆ, ಬಿಜೆಪಿಯವರು ಕೋಮುಗಲಭೆ ಸೃಷ್ಟಿಸಿ ಹಿಂದೂಗಳ ಮತಗಳನ್ನು ಕಬಳಿಸಲು ಹೊರಟಿದ್ದಾರೆ. ಅವರು ಯಾವತ್ತು ಕೂಡ ಇಂತಹ ಕೆಲಸ ಮಾಡಿದ್ದೇವೆ ಎಂದು ವೋಟು ಕೇಳುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಯೋಜನೆ ಜಾರಿ ಮಾಡಿದ್ದೇನೆ ಎಂದು ಹೇಳಲಿ? ಇದರಿಂದ ಎಷ್ಟು ಜನರಿಗೆ ಸಹಾಯವಾಗಿದೆ? ಇವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯೇ ಇಲ್ಲ. ಬಡವರು, ಶೊಷಿತರ ಬಗ್ಗೆ ಕಲ್ಪನೆ ಇಲ್ಲ. ಇದರಿಂದ ರಾಜ್ಯ ಬಿಜೆಪಿ ಬಗ್ಗೆ ಆಗಲೆ ಕೇಂದ್ರಕ್ಕೆ ಗೊತ್ತಾಗಿದೆ. ಈಗ ಯಡಿಯೂರಪ್ಪ ಅವರ ಪೋಟೋ ತೋರಿಸಿ ವೋಟು ಪಡೆಯೋಕೆ ಬಿಜೆಪಿ ಮುಂದಾಗಿದೆ. ವಿಧಾನಸಭೆ ಚುನಾವಣೆ ಮುಗಿದ ಮೇಲೆ ಅವರನ್ನು ಮೂಲೆಗುಂಪು ಮಾಡಲಾಗುತ್ತದೆ

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

9 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago