ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಗುಜರಾತ್ ರಾಜ್ಯದಲ್ಲೀಗ ಸರಣಿ ಸಾರಾಯಿ ದುರಂತಗಳು ನಡೆಯುತ್ತಿವೆ. ಮದ್ಯಪಾನ ನಿಷೇಧಿಸಿರುವುದರಿಂದ ಅಕ್ರಮ ಮದ್ಯತಯಾರಿಕೆ ಮತ್ತು ಮಾರಾಟ ವ್ಯಾಪಕವಾಗಿದ್ದು, ಜನರು ಅಕ್ರಮ ಸಾರಾಯಿ ಕುಡಿದು ಸಾಯುತ್ತಿದ್ದಾರೆ. ಇತ್ತೀಚಿನ ದುರಂತದಲ್ಲಿ ೪೨ ಜನರು ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ೧೨ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಗುಜರಾತ್ ಸರ್ಕಾರದ ಗೃಹ ಇಲಾಖೆಯು ಬೊಟಾಡ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕರಂರಾಜ್ ವಘೇಲಾ ಮತ್ತು ಅಹಮದಾಬಾದ್ ಗ್ರಾಮಾಂತರ ಎಸ್ಪಿ ವೀರೇಂದ್ರ ಸಿಂಗ್ ಯಾದವ್ ಅವರನ್ನು ವರ್ಗಾವಣೆ ಮಾಡಿದ ಒಂದು ದಿನದ ನಂತರ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಇಬ್ಬರು ಉಪ ಎಸ್ಪಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಹಮದಾಬಾದ್ ಮತ್ತು ಬೊಟಾಡ್ ಗ್ರಾಮಗಳಲ್ಲಿ ೪೨ ಜನರನ್ನು ಬಲಿತೆಗೆದುಕೊಂಡ ಸಾರಾಯಿ ದುರಂತದ ಕುರಿತಂತೆ ನ್ಯಾಯಾಂಕ ತನಿಖೆಗೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪಟ್ಟು ಹಿಡಿದಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ದುರಂತಗಳ ಸಂಖ್ಯೆ ಹೆಚ್ಚುತ್ತಿದೆ. ಅಪಾಯಕಾರಿ ಮೆಥನಾಲ್ ರಾಸಾಯನಿಕವನ್ನು ಸಾರಾಯಿಯೆಂದು ಅಕ್ರಮವಾಗಿ ಮಾರಾಟಮಾಡಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಕ್ಷಿಪ್ರಕ್ರಾಂತಿ ನಡೆಸಿ ಮುಖ್ಯಮಂತ್ರಿಯಾದ ಏಕನಾಥ್ ಶಿಂಧೆಗೆ ಬಿಜೆಪಿ ಬೆಂಬಲ ನೀಡಿದ್ದನ್ನು ಪ್ರಬಲವಾಗಿ ಟೀಕಿಸಿದ್ದ ಶಿವಸೇನಾ ನಾಯಕ ಸಂಜಯ್ ರಾವತ್ ಅವರನ್ನು ಇಡಿ ಕೊನೆಗೂ ವಶಕ್ಕೆ ಪಡೆದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಎರಡು ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮನೆಯಲ್ಲಿ ಶೋಧ ಮತ್ತು ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ ೭ ಗಂಟೆಗೆ, ತನಿಖಾ ಸಂಸ್ಥೆ ತಂಡವು ಸಿಐಎಸ್‌ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರದಲ್ಲಿರುವ ಬಂಡಪ್‌ನಲ್ಲಿರುವ ರಾವುತ್ ಅವರ ಮನೆಗೆ ತೆರಳಿ ಶೋಧ ನಡೆಸಿತು. ಮುಂಬೈನಲ್ಲಿ ಚಾಲ್‌ನ ಮರು-ಅಭಿವೃದ್ಧಿ ಮತ್ತು ಅವರ ಪತ್ನಿ ಮತ್ತು ನಿಕಟ ಸಹಚರರನ್ನು ಒಳಗೊಂಡಿರುವ ಸಂಬಂಧಿತ ವಹಿವಾಟುಗಳಿಗೆ ಸಂಬಂಧಿಸಿದಂತೆ ಇಡಿ ಪ್ರಶ್ನಿಸಿದ ನಂತರ ವಶಕ್ಕೆ ಪಡೆದಿದೆ. ‘ಸುಳ್ಳು ಕ್ರಮ, ಸುಳ್ಳು ಸಾಕ್ಷಿ…ನಾನು ಶಿವಸೇನೆಯನ್ನು ಬಿಡುವುದಿಲ್ಲ…ನಾನು ಸತ್ತರೂ ಶರಣಾಗುವುದಿಲ್ಲ…ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ …’ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.
ಬಂಗಾಲದಲ್ಲಿ ಭಾರಿ ನಗದಿನೊಂದಿಗೆ ಸಿಕ್ಕಿಬಿದ್ದಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ವಹಿಸಲಾಗಿದೆ. ಈ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ರಾಜ್ಯ ಸರ್ಕಾರ ಪತನವಾಗಲು ಮೂವರು ನಾಯಕರಿಗೆ ಹಣ ನೀಡಲಾಗಿದೆ ಎಂದು ಹೇಳುವ ಮೂಲಕ ನಗದು ಹಗರಣವನ್ನು ಬಿಜೆಪಿಗೆ ತಲೆಗೆ ಕಟ್ಟಲು ಕಾಂಗ್ರೆಸ್ ಯತ್ನಿಸಿತ್ತು.
ಆದರೆ ಈ ಹಣ ಜಾರ್ಖಂಡ್ ಮುಕ್ತಿ ಮೋರ್ಚಾ- ಕಾಂಗ್ರೆಸ್ ಮೈತ್ರಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ. ಪ್ರತಿ ಶಾಸಕರಿಗೆ ೧೦ ಕೋಟಿ ರೂ.ನೀಡುವ ಮೂಲಕ ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಬಂಧಿಸಲಾದ ತನ್ನ ಮೂವರು ಶಾಸಕರ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ತಲಾ ೧೦ ಕೋಟಿ ರೂ. ಆಮಿಷ ಒಡ್ಡಿದ ಆರೋಪದ ಮೇಲೆ ಪೊಲೀಸ್ ದೂರನ್ನು ಕಾಂಗ್ರೆಸ್ ದಾಖಲಿಸಿದೆ.
ಕೋಲ್ಕತ್ತಾದಲ್ಲಿರುವ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಗಳಿಂದ ವಶಪಡಿಸಿಕೊಂಡ ಕೋಟಿಗಟ್ಟಲೆ ನಗದು ಮತ್ತು ಕಿಲೋಗಟ್ಟಲೆ ಚಿನ್ನ ತನಗೆ ಸೇರಿದ್ದಲ್ಲವೇ ಅಲ್ಲ ಎಂದು ವಜಾಗೊಂಡಿರುವ ಬಂಗಾಳದ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ. ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಳಿಯ ವೇಳೆ ಮುಖರ್ಜಿ ಅವರಿಗೆ ಸೇರಿದ ಎರಡು ಮನೆಗಳಿಂದ ಸುಮಾರು ೫೦ ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿತ್ತು. ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಇಬ್ಬರನ್ನೂ ಈ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು. ಇದೀಗ ಪಾರ್ಥ ಅವರನ್ನು ಸಂಪುಟದಿಂದಷ್ಟೇ ಅಲ್ಲ ಪಕ್ಷದಿಂದಲೂ ಅಮಾನತು ಮಾಡಲಾಗಿದೆ. ತಮ್ಮ ವಿರುದ್ಧ ಯಾರೋ ಷಡ್ಯಂತ್ರ ನಡೆಸುತ್ತಿದ್ದರೆ, ಸಮಯ ಬಂದಾಗ ಎಲ್ಲವನ್ನೂ ತಿಳಿದುಕೊಳ್ಳುತ್ತೇನೆ ಎಂದು ಪಾರ್ಥ ಚಟರ್ಜಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಇಡಿ ಅಧಿಕಾರಿಗಳು ಕಾರ್ಯನಿರ್ವಹಿಸಲು ಪಶ್ಚಿಮಬಂಗಾಳ ಸರ್ಕಾರ ಅವಕಾಶ ನೀಡಿರಲಿಲ್ಲ ಎಂದು ದೂರಲಾಗಿತ್ತು. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಪ್ಪಿತಸ್ಥರು ಯಾರೇ ಆದರು ಶಿಕ್ಷೆಗೊಳಗಾಗುತ್ತಾರೆ ಎಂದು ಘೋಷಿಸಿ, ಪಾರ್ಧರನ್ನು ಸಂಪುಟದಿಂದ ವಜಾ ಮಾಡಿದ್ದರು.
ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…
• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…
ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…
• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…
ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಸುವ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ಹಿರಿಯರ ಮನೆ ಎಂದೇ ಕರೆಯಲಾಗುವ…