ಎಡಿಟೋರಿಯಲ್

ಆಂದೋಲನ 4ದಿಕ್ಕಿನಿಂದ :19 ಸೋಮವಾರ 2022

ಚೀತಾಗಾಗಿ ಕ್ರೆಡಿಟ್ ವಾರ್!

ದೇಶ ಎದುರಿಸುತ್ತಿರುವ ನಿರುದ್ಯೋಗ, ಬಡತನ, ಹಣದುಬ್ಬರ ಮತ್ತಿತರೆಲ್ಲ ಸಮಸ್ಯೆಗಳಿಗೆ ನಮೀಬಿಯಾದಿಂದ ಬಂದ ಚಿತಾಗಳೇ ಪರಿಹಾರದ ‘ಮಂತ್ರದಂಡ’ವೆಂಬಂತೆ ಮಾಧ್ಯಮಗಳು ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದನ್ನು ನೋಡಿ ಕಾಂಗ್ರೆಸ್ ಪಕ್ಷ ಕೆರಳಿದಂತಿದೆ. ಅದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಟ್ವೀಟು. ‘ಚೀತಾಗಳು ಭಾರತದಲ್ಲಿ ನಿರ್ಮಾಮವಾಗಿವೆ ಎಂದು ಘೋಷಿಸಿದ ನಂತರ ಅವುಗಳನ್ನು ಭಾರತಕ್ಕೆ ಮರು ಪರಿಚ––ಯಿಸಲು ದಶಕಗಳಿಂದ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆದಿಲ್ಲ’ ಎಂದು ಮೋದಿಯವರು ಟೀಕಿಸಿದ್ದರು. ಇದಕ್ಕೆ ಕೆರಳಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಾವು ಹಿಂದೆ ಬರೆದಿದ್ದ ಪತ್ರವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೈರಾಮ್ ರಮೇಶ್ ಅವರು ಹಂಚಿಕೊಂಡ ಪತ್ರವು ೨೦೦೯ ರಲ್ಲಿ ಬರೆದದ್ದು. ಯುಪಿಎ-೨ ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆಗಳನ್ನು ಹೊಂದಿದ್ದ ರಮೇಶ್, ಚೀತಾಗಳನ್ನು ಮರುಪರಿಚಯಿ–ಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಭಾರತದ ವನ್ಯಜೀವಿ ಟ್ರಸ್ಟ್‌ನ ಕಾರ್ಯನಿರ್ವಾಹಕರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.


ರಾಘವ್ ಚೆಡ್ಡ್ಡಗೆ ಗುಜರಾತ್ ಉಸ್ತುವಾರಿ!

ಆಮ್ ಆದ್ಮಿ ಪಕ್ಷದಲ್ಲಿ ಅರವಿಂದ್ ಕೇಜ್ರಿವಾಲ್ ನಂತರ ಬಹು ಜನಪ್ರಿಯ ನಾಯಕ ರಾಘವ್ ಚೆಡ್ಡ. ಯುವ ಸಮುದಾಯಗಳ ಆಶೋತ್ತರಗಳ ಪ್ರತಿನಿಧಿಯೆಂಬಂತಿರುವ ರಾಘವ್ ಚೆಡ್ಡ ಈಗ ಗುಜರಾತ್ ವಿಧಾನಸಭಾ ಚುನಾವಣೆಯ ಸಹ-ಉಸ್ತುವಾರಿ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸರ್ಕಾರವನ್ನು ನಿಭಾಯಿಸಿ–ಕೊಂಡು, ಕೇಂದ್ರ ಸರ್ಕಾರ ನಡೆಸುತ್ತಿರುವ ಇಡಿ, ಸಿಬಿಐ ಹಾಗೂ ಐಟಿ ದಾಳಿಯನ್ನು ಸಹಿಸಿಕೊಂಡು ಗುಜಾರಾತಿನಲ್ಲಿ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಘವ್ ಚೆಡ್ಡಗೆ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ರಾಘವ್ ಚೆಡ್ಡ ದೇಶದಲ್ಲಿನ ಯುವ ನಾಯಕರ ಪೈಕಿ ಅತ್ಯಂತ ಜನಪ್ರಿಯ. ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗದ್ದುಗೆಗೆ ಏರಲು ರಾಘವ್ ಚೆಡ್ಡ ಅವರ ಪ್ರಚಾರ ತಂತ್ರವೂ ಕಾರಣವಾಗಿತ್ತು. ಉಚಿತ ವಿದ್ಯುತ್, ಶಿಕ್ಷಣ, ಆರೋಗ್ಯ ಮತ್ತು ನೀರು ಒದಗಿಸುವ ಪಕ್ಷದ ಭರವಸೆಯನ್ನು ಜನರು ನಂಬುವ ರೀತಿಯಲ್ಲಿ ಪ್ರಚಾರ ಮಾಡಿದ್ದರು. ಪಂಜಾಬ್ ಯಶಸ್ಸಿನ ಹಿನ್ನೆಲೆಯಲ್ಲಿ ಈಗ ಗುಜರಾತ್ ಪ್ರಚಾರದ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.


ಪ್ರಾದೇಶಿಕ ಭಾಷೆ ಗೌರವಿಸಿ

ಇಂಡಿಗೊ ವಿಮಾನದಲ್ಲಿ ಇಂಗ್ಲಿಷ್ ಬಾರದ ಕಾರಣಕ್ಕೆ ಮಹಿಳೆಯೊಬ್ಬರನ್ನು ಅವರು ಕುಳಿತಿದ್ದ ಆಸನದಿಂದ ಎಬ್ಬಿಸಿದ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಆತ್ಮೀಯ ‘IndiGO6E ಮ್ಯಾನೇಜ್ಮೆಂಟ್, ಸ್ಥಳೀಯ ಭಾಷೆಗಳು ಮತ್ತು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಚೆನ್ನಾಗಿ ಮಾತನಾಡದ ಪ್ರಯಾಣಿಕರನ್ನು ಗೌರವಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ‘ಪ್ರಾದೇಶಿಕ ಮಾರ್ಗಗಳಲ್ಲಿ, ತೆಲುಗು, ತಮಿಳು, ಕನ್ನಡ ಮುಂತಾದ ಸ್ಥಳೀಯ ಭಾಷೆಗಳನ್ನು ಮಾತನಾಡಬಲ್ಲ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ. ಇದರಿಂದ ಎಲ್ಲರಿಗೂ ಒಳಿತಾಗಲಿದೆ’ ಎಂದು ಟಿ.ಕೆ.ರಾಮರಾವ್ ಸಲಹೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ವಿಜಯವಾಡ- ಹೈದರಾಬಾದ್ ಮಾರ್ಗದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿರುವ ಕೆಟಿಆರ್ ಸ್ಥಳೀಯ ಭಾಷೆಗಳನ್ನು ಗೌರವಿಸಲು ಪ್ರಾರಂಭಿಸಿ ಎಂದು ಸೂಚಿಸಿದ್ದಾರೆ. ಕೆಟಿಆರ್ ಟ್ವೀಟ್ ಬೆಂಬಲಿಸಿ ದಕ್ಷಿಣ ಭಾರತದ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.


ಅಭಿವೃದ್ಧಿಯ ದಿಕ್ಸೂಚಿ ಸರಕುಸಾಗಣೆ ನೀತಿ

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ರಾಷ್ಟ್ರೀಯ ಸರಕು ಸಾಗಣೆ ನೀತಿಯು ದೇಶದ ಆರ್ಥಿಕತೆ ಸುಸ್ಥಿರ ಪ್ರಗತಿಗೆ ಒತ್ತು ನೀಡಲಿದೆ. ಸರಕು ಸಾಗಣೆ ನಮ್ಮಲ್ಲಿ ದುಬಾರಿಯೇ. ಈಗಿನ ದರ ಸರಿ ಸುಮಾರು ಶೇ.೧೪-೧೫ರಷ್ಟಿದೆ. ಇದನ್ನು ಶೇ.೯– ಕ್ಕಿಂತ ಕೆಳ ಮಟ್ಟಕ್ಕೆ ತರುವುದು ಮುಖ್ಯ ಉದ್ದೇಶ. ಜತೆಗೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಸರಕು ಸಾಗಣೆ ವಲಯದ ಕೊಡುಗೆಯನ್ನು ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿಸುವುದು ನೂತನ ನೀತಿಯ ಪ್ರಮುಖ ಆದ್ಯತೆ ಆಗಿದೆ. ಸರಕು ಸಾಗಣೆ ದರ ತಗ್ಗಿಸದೇ ಆ ವಲಯದಿಂದ ಜಿಡಿಪಿಗೆ ಹೆಚ್ಚಿನ ಕೊಡುಗೆ ನಿರೀಕ್ಷಿಸಲಾಗದು. ಈ ನಿಟ್ಟಿನಲ್ಲಿ ಹೆದ್ದಾರಿ, ಬಂದರು, ವೈಮಾನಿಕ ಸಾಗಣೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ತಡೆರಹಿತ ಸಾಗಾಟಕ್ಕೆ ಒತ್ತು ನೀಡಬೇಕಿದೆ. ನೂತನ ನೀತಿ ಜಾರಿಯಾದರೆ ಸರಕು ಸಾಗಾಣಿಕೆ ವಿವಿಧ ವಲಯಗಳ ನಡುವೆ ಸಮನ್ವಯತೆ ಸಾಧ್ಯವಾಗಲಿದೆ. ಜತೆಗೆ ಹೆಚ್ಚು ಮೂಲಭೂತ ಸೌಲಭ್ಯಗಳು ಸೃಷ್ಟಿಯಾಗಲಿವೆ. ಆರ್ಥಿಕತೆ ಚೇತರಿಕೆಗೆ ಇದು ಪೂರಕವಾಗಲಿದೆ. ಇವೆಲ್ಲವೂ ರಫ್ತು ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲಿದ್ದು, ದೇಶದ ರಫ್ತು ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ.

andolana

Share
Published by
andolana

Recent Posts

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

10 mins ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

44 mins ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

1 hour ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

2 hours ago

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…

2 hours ago

ಕೈಗಾರಿಕಾ ವಲಯದ ಪ್ರಸ್ತಾವನೆಗಳಿಗೆ ಸಿಎಂ ಅನುಮೋದನೆ

ಬೆಂಗಳೂರು:  ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…

2 hours ago