1 ವರ್ಷದಲ್ಲಿ ೪೯೩ ಮಕ್ಕಳು ನಾಪತ್ತೆ !
ರಾಜ್ಯದಲ್ಲಿರುವ ಸಾಕಷ್ಟು ಬಾಲಮಂದಿರಗಳಲ್ಲಿ ೧ ವರ್ಷದ ಅವಧಿಯಲ್ಲಿ ಸುಮಾರು ೪೯೩ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಅದರಲ್ಲಿ ೧೯೯ ಮಕ್ಕಳ ಮಾಹಿತಿ ಈವರೆಗೂ ದೊರೆತಿಲ್ಲ ಎಂಬುದು ಆತಂಕಕಾರಿಯಾಗಿದೆ. ನಾಪತ್ತೆಯಾದ ಮಕ್ಕಳ ಪೈಕಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳಿಗೆ ನಮ್ಮ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ರಕ್ಷಣೆ ಇದೆ ಎಂಬುದಕ್ಕೆ ಸಾಕಷ್ಟು ಅನುಮಾನಗಳು ಉಂಟಾಗುವಂತೆ ಮಾಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವಂತಹ ಸಾಕಷ್ಟು ಬಾಲಮಂದಿರಗಳಿಂದ ಮಕ್ಕಳು ಕಾಂಪೌಂಡ್‌ಗಳನ್ನು ಜಿಗಿದು ಹೊರಗೆ ಓಡಿಹೋಗಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು ಇದಕ್ಕೆ ಬಾಲಮಂದಿರದ ಅವ್ಯವಸ್ಥೆಯೇ ಪ್ರಮುಖ ಕಾರಣ ಎನ್ನಬಹುದಾಗಿದೆ. ಆದ್ದರಿಂದ ಈ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಎಚ್ಚೆತ್ತು ತನ್ನ ವ್ಯಾಪ್ತಿಯಲ್ಲಿರುವ ಎಲ್ಲ್ಲ ಬಾಲಮಂದಿರಗಳನ್ನೂ ಕೂಡಲೇ ಪರಿಶೀಲಿಸಿ ಅಭಿವೃದ್ಧಿಪಡಿಸಬೇಕು. ಹಾಗೂ ಮಕ್ಕಳಿಗೆ ಅಲ್ಲಿ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು. ಪೊಲೀಸ್ ಇಲಾಖೆಯೂ ಎಚ್ಚೆತ್ತು ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ರಕ್ಷಣೆ ನೀಡಬೇಕು. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮವಹಿಸಿ ಮಕ್ಕಳ ಹಿತಕಾಯಬೇಕು.
-ಬಿ.ಎಂ.ಜಗದೀಶ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು.
ಬೋಗಾದಿ ರೈಲ್ವೆ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ
ಬೋಗಾದಿಯ ರೈಲ್ವೆ ಬಡಾವಣೆಯು ಸುಮಾರು ೪೦ ಎಕರೆಗಳಿಗಿಂತ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದ್ದು, ಹಳೆಯ ಬಡಾವಣೆಗಳಲ್ಲಿ ಒಂದಾಗಿದೆ. ಆದರೆ ಈ ಬಡಾವಣೆಯಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡಬೇಕಾಗಿದೆ. ಅಲ್ಲದೆ ರಸ್ತೆಯ ಅಂಚಿನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಚರಂಡಿಯಲ್ಲಿ ಹರಿಯಬೇಕಿದ್ದ ಕೊಳಚೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ಪಾದಚಾರಿಗಳಿಗೂ ತೀರಾ ಸಮಸ್ಯೆಯಾಗಿದೆ. ಆದ್ದರಿಂದ ಈ ಭಾಗದ ರಸ್ತೆಗಳಿಗೆ ಕೂಡಲೇ ಡಾಂಬರೀಕರಣ ಮಾಡಿ ಉತ್ತಮ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಹಾಗೂ ವಾಯು ವಿಹಾರಕ್ಕಾಗಿ ಈ ಬಡಾವಣೆಯಲ್ಲಿ ಒಂದು ಪಾರ್ಕ್ ನಿರ್ಮಾಣವಾಗಬೇಕು. ಈ ಬಡಾವಣೆಯಿಂದ ಮೈಸೂರು ನಗರ ಅಭಿವೃದ್ಧಿ ಪ್ರಾಽಕಾರಕ್ಕೆ ಲಕ್ಷಾಂತರ ರೂ. ಕಂದಾಯ ರೂಪದಲ್ಲಿ ಪ್ರತಿವರ್ಷ ಪಾವತಿಯಾಗುತ್ತಿದ್ದರೂ ಕೂಡ ಪ್ರಾಧಿಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಈ ಬಡಾವಣೆಯಲ್ಲಿ ನಡೆಯುತ್ತಿಲ್ಲ. ಈ ಸಂಬಂಧ ನಗರಾಭಿವೃದ್ಧಿ ಪ್ರಾಽಕಾರದ ನೂತನ ಅಧ್ಯಕ್ಷರು ಈ ಭಾಗದ ನಾಗರಿಕರ ಅನುಕೂಲಕ್ಕಾಗಿ ತಮ್ಮ ಆಡಳಿತಾವಽಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಲಿ.
-ಡಾ.ಬಿ.ಕೃಷ್ಣರಾಜ್, ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು.
ಕೊರೊನಾದಿಂದ ದೇಶವನ್ನು ರಕ್ಷಿಸೋಣ
ಕೊರೊನಾ ಸಂಕಷ್ಟದ ದಿನಗಳು ಮತ್ತೇ ಆರಂಭಗೊಳ್ಳುವ ಸೂಚನೆ ತಿಳಿದು ಎಲ್ಲರಿಗೂ ಆತಂಕ ಹೆಚ್ಚಾಗಿದೆ. ಕೊರೊನಾ ನಿಯಮಗಳ ಬಗ್ಗೆ ನಮಗೆ ಈಗಾಗಲೇ ಅರಿವಿದೆ. ಜಾರಿಯಾಗುವ ನಿಯಮಗಳನ್ನು ಪಾಲಿಸುವ ಮೂಲಕ ನಾವು ಕೊರೊನಾದಿಂದ ದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಸದ್ಯ ಲಸಿಕೆ ಬಗ್ಗೆ ಆರಂಭದಿಂದಲೂ ಜನರಿಗೆ ಸಾಕಷ್ಟು ಆತಂಕಗಳಿವೆ. ಅದರಲ್ಲಿಯೂ ಗ್ರಾಮಾಂತರ ಜನರೂ ಕೂಡ ಲಸಿಕೆಯೆಂದರೆ ಹಿಂದೆ ಸರಿಯುವುದುಂಟು. ಆದ್ದರಿಂದ ಆರೋಗ್ಯ ಇಲಾಖೆಯು ಲಸಿಕೆಯ ಬಗ್ಗೆ ಜನರಿಗೆ ನಂಬಿಕೆ ಬರುವಂತೆ ಮನದಟ್ಟು ಮಾಡಿಕೊಡಬೇಕು. ಪ್ರತಿಯೊಬ್ಬರಿಗೂ ಬೂಸ್ಟರ್ ಡೋಸ್ ಬಗ್ಗೆ ಮಾಹಿತಿ ನೀಡಬೇಕು ಜೊತೆಗೆ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು. ೬೦ ವರ್ಷ ಮೇಲ್ಟಟ್ಟ ಹಿರಿಯರು ಬೂಸ್ಟರ್ ಡೋಸ್ ಪಡೆಯದೇ ಹೋದರೆ ಈಗಾಗಲೇ ನಿಶ್ಯಕ್ತಿಯಿಂದ ಕೂಡಿದ ದೇಹವನ್ನು ಕೊರೊನಾ ಆಕ್ರಮಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಬೂಸ್ಟರ್ ಡೋಸ್ ಪಡೆಯುವತ್ತ ಗಮನ ನೀಡಬೇಕು. ಈಗ ಲಸಿಕೆಯನ್ನು ಮೂಗಿನ ಮೂಲಕವು ನೀಡುತ್ತಿದ್ದು, ಇದರ ಬಗ್ಗೆ ಸರಿಯಾದ ಅರಿವು ಮೂಡಿಸಿದರೆ ಇದು ಸಫಲತೆ ಕಾಣಲಿದೆ.
ಕೊರೊನಾ ಎಂಬುದು ಒಂದು ಸಾಂಕ್ರಾಮಿಕ ರೋಗವಾದ್ದರಿಂದ ಕುಟುಂಬದ ರಕ್ಷಣೆ ಬಗ್ಗೆ ಎಚ್ಚರಿಕೆ ಅಗತ್ಯ. ಚುನಾಯಿತ ಪ್ರತಿನಿಽಗಳು ಕೊರೊನಾ ವಿಷಯದ ಬಗ್ಗೆ ರಾಜಕೀಯ ಮಾಡದೆ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ನಿರ್ಬಂಧಿಸುವ ಮೂಲಕ ದೇಶದ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು.
-ಎಂ.ಎಸ್.ಉಷಾ ಪ್ರಕಾಶ್, ಬಿ.ಎಂ.ಕಾಲೋನಿ, ಮೈಸೂರು.
ನಂಜನಗೂಡು : ಇತ್ತೀಚಿನ ದಿನಗಳಲ್ಲಿ ನಂಜನಗೂಡಿನ ಕಾಡಂಚಿನ ಭಾಗಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕಾಡಾನೆಗಳಿಂದ ತಮ್ಮ ಕೃಷಿ ಉಳಿಸುವ ಜೊತೆಗೆ…
ಚಾಮರಾಜನಗರ : ಅಗ್ನಿ ಅವಘಡ ಸಂಭವಿಸಿ ಹತ್ತಾರು ಅಂಗಡಿ ಮಳಿಗೆಗಳು ಸುಟ್ಟು ಭಸ್ಮ ಆಗಿರುವ ಘಟನೆ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ…
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವುದು ೨೦೨೮ ಏಪ್ರಿಲ್/ಮೇ ತಿಂಗಳಲ್ಲಿ, ಅಂದರೆ ಸುಮಾರು, ಇನ್ನು ಎರಡೂವರೆ ವರ್ಷಗಳ ಬಳಿಕ. ಆದರೆ…
ರಾಜ್ಯದಲ್ಲಿ ಪರೀಕ್ಷೆಗಳೆಂದರೆ ಸೋರಿಕೆಗಳ ಸರಣಿ ಎಂಬಂತಾಗಿರುವುದು ದುರದೃಷ್ಟಕರ. ಈ ಬಾರಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ೮೦ ಅಂಕಗಳ…
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…