ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 05 ಗುರುವಾರ 2023

ಆಂದೋಲನ ಓದುಗರ ಪತ್ರ

ಜ್ಞಾನಯೋಗಿ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ

ತಮ್ಮ ಪ್ರವಚನ, ಆಚಾರ-ವಿಚಾರಗಳು, ನಡೆ-ನುಡಿಗಳ ಮೂಲಕವೇ ಸಮಾಜಕ್ಕೆ ಜ್ಞಾನದ ಸಂದೇಶದವನ್ನು ಸಾರಿದವರು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು. ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಂತೆಯೇ ‘ನಡೆದಾಡುವ ದೇವರು’ ಎಂದೇ ಜನರ ಮನಸ್ಸಿನಲ್ಲಿ ನೆಲೆಯಾಗಿದ್ದ ಮಹಾನ್ ಚೇತನವನ್ನು ಕಳೆದುಕೊಂಡು ಸಮಾಜ ಅನಾಥವಾದಂತಾಗಿದೆ. ಕಿಸೆ ಇಲ್ಲದ ಅಂಗಿಯನ್ನುಟ್ಟು ಇಲ್ಲಿ ನನ್ನದು ಎಂಬುದು ಏನು ಇಲ್ಲ ಎಂಬ ಸಂದೇಶವನ್ನು ಜಗಕ್ಕೆ ಸಾರಿದವರು. ಕಾವಿ ಧರಿಸಲಿಲ್ಲ ಆದರೂ ಮಹಾ ಸ್ವಾಮೀಜಿಗಳಾಗಿ ಕೋಟ್ಯಂತರ ಜನರ ಮಾರ್ಗದರ್ಶಕರಾಗಿ ಜ್ಞಾನದ ಬೆಳಕು ನೀಡಿದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು. ಜೀವನದಲ್ಲಿ ಯಾವುದಕ್ಕೂ ಆಸೆ ಪಡೆದೆ, ಆಡಂಬರದ ಬದುಕು ಕಾಣದೇ ನುಡಿದಂತೆ ನಡೆದು ಸರಳತೆಯಲ್ಲೇ ಸುಖವನ್ನು ಕಂಡವರು ಶ್ರೀ ಸಿದ್ದೇಶ್ವರ ಸ್ವಾಮೀಜಿ. ‘ಹೃದಯ ಸ್ವಚ್ಛವಿರಲಿ, ತಲೆ ಖಾಲಿ ಇರಲಿ’ ಎಂಬ ಅವರ ಮಾತಿನಿಂತೆೆಯೇ ಬದುಕಿ ತೋರಿಸಿದ ನಿಜವಾದ ಸಂತ ಅವರು.

ಸಂತ ಸಿದ್ದೇಶ್ವರರು ಎಲ್ಲರನ್ನೂ ಸಮಾನವಾಗಿ ಗೌರವಿಸುವ ಮೂಲಕ ಸಮಾಜದಲ್ಲಿರುವ ಮೇಲು-ಕೀಳು ತಾರತಮ್ಯವನ್ನು ಕಿತ್ತೊಗೆಯಲು ಶ್ರಮಿಸಿದರು. ಹಣ, ಗೌರವ, ಪ್ರಶಸ್ತಿಗಳಿಗೆ ಎಂದೂ ಆಸೆಪಡದೆ ಸರಳ ಬದುಕನ್ನೊಂದೇ ಜೀವನದ ಅಸ್ತ್ರ ಮಾಡಿಕೊಂಡು ಬದುಕಿ ತೋರಿಸಿದವರು . ಜೀವನದಲ್ಲಿ ಅವರ ಜ್ಞಾನದಿಂದ ಅಪಾರ ಅನುಯಾಯಿಗಳನ್ನು ಸಂಪಾದಿಸಿದ್ದರು. ಅವರ ಶಾಶ್ವತ ಅಗಲಿಕೆ ಅತ್ಯಂತ ವಿಷಾದನೀಯ.

-ಅಹಲ್ಯ ಅಪ್ಪಚ್ಚು, ಸೋಮವಾರಪೇಟೆ, ಕೊಡಗು ಜಿಲ್ಲೆ.


ಶ್ರೀ ಸಿದ್ದೇಶ್ವರ ಸ್ವಾಮೀಜಿ ಎಂದರೆ ಜ್ಞಾನದ ಸಿದ್ಧಿ

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನವೆಂದರೇ ಅದೊಂದು ಜ್ಞಾನದ ಸಾಗರ. ಅವರ ಪ್ರವಚನವೆಂದರೇ ಅಲ್ಲಿ ಲಕ್ಷಾಂತರ ಜನರ ನಿಶ್ಯಬ್ದದಿಂದ ಕುಳಿತು ಆಲಿಸಿ ಅಪಾರ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಿದ್ದರು. ಪ್ರವಚನ ಕೇಳಿ ಉತ್ತಮ ಬದುಕು ಕಂಡವರು, ಜೊತೆಗೆ ಅವರ ಮಾರ್ಗದರ್ಶನದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಜೀವನ ಸಾಗಿಸುತ್ತಿರುವವರು ಸಮಾಜದಲ್ಲಿ ಲಕ್ಷಾಂತರ ಮಂದಿ ಇದ್ದಾರೆ. ಅದರಲ್ಲಿ ನಾನೂ ಒಬ್ಬ. ನನ್ನಂತಹವರಿಗೆಲ್ಲ ಶ್ರೀ ಸಿದ್ದೇಶ್ವರರು ಎಂದರೇ ಜ್ಞಾನದ ಸಂಪತ್ತು. ಸರಳತೆಯ ಜೀವನದ ಸಂದೇಶ ಸಾರಿ ಅದರಂತೆೆಯೇ ಬದುಕಿ ತೋರಿಸಿದವರು ಶ್ರೀ ಸಿದ್ದೇಶ್ವರರು. ನನ್ನದೆಂಬುದು ಏನೂ ಇಲ್ಲ ಎಂದು ಹಣ, ಪ್ರಶಸ್ತಿಗಳಿಗೆ ಆಸೆ ಪಡದೆ, ಸಮಾಜದ ಏಳಿಗೆಗಾಗಿ ದುಡಿದ ಸಂತರು. ಸರಳ ಸಜ್ಜನಿಕೆಯ ಸಾಕಾರಮೂರ್ತಿಾಂಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ನಮಗೆಲ್ಲರಿಗೂ ಆದರ್ಶನೀುಂ. ಸದಾ ಬಿಳಿುಂಂಗಿಯಿಂದಲೇ ಶಾಂತಿ ಮತ್ತು ಪ್ರೀತಿಯ ಸಂದೇಶ ನೀಡಿದ ಮಹಾನ್ ಸಂತ ಎಂದರೆ ಅತಿಶಯೋಕ್ತಿಯಲ್ಲ. ಪ್ರವಚನದ ಮೂಲಕವೇ ಮನುಷ್ಯ ಜನ್ಮದ ಗುರಿ ಮತ್ತು ಉದ್ದೇಶಗಳನ್ನು ತಿಳಿಸುತ್ತಿದ್ದ ಅವರು ಮಾದರಿ ಸ್ವಾಮೀಜಿಯಾಗಿದ್ದರು.
ಶ್ರೀ ಸಿದ್ದೇಶ್ವರ ಶ್ರೀಗಳು ನಮಗೆ ನೀಡಿರುವ ಸಂದೇಶಗಳನ್ನು ಕೇವಲ ಮಾತಿನಲ್ಲಿ ಅನುಸರಿಸದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಪ್ರವಚನದ ಸಾಲಿನಂತೆೆಯೇ ಸರ್ವರನ್ನು ಪ್ರೀತಿಸುವ ಮತ್ತು ಸರಳವಾಗಿ ಬದುಕುವ ಧ್ಯೇಯವನ್ನು ಇಂದಿನ ಯುವ ಸಮೂಹ ಕಲಿಯಬೇಕು. ಇದುವೇ ನಾಡಿನ ಶ್ರೇಷಸಂತನಿಗೆ ನಾವು ನೀಡುವ ಗೌರವವಾಗಿದೆ.

-ಎಲ್.ಪಿ.ಪವನ್ ಕುಮಾರ್, ಕೊಡಗು.


ಸಾಹಿತ್ಯ ಸಮ್ಮೇಳನ ಗಡಿಭಾಗದ ಕನ್ನಡಿಗರ ರಕ್ಷಣೆಗೆ ಪೂರಕವಾಗಲಿ

ಉತ್ತರ ಕರ್ನಾಟಕದ ಹೆಬ್ಬಾಗಿಲು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕರ ನಾಡು ಹಾವೇರಿಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಗಡಿನಾಡ ಕನ್ನಡಿಗರ ಧ್ವನಿಯಾಗುವ ಕೆಲಸವನ್ನು ಮಾಡಬೇಕಿದೆ. ಕನ್ನಡ ಭಾಷಿಕರೇ ಹೆಚ್ಚಾಗಿರುವ ಮಹಾರಾಷ್ಟ್ರದ ಜತ್ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಪರಿಹರಿಸಲು ಮುಂದಾಗಿದೆ. ಇದರಿಂದ ಜತ್ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರಬೇಕು ಎಂದು ನಿರ್ಧರಿಸಿ ಅಲ್ಲಿನ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿವೆ. ಇದರಿಂದಾಗಿ ಅಲ್ಲಿನ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕಿರುಕುಳ ನೀಡಲು ಆರಂಭಿಸಿದೆ.

ಇನ್ನು ಗೋವಾ ರಾಜ್ಯದ ಕನ್ನಡಿಗರ ಪರಿಸ್ಥಿತಿಯುಇದೇ ಆಗಿದೆ. ಬೈನಾದಲ್ಲಿ ವಾಸವಾಗಿರುವ ಸಾವಿರಾರು ಕನ್ನಡಿಗರ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಆಗಬೇಕಾಗಿದೆ. ಹಾಗೂ ಕಾಸರಗೋಡಿನ ಕನ್ನಡ ಶಾಲೆಗಳಿಗೆ ಕೇರಳ ಸರ್ಕಾರ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಿರುವುದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಇದೇ ತಿಂಗಳ 6ರಿಂದ 8 ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರರಾಜ್ಯದಲ್ಲಿರುವ ನಮ್ಮವರ ರಕ್ಷಣೆ ಕೂಡ ನಮ್ಮದೇ ಹೊಣೆ ಎಂಬುದನ್ನು ಸರ್ಕಾರಕ್ಕೆ ನೆನಪಿಸಿ, ಆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.

-ಎಚ್.ಪಿ.ಹೃತೀನ್, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ, ಮೈಸೂರು


ಮೈಸೂರು- ಬೆಂಗಳೂರು ಹೆದ್ದಾರಿಗೆ ನಾಲ್ವಡಿ ಹೆಸರು ಸೂಕ್ತ

ಮೈಸೂರು ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು ನಾಮಕರಣ ಮಾಡುವಂತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರು ಮನವಿ ಮಾಡಿದ್ದು, ಅವರ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಾಲ್ವಡಿಯವರ ಹೆಸರನ್ನು ಇಡಬೇಕು ಎಂಬುದು ಸಾಕಷ್ಟು ಜನರ ಬೇಡಿಕೆಯಾಗಿದೆ. ಮೈಸೂರಿಗೆ ನಾಲ್ವಡಿಯವರ ಕೊಡುಗೆ ಅಪಾರವಾಗಿದೆ. ಮಂಡ್ಯ, ಮೈಸೂರು, ಬೆಂಗಳೂರು ನಗರಗಳು ಇಂದು ಸಮೃದ್ಧವಾದ ನೀರನ್ನು ಕಾಣತ್ತಿವೆ ಎಂದರೇ ಅದಕ್ಕೆ ನಾಲ್ವಡಿಯವರ ಕಾಲದಲ್ಲಿ ನಿರಾಣವಾದ ಕೃಷ್ಣರಾಜ ಸಾಗರ ಅಣೆಕಟ್ಟೆಯೇ ಕಾರಣವಾಗಿದೆ.
ತಮ್ಮ ಆಡಳಿತದಲ್ಲಿ ಬಹುಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದ ನಾಲ್ವಡಿ ಅವರು, ಬಹುಜನರ ಸಮಸ್ಯೆಯನ್ನು ಆಲಿಸಿ ಅವುಗಳನ್ನು ಪರಿಹರಿಸುವ ಮೂಲಕ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯದವರು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮೊದಲ ಅರಸ ಎಂದರೆ ತಪ್ಪಾಗಲಾರದು. ನವ ಮೈಸೂರಿನ ನಿರ್ಮಾತೃ, ನಾಡು-ನುಡಿ ಮತ್ತು ದಲಿತರ ಏಳಿಗೆಗೆ ದುಡಿದ ಅರಸ. ಸಮಾಜದ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಿ ಎಲ್ಲ ಸಮುದಾಯದವರಿಗೂ ಶಿಕ್ಷಣವನ್ನು ನೀಡುವ ಮೂಲಕ ತಮ್ಮ ಪ್ರಜೆಗಳ ಏಳಿಗೆಗೆ ದುಡಿದವರು. ಆದ್ದರಿಂದ ಇಂತಹ ಮಹನೀಯರ ಹೆಸರನ್ನು ಹೆದ್ದಾರಿಗೆ ಇಡುವುದು ಅತ್ಯಂತ ಸೂಕ್ತವೆನಿಸುತ್ತದೆ.

-ಎಸ್.ಮಹೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.

andolanait

Share
Published by
andolanait

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

22 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

3 hours ago