ಹೊಸ ವರ್ಷಕ್ಕೆ ತೈಲ ಬೆಲೆ ಇಳಿಕೆ?
೨೦೨೩ಕ್ಕೆ ಮತ್ತಷ್ಟು ತೈಲ ಬೆಲೆ ಇಳಿಯುವ ಸೂಚನೆಗಳು ಜಾಗತಿಕ ತೈಲ ಮಾರುಕಟ್ಟೆಯ ವರ್ತಮಾನಗಳಿಂದ ಕಂಡು ಬರುತ್ತಿದೆ. ಅದರಲ್ಲೂ ಒಪೆಕ್ ರಾಷ್ಟ್ರಗಳ ನಿರ್ಧಾರವು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಒಂದೆಡೆ, ಒಪೆಕ್ ರಾಷ್ಟ್ರಗಳು ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಪ್ರತಿ ದಿನಕ್ಕೆ ಕಚ್ಚಾ ತೈಲ ಉತ್ಪಾದನೆಯನ್ನು ೭,೧೦,೦೦೦ ಬ್ಯಾರೆಲ್‌ಗಳಷ್ಟು ಕಡಿತ ಮಾಡಿದ್ದವು. ಮತ್ತೊಂದೆಡೆ, ರಷ್ಯಾದ ತೈಲ ಬಾವಿಗಳಲ್ಲಿ ಉತ್ಪಾದನೆ ಹೆಚ್ಚಾ ಯಿತು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಂಚ್ ಮಾರ್ಕ್ ಬೆಲೆಗಳ ಇಳಿಕೆಗೆ ಕಾರಣವಾಯಿತು. ಇದು ಹೊಸ ವರ್ಷದವರೆಗೂ ಮುಂದು ವರಿಯುವ ಲೆಕ್ಕಾಚಾರಗಳಿವೆ. ಆದರೆ, ಸತತ ೨೫೦ನೇ ದಿನವೂ ಭಾರತೀಯ ಮಾರು ಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮಹಿಳೆಯರ ಆರೋಗ್ಯಕ್ಕೆ ಸ್ಮಾರ್ಟ್ ವಾಚ್
ದೇಶದ ಜನಪ್ರಿಯ ಕಂಪೆನಿಗಳಲ್ಲಿ ಒಂದಾದ ‘ಸಿಸ್ಕಾ’ ತನ್ನ ಅಕ್ಸೆಸರೀಸ್ ಹೆಸರಿನಲ್ಲಿ ‘ಸಿಸ್ಕಾ ಡೊನ್ನಾ ಎಸ್‌ಎಸ್ ಡಬ್ಲ್ಯು ೧೦೬’ ಸ್ಮಾರ್ಟ್ ವಾಚ್ ಅನ್ನು ಕೆಲವು ದಿನಗಳ ಹಿಂದೆ ಮಾರುಕಟ್ಟೆಗೆ ತಂದಿದೆ.
ಈ ವಾಚ್ ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಈ ವಾಚ್ ಅನ್ನು ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿದೆ.
ಸ್ಮಾರ್ಟ್‌ವಾಚ್‌ನಲ್ಲಿ ಮಹಿಳೆಯರಿಗಾಗಿ ಗರ್ಭಧಾರಣೆಯ ಟ್ರಾಕಿಂಗ್ ಅನ್ನು ಸಂಯೋಜಿಸಿದೆ. ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರು ಆರೋಗ್ಯವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿಗಳನ್ನು ನೀಡುತ್ತದೆ.
ಯುಕೆಯಲ್ಲೂ ವಿವೇಕ್ ಪ್ಲಾಗಿಂಗ್
ಪ್ಲಾಗಿಂಗ್ ಮೂಲಕ ಕಸ ಹೆಕ್ಕುವ ಹೊಸ ಸಂಪ್ರದಾಯ ಹುಟ್ಟು ಹಾಕಿ ಬಹು ಮಾನ ಪಡೆದಿರುವ ಭಾರತ ಮೂಲದ ವಿವೇಕ್ ಗುರವ್ ಅವರ ಪ್ರಯತ್ನಕ್ಕೆ ಯುಕೆಯಲ್ಲಿ ಉತ್ತಮ ಸ್ಪಂದನೆ ಕಂಡು ಬಂದಿದೆ. 2018ರಲ್ಲಿ ಪುಣೆಯಲ್ಲಿ ಜಾಗಿಂಗ್ ಜತೆ ಜತೆಗೆ ಪುಟ್ಟ ಕೋಲುಗಳನ್ನು ಬಳಸಿ ಕಸ ಹೆಕ್ಕುವ ಸಂಪ್ರದಾಯ ಹುಟ್ಟುಹಾಕಿದ್ದ ವಿವೇಕ್ ಅದಕ್ಕೆ ಪ್ಲಾಗಿಂಗ್ ಎಂದು ಹೆಸರಿಟ್ಟಿದ್ದರು. ಈಗ ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿರುವ ಅವರು ಯುಕೆಯ ಡರ್ಬಿ, ಮ್ಯಾಂಚೆಸ್ಟರ್, ಲೀಡ್ಸ್ ಸಹಿತ ೩೦ ಪ್ರಮುಖ ನಗರಗಳಲ್ಲಿ ಇದನ್ನು ವಿಸ್ತರಿಸಲು ಮುಂದಾಗಿದ್ದಾರೆ. ಈಗಾಗಲೇ ಲಂಡನ್‌ನಲ್ಲಿ ಹಲವರು ವಿವೇಕ್ ಅವರ ಪ್ಲಾಗಿಂಗ್‌ಗೆ ಸಾಥ್ ನೀಡಿದ್ದಾರೆ.
ವಾಸ್ತುಶಿಲ್ಪದ ಹೊಸ ಹೊಳಲು
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿರುವ ಲಕ್ಷ್ಮೀನಾರಾಯಣ ದೇಗುಲ ನಮ್ಮ ಐತಿಹಾಸಿಕ ಪರಂಪರೆಯ ಮಹತ್ವವನ್ನು ಸಾರುತ್ತದೆ. ಇಡೀ ದೇಗುಲದ ವಾಸ್ತುಶಿಲ್ಪವು ಮನೋಜ್ಞವಾಗಿದ್ದು, ಭಾರತೀಯ ವಾಸ್ತುಶಿಲ್ಪ ವನ್ನು ಜಗತ್ತಿಗೆ ಸಾರುವಂತಿದೆ. ಈ ದೇಗುಲವು ಹೊಯ್ಸಳ ಶೈಲಿಯಿಂದ ಕೂಡಿದ್ದು, ಸುಂದರ ಕೆತ್ತನೆಯಿಂದಲೇ ಪ್ರವಾಸಿಗರ ಗಮನ ಸೆಳಯುತ್ತಿದೆ. ದೇಗುಲದ ಹೊರ ಆವರಣ, ಒಳಾಂಗಣದ ಒಟ್ಟಾರೆ ವಿನ್ಯಾಸ ಕಲಾವಿದನ ಶ್ರೇಷ್ಠತೆಯನ್ನು ಸಾರುವುದಂತೂ ನಿಜ. ಮೂರು ಗೋಪುರಗಳು ಸೇರಿ ಒಂದು ಮಂದಿರವಾಗಿರುವುದು ವಿಶೇಷವಾಗಿ ಕಂಡು ಬರುತ್ತದೆ. ಕೆ.ಆರ್.ಪೇಟೆಯಿಂದ ೮. ಕಿ.ಮೀ.,ಮಂಡ್ಯದಿಂದ ೬೧ ಕಿ. ಮೀ .ಹಾಗೂ ಮೈಸೂರಿನಿಂದ ೬೧ ಕಿ.ಮೀ . ದೂರದಲ್ಲಿದೆ.
ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು…
ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…
ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…
ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ…
ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…