ಎಡಿಟೋರಿಯಲ್

ಆಂದೋಲನ ಓದುಗರಪತ್ರ : 06 ಶನಿವಾರ 2022

ಕುಲಪತಿ- ಕುಲಸಚಿವ ಮಾರಾಮಾರಿ ನಾಚಿಕೆಗೇಡು

ದೇಶದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕರಾವಿಮು)ಕ್ಕೆ ತನ್ನದೇ ಆದ ಗೌರವ ಇದೆ. ಆದರೆ ಆ.೨ ರಂದು ಕರಾಮುವಿ ಕುಲಪತಿ – ಕುಲಸಚಿವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇದು ಕರಾಮುವಿ ಶೋಚನೀಯ ಪರಿಸ್ಥಿತಿಯಾಗಿದೆ. ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕಿದ್ದ, ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳೇ ಗೂಂಡಾಗಳ ರೀತಿ ಹೊಡೆದಾಡಿಕೊಂಡು ಪೋಲಿಸ್ ಠಾಣೆ ಮೆಟ್ಟಿಲೇರಿರುವುದು ರಾಜ್ಯ ಶಿಕ್ಷಣ ವ್ಯವಸ್ಥೆೆುೀಂ ನಾಚಿಕೆಪಡುವಂತಹ ಸಂಗತಿ. ರಾಜ್ಯಪಾಲರು ಈ ಕೃತ್ಯದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.
– ಮಣಿಕಂಠ ತ್ರಿಶಂಕರ್, ಪತ್ರಿಕೋದ್ಯಮ ವಿದ್ಯಾರ್ಥಿ, ಮೈಸೂರು.


ಪಾಲಿಸ್ಟರ್ ಧ್ವಜ ಪರಿಸರಕ್ಕೆ ಹಾನಿಕರ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗ’ (ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ) ಹೆಸರಿನಲ್ಲಿ ಮೂರು ದಿನಗಳು ರಾಷ್ಟ್ರಧ್ವಜ ಹಾರಿಸಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ನೀಡಿದ್ದಾರೆ. ಮೊದಲಿದ್ದ ಖಾದಿಯ ವಸ್ತ್ರದಿಂದ ತಯಾರಿಸಿದ್ದು ಮಾತ್ರವಲ್ಲದೆ, ಬದಲಿಗೆ ಪಾಲಿಸ್ಟರಿನ ಬಾವುಟಗಳಿಗೂ ಆಸ್ಪದವಿತ್ತಿದ್ದಾರೆ. ಪರಿಸರ ಕಾಳಜಿ ಇರಬೇಕಾದ ಈ ಕಾಲದಲ್ಲಿ ಇದು ಸರಿೆುಂ? ಆ.೧೩, ೧೪ ಮತ್ತು ೧೫ರಂದು ಧ್ವಜಗಳನ್ನು ಮನೆಗಳ ಮೇಲೆ/ಎದುರು ಹಾರಿಸುವುದಕ್ಕೆ ಅವಕಾಶ ನೀಡಿದ್ದಾರೆ.

ಮೂರು ದಿನಗಳು ಕಳೆದ ಮೇಲೆ ಧ್ವಜವನ್ನು ತೆರವುಗೊಳಿಸಿದ ನಂತರ ಜನರು ಅದನ್ನು ತ್ಯಾಜ್ಯವೆಂದು ಬಗೆದು ಬಿಸಾಡುವ ಸಾಧ್ಯತೆೆುೀಂ ಹೆಚ್ಚು. ಇದರಿಂದ ರಾಷ್ಟ್ರ ಧ್ವಜಕ್ಕೆ ಇನ್ನಷ್ಟು ಅಪಮಾನ ಮಾಡಿದಂತಾಗುತ್ತದೆ. ಅಲ್ಲದೆ, ಪರಿಸರಕ್ಕೆ ಹೊರೆ. ಯಾವುದಾದರೂ ಸಂಘ-ಸಂಸ್ಥೆಯು ಬಾವುಟಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಹಂಚಿದರೆ, ಸ್ವಾತಂತ್ರ್ಯ ದಿವಸದ ಒಂದು ದಿನ ಮಾತ್ರ ಧ್ವಜ ಹಾರಿಸುವುದು ಉತ್ತಮ. ತರುವಾಯ ಅದೇ ಸಂಸ್ಥೆಗಳು ಬಾವುಟಗಳನ್ನು ಹಿಂಪಡೆಯುವಂತೆ ಸೂಚಿಸಬೇಕು. ಅದರಿಂದ ಪರಿಸರ ಹಾನಿಯನ್ನು ತಪ್ಪಿಸಬಹುದು.
-ಡಿ.ವಿ.ಮೋಹನ್ ಪ್ರಕಾಶ್, ಗೋಕುಲ ಮುಖ್ಯ ರಸ್ತೆ, ಮೈಸೂರು.


ಮೇಟಗಳ್ಳಿ ಬಡಾವಣೆಯಲ್ಲಿ ರಸ್ತೆಯಲ್ಲೇ ಕೆಸರು ಗದ್ದೆ!

ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಮೇಟಗಳ್ಳಿಯಲ್ಲಿ ಮನೆಗಳ ಮುಂದೆ ದಿಢೀರ್ ಕೆಸರು ಗದ್ದೆ ನಿರ್ಮಾಣವಾಗಿದೆ. ಇಲ್ಲಿ ಪೈರು ನೆಟ್ಟರೆ ಒಂದೆರಡು ದಿನಗಳಲ್ಲೇ ಹುಲುಸಾಗಿ ಬೆಳೆದೀತು. ಪ್ರತಿ ಸಲ ಮಳೆಗಾಲದಲ್ಲಿ ಇಲ್ಲಿನ ಪ್ರತಿೊಂಂದು ರಸ್ತೆಗೂ ಇಂತಹ ದುಸ್ಥಿತಿ ಬರುವುದು ನಿಯಮ ಎಂಬಂತಾಗಿಬಿಟ್ಟಿದೆ. ಈ ಬಡಾವಣೆಯಲ್ಲೇ ನಗರಪಾಲಿಕೆ ಸದಸ್ಯರೊಬ್ಬರ ಮನೆಯೂ ಇದೆ. ಆದರೆ ಈ ರಸ್ತೆಯಲ್ಲಿ ಗದ್ದೆ ನಿರ್ಮಾಣವಾಗುವ ಸಮಸ್ಯೆಯನ್ನು ನಿವಾರಿಸಲು ಕಿಂಚಿತ್ತೂ ಪ್ರಯತ್ನ ಮಾಡುತ್ತಿಲ್ಲ. ಈಗಲಾದರೂ ಸಂಬಂಧಪಟ್ಟವರು ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಗಮನಹರಿಸಬೇಕು.
-ಎಂ. ವಿಧು ವೀರೇಂದ್ರ, ಮಹಾರಾಜ ಕಾಲೇಜು, ಮೈಸೂರು.


ಕಾಲೇಜು ಮಟ್ಟದಲ್ಲಿ ತಾಯಿ ಹಾಲಿನ ಬಗ್ಗೆ ಜಾಗೃತಿ ಮೂಡಿಸಲಿ

ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿರ್ದೇಶಕರಾದ ಡಾ.ಬಿ.ಎಸ್.ಪುಷ್ಪಲತ ಅವರು ವನಿತೆ ಮಮತೆ (ಆಂ., ಆ.೨) ವಿಶೇಷ ಪುಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬರೆದಿರುವ ಲೇಖನ ಮಹಿಳೆಯರಿಗೆಲ್ಲಾ ತುಂಬಾ ಉಪಯುಕ್ತವಾಗಿದೆ. ತಾಯಿಯ ಎದೆ ಹಾಲಿನ ಮಹತ್ವವನ್ನು ಗರ್ಭಿಣಿಯರಗಷ್ಟೇ ಅಲ್ಲದೇ ಕಾಲೇಜು ಮಟ್ಟದಲ್ಲಿ ಯುವತಿಯರಿಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದರಿಂದ ಸಮಾಜಕ್ಕೆ ಆರೋಗ್ಯವಂತ ಮಕ್ಕಳು ದೊರೆಯುತ್ತಾರೆ. ದೂರದರ್ಶನ ಚಂದನ ವಾಹಿನಿಯಲ್ಲಿ ಆ.೩ ರಂದು ಟಿ.ವಿ.ಡಾಕ್ಟರ್ ಕಾರ್ಯಕ್ರಮದಲ್ಲಿ ಡಾಕ್ಟರ್ ಪುಷ್ಪಲತಾ ಅವರು ನೇರ ಪ್ರಸಾರದಲ್ಲಿ ಭಾಗವಹಿಸಿ ತಾಯಿ ಎದೆ ಹಾಲಿನ ಮಹತ್ವವನ್ನು ಚೆನ್ನಾಗಿ ವಿವರಿಸಿದರು. ಅವರಿಗೆ ಅಭಿನಂದನೆಗಳು.
-ಎಂ.ಎಸ್.ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು.

andolana

Recent Posts

ಕೃಷಿ ಜತೆಗೆ ಬೃಹತ್ ಕೈಗಾರಿಕಾ ಬೆಳವಣಿಗೆ ಅಗತ್ಯ; ಜಯಕುಮಾರ್

ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…

5 mins ago

ಕುವೈತ್‌ ಭೇಟಿ: ಅರೇಬಿಯನ್‌ ಗಲ್ಫ್‌ ಕಪ್‌ ಉದ್ಘಾಟನೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ

ಕುವೈತ್‌/ನವದೆಹಲಿ: 26ನೇ ಅರೇಬಿಯನ್‌ ಗಲ್ಫ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್‌ ದೊರೆ ಶೇಖ್‌ ಮಿಶಾಲ್‌…

12 mins ago

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ

371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…

12 mins ago

ಬಿಜೆಪಿಗೆ ಆತಂಕ ತಂದ ಶಾ ಅಂತರಾಳದ ಮಾತು

‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…

24 mins ago

ವೈಜ್ಞಾನಿಕ ಕಸ ವಿಲೇವಾರಿಗೆ ಜಾಗದ ಸಮಸ್ಯೆ

ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…

35 mins ago

ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಹಲವು ಸಮಸ್ಯೆಗಳು

ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…

1 hour ago