ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 26 ಮಂಗಳವಾರ 2022

ಆಡಳಿತಾರೂಢರ ಕೈಗೊಂಬೆಯಾಗದಿರಲಿ!

‘ಅಸ್ಪೃಶ್ಯ ಮಹಿಳೆ ತನ್ನ. ಕಾಲೂರಿ ನಿಲ್ಲಬೇಕಾದರೆ ಅವಳಿಗೆ ಸ್ವಾವಲಂಬನೆ ಬೇಕು. ಮುಕ್ತ ಹಾಗೂ ಸ್ವತಂತ್ರ ಶಿಕ್ಷಣ ಅವಳಿಗೆ ಲಭಿಸಬೇಕು..
ಮಹಿಳೆಯರ ಸಹಯೋಗವಿಲ್ಲದೆ ಏಕತೆ ಅರ್ಥಹೀನ.’

‘ಶಿಕ್ಷಿತ ಮಹಿಳೆಯರಿಲ್ಲದೆ ಶಿಕ್ಷಣವು ಫಲಪ್ರದವಾಗುವುದಿಲ್ಲ ಮತ್ತು ಮಹಿಳೆಯರ ಶಕ್ತಿಯಿಲ್ಲದೆ ಹೋರಾಟವು ಅಪೂರ್ಣವಾಗುತ್ತದೆ. ದೇಶ/ಸಮಾಜ/ ಸಮುದಾಯದ ಪ್ರಗತಿಯನ್ನು ಅಲ್ಲಿನ ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟ ನೋಡಿ ಅಳೆಯುತ್ತೇನೆ.’

ಮೇಲಿನ ಎರಡು ಸಂದೇಶಗಳನ್ನು ಹೇಳಿದ್ದು ಅಂಬೇಡ್ಕರ್. ಆದಿವಾಸಿ ಬುಡಕಟ್ಟು ಮಹಿಳೆ ದ್ರೌಪದಿ ಮೂರ್ಮ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇಶದ ೧೫ನೇ ರಾಷ್ಟ್ರಪತಿ ಆಗಿ ಆಯ್ಕೆಯಾಗುವ ಮೂಲಕ ದೇಶಾದ್ಯಂತ ಹೊಸ ಭರವಸೆ ಮೂಡಿಸಿದ್ದಾರೆ!
ಓಡಿಸ್ಸಾದ ಬುಡಕಟ್ಟು ಕುಗ್ರಾಮದಿಂದ ದೇಶದ ಅತ್ಯುನ್ನತವಾದ ಶ್ರೇಷ್ಟ ಪದವಿವರೆಗೆ ಸಾಗಿದ ದ್ರೌಪದಿ ಮುರ್ಮು ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನದ ಮೂಲ ಆಶಯಗಳು ಅಧಃಪತನಕ್ಕೆ ಇಳಿಯದಂತೆ ರಕ್ಷಿಸುವ ಹೊಣೆ ಮತ್ತು ಅದರ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಕ್ಕೆ ಪಾರದರ್ಶಕ ಸಂದೇಶ ರವಾನಿಸಬೇಕಿದೆ. ತಮ್ಮ ಕೆಲಸ, ಕಾರ್ಯಗಳ ಸಮರ್ಪಣೆಯಿಂದ ದೇಶಾದ್ಯಂತ ಕೋಟ್ಯಂತರ ಮಹಿಳೆಯರು, ಸಮಸ್ತ ಕಾರ್ಮಿಕ ವರ್ಗ ಮತ್ತು ಖಿನ್ನತೆಗೆ ಒಳಗಾದ ವರ್ಗದ ಜನರಿಗೆ ಸ್ಫೂರ್ತಿ ನೀಡಬೇಕಿದೆ.

ಸುಶಿಕ್ಷಿತ ಮಹಿಳೆ ಸುಶಿಕ್ಷಿತ ದೇಶದ ಸಂಕೇತ ಎಂದೇ ಹೇಳುತ್ತಾರೆ. ಸದ್ಯ ಆಯ್ಕೆಯಾಗಿರುವ ಮೂರ್ಮು ಅವರು ಕೆ.ಆರ್. ನಾರಾಯಣ್ ಹಾಗೂ ಅಬ್ದುಲ್ ಕಲಾಂ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ. ದೇಶದ ಸಮಗ್ರ ಒಳಿತಿಗಾಗಿ ಸಂದರ್ಭ, ಸನ್ನಿವೇಶ ಅವಲೋಕಿಸಿ ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಾಗದೆ ಸ್ವಯಂ ನಿರ್ಧಾರ ಕೈಗೊಳ್ಳುತ್ತ ಜನರ ರಾಷ್ಟ್ರಪತಿಯಾಗಿ ತಮಗೆ ಸಿಕ್ಕ ಸಂವಿಧನಾತ್ಮಕ ಅಧಿಕಾರ ಸಮರ್ಪಕವಾಗಿ ಬಳಸಲಿ. ದೇಶದ ಒಳಿತಿಗಾಗಿ ಶ್ರಮಿಸಲಿ
– ಅನಿಲ್ ಕುಮಾರ್, ನಂಜನಗೂಡು.


ನೀರಜ್ ಚೋಪ್ರಾಗೆ ಅಭಿನಂದನೆ

ಅಥ್ಲೆಟಿಕ್ ಚಾಂಪಿಯನ್ ಶಿಪ್ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಚಾರಿತ್ರಿಕ ಸಾಧನೆಗೈದ ನೀರಜ್ ಚೋಪ್ರಾಗೆ ಅಭಿನಂದನೆಗಳು. ಅಥ್ಲೆಟಿಕ್ ವಿಶ್ವಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಜಾವಲಿನ್ ಎಸೆತಗಾರನೊಬ್ಬ ಪದಕ ಗೆದ್ದಿದ್ದು ಇದೆ ಮೊದಲ ಪ್ರಯತ್ನದಲ್ಲೆ ಭಾರತಕ್ಕೆ ಬೆಳ್ಳಿ ಪದಕದ ಉಡುಗೊರೆಯನ್ನೇ ನೀಡಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ೧೯ ವರ್ಷಗಳ ಬಳಿಕ ಭಾರತಕ್ಕೆ ಒಲಿದ ಮೊದಲ ಪದಕ ಇದು. ಇದು ಭಾರತೀಯರ ಪಾಲಿಗೆ ವಿಶೇಷ ಕ್ಷಣವಾಗಿದೆ. ನೀರಜ್ ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಕೆಗಳು.
-ದೀಕ್ಷಾ. ಹೆಚ್, ಮಹಾರಾಜ ಕಾಲೇಜು, ಮೈಸೂರು.


ಮಣ್ಣಿನ ಮಕ್ಕಳು ಮೇಲ್ಮೆಗೆ

ಓಡಿಸ್ಸಾ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರು, ತಮ್ಮ ಪಕ್ಷದ ಹೈಮಾಂಡ್ ನಿರ್ದೇಶನವನ್ನು ಧಿಕ್ಕರಿಸಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಜಪದ ಆ್ಯಭ್ಯರ್ಥಿ ದ್ರೌಪದಿ ಮುರ್ಮುರವರಿಗೆ ಮತ ಹಾಕಿದ್ದಾಗಿ ಹೇಳಿಕ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಣ್ಣಿನ ಮಕ್ಕಳು ಪರಿಕಲ್ಪನೆಯನ್ನು ಪಾಲಿಸಿದ್ದಾಗಿ ಹೇಳಿದ್ದಾರೆ. ದಶಕಗಳಕ ಹಿಂದೆ ಮಹಾರಾಷ್ಟ್ರದ ಪ್ರತಿಭಾ ಪಾಟೀಲರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದಾಗ ವಿರೋಧಪಕ್ಷಗಳ ಕರೆಯನ್ನು ಧಿಕ್ಕರಿಸಿ ಶಿವಸೇನೆಯವರು ಮರಾಠಾ ಅಸ್ಮಿತೆಯನ್ನು ಪಾಲಿಸಿದ್ದರು. ವರ್ಷಗಳ ಹಿಂದೆ ಕರ್ನಾಟಕದಲ್ಲಿ ವೆಂಕಯ್ಯನಾಯ್ಡು ಮತ್ತು ಶಕುಂತಲಾ ಹೆಗಡೆಯವರು ರಾಜ್ಯಭೆಗೆ ಸ್ಪರ್ದಿಸಿದಾಗ, ಕರ್ನಾಟಕದ ಶಾಸಕರು ಹೈಕಮಾಂಡನ್ನು ಧಿಕ್ಕರಿಸಲಾಗದೆ ತಮ್ಮ ಪ್ರಥಮ ಪ್ರಾಶಸ್ತ್ಯ ಮತವನ್ನು ವೆಂಕಯ್ಯ ನಾಯ್ಡು ಅವರಿಗೆ ನೀಡಿದರು. ದೇಶದ ಎಲ್ಲಾ ಕಡೆ ಪಾಲಿಸುವ ಮಣ್ಣಿನ ಮಕ್ಕಳು ಪಾಲಿಸಿ ಕರ್ನಾಟಕದಲ್ಲಿ ಅಘೋಷಿತವಾಗಿ ನಿಷೇಧಿಸಲಾಗಿದಂತೆ ಕಾಣುತ್ತದೆ.

-ರಮಾನಂದ ಶರ್ಮಾ, ಬೆಂಗಳೂರು.

 

 

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

11 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago