ಎಡಿಟೋರಿಯಲ್

ಅಭಿಜಾತ ವಿದ್ವಾಂಸ ಪ್ರೊ.ರಾಗೌ

ಪ್ರೊ.ಸಿ.ಪಿ.ಸಿದ್ಧಾಶ್ರಮ

‘ರಾಗೌ’ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾಗಿ ರುವ ಪ್ರೊ.ರಾಮೇಗೌಡರು ಕಾವ್ಯ, ವಿಮರ್ಶೆ, ಸಂಶೋ ಧನೆ, ಗ್ರಂಥಸಂಪಾದನೆ, ಜಾನಪದ, ಮಕ್ಕಳ ಸಾಹಿತ್ಯ, ನಾಟಕ ಮುಂತಾದ ಪ್ರಕಾರಗಳಲ್ಲಿ ಆರು ದಶಕಗಳಿಂದ ನಿರಂತರ ಕೃಷಿ ಮಾಡಿ ಅರವತ್ತಕ್ಕಿಂತಲೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುವುದರ ಮೂಲಕ ಸಾಹಿತ್ಯ ಕ್ಷೇತ್ರದ ಕ್ಷಿತಿಜವನ್ನು ವಿಸ್ತರಿಸಿದ್ದಾರೆನ್ನಬೇಕು.

ರಾಗೌ ಅವರು ಮದ್ದೂರು ತಾಲ್ಲೂಕಿನ ಈರೇ ಗೌಡನದೊಡ್ಡಿಯ ಮಾಸ್ತಿಗೌಡ ಮತ್ತು ನಿಂಗಮ್ಮ ದಂಪತಿಗಳ ಮಗನಾಗಿ 1942ರ ಏ.3ರಂದು ಜನಿಸಿದರು. ಬಡತನವಿದ್ದರೂ ಶಿಕ್ಷಣದಿಂದ ವಂಚಿತ ರಾಗದೆ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಶ್ರದ್ಧೆ ನಿಷ್ಠೆಯಿಂದ ಓದಿ ಕನ್ನಡ ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್‌ನಲ್ಲಿ ತೇರ್ಗಡೆಯಾದರು.

‘ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು’ ಎಂಬ ವಿಷಯ ಕುರಿತು ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆಯುತ್ತಾರೆ. ಅನಂತರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 37 ವರ್ಷ ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಮುಂತಾದ ಇಪ್ಪತ್ತಕ್ಕೂ ಹೆಚ್ಚಿನ ಪ್ರಶಸ್ತಿ, ಗೌರವಗಳು ಸಂದಿವೆ. ಇವರ ಪುಸ್ತಕಗಳಿಗೆ ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿರುವುದು ದಾಖಲೆಯೇ ಸರಿ.

ಕಾವ್ಯ: ರಾಗೌ ಅವರ ಮೊದಲ ಕವನಸಂಕಲನ ‘ಯಾತ್ರೆ’ 1966ರಲ್ಲಿ ಪ್ರಕಟವಾಯಿತು. ಅಲ್ಲಿಂದ ಆರಂಭವಾದ ರಾಗೌ ಕಾವ್ಯಪಯಣ ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಅನಾಗತ, ಕೋಗಿಲೆ ಗೊಂದು ಕೋರಿಕೆ, ನೀರತಾವರೆ, ಕಾಲಾತೀತ, ನಿರಾವರಣ ಮುಂತಾಗಿ 17 ಕವನ ಸಂಕಲನಗಳವರೆಗೆ ಬೆಳೆದುನಿಂತಿದೆ. ಸಾವಿರ ಪುಟಗಳ ಅವರ ಸಮಗ್ರ ಕಾವ್ಯವೂ ಪ್ರಕಟವಾಗಿದೆ. ರಾಗೌ ಅವರ ಬದುಕಿನಂತೆ ಅವರ ಕಾವ್ಯವೂ ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯವುಳ್ಳದ್ದು.

ವಿಮರ್ಶೆ: ಕನ್ನಡದ ಶ್ರೇಷ್ಠ ವಿಮರ್ಶಕರಾದ ರಾಗೌ ಅವರು ರಾಘವಾಂಕ, ಕಾವ್ಯಾನುಶೀಲನ, ಅವಗಾ ಹನ, ಕುವೆಂಪು ಸಾಹಿತ್ಯ ವಿಮರ್ಶನ, ಪ್ರಾಸ್ತಾವಿಕ, ದುರ್ಗಸಿಂಹ, ಪ್ರಾಚೀನ ಕಾವ್ಯ ಚಿಂತನ, ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ಮುಂತಾದ ಹದಿನೈದಕ್ಕೂ ಹೆಚ್ಚಿನ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಂಶೋಧನೆ: ಯಾವುದೇ ವಿಷಯ ಕುರಿತು ಬಡಪಟ್ಟಿಗೆ ನಿರ್ಣಯಕ್ಕೆ ಬರದ ರಾಗೌ ಅವರು ವಿಷಯಕ್ಕೆ ಸಂಬಂಧಿಸಿದ ಎಲ್ಲ ಮೂಲಚೂಲಗಳನ್ನು ಆಕರಸಾಮಗ್ರಿಯನ್ನು ಸಮಗ್ರವಾಗಿ ಹೆಕ್ಕಿತೆಗೆದು ತಳಮಟ್ಟದಿಂದ ಶೋಧಿಸಿ ಸತ್ಯವನ್ನು ಕಾಣಿಸುವ ಗಂಭೀರ ಶಿಸ್ತಿನ ನಿಷ್ಠಾವಂತ ಶುದ್ಧ ಸಂಶೋಧಕರು. ಈ ಮಾತಿಗೆ ನಿದರ್ಶನವಾಗಿ ಅವರ ‘ಕನ್ನಡ ಕಾವ್ಯ ಗಳಲ್ಲಿ ಐತಿಹಾಸಿಕ ವಿಚಾರಗಳುೞ ಎಂಬ ಸಂಶೋಧನಾ ಕೃತಿ ಕನ್ನಡಿಗರ ಮುಂದಿದೆ. ಅವರ ಸಂಶೋಧನೆ ಕೇವಲ ಪದವಿಗೋಸ್ಕರ ನಡೆದದ್ದಲ್ಲ. ನೈಜ ಸಂಶೋಧಕನೊಬ್ಬನ ದೀರ್ಘಕಾಲದ ಶ್ರಮಪೂರ್ಣವಾದ ಸತ್ಯಾನ್ವೇಷಣೆಯ ಫಲವಾಗಿ ಮೂಡಿಬಂದ ಕನ್ನಡದ ಶ್ರೇಷ್ಠ ಸಂಶೋಧನಾ ಕೃತಿಯಿದು. ‘ಕವಿರಾಜಮಾರ್ಗ’ ದಿಂದ ಹಿಡಿದು ‘ಕೆಳದಿನೃಪವಿಜಯ’ದವರೆಗಿನ ಸುಮಾರು ಒಂದುಸಾವಿರ ವರ್ಷ ವ್ಯಾಪ್ತಿಯ ಕನ್ನಡ ಕಾವ್ಯಗಳನ್ನು ಕೂಲಂಕಷವಾಗಿ ಅಭ್ಯಾಸಿಸಿ ಅಲ್ಲಿನ ಐತಿಹಾಸಿಕ ವಿಚಾರಗಳನ್ನು ಶಾಸನಗಳೊಂದಿಗೆ ಹೋಲಿಸಿ ಸತ್ಯಾಂಶವನ್ನು ಶೋಧಿಸಿ ನೈಜ ಇತಿಹಾ ವನ್ನು ಪುನಾರಚಿಸುವ ಬಹುದೊಡ್ಡ ಕೆಲಸವಿದು.

ಗ್ರಂಥಸಂಪಾದನೆ : ಗ್ರಂಥಸಂಪಾದನ ಕ್ಷೇತ್ರದಲ್ಲೂ ರಾಗೌ ಉತ್ತಮ ಕೆಲಸವನ್ನೇ ಮಾಡಿದ್ದಾರೆ. ರನ್ನನ ‘ಸಾಹಸಭೀಮವಿಜಯಂ’, ‘ಅಜಿತತೀರ್ಥಂಕರ ಪುರಾಣ’, ಲಕ್ಷಿ ಶನ ‘ಜೈಮಿನಿ ಭಾರತ’ ಮತ್ತು ಪಂಪಕವಿಯ ‘ಆದಿಪುರಾಣ’ ಕೃತಿಗಳನ್ನು ಬಿ.ಎಸ್.ಸಣ್ಣಯ್ಯ ಅವರೊಂದಿಗೆ ಜಂಟಿಯಾಗಿ ಸಂಪಾದಿಸಿದ್ದರೆ, ‘ಸರ್ವಜ್ಞನ ವಚನಗಳು’, ದೇವಚಂದ್ರನ ‘ರಾಜಾವಳಿ ಕಥೆ’ ಕೃತಿಗಳನ್ನು ಸ್ವತಂತ್ರವಾಗಿ ಸಂಪಾದಿಸಿದ್ದಾರೆ.

ಜಾನಪದ: ಜಾನಪದ ಕ್ಷೇತ್ರದ ದೊಡ್ಡ ವಿದ್ವಾಂಸರಾದ ರಾಗೌ ಜನಪದ ಕಥೆ, ಒಗಟು, ಗಾದೆ, ಕಥನಕವನ, ಶಿಶುಪ್ರಾಸ ಮುಂತಾದ ಜನಪದ ಪ್ರಕಾರಗಳ ಆರೆಂಟು ಸಂಗ್ರಹವನ್ನು ಪ್ರಕಟಿಸಿದ್ದಲ್ಲದೆ, ಈ ಪ್ರಕಾರಗಳಿಗೆ ಸಂಬಂಧಿಸಿದ ತಾತ್ವಿಕ ಚಿಂತನೆಯನ್ನು ಅಂತರ್‌ಶಿಸ್ತೀಯ ನೆಲೆಯಲ್ಲಿ ಕೈಗೊಂಡು ‘ಜಾನಪದ ತತ್ವಾರ್ಥ ಪ್ರವೇಶ’ದಂಥ ಮೌಲಿಕ ಕೃತಿಯನ್ನು, ‘ಜನಪದ ಮಹಾಭಾರತ ಸಮಾಲೋಚನೆೞಯಂಥ ಮಹತ್ವದ ಕೃತಿಯನ್ನು ಪ್ರಕಟಿಸಿರುವುದು ಅವರನ್ನು ಬಹು ಎತ್ತರಕ್ಕೆ ನಿಲ್ಲಿಸಿದೆ. ಉತ್ತಮ ಮಕ್ಕಳ ಸಾಹಿತಿಯಾಗಿರುವ ರಾಗೌ ಒಳ್ಳೆಯ ನಾಟಕಕಾರರಾಗಿದ್ದು, ಅವರ ‘ದೊರೆ ದುರ್ಯೋಧನ’ ಸಮಕಾಲೀನ ಆಶಯದ ಉತ್ತಮ ಐತಿಹಾಸಿಕ ನಾಟಕವಾಗಿದೆ.

andolanait

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

13 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

39 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago