ಸಮನ್ವಯ ಸಮಿತಿ ರಚಿಸಬೇಕು
ಚಾಮರಾಜನಗರದ ಹಳೇಆಸ್ಪತ್ರೆಯ ಪುನರಾರಂಭ ಕುರಿತಂತೆ ‘ಆಂದೋಲನ’ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದ ಬಗ್ಗೆ ಈ ಪತ್ರ. ಜಿಲ್ಲಾ ಆಸ್ಪತ್ರೆ, ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ನಿಯಂತ್ರಿಸುತ್ತಿರುವ ಸಂಸ್ಥೆ. ವೈದ್ಯಕೀಯ ಕಾಲೇಜು ಒಂದು ಸ್ವಾಯತ್ತ ಸಂಸ್ಥೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಿಗಳ ವಿವಿಯ ನಿಯಂತ್ರಣಕ್ಕೆ ಬರುತ್ತದೆ. ನೀತಿ ಆಯೋಗ (ಯು.ಜಿ.ಸಿ)ಯ ನಿಯಂತ್ರಣವೂ ಇದೆ. ಎರಡೂ ಬೇರೆ ಬೇರೆ ಸಂಸ್ಥೆಗಳು. ಇವುಗಳನ್ನು ಸೇರಿಸಿ ಸುಮಾರು ೮ ಕಿ.ಮೀ. ದೂರದ ಮೆಡಿಕಲ್ ಕಾಲೇಜಿಗೆ ವರ್ಗಾಯಿಸಲು ಯಾರು ಸಲಹೆ ಮಾಡಿದರೋ ಗೊತ್ತಿಲ್ಲ. ಇದೊಂ ದು ಜನವಿರೋಧಿ ಕೃತ್ಯ. ತಿಳಿದವರು ಹೇಳುವ ಪ್ರಕಾರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಂಜೂರಾದಷ್ಟು ಸಿಬ್ಬಂದಿ ಇಲ್ಲದೇ ಹೋದರೂ ಕಾರ್ಯನಿರ್ವಹಿಸಲು ಯಾವ ತೊಂದರೆಯೂ ಇಲ್ಲ. ಬೋಧನಾ ಸಿಬ್ಬಂದಿ, ಹೌಸ್ ಸರ್ಜನ್‌ಗಳು, ಜೂ.ಡಾಕ್ಟರುಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಮೆಡಿಕಲ್ ಕಾಲೇಜಿನ ಈ ಎಲ್ಲ ತಜ್ಞರು, ಹಾಗೂ ಇತರರು ಮಧ್ಯಾಹ್ನದ ಮೇಲೆ ಇಲ್ಲಿ ಇರುತ್ತಲೇ ಇರಲಿಲ್ಲ. ಡೀನ್ ಅವರೂ ಈ ಅಶಿಸ್ತಿನ ಬಗ್ಗೆ ಗಮನವನ್ನೇ ಹರಿಸಿರಲಿಲ್ಲ. ಹಾಗೆ ನೋಡ ಹೋದರೆ ಜಿಲ್ಲಾ ಅಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಇದೇ ವಾದವನ್ನೇ ಮೆಡಿಕಲ್ ಕಾಲೇಜು ಡೀನ್ ಮುಂದಿಡುತ್ತಿದ್ದುದು. ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗೂ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳನ್ನೊಳಗೊಂಡಂತೆ ಇತರರನ್ನೂ ಸೇರಿಸಿ ಒಂದು ಸಮನ್ವಯ ಸಮಿತಿ ಆಗಬೇಕು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಅವರನ್ನು ಒಂದು ಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಗೆ ನಿಯೋಜಿಸಬೇಕು. ಇಲ್ಲಿಯ ಓ.ಪಿ.ಡಿ, ವಾರ್ಡುಗಳು, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ವಿಭಾಗದ ಅನುಭವ ಪಡೆಯುವಂತೆ ಆಗಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಸಾಧ್ಯವಾಗದ ರೋಗಿಗಳನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರೆಫರ್ ಮಾಡಬೇಕು.
– ಕೆ.ವೆಂಕಟರಾಜು, ಚಾಮರಾಜನಗರ
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಬೆಂಗಳೂರಿನಲ್ಲಿ ಭಾರೀ ಸದ್ದು ಮಾಡುತ್ತಿರುವ ರಾಜಕಾಲುವೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಹಲವು ಪ್ರಶ್ನೆಗಳನ್ನು ಎತ್ತಿದೆ. ತೆರವಿಗೊಳಗಾದ ಪ್ರತಿಯೊಂದು ಮನೆ, ಅಪಾರ್ಟಮೆಂಟ್ ಮತ್ತು
ವಿಲ್ಲಾದವರು ಸಕ್ಷಮ ಪ್ರಾಧಿಕಾರಗಳಿಂದ ಎಲ್ಲಾ ರೀತಿ ಅನುಮತಿಗಳನ್ನು ಪಡೆದು ತಲೆ ಮೇಲೊಂದು ಸೂರನ್ನು ಮಾಡಿಕೊಂಡಿರಬಹುದು.
ಕೆಲವರು ಈಗಾಗಲೆ ದಶಕಗಳ ಕಾಲ ಅಲ್ಲಿ ವಾಸ್ತವ್ಯ ಮಾಡಿದ್ದಾರೆ, ನೀರು, ವಿದ್ಯುತ್, ಒಳಚರಂಡಿ ಸೌಲಭ್ಯ ನೀಡುವಾಗ ಗೋಚರವಾಗದ ನ್ಯೂನತೆ ಈಗ ಕಂಡಿದ್ದು ಹೇಗೆ? ನ್ಯೂನತೆಗಳಿದ್ದರೂ ಅನುಮೋದನೆ, ಅನುಮತಿ ನೀಡಿದ್ದು ಯಾರ ತಪ್ಪು? ಮೊಗ್ಗಿನಲ್ಲಿಯೇ ಚಿವುಟಿದ್ದರೆ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿತ್ತೇ? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಲಕ್ಷಾಂತರ, ಕೋಟ್ಯಂತರ ರೂಪಾಯಿ ವ್ಯಯಿಸಿ ಮಾಡಿದ ಮನೆ ಕಣ್ಣೆದುರೇ ಬುಲ್ಡೋಜರ್‌ಗೆ ಅಹುತಿಯಾಗುವ ಶಿಕ್ಷೆ ಸಹಿಸಲಸಾಧ್ಯ. ಇದು ಬುಲ್ಡೋಜರ್‌ಅನ್ನು ಕಾರ್ಯಾಚರಣೆಗೆ ಇಳಿಸಿದವರಿ ಏಕೆೆ ಅರ್ಥವಾಗುವುದಿಲ್ಲ?
–ರಮಾನಂದ ಶರ್ಮಾ, ಬೆಂಗಳೂರು.
ಅರಮನೆಯಲ್ಲಿ ಸಂತಾನ ಸಂಭ್ರಮ!
ಅರಮನೆ ಲಾಯದಲ್ಲಿ ಹೆಣ್ಣಾನೆ ಲಕ್ಷ್ಮಿ ಮುದ್ದಾದ ಗಂಡು ಮರಿಗೆ ಜನ್ಮ ನೀಡಿರುವುದು ಬಹಳ ಸಂತಸದ ಸಂಗತಿ. ದಸರಾಗೆ ಬರುವ ಮೊದಲು ಪ್ರತಿಯೊಂದು ಆನೆಯನ್ನೂ ಕೂಲಂಕಷವಾಗಿ ಪರಿಶೀಲಿಸಿ ನಂತರ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಲಕ್ಷ್ಮಿಯ ವಿಚಾರದಲ್ಲಿ ಅದ್ಭುತವೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ವೈದ್ಯಕೀಯ ಪರೀಕ್ಷೆಯ ವರದಿ ಬರುವ ಮುನ್ನವೇ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಡಿಸಿಎಫ್ ಡಾ.ವಿ. ಕರಿಕಾಳನ್ ಅವರು ಆನೆ ಮರಿಗೆ ಹೆಸರನ್ನು ಸೂಚಿಸಲು ಪ್ರಮೋದಾದೇವಿ ಒಡೆಯರ್ ಅವರಿಗೆ ವಿನಂತಿ ಮಾಡಿರುವುದು ತುಂಬಾ ಮನಮೆಚ್ಚುವ ಕೆಲಸ. ಅಷ್ಟೇ ಪ್ರೀತಿಯಿಂದ ಪ್ರಮೋದಾದೇವಿ ಒಡೆಯರ್ ಅವರು ‘ಶ್ರೀ ದತ್ತಾತ್ರೇಯ’ ಎಂದು ನಾಮಕರಣ ಮಾಡಿರುವುದು ಸಂತಸದ ಸಂಗತಿ.
–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.
ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…
ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…
ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…
ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…
ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…