ಎಡಿಟೋರಿಯಲ್

ಮೈಸೂರು ಪರಂಪರೆಯ ಒಂದು ಮಹಾನ್ ವ್ಯಕ್ತಿತ್ವ

ಅನವಶ್ಯಕ ಚರ್ಚೆಗಿಳಿಯದ ಮಿತಭಾಷಿ ಎಸ್.ಎಂ ಕೃಷ್ಣ

ಕೆ. ಶಿವಕುಮಾರ್, ಮೈಸೂರು

ನಾಡಿನ ರಾಜಕೀಯ ಇತಿಹಾಸದಲ್ಲಿ ದೂರದೃಷ್ಟಿಯ ಆಡಳಿತ ಹಾಗೂ ಉತ್ತಮ ನಾಯಕತ್ವಕ್ಕೆ ಹೆಸರು ವಾಸಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ನಾಯಕ ಎಸ್. ಎಂ. ಕೃಷ್ಣ ಅವರು ಇಹಲೋಕ ತ್ಯಜಿಸಿದ್ದು ಅತ್ಯಂತ ದುಃಖಕರ ಸಂಗತಿ.

ತಮ್ಮ ಆಡಳಿತದ ಅವಧಿಯಲ್ಲಿ ನಾಡಿಗೆ ಅಪಾರ ಕೊಡುಗೆ ನೀಡಿರುವ ಅವರು, ಬೆಂಗಳೂರಿನಲ್ಲಿ ಐಟಿ ಯಶಸ್ಸಿಗೆ ಅಡಿಪಾಯ ಹಾಕಿ ಅದನ್ನು ದೇಶದ ಟೆಕ್ ರಾಜಧಾನಿ ಯಾಗಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮ ಹಾಗೂ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರಿಗೆ ಮೈಸೂರೆಂದರೆ ವಿಶೇಷವಾದ ಒಲವಿತ್ತು.

ಎಸ್. ಎಂ. ಕೃಷ್ಣ ಅವರಂತಹ ಧಿಮಂತ ನಾಯಕರ ಜೊತೆಗಿನ ನನ್ನ ಅನುಭವದ ಗುಚ್ಛವನ್ನು ಇಲ್ಲಿ ಬಿಚ್ಚಿಡಲು ಬಯಸುತ್ತೇನೆ. ರಾಜ್ಯದಲ್ಲಿ ೨೦೦೬ರ ವೇಳೆ ಉಪಚುನಾವಣೆ ತಾರಕ್ಕೇರಿತ್ತು. ಆ ಅವಽಯಲ್ಲಿ ನಾನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷನಾಗಿದ್ದೆ. ಅವರನ್ನು ಪತ್ರಕರ್ತರ ಭವನಕ್ಕೆ ಸಂವಾದಕ್ಕೆಂದು ಆಹ್ವಾನಿಸಿದ್ದೆವು. ಸಂಜೆ ೭ ಗಂಟೆಗೆ ಭವನಕ್ಕೆ ಆಗಮಿಸಿದ ಅವರೊಂದಿಗೆ ಎಂಎಲ್‌ಸಿ ಡಿ. ಮಾದೇಗೌಡರೂ ಸೇರಿದಂತೆ ಅನೇಕ ನಾಯಕರಿದ್ದರು.

ಇನ್ನೇನು ಸಂವಾದ ಪ್ರಾರಂಭವಾಗುವ ಸಮಯಕ್ಕೆ ವಿದ್ಯುತ್ ಕೈಕೊಟ್ಟಿತು. ನಾವೆಲ್ಲರೂ ಕಸಿವಿಸಿಗೆ ಒಳಗಾದೆವು. ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೃಷ್ಣ ಅವರು, ಕ್ಯಾಂಡಲ್ ಬೆಳಕಿನಲ್ಲಿ ನಮ್ಮೊಂದಿಗೆ ಕುಳಿತರು. ಬರೋಬ್ಬರಿ ೪೦ ನಿಮಿಷಗಳ ಕಾಲ ಕತ್ತಲ್ಲಲ್ಲೇ ಒಂದಿನಿತೂ ಬೇಸರ ಮಾಡಿಕೊಳ್ಳದೆ ಕುಳಿತಿದ್ದ ಅವರ ತಾಳ್ಮೆಯನ್ನು ಕಂಡು ಪತ್ರಕರ್ತರೆಲ್ಲರಿಗೂ ಆಶ್ಚರ್ಯ ವಾಗಿತ್ತು. ಬಳಿಕ ಅದೇ ಹಸನ್ಮುಖಿ ವ್ಯಕ್ತಿತ್ವ ಹಾಗೂ ಸಮಚಿತ್ತ ದೊಂದಿಗೆ ರಾತ್ರಿ ೮. ೪೫ ರವರೆಗೆ ಸಂವಾದದಲ್ಲಿ ಪಾಲ್ಗೊಂಡು ‘ವ್ಯವಸ್ಥೆ ಇನ್ನೂ ಬಹಳಷ್ಟು ಸುಧಾರಣೆಯಾಗಬೇಕಿದೆ’ ಎಂದಷ್ಟೇ ಹೇಳಿ ಹೊರಟರು. ಈ ಘಟನೆಯನ್ನು ಎಂದಿಗೂ ಮರೆಯಲಾಗದು. ಇದಾದ ತರುವಾಯ ಪತ್ರಕರ್ತರ ಭವನಕ್ಕೆ ಯುಪಿಎಸ್ ವ್ಯವಸ್ಥೆ ಕಲ್ಪಿಸಲಾಯಿತು.

ಮೈಸೂರಿಗೆ ಪ್ರವಾಸ ಬಂದಾಗ ಅವರ ಸುದ್ದಿಯನ್ನು ಚಿತ್ರೀಕರಿಸಿ ಬೆಂಗಳೂರಿನ ಕೇಂದ್ರ ಕಚೇರಿಗೆ ನಾವು ಕಳುಹಿಸ ಬೇಕಿತ್ತು. ಅದೊಮ್ಮೆ ಅವರೊಡನೆ ಹೆಲಿಕ್ಯಾಪ್ಟರ್‌ನಲ್ಲಿ ತೆರಳ ಲಿದ್ದ ಅವರ ಆಪ್ತ ಕಾರ್ಯದರ್ಶಿಗೆ ನೀಡಲು ಹೋದಾಗ, ‘ನಮ್ಮ ಸುದ್ದಿಯನ್ನು ನಮ್ಮಿಂದಲೇ ಕಳುಹಿಸುತ್ತಿ ದ್ದೀರಾ ? ’ ಎಂದು ನಸುನಕ್ಕು ಅವರೇ ಕ್ಯಾಸೆಟ್ ಅನ್ನು ಪಡೆದು ತಮ್ಮ ಆಪ್ತ ಕಾರ್ಯದರ್ಶಿಗೆ ನೀಡಿದ್ದು ಅವರ ಸ್ನೇಹಮಯ ವ್ಯಕ್ತಿತ್ವಕ್ಕೆ ಸಾಕ್ಷಿ.

ಕೃಷ್ಣ ಅವರ ಆಳ್ವಿಕೆಯ ವೇಳೆ ರಾಜ್ಯದಲ್ಲಿ ಬರ ಆವರಿಸಿ ರೈತರೆಲ್ಲಾ ಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದರು. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ಬರಿದಾಗಿ ಜನರಿಗೆ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ. ವೈ. ಘೋರ್ಪಡೆ ಅವರು ನಾಗರಹೊಳೆ ಅರಣ್ಯದಲ್ಲಿ ನಾಲ್ಕೈದು ದಿನ ಕುಟುಂಬದೊಡನೆ ತಂಗಿದ್ದರು. ನಾನು ಹಾಗೂ ಪತ್ರಕರ್ತ ಮಿತ್ರ ಅನೂಪ್ ಮತ್ತು ಸುಽಂದ್ರ ಅವರಿದ್ದ ತಂಡವು ಮುಂಜಾನೆಯೇ ತೆರಳಿ ಸಚಿವರ ವಿರುದ್ಧ ಸುದ್ದಿ ಮಾಡಿ, ವಾಪಸ್ಸಾಗಬೇಕಾದರೆ ಅರಣ್ಯ ಅಧಿಕಾರಿಗಳು ನಮ್ಮನ್ನು ಬಂಧಿಸಿದರು. ಕ್ಯಾಮೆರಾ, ವಾಹನ ಎಲ್ಲವನ್ನೂ ಮುಟ್ಟು ಗೋಲು ಹಾಕಿಕೊಂಡರು. ಅದಾದ ಮರುದಿನ ಜಾಮೀನಿನ ಮೇಲೆ ನಾವು ಹೊರಬಂದೆವು.

ಎಂಟ್ಹತ್ತು ತಿಂಗಳು ಕಾಲ ಕೋರ್ಟ್, ಕಚೇರಿ ಅಲೆದು ನಮಗೆ ಸಾಕಾಗಿತ್ತು. ಕೇಂದ್ರದಲ್ಲಿ ಮಂತ್ರಿಯಾಗಿದ್ದ ವಿ. ಶ್ರೀನಿ ವಾಸ ಪ್ರಸಾದರು ಸೇರಿದಂತೆ ಹಲವು ನಾಯಕರು ಪ್ರಕರಣ ಹಿಂಪಡೆಯಲು ಒತ್ತಡ ಹೇರಿದ್ದರು. ಮುಖ್ಯ ಮಂತ್ರಿಯಾ ಗಿದ್ದ ಎಸ್. ಎಂ. ಕೃಷ್ಣ ಅವರು ಯಾವುದೇ ಪ್ರತಿಷ್ಠೆಗೆ ಬೆಲೆ ಕೊಡದೆ ಸಂಪುಟ ಸಭೆಯ ಮುಂದಿಟ್ಟು ಪ್ರಕರಣವನ್ನು ಕೂಡಲೇ ಹಿಂಪಡೆದರು. ಈ ನಡವಳಿಕೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ಕೃಷ್ಣ ಅವರಿಗಿದ್ದ ಅಚಲವಾದ ನಂಬಿಕೆ ಹಾಗೂ ಗೌರವಕ್ಕೆ ಹಿಡಿದ ಕೈಗನ್ನಡಿ.

ಮಾಜಿ ಸಚಿವ ಎಚ್. ನಾಗಪ್ಪ ಅವರ ಅಪಹರಣದ ವೇಳೆ ಹನೂರಿಗೆ ಹೆಲಿಕಾಪ್ಟರ್‌ನಲ್ಲಿ ಬಂದ ಅವರನ್ನು ನಾನು ಭೇಟಿ ಯಾದೆ. ‘ವಾಟ್, ಯಂಗ್ ಫ್ರೆಂಡ್’ ಎಂದು ಭುಜದ ಮೇಲೆ ಕೈ ಹಾಕಿದರು. ಪ್ರಕರಣವನ್ನು ವಾಪಸ್ ಪಡೆದಿದ್ದಕ್ಕೆ ಧನ್ಯವಾದ ಸರ್ ಎಂದೆ. ಆಗ ಕೃಷ್ಣ ಅವರು, ‘ಅದು ನನಗಲ್ಲ, ಅವರಿಗೆ ಹೇಳಿ’ ಎಂದು ಅಂದಿನ ಅರಣ್ಯ ಸಚಿವ ಕೆ. ಎಚ್. ರಂಗನಾಥ್ ಅವರ ಕಡೆ ಕೈತೋರಿಸಿದರು.

ಮೈಸೂರಿನ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ನಿವೇಶನಕ್ಕಾಗಿ ಹಿರಿಯ ಪತ್ರಕರ್ತರಾಗಿದ್ದ ರಾಜಶೇಖರ ಕೋಟಿ ಹಾಗೂ ಕೆ. ಬಿ. ಗಣಪತಿ ಅವರ ನಿಯೋಗ ಕೃಷ್ಣ ಅವರಿಗೆ ಮನವಿ ಮಾಡಿ ನಾಲ್ಕು ಬಾರಿ ಭೇಟಿ ಮಾಡಿದ್ದರು. ಇದಾದ ಬಳಿಕವೂ ಜಾಗ ನೀಡದಿದ್ದಾಗ ಮತ್ತೊಮ್ಮೆ ನಾನು, ಹಲವು ಮಾಧ್ಯಮದವರು ಒಗ್ಗೂಡಿ ನಿಯೋಗದೊಂದಿಗೆ ಅವರನ್ನು ಭೇಟಿ ಮಾಡಿದೆವು. ಅಂದಿನ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಯಾಗಿದ್ದ ಪಿ. ರವಿಕುಮಾರ್ ಅವರಿಗೆ ಕರೆ ಮಾಡಿ ‘ಎಲ್ಲಿದ್ದೀರಿ, ನಿಮ್ಮ ಕಚೇರಿಗೆ ಬರ ಬೇಕೆಂದಿದ್ದೇನೆ’ ಎಂದಾಗ ಕಾರ್ಯದರ್ಶಿ ತಬ್ಬಿಬ್ಬು. ‘ಒಂದು ಕೆಲಸಕ್ಕೆ ನಿಮಗೆ ಎಷ್ಟು ಬಾರಿ ಹೇಳಬೇಕು? ’ ಎಂದು ನಮ್ಮೆ ದುರೇ ತರಾಟೆಗೆ ತೆಗೆದುಕೊಂಡರು. ಅದಾದ ಎರಡೇ ದಿನ ಗಳಲ್ಲಿ ಜಾಗ ಮಂಜೂರಾಗಿತ್ತು. ಈ ವಿಳಂಬ ಧೋರಣೆಗೆ ಸ್ವತಃ ಅವರೇ ಕ್ಷಮೆ ಕೋರಿದ್ದರು.

ಮೈಸೂರು ನಗರದ ಮೇಲೆ ಅಪಾರವಾದ ಕಾಳಜಿ ಹೊಂದಿದ್ದ ಅವರು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಹೊತ್ತು ನೀಡಿದ್ದರು. ‘ಮೈಸೂರು ಅಜೆಂಡಾ ಟಾಸ್ಕ್ ಫೋರ್ಸ್’ ರಚಿಸಿ ನಗರಕ್ಕೆ ಸೂಕ್ತವಾದ ರೂಪುರೇಷೆ ನೀಡಲು ಮುಂದಾಗಿದ್ದರು. ಬರದ ನಡುವೆ ಸರಳ ದಸರಾ ಆಚರಣೆಗೆ ಮೊರೆ ಹೋಗಿದ್ದ ಅವರು ಮೊದಲನೇ ಬಾರಿಗೆ ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಅದ್ಧೂರಿ ದಸರಾ ನಡೆಸಿ ಯಶಸ್ವಿಗೊಳಿದ್ದರು.

ಮೆಟ್ರೋಪಾಲ್ ಹೋಟೆಲ್ ನವೀಕರಣಕ್ಕೆ ಅವರು ವಿಶೇಷ ಗಮನಹರಿಸಿ ಅಂದಿನ ಪ್ರವಾಸೋದ್ಯಮ ಸಚಿವರಿಗೆ ಸೂಚಿಸಿ ಖಾಸಗಿಯವರಿಗೆ ನೀಡಿದ್ದರು. ಈ ಹೋಟೆಲ್‌ನ ಪ್ರತಿಯೊಂದು ಕೊಠಡಿಯಲ್ಲೂ ತಂಗಿದ್ದೇನೆ ಎಂದು ಪತ್ರಕರ್ತರೊಡನೆ ನೆನಪನ್ನು ಹಂಚಿಕೊಂಡಿದ್ದರು. ಅವರ ಕಾಳಜಿ ಯಿಂದಲೇ ಇಂದು ಮೆಟ್ರೋಪಾಲ್ ಹೋಟೆಲ್ ಉತ್ತಮ ವಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ೩೬ ಕಿ. ಮೀ. ಹೊರ ವರ್ತುಲ ರಸ್ತೆಯನ್ನು ನಿರ್ಮಿಸಿದ ಶ್ರೆಯಸ್ಸು ಕೃಷ್ಣ ಅವರಿಗೆ ಸಲ್ಲುತ್ತದೆ. ಅವರ ಅಧಿಕಾರಾವಧಿಯಲ್ಲಿ ಸಾಲು ಸಾಲು ಸಮಸ್ಯೆಗಳು ಎದುರಾದರೂ ಎದೆಗುಂದದೆ ಸರ್ಕಾರವನ್ನು ಮುನ್ನಡೆಸಿದ್ದರು. ಹಂಗರಹಳ್ಳಿ ಜೀತ ಪ್ರಕರಣ, ಕಂಬಾಲಪಲ್ಲಿಯ ದಲಿತ ಶೋಷಣೆ, ವರನಟ ರಾಜ್ ಕುಮಾರ್ ಅಪಹರಣ, ಕಾವೇರಿ ನೀರಿನ ವ್ಯಾಜ್ಯ ಮುಂತಾದ ಸಂದಿಗ್ಧ ಸಂದರ್ಭ ದಲ್ಲಿನ ಅವರ ಗಂಭೀರ ವಾದ ನಡೆ ನಿಜಕ್ಕೂ ಮೆಚ್ಚುವಂತಹದ್ದಾಗಿತ್ತು.

ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ತಿ. ನರಸೀಪುರದ ಬಳಿ ರಸ್ತೆಯುದ್ದಕ್ಕೂ ಬಹಿರ್ದೆಸೆಗೆ ಕುಳಿತಿದ್ದವರನ್ನು ಕಂಡು ಬಹಳ ಘಾಸಿಗೆ ಒಳಗಾಗಿದ್ದರು. ಅಂದೇ ಸರ್ಕಾರದಿಂದ ಶೌಚಾ ಲಯ ನಿರ್ಮಾಣಕ್ಕೆ ಸಹಾಯಧನವನ್ನು ಘೋಷಿಸಿದರು.

ಮಿತಭಾಷಿಯಾಗಿದ್ದ ಕೃಷ್ಣ ಅವರು ಪತ್ರಕರ್ತರೊಡನೆ ಎಂದೂ ಅನವಶ್ಯವಾಗಿ ಚರ್ಚೆಗಿಳಿದವರಲ್ಲ. ಅವರ ಪ್ರತಿ ಯೊಂದು ವಿಚಾರದಲ್ಲಿಯೂ ಸ್ಪಷ್ಟತೆ ಇರುತ್ತಿತ್ತು. ಎಲ್ಲಾ ಪತ್ರ ಕರ್ತರು ಹತ್ತಾರು ಪ್ರಶ್ನೆಗಳನ್ನು ಕೇಳಿದರೂ, ತೂಕವಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಬೇರೆಯದನ್ನು ನಿರ್ಲಕ್ಷಿಸು ತ್ತಿದ್ದರು. ಪತ್ರಿಕಾಗೋಷ್ಠಿಯಲ್ಲಿ ‘ಸರ್ ಮಿಸ್ಟರ್ ಕೃಷ್ಣ’ ಎಂದರೂ ಒಂದಿನಿತೂ ವಿಚಲಿತರಾಗದೆ ಅಷ್ಟೇ ಸಂಯಮ ದಿಂದ ಚರ್ಚೆ ಮಾಡುತ್ತಿದ್ದರು. ಸಾಮಾನ್ಯ ಜನರೊಡನೆ ಸಾಮಾನ್ಯರಂತೆ ವರ್ತಿಸುತ್ತಿದ್ದ ಅವರ ಗಂಭೀರವಾದ ಮಾತು, ಮಾತಿಗೆ ತಕ್ಕಂತೆ ನಡವಳಿಕೆ, ಆಡಳಿತದಲ್ಲಿದ್ದ ಶಿಸ್ತು, ಕಾರ್ಯಕ್ಷಮತೆ ಅವರ ಮೇಲಿನ ಅಭಿಮಾನವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದಿತ್ತು. ಅವರು ಇಂದು ನಮ್ಮಿಂದ ಭೌತಿಕ ವಾಗಿ ದೂರವಾಗಿರಬಹುದು. ಆದರೆ ನೆನಪಿನ ಬುತ್ತಿಯಲ್ಲಿ ಸದಾ ಉಳಿದಿರುತ್ತಾರೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬಸ್-ಲಾರಿ ಡಿಕ್ಕಿ: ಚಾಲಕ ಸಾವು, ಹಲವು ಪ್ರಯಾಣಿಕರಿಗೆ ಗಾಯ

ರಾಜೇಶ್ ಬೆಂಡರವಾಡಿ ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ…

1 hour ago

ಓದುಗರ ಪತ್ರ: ಕುಂಭೇಶ್ವರ ಕಾಲೋನಿ ರೈತರ ಜಮೀನು ವಿವಾದ ಪರಿಹರಿಸಿ

ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ದಿ.ಬಿ.ರಾಚಯ್ಯ ಅವರು ಸಚಿವರಾಗಿದ್ದಾಗ ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಸರ್ವೆ ನಂ.೩ರಲ್ಲಿ…

1 hour ago

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಅರ್ಧ ಲೀಟರ್ ನೀರಿನ ಬಾಟಲಿ ಕೊರತೆ

ಮೈಸೂರಿನ ರೈಲು ನಿಲ್ದಾಣ ಸೇರಿದಂತೆ, ರಾಜ್ಯದ ಯಾವುದೇ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್…

1 hour ago

ಓದುಗರ ಪತ್ರ: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಯಾವಾಗ?

ಮೈಸೂರು ಮಹಾ ನಗರ ಪಾಲಿಕೆ ಚುನಾಯಿತ ಸದಸ್ಯರ ಅವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಆದರೆ ಸರ್ಕಾರ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ.…

1 hour ago

ಓದುಗರ ಪತ್ರ: ಅಡ್ಡಾದಿಡ್ಡಿ ವಾಹನ ಚಾಲನೆಗೆ ಕಡಿವಾಣ ಹಾಕಿ

ಮೈಸೂರಿನ ಶಿವರಾಮ್ ಪೇಟೆ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರ ಹಾಗೂ ರಾಜ್ ಕಮಲ್ ಥಿಯೇಟರ್ ನಡುವೆ ಬರುವ ವೃತ್ತದಲ್ಲಿ ದಿನನಿತ್ಯ…

1 hour ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ವಿಶಾಲ್ ಸಿಂಗ್ ಎಂಬ ಬಡರೋಗಿಗಳ ಅನ್ನದಾತ

ಪಂಜುಗಂಗೊಳ್ಳಿ  ಊಟವಿಲ್ಲದೆ ಪರದಾಡಿದ ಘಟನೆಯೇ ನಿರಂತರ ದಾಸೋಹಕ್ಕೆ ಪ್ರೇರಣೆ ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತ…

1 hour ago