ಕಾಂಗ್ರೆಸ್ ಕಾರ್ಯಕರ್ತನನ್ನು ಥಳಿಸಿದ ಡಿಕೆಶಿ!

ಮಂಡ್ಯ: ಪಕ್ಕದಲ್ಲಿ ನಡೆದು ಬರುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಲೆ ಮೇಲೆ ಹೊಡೆದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ.

ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಅವರ ಹಿಂಭಾಗ ಬರುತ್ತಿದ್ದ. ಈ ವೇಳೆ ಆತ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ ಎನ್ನಲಾಗಿದೆ. ಇದರಿಂದ ಸಿಟ್ಟಾದ ಡಿ.ಕೆ.ಶಿ., ಕಾರ್ಯಕರ್ತನ ತಲೆ ಮೇಲೆ ರಪ್ ಎಂದು ಬಾರಿಸಿದ್ದಾರೆ. ದೃಶ್ಯ ನೋಡಿ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ. ಅವರ ಈ ವರ್ತನೆ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ.

ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿ.ಕೆ.ಶಿವಕುಮಾರ್ ಏಟು ಕೊಟ್ಟಿದ್ದರು, ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ನೋಡಿ, ‘ಹೆಗಲ ಮೇಲೆ ಕೈ ಹಾಕ್ತಿಯಾ.. ಕಾಮನ್ಸೆನ್ಸ್ ಇಲ್ವಾ’ ಎಂದು ಗದರಿದ್ದರು.

× Chat with us