ಗಾಳಿಯಲ್ಲಿ ಗುಂಡು ಹಾರಿಸುವುದೇ ಡಿಕೆಶಿ ಕೆಲಸ: ಸಚಿವ ಭೈರತಿ ಬಸವರಾಜ್ ವಾಗ್ದಾಳಿ

ದಾವಣಗೆರೆ: ಏನೇ ಇದ್ದರೂ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಬೇಕು. ಸೂಕ್ತ ಸಮಯ ಬಂದಾಗ ಹೇಳುತ್ತೇನೆಂದು ಹೇಳಬಾರದು. ಗಾಳಿಯಲ್ಲಿ ಗುಂಡು ಹಾರಿಸುವುದೇ ಡಿಕೆಶಿ ಕೆಲಸ ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನೇ ಇದ್ದರೂ ಬಹಿರಂಗವಾಗಿ ಹೇಳಿಕೆ ನೀಡಬೇಕು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಹೇಗೆ? ನಾವು ಮಾತ್ರ ಬಿಜೆಪಿ ಯನ್ನು ಬಿಟ್ಟು ಹೋಗುವುದಿಲ್ಲ. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು  ಹೇಳಿಕೆ ನೀಡಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ನನ್ನ ಕೈಬಿಡಬೇಕೆಂದು ಎಲ್ಲಿಯೂ ಕೂಡ ಕೇಳಿ ಬಂದಿಲ್ಲ. ನನ್ನ ಬಗ್ಗೆ ಸಿಎಂ ಹಾಗೂ ವರಿಷ್ಠರಿಗೆ ಒಳ್ಳೇ ಅಭಿಪ್ರಾಯವಿದೆ. ಪರೋಕ್ಷವಾಗಿ ಸಂಪುಟದಿಂದ ಕೈ ಬಿಡಲ್ಲ ಎಂದು ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ‌ ಇದ್ದೆ ಇರುತ್ತದೆ. ಇಂತಹ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಬಹಿರಂಗ ಹೇಳಿಕೆ ಕೊಟ್ಟರೇ ಸರಿಯಲ್ಲ.ಇದರಿಂದ ಜನರಲ್ಲಿ ಎನಪ್ಪಾ ಇದು ಅಧಿಕಾರಕ್ಕಾಗಿ ಕಚ್ಚಾಟ ಎಂಬ ಮಾತು ಬರಬಾರದು. ಯಾರು ಕೂಡಾ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಈಗಾಗಲೇ ನಳೀನ್​ಕುಮಾರ ಕಟೀಲ್ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.