ಜಿಲ್ಲೆಗಳು

ಕುಸಿಯುವ ಸ್ಥಿತಿಯಲ್ಲಿ ಯೋಗಾ ನರಸಿಂಹ ದೇಗುಲ

ನಾಗಮಂಗಲ: ತಾಲ್ಲೂಕಿನ ಬೆಳ್ಳೂರು ಹೋಬಳಿಯ ದಡಿಗ ಗ್ರಾಮದಲ್ಲಿ ಹಲವು ಐತಿಹಾಸಿಕ ದೇವಾಲಯಗಳಿದ್ದು, ಅವುಗಳಲ್ಲಿ ಪ್ರಸಿದ್ಧವಾಗಿರುವ ಯೋಗಾನರಸಿಂಹ ದೇವಾಲಯವು ಸಂಪೂರ್ಣ ಶಿಥಿಲಗೊಂಡಿದೆ. ನಿರ್ವಹಣೆಯಿಲ್ಲದೆ ಗರ್ಭಗೃಹದ ಗೋಡೆಗಳು, ಕಂಬಗಳೂ ಸೇರಿದಂತೆ ಸಂಪೂರ್ಣ ದೇವಾಲಯವೇ ಕುಸಿಯುವ ಭೀತಿಯಲ್ಲಿದೆ.ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ದಡಿಗನ ಕೆರೆಯ ಕೋಡಿಯ ಬಳಿ ಇದ್ದ ಕೋಡಿಹಳ್ಳಿಯು ಹಿಂದೆ ಅಗ್ರಹಾರವಾಗಿತ್ತು ಎನ್ನಲಾಗುತ್ತಿದೆ. ಕೆರೆಯ ಉತ್ತರ ದಿಕ್ಕಿಗೆ ದಡಿಗ ಗ್ರಾಮವಿದ್ದು, ಇದು ಗಂಗರ ಅರಸನಾದ ದಡಿಗನ ನೆನಪನ್ನು ತರುತ್ತದೆ.

ಗ್ರಾಮದಲ್ಲಿರುವ ಯೋಗಾನರಸಿಂಹ ದೇವಾಲಯ ಮತ್ತು ಕೋಡಿಹಳ್ಳಿಯ ದಡಿಗೇಶ್ವರ ದೇವಾಲಯಗಳು ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದು, ಮೇಲ್ನೋಟಕ್ಕೆ ಇತ್ತೀಚೆಗೆ ನಿರ್ಮಾಣ ವಾದಂತೆ ಕಂಡುಬಂದರೂ ದೇವಾಲಯದ ಒಳಭಾಗದಲ್ಲಿರುವ ಕಂಬಗಳು, ಅವುಗಳ ನಡುವಿನ ಅಂಕಣದ ಚಾವಣಿಯಲ್ಲಿ ಉಬ್ಬು ಶಿಲ್ಪದ ಮಾದರಿಯಲ್ಲಿ ರಚಿತವಾಗಿರುವ ಪೂರ್ಣ ಅರಳಿದ ಕಮಲ ಸೇರಿದಂತೆ ಹಲವು ಬಗೆಯ ಕೆತ್ತನೆಗಳು ಈ ದೇವಾಲಯವು ಗಂಗರ ಕಾಲದ ವಾಸ್ತು ಶಿಲ್ಪದ ಮಾದರಿಯಲ್ಲಿ ಕಾಣುತ್ತದೆ. ಅಲ್ಲದೆ, ದೇವಾಲಯದ ಕಂಬಗಳು ಗಂಗರ ಕಾಲದ ಪ್ರಾರಂಭಿಕ ಘಟ್ಟದ ಸ್ವರೂಪವನ್ನು ಹೋಲುತ್ತವೆ. ದೇವಾಲಯದ ಗರ್ಭಗುಡಿಯಲ್ಲಿರುವ ಯೋಗಾನರಸಿಂಹ ಮೂರ್ತಿ ಸುಂದರ ವಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ.

ನಿರ್ವಹಣೆ ಕೊರತೆ: ಗ್ರಾಮದ ಕೆರೆಯ ಸಮೀಪ ಪುಟ್ಟ ಗುಡ್ಡದ ಮೇಲಿರುವ ಯೋಗಾನರಸಿಂಹ ದೇವಾಲಯವು ಪುರಾತನ ಕಾಲದಲ್ಲಿ ಗ್ರಾಮದ ವೈಭವ ಸಾರುತ್ತಿತ್ತು. ಕಾಲ ಕಳೆದಂತೆ ಗ್ರಾಮಸ್ಥರು, ದೇವಾಲಯದ ಒಕ್ಕಲು ಮನೆತನ ಮತ್ತು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಇದೀಗ ಕುಸಿಯುವ ಭೀತಿಯಲ್ಲಿದೆ. ದೇವಾಲಯದ ಮೇಲೆ ಆಲದ ಗಿಡ, ಬಸುರಿಗಿಡ ಸೇರಿದಂತೆ ವಿವಿಧ ಬಗೆಯ ಗಿಡಗಂಟಿಗಳ ಬೇರುಗಳು ದೇವಾಲಯದ ಗೋಡೆಗಳನ್ನು ಆವರಿಸಿವೆ. ಗೋಡೆಯ ಗಾರೆ ಕಿತ್ತು ಬಂದಿದ್ದು, ಇಟ್ಟಿಗೆಗಳೂ ಕುಸಿದಿವೆ.

ಗರ್ಭಗೃಹದ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಯ ನೀರು ದೇವಾಲಯದ ಒಳಕ್ಕೆ ಬರುವಂತಾಗಿದೆ. ಗೋಡೆಗಳು ಬೀಳುವ ಆತಂಕದಿಂದ ಯಾರೋ ಕಲ್ಲಿನ ಕಂಬಗಳನ್ನು ದೇವಾ ಲಯದ ಗೋಡೆಗೆ ಆಸರೆಯಾಗಿ ನಿಲ್ಲಿಸಿ ದ್ದಾರೆ. ಸ್ಥಳೀಯರೊಬ್ಬರ ಆಸಕ್ತಿಯಿಂದ ದಿನಕ್ಕೊಮ್ಮೆ ಪೂಜೆ ನಡೆಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ‌. ಗರ್ಭಗೃಹದಲ್ಲಿರುವ ಯೋಗಾನರಸಿಂಹ ಮೂರ್ತಿ ದೈವಕಳೆಯನ್ನು ತುಂಬಿಕೊಂಡಿದೆ.

ಗ್ರಾಮದ ಪುರಾತನ ದೇವಾಲಯಗಳಲ್ಲಿ ಪ್ರಮುಖವಾಗಿರುವ ಯೋಗಾನರಸಿಂಹ ದೇವಾಲಯವು ಗ್ರಾಮದ ಇತಿಹಾಸದ ಕುರುಹಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ. ಯೋಗಾನರಸಿಂಹ ಸ್ವಾಮಿಯು ಗ್ರಾಮದ ಶಕ್ತಿ ದೇವರಾಗಿದ್ದು, ಗ್ರಾಮದಲ್ಲಿ ಕ್ಷಾಮ ಬಂದಾಗ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹರಿಸೇವೆ ಮಾಡಿದರೆ ಮಳೆಯಾಗುತ್ತಿತ್ತು ಎಂಬ ಪ್ರತೀತಿಯಿದೆ‌. ದೇವಾಲಯವು ತಾಲ್ಲೂಕು ಆಡಳಿತ ಮತ್ತು ಪುರಾತತ್ವ ಇಲಾಖೆಗಳ ನಿರ್ಲಕ್ಷ್ಯದಿಂದ ಕಣ್ಮರೆಯಾಗುವತ್ತ ಸಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆ ಗಮನಹರಿಸಿ ದೇವಾಲಯವನ್ನು ರಕ್ಷಿಸಬೇಕಾಗಿದೆ ಎಂದು ಗ್ರಾಮದ ಮುಖಂಡ ದಡಿಗ ಸತೀಶ್ ಆಗ್ರಹಿಸುತ್ತಾರೆ.

lokesh

Recent Posts

ಡೇವಿಡ್‌ ಬ್ಯಾಟಿಂಗ್‌ ಅಬ್ಬರ ; ಆರ್‌ಸಿಬಿಗೆ ವಿಕ್ಟರಿ, ಚೆನ್ನೈಗೆ ಸೋಲು

ಬೆಂಗಳೂರು : ನಾಯಕ ರಜತ್‌ ಪಾಟೀದಾರ್‌, ಟಿಮ್ ಡೇವಿಡ್, ದೇವ್‌ದತ್ ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌…

4 hours ago

ಮತ್ತೆ ಬೆದರಿಕೆ ಒಡ್ಡಿದ ಟ್ರಂಪ್‌ ; ಕ್ಯಾರೆ ಎನ್ನದ ಇರಾನ್‌

ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…

7 hours ago

ಶರಣ್ಯ ಸುರಕ್ಷಿತ ; ಅಧಿಕಾರಿ, ಸಿಬ್ಬಂದಿ, ಬುಡಕಟ್ಟು ಜನರಿಗೆ ಅಭಿನಂದನೆ ಸಲ್ಲಿಸಿದ ಖಂಡ್ರೆ

ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…

8 hours ago

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

8 hours ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

8 hours ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

9 hours ago