ಮೈಸೂರು: ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯಗಳ ಮೌಲ್ಯಮಾಪನ ನಡೆಸಿ, ಗುಣಮಟ್ಟವನ್ನು ಶ್ರೇಣೀಕರಿಸುವ ಸ್ವತಂತ್ರ ಸಂಸ್ಥೆಯಾದ ‘ಕ್ವಕ್‌ವಾರೆಲಿ ಸೈಮಂಡ್ಸ್ (ಕ್ಯು.ಎಸ್.) ಇತ್ತೀಚೆಗೆ ಪ್ರಕಟಿಸಿರುವ ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾಲಯವು 110ನೇ ಸ್ಥಾನ ಪಡೆದಿದೆ ಎಂದು ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಆರು ಪ್ರಮುಖ ಅಂಶಗಳನ್ನಾಧರಿಸಿ ಕ್ಯೂ.ಎಸ್. ಸಂಸ್ಥೆಯು ಪ್ರತಿ ವರ್ಷವೂ ಜಾಗತಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್ ನೀಡುತ್ತದೆ. ಶೈಕ್ಷಣಿಕ ಸಹವರ್ತಿಗಳ ವಿಮರ್ಶೆ, ಅಧ್ಯಾಪಕ ವಿದ್ಯಾರ್ಥಿ ಅನುಪಾತ, ಸಂಶೋಧನಾ ಉಲ್ಲೇಖ, ಉದ್ಯೋಗದಾತರು ಹೊಂದಿರುವ ಅಭಿಪ್ರಾಯ, ವಿದೇಶಿ ವಿದ್ಯಾರ್ಥಿಗಳ ಅನುಪಾತ ಹಾಗೂ ವಿದೇಶಿ ಅಧ್ಯಾಪಕರ ಅನುಪಾತ ಅಂಶಗಳನ್ನು ಪರಿಗಣಿಸಲಾಗಿದೆ.
ಮೈಸೂರು ವಿ.ವಿ.ಯು ಬೋಧನೆ, ಸಂಶೋಧನೆ ಹಾಗೂ ಉದ್ಯೋಗ ಸೃಷ್ಟಿಯು ಆಯಾಮಗಳಲ್ಲಿ ಉತ್ತಮ ಸಾಧನೆ ವಾಡಿ ಶ್ರೇಣಿಯನ್ನು ಪಡೆದಿದೆ ಎಂದಿದ್ದಾರೆ.
ಕಾರ್ಯ ಅಧ್ಯಾಪಕರ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ ವಿ.ವಿಯು 110ನೇ ಸ್ಥಾನ ಗಳಿಸಿರುವುದು ಅಭಿಮಾನದ ಸಂಗತಿಯಾಗಿದೆ ಪ್ರೊ.ರಾಜಶೇಖರ್ ತಿಳಿಸಿದ್ದಾರೆ.
ಜಿ.ಎಲ್.ತ್ರಿಪುರಾಂತಕ ಇಂದು ದುಗ್ಗಹಟ್ಟಿ ವೀರಭದ್ರಪ್ಪ ಅವರ ಸ್ಮರಣೆ, ನುಡಿನಮನ ಕಾರ್ಯಕ್ರಮ ತನಗಾಗಿ ಬದುಕಿದವರನ್ನು ಸಮಾಜ ಬೇಗ ಮರೆಯುತ್ತದೆ, ಸಮಾಜಕ್ಕಾಗಿ ಬದುಕಿದವರನ್ನು…
ಕೆ.ಬಿ.ರಮೇಶನಾಯಕ ‘ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಸರ್ವೇಕ್ಷಣೆ ಮೈಸೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ…
ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…
ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…