ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಲಘುವಾಗಿ ಮಾತನಾಡಲ್ಲ: ಎಚ್‌ಡಿಕೆ
ಮಂಡ್ಯ: ಭಾರತದ ಗಡಿಯಂಚಿನ ಚೀನಾದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನೇ ದಾಳವಾಗಿಟ್ಟುಕೊಂಡು ರಾಜಕೀಯ ಉದ್ದೇಶದಿಂದ ಟಫ್ ರೂಲ್ಸ್ ಮಾಡಿದರೆ ನಮ್ಮ ಸಹಮತವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿಯಲ್ಲಿ ಶುಕ್ರವಾರ ಸಂಚರಿಸಿದ ಪಂಚರತ್ನ ಯಾತ್ರೆ ಸಂದರ್ಭ ಮಾತನಾಡಿದ ಅವರು, ಚೀನಾದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಕೋವಿಡ್ ಅನಾಹುತ ಹೆಚ್ಚಾಗಿದೆ. ಹೆಚ್ಚಿನ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಸಮಸ್ಯೆಗಳು ಏನಾಗುತ್ತೆ ನೋಡೋಣ. ಮೊದಲ ಹಂತದಲ್ಲಿ ಕೆಲವು ಗೈಡ್ ಲೈನ್ ಕೊಟ್ಟಿದ್ದಾರೆ. ಮುಂದೆ ಯಾವ ರೀತಿ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಲಘುವಾಗಿ ಮಾತನಾಡಲ್ಲ. ನಾವು ಸಹಕಾರ ಕೊಡುತ್ತೇವೆ ಎಂದು ಹೇಳಿದರು.
ಕೋವಿಡ್ ನೆಪದಲ್ಲಿ ಇಲ್ಲಸಲ್ಲದ ರೂಲ್ಸ್ಗಳನ್ನು ತಂದು ರಾಜಕೀಯ ಉದ್ದೇಶದಿಂದ ಬೇರೆ ರೀತಿಯಲ್ಲಿ ವಿರೋಧ ಪಕ್ಷಗಳನ್ನು ಕಟ್ಟಿ ಹಾಕುವ ವಾತಾವರಣ ನಿರ್ಮಾಣ ಮಾಡಲು ಹೋದರೆ ಅದಕ್ಕೆ ನಮ್ಮ ಸಹಮತವಿಲ್ಲ ಎಂದರು.
ರೈತರ ಸ್ವಾಭಿಮಾನದ ಬದುಕಿಗೆ ಅವಕಾಶ ನೀಡಿ:
ರೈತರ ಪಕ್ಷ ಜಾತ್ಯತೀತ ಜನತಾದಳಕ್ಕೆ ಅಧಿಕಾರ ಕೊಡಿ. ರೈತರ ಸ್ವಾಭಿಮಾನದ ಬದುಕಿಗೆ ಅವಕಾಶ ನೀಡಿ. ನಿಮ್ಮೆಲ್ಲರ ಆಶೀರ್ವಾದದಿಂದ ೧೨೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಆ ಮೂಲಕ ರಾಜ್ಯವನ್ನ ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಸವಾಲು ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.
ಕುತಂತ್ರ ರಾಜಕಾರಣಿಯಲ್ಲ:
ಸರಳ, ಸಜ್ಜನಿಕೆ, ನೇರ ನಡೆ ನುಡಿಯ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಮತ್ತೆ ಬಹುಮತಗಳ ಅಂತರದಿAದ ಗೆಲ್ಲಿಸಿ. ರವೀಂದ್ರ ಶ್ರೀಕಂಠಯ್ಯ ಕುತಂತ್ರ ರಾಜಕಾರಣಿಯಲ್ಲ, ಅಭಿವೃದ್ಧಿಗಾಗಿ ಹಗಲು ರಾತ್ರಿ ದುಡಿಯುವ ವ್ಯಕ್ತಿ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಕುಟುಕಿದರು.
ಸಾಲ ಮನ್ನಾ ಪರಿಹಾರವಲ್ಲ:
ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾದಿಂದ ಶಾಶ್ವತ ಪರಿಹಾರ ಆಗಲ್ಲ. ರೈತರು ಸಾಲ ಮಾಡಿಕೊಳ್ಳದ ರೀತಿಯಲ್ಲಿ ಆರ್ಥಿಕವಾಗಿ ಸದೃಢವಾಗಿ ಬದುಕುವ ರೀತಿಯಲ್ಲಿ ಪಂಚರತ್ನ ಯೋಜನೆಯಲ್ಲಿ ಅಳವಡಿಸಿದ್ದೇನೆ. ಈ ಬಗ್ಗೆ ಮಾಹಿತಿಗಳನ್ನು ರಾಜ್ಯದ ಪ್ರತೀ ಮನೆ ಮನೆಗಳಿಗೆ ತಲುಪಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಅದಕ್ಕೆ ಕಾರಣ ಮೂರು ವರ್ಷಗಳಿಂದ ಮಳೆಯಿಂದ ಬೆಳೆ ಹಾನಿ, ಸೂಕ್ತ ಪರಿಹಾರ ನೀಡದಿರುವುದು. ಹಳೇ ಕಾಲದ ಸಿಸ್ಟಮ್‌ನಲ್ಲಿ ಬೆಳೆ ಪರಿಹಾರ ನೀಡುತ್ತಿರುವುದು, ರೈತರು ಮಾಡುವ ಖರ್ಚಿಗೂ ಸಾಲದು ಎಂದರು.
ರೈತರ ಆತ್ಮಹತ್ಯೆ ಸಂದರ್ಭದಲ್ಲಿ ಸ್ಪಂದಿಸಿದ್ದು ನಾನೊಬ್ಬನೇ. ಬೇರೆ ಯಾವ ರಾಷ್ಟ್ರೀಯ ಪಕ್ಷಗಳು ರೈತರಿಗೆ ಸ್ಪಂದಿಸುತ್ತಿಲ್ಲ. ರೈತರ ಸಾಲ ಮನ್ನಾ ಮಾಡಿದ್ದು ನಿಮ್ಮ ಕುಮಾರಸ್ವಾಮಿ. ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷ ಮುಕುಂದ, ಮುಖಂಡ, ವಕೀಲ ಕೆ.ಎಂ. ಬಸವರಾಜು ಇತರರು ಹಾಜರಿದ್ದರು.
ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರೆ, ಕುಮಾರಸ್ವಾಮಿ ಅವರನ್ನು ಸಾಗರೋಪಾದಿಯಲ್ಲಿ ಜನ ಸೇರಿದ್ದರು.
ಕ್ಷೀರಾಭಿಷೇಕ, ಕಬ್ಬಿನ ಹಾರ
ಕೊತ್ತತ್ತಿ ಗ್ರಾಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಕಟೌಟ್‌ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದರೆ, ಕೊತ್ತತ್ತಿಗೆ ಆಗಮಿಸಿದ ಪಂಚರತ್ನ ರಥ ಯಾತ್ರೆಗೆ ಬೃಹತ್ ಕಬ್ಬಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.
ಮುಂದುವರೆದ ಬಗೆ ಬಗೆಯ ಹಾರದ ಟ್ರೆಂಡ್
ಸAತೆಕಸಲಗೆರೆ ಗ್ರಾಪಂ ವ್ಯಾಪ್ತಿಯ ಜಾ.ದಳ ಕಾರ್ಯಕರ್ತರಿಂದ ಕ್ಯಾತುಂಗೆರೆಯಲ್ಲಿ ಕ್ರೇನ್ ಮೂಲಕ ದ್ರಾಕ್ಷಿ ಹಾರ ಹಾಕಲಾಯಿತು. ಅಲ್ಲದೆ, ಪೂಜಾ ಕುಣಿತ, ಹೂವಿನ ಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು. ಎಚ್‌ಡಿಕೆಗೆ ತಾನು ಬೆಳೆದ ಭತ್ತದ ತೆನೆಯನ್ನು ಬಹುಮಾನವಾಗಿ ರೈತನೊಬ್ಬ ಕೊಟ್ಟನು. ಪಂಚರತ್ನ ರಥ ಯಾತ್ರೆಗೆ ಜೋಡೆತ್ತಿನ ಗಾಡಿಗಳು ಸಾಥ್ ನೀಡಿದವು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…