ಮೈಸೂರು : ವಾರ್ಡ್ ನಂಬರ್ 49ರ ಲಕ್ಷ್ಮಿಪುರಂ ಭಾಗದ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಭಾಭವನದ ಪಕ್ಕದ ಲಕ್ಷ್ಮಿಪುರಂ 2ನೇ ಕ್ರಾಸ್ ನಲ್ಲಿ ಸತತವಾಗಿ ಸಾರ್ವಜನಿಕರು ಕಸವನ್ನು ಬಿಸಾಡುತ್ತಿದ್ದುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದ ಕಾರಣ ಇಂದು ಶಾಸಕರಾದ ಎಸ್ಎ ರಾಮದಾಸ್ ರವರ ಆದೇಶದ ಮೇರೆಗೆ ಸ್ಥಳೀಯ ನಗರಪಾಲಿಕೆ ಸದಸ್ಯರು ಮತ್ತು ನಗರ ಪಾಲಿಕೆಯ ಪೌರಕಾರ್ಮಿಕರ ತಂಡವು ಕಸವನ್ನು ಬಿಸಾಡಿರುವ ಸ್ಥಳಗಳಲ್ಲಿ ರಂಗೋಲಿ ಹಾಕುವ ಮೂಲಕ ಸ್ಷಚ್ಚತೆಯ ಬಗ್ಗೆ ಅರಿವು ಮೂಡಿಸಲಾಯಿತು.
ವಿವಿಧ ಪ್ರದೇಶಗಳಲಿದ್ದ ಕಸವನ್ನು ತೆರವುಗೊಳಿಸಿ ಅಲ್ಲಿ ರಂಗೋಲಿ ಹಾಕಿ ಅಲಂಕಾರವನ್ನು ಮಾಡುವ ಮೂಲಕ ಕಸ ಹಾಕಲು ಬರುವವರಿಗೆ ಗುಲಾಬಿ ಹೂನೀಡುವ ಮೂಲಕ ಸ್ವಚ್ಛತೆಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಬಳಿಕ ಪೌರಕಾರ್ಮಿಕರು ಸಂಪೂರ್ಣ ಕಸದ ರಾಶಿಯನ್ನು ತೆಗೆದು ಒಳಚರಂಡಿ ಕಾರ್ಮಿಕರ ಜಟ್ಟಿಂಗ್ ವಾಹನದ ಮೂಲಕ ರಸ್ತೆಗೆ ನೀರನ್ನು ಸಿಂಪಡಿಸಿ ಗ್ಯಾಂಗ್ ಮ್ಯಾನ್ ಕಾರ್ಮಿಕರಿಂದ ಅಲ್ಲಿದ್ದ ಹಲವು ಗುಡ್ಡೆ ಮಣ್ಣುಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್ ರವರು, ನಗರಪಾಲಿಕೆ ಆರೋಗ್ಯ ಪರಿವೀಕ್ಷಕರಾದ ಪ್ರೀತಿ ಮತ್ತು ತಂಡ, ಒಳಚರಂಡಿ ಅಭಿಯಂತರರಾದ ಅರಸೇಗೌಡರು ಮತ್ತು ತಂಡ, ವಾಟರ್ ಇನ್ಸ್ಪೆಕ್ಟರ್ ಮಧುರವರು, ವರ್ಕ್ ಇನ್ಸ್ಪೆಕ್ಟರ್ ಮಧು ಮತ್ತು ತಂಡದ ಮುಂತಾದವರು ಇಂದಿನ ಸ್ವಚ್ಛತೆಗೆ ಸಂಪೂರ್ಣ ಸಹಕರಿಸಿದರು.
ಇದರ ಜೊತೆಗೆ ವಿಶೇಷವಾಗಿ ಇಂದಿನಿಂದ ರಾತ್ರಿ 9:00 ಯಿಂದ11 ಗಂಟೆಯವರೆಗೆ ಸ್ಥಳೀಯ ನಗರಪಾಲಿಕೆ ಸದಸ್ಯರು ಮತ್ತು ವಾರ್ಡಿನ ಪೌರಕಾರ್ಮಿಕ ಮೇಸ್ತ್ರಿಗಳು ಸ್ಥಳಕ್ಕೆ ಹಾಜರಾಗಿ ಈ ಭಾಗದಲ್ಲಿ ಕಸ ಹಾಕಲು ಬರುವ ಸಾರ್ವಜನಿಕರಿಗೆ ಕಸ ಹಾಕದಂತೆ ತಿಳಿಸಲಾಗುತ್ತದೆ
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…
ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು,…
ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ? ಮೈಸೂರಿನ ಮಹಾನ್ ಯದುಕುಲ…
ಕೆ.ಬಿ.ರಮೇಶ ನಾಯಕ ಮೈಸೂರು: ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಜಿಪಂ, ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು…