ಮೈಸೂರು: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಜಿಲ್ಲೆಯಲ್ಲಿ ೧,೪೫,೯೦೮ ಮತದಾರರನ್ನು ಸಕಾರಣವಿಲ್ಲದೇ ಕೈಬಿಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆರೋಪಿಸಿದರು.
ನಗರ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಮತದಾರರ ಪಟ್ಟಿಗೆ ಕನ್ನ ಹಾಕಲಾಗಿದೆ ಎಂದರು.
ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಬೇಕಾದರೆ ಸೂಕ್ತ ಕಾರಣ ನೀಡಬೇಕು. ವರ್ಗಾವಣೆ, ನಿಧನ, ಡಂಬಲ್ ಎಂಟ್ರಿಯಾಗಿದ್ದರೆ ತೆಗೆಯಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಸೂಕ್ತ ಕಾರಣವನ್ನೇ ನೀಡದೇ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗಿದೆ. ಇದು ಅಕ್ಷಮ್ಯ ಲೋಪ ಮಾತ್ರವಲ್ಲದೆ ದಲಿತರು, ಹಿಂದುಳಿದ ವರ್ಗಗಳ ಮತದಾರರು ಹಕ್ಕಿನಿಂದ ದೂರ ಉಳಿಯುವಂತೆ ಮಾಡಿರುವ ಕಾರಣ ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೈಸೂರು ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಚಾಮರಾಜ ಕ್ಷೇತ್ರದಲ್ಲಿ ೧೬,೨೪೨, ನರಸಿಂಹರಾಜ ೧೮೦೦೭, ವರುಣಾ ೧೧೯೮೭, ನರಸಿಂಹರಾಜ ೧೨೩೬೭, ಚಾಮರಾಜ ೧೭೮೪೭, ಕೆ.ಆರ್.ನಗರ ೧೦೬೦೪, ಹುಣಸೂರು ೧೦೨೨೦, ಪಿರಿಯಾಪಟ್ಟಣ ೮೫೭೦, ನಂಜನಗೂಡು ೧೧೭೨೪ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿಯವರು ಏನನ್ನು ಮಾಡಲಿಕ್ಕೂ ಸಿದ್ಧರಿದ್ದಾರೆ. ದಯಮಾಡಿ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮತದಾರರ ಪಟ್ಟಿಗೆ ಕನ್ನ ಪ್ರಕರಣ ಬೆಳಕಿಗೆ ಬಂದಾಗ ಮುಖ್ಯಮಂತ್ರಿ ಏನೂ ಆಗಿಲ್ಲ ಎಂಬಂತೆ ಸಮರ್ಥಿಸಿದ್ದರು. ಅಧಿಕಾರಕ್ಕಾಗಿ ಬಿಜೆಪಿ ಅನೈತಿಕ ಮಾರ್ಗ ಹಿಡಿದಿದೆ. ಜನ ಜಾಗೃತರಾಗಬೇಕು. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಈ ಪ್ರಯತ್ನದ ವಿರುದ್ಧ ಪ್ರಗತಿಪರರು, ಬುದ್ಧಿಜೀವಿಗಳು, ಸಾಹಿತಿಗಳು ದನಿ ಎತ್ತಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿಸಿ ಮತದಾರರ ಹಕ್ಕನ್ನು ಕಸಿಯುತ್ತಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಬೆಂಗಳೂರು ಬಳಿಕ ಮೈಸೂರಿನಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರನ್ನು ಕೈ ಬಿಡಲಾಗಿದೆ. ರಾಜ್ಯವ್ಯಾಪಿ ದೊಡ್ಡ ಜಾಲ ಹರಡಿರುವಂತಿದೆ. ಕೂಡಲೇ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನು ಸ್ಥಗಿತಗೊಳಿಸಬೇಕು. ಚುನಾವಣಾ ಕೆಲಸದಲ್ಲಿ ನಿಯೋಜಿತ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ನಗರದ ಪ್ರತಿ ವಾರ್ಡ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕೊಡಲಿದ್ದಾರೆ. ಜನರ ಹಕ್ಕಿಗೆ ಚ್ಯುತಿ ತರುತ್ತಿರುವುದರ ವಿರುದ್ಧ ಆಂದೋಲನ ಮಾಡುತ್ತೇವೆ ಎಂದು ತಿಳಿಸಿದರು.
ಮುಖಂಡರಾದ ಭಾಸ್ಕರ್ ಎಲ್.ಗೌಡ, ಎನ್.ಎಸ್.ಗೋಪಿನಾಥ್, ಮಾಧ್ಯಮ ವಕ್ತಾರ ಮಹೇಶ್, ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.
ಸಿದ್ದರಾಮಯ್ಯ ಅವರನ್ನು ಟೀಕಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಯೋಗ್ಯತೆ ಇಲ್ಲ. ಉನ್ನತ ಶಿಕ್ಷಣ ಸಚಿವರಾಗಿ ಕುಲಪತಿ ಹುದ್ದೆಗಳನ್ನು ಹರಾಜಿನಲ್ಲಿ ಆಯ್ಕೆ ಮಾಡಿದವರು ಸಿದ್ದರಾಮಯ್ಯ ಬಗ್ಗೆ ಮಾತಾಡುತ್ತಾರೆ. ಲೂಟಿ ರವಿ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ. -ಎಚ್.ಎ.ವೆಂಕಟೇಶ್, ಕೆಪಿಸಿಸಿ ವಕ್ತಾರ
ಪ್ರೊ.ಆರ್.ಎಂ.ಚಿಂತಾಮಣಿ ಇಂದು ನಮ್ಮಲ್ಲಿ ಲಢಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಕಟಣೆಯಾಗಿ ಇನ್ನೂ ಜಾರಿಯಾಗದೇ ಇರುವ ಐದು ಹೊಸ ಜಿಲ್ಲೆಗಳೂ ಸೇರಿ ಒಟ್ಟು…
ನಿರೂಪಣೆ: ರಶ್ಮಿ ಕೋಟಿ ಇದು ಸಮಾಜವಾದಿ ನಾಯಕ ದಿವಂಗತ ಕಿಶನ್ ಪಟ್ನಾಯಕ್ ಅವರ ಪತಿ ವಾಣಿ ದಾಸ್ ಅವರ ಬದುಕಿನ…
ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಅಂದಾಜಿನ ಪ್ರಕಾರ ೬ ಲಕ್ಷ…
ನವೀನ್ ಡಿಸೋಜ ಕೆಲವೇ ದಿನಗಳಲ್ಲಿ ರಸ್ತೆಗಳು ಮತ್ತೆ ಹದಗೆಡುವ ಹಿನ್ನೆಲೆ : ಸಂಪೂರ್ಣ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ ಮಡಿಕೇರಿ: ರಸ್ತೆ…
ಖಾಯಂ ಪಶು ವೈದ್ಯರ ನೇಮಕ ಮಾಡಲು ಅನ್ನದಾತರ ಒತ್ತಾಯ ಮೋಹನ್ ಕುಮಾರ್ ಮಂಡ್ಯ: ರೈತರು ಕೃಷಿ ಚಟುವಟಿಕೆ ನಡೆಸಲು ಜಾನುವಾರುಗಳೇ…
ಮಾಧ್ಯಮವೊಂದರ ವರದಿಯ ಪ್ರಕಾರ ಆನ್‌ಲೈನ್ ಮಾರುಕಟ್ಟೆಗಳ ಭರಾಟೆಯಿಂದಾಗಿ ಸರ್ಕಾರಿ ಸ್ವಾಮ್ಯದ ಹಾಪ್ ಕಾಮ್ಸ್ ಮಳಿಗೆಗಳು ನಷ್ಟಕ್ಕೆ ಸಿಲುಕಿದ್ದು, ಅವು ಮುಚ್ಚುವ…