ಹಲವು ಬಾರಿ ವಿಲೀನ ಕಂಡ ಕ್ಷೇತ್ರ ಘಟಾನುಘಟಿಗಳನ್ನು ನೀಡಿದ್ದು ವಿಶೇಷ
ಮಡಿಕೇರಿ: ಹಿಂದಿನ ಸೋಮವಾರಪೇಟೆ ಕ್ಷೇತ್ರವನ್ನೂ ಒಡಲಲ್ಲಿ ಸೇರಿಸಿಕೊಂಡು ಮಡಿಕೇರಿ ವಿಧಾನಸಭಾ ಕ್ಷೇತ್ರವಾಗಿರುವ ಜಿಲ್ಲಾ ಕೇಂದ್ರಸ್ಥಾನ ಜನತಾ ಪರಿವಾರ, ಕಾಂಗ್ರೆಸ್ನಿಂದ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಾಡುಗೊಂಡಿದೆ.
ಕೊಡಗು ರಾಜ್ಯ ೧೯೫೬ರಲ್ಲಿ ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಳ್ಳುವ ಮೊದಲು ಮಡಿಕೇರಿ ಕ್ಷೇತ್ರ ಹರಿದು ಹಂಚಿಹೋಗಿತ್ತು. ನಂತರ ಸೋಮವಾರಪೇಟೆ, ಮಡಿಕೇರಿ ಅರ್ಧ ಸೇರಿ ಮಡಿಕೇರಿ ಕ್ಷೇತ್ರವಾಗಿ ರೂಪು ಗೊಂಡಿತು. ೧೯೭೨ರಲ್ಲಿ ಮತ್ತೆ ಪುನರ್ ವಿಂಗಡಣೆಗೊಂಡು ಸೋಮವಾರಪೇಟೆ, ವಿರಾಜಪೇಟೆ ಕ್ಷೇತ್ರ ರಚನೆಗೊಂಡರೆ ೧೯೭೮ರಲ್ಲಿ ಮಡಿಕೇರಿ ಕ್ಷೇತ್ರ ಪ್ರತ್ಯೇಕವಾಗಿ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಾದವು. ೨೦೦೮ರಲ್ಲಿ ಸೋಮವಾರಪೇಟೆ ಕ್ಷೇತ್ರವನ್ನು ಮಡಿಕೇರಿಯೊಂದಿಗೆ ವಿಲೀನಗೊಳಿಸಿದ್ದರಿಂದ ವಿಶಾಲವಾಗಿದೆ. ಇದರಲ್ಲಿ ಮಡಿಕೇರಿಯು ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಹಂಚಿಹೋಗಿದೆ.
ಹಳೆಯ ಕ್ಷೇತ್ರವೂ ಸೇರಿದರೆ ಇಲ್ಲಿಂದ ಘಟಾನು ಘಟಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯ ಮಂತ್ರಿಯಾಗಿದ್ದ ಆರ್.ಗುಂಡೂರಾವ್ ಸೋಮವಾರ ಪೇಟೆ ಕ್ಷೇತ್ರ ಪ್ರತಿನಿಧಿಸಿದ್ದರು. ಎಂ.ಸಿ.ನಾಣಯ್ಯ, ಚಿಣ್ಣಪ್ಪ, ಎಂ.ಎಂ.ನಾಣಯ್ಯ ಅವರು ಈ ಕ್ಷೇತ್ರದಿಂದ ಗೆದ್ದು ಸಚಿವರೂ ಆಗಿದ್ಧಾರೆ. ಮಡಿಕೇರಿಯಿಂದ ಒಮ್ಮೆ ಗೆದ್ದು ವಿರಾಜಪೇಟೆಯಲ್ಲಿ ಮೂರು ಬಾರಿ ಗೆದ್ದ ಕೆ.ಜಿ.ಬೋಪಯ್ಯ ಸ್ಪೀಕರ್ ಆಗಿದ್ದವರು. ಸೋಮವಾರ ಪೇಟೆ ಕ್ಷೇತ್ರದಲ್ಲಿ ಜನತಾಪರಿವಾರ ಹಾಗೂ ಕಾಂಗ್ರೆಸ್ ನಿಂದ ಏಳು ಚುನಾವಣೆ ಎದುರಿಸಿ ಮೂರು ಬಾರಿ ಗೆದ್ದು ಸಚಿವರಾಗಿದ್ದ ಬಿ.ಎ.ಜೀವಿಜಯ ಮಡಿಕೇರಿ ಕ್ಷೇತ್ರದಲ್ಲೂ ಮೂರು ಬಾರಿ ಸೋತಿದ್ಧಾರೆ. ೮೫ರ ಇಳಿ ವಯಸ್ಸಿಯಲ್ಲೂ ಸಕ್ರಿಯರು. ಸೋಮವಾರ ಪೇಟೆಯಿಂದ ಎರಡು ಬಾರಿ ಗೆದ್ದು, ಒಮ್ಮೆ ಸೋತ ಅಪ್ಪಚ್ಚು ರಂಜನ್ ಕೂಡ ಮಡಿಕೇರಿಯಿಂದಲೇ ಮೂರು ಬಾರಿ ಗೆದ್ದು ಒಮ್ಮೆ ಸಚಿವರಾಗಿದ್ದಾರೆ. ಹೀಗೆ ಉಭಯ ಕ್ಷೇತ್ರಗಳಲ್ಲಿ ಭಿನ್ನ ಪಕ್ಷ, ಹಿನ್ನೆಲೆಯ ರಾಜಕೀಯ ನೇತಾರರು ಆಯ್ಕೆಯಾದ ಹಿರಿಮೆಯಿದೆ.
ಮೂರು ತಾಲ್ಲೂಕುಗಳಲ್ಲಿ ಹಂಚಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರ ಪ್ರವಾಸೋದ್ಯಮದ ಕೇಂದ್ರವನ್ನು ಹೊಂದಿದೆ. ಇಲ್ಲಿಗೆ ಇನ್ನಷ್ಟು ಮೂಲಸೌಕರ್ಯಗಳು ಬೇಕು ಎನ್ನುವ ಬೇಡಿಕೆಯಿದೆ. ಏಕೆಂದರೆ ಶೇ.೭೫ರಷ್ಟು ಪ್ರವಾಸಿ ಸ್ಥಳಗಳನ್ನು ಹೊಂದಿರುವ ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುವುದರಿಂದ ಸೂಕ್ತ ರಸ್ತೆ, ಮಧ್ಯಮ ವರ್ಗದವರ ವಾಸ್ತವ್ಯಕ್ಕೆ ಇನ್ನಷ್ಟು ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಕಾಡಾನೆ ಹಾವಳಿಯಿಂದ ಸೋಮವಾರಪೇಟೆ ತಾಲ್ಲೂಕಿನ ಜನರಂತೂ ಹೈರಾಣಾಗಿ ಹೋಗಿದ್ದು, ಶಾಶ್ವತ ಪರಿಹಾರಕ್ಕಾಗಿ ಕಾಯುತ್ತಿದ್ಧಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯೂ ಪ್ರಬಲವಾಗಿದೆ.
ಮಡಿಕೇರಿ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ನಿರರ್ಮಾಣವಾಗದೇ ಮೈಸೂರು, ಮಂಗಳೂರಿನಂತಹ ದೂರದ ಊರಿಗೆ ತೆರಳುವ ಸಂದರ್ಭ ಪ್ರಾಣ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರಸ್ತೆಗಳ ಅಭಿವೃದ್ಧಿ ಆಗಬೇ ಕಿದೆ. ಶಿಕ್ಷಣ ಕ್ಷೇತ್ರ, ಕ್ರೀಡಾ ವಿಚಾರಗಳಲ್ಲೂ ಅಭಿವೃದ್ಧಿಯಾಗಬೇಕಿದೆ. ಸತೀಶ್ ಪೈ, ಹಿರಿಯರು, ಮಡಿಕೇರಿ
ಹಿರಿಯರ ಸ್ಪರ್ಧೆಯೋ, ಹೊಸಬರ ಪ್ರವೇಶವೋ?
ಮುಂಬರುವ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ದಂಡೇ ಇದೆ. ಸೋಮವಾರಪೇಟೆ ಕ್ಷೇತ್ರವೂ ಸೇರಿದಂತೆ ಬಿಜೆಪಿಯಿಂದ ಐದು ಬಾರಿ ಗೆದ್ದಿರುವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಹಿರಿಯರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎಂಬ ನೀತಿ ಜಾರಿಯಾದರೆ ಕಮಲ ಪಕ್ಷ ಬದಲಾವಣೆಗೆ ದಾರಿ ಮಾಡಿ ಕೊಡಬಹುದು. ಇವರೊಂದಿಗೆ ವಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ವಾಜಿ ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಪ್ರಬಲ ಆಕಾಂಕ್ಷಿಾಂಗಿದ್ದಾರೆ. ಕಾಂಗ್ರೆಸ್ನಲ್ಲಿ ಮಾತ್ರ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ.
೧೯೭೮ರಿಂದಲೂ ವಿಧಾನಸಭೆ ಹಾಗೂ ಲೋಕಸಭೆ ಸೇರಿ ಸತತವಾಗಿ ಚುನಾವಣೆ ಎದುರಿಸುತ್ತಿರುವ ಬಿ.ಎ.ಜೀವಿಜಯ ಅವರು ಜಾ.ದಳದಿಂದ ಕಾಂಗ್ರೆಸ್ಗೆ ಮರಳಿ ಮತ್ತೆ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿ ಸ್ಥಳೀುಂ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆುಂಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ ಡಾ. ಮಂಥರ್ಗೌಡ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಕೋರುತ್ತಿದ್ದಾರೆ. ೨೦೧೩ರ ಚುನಾವಣೆಯಲ್ಲಿ ಸೋತು, ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿಕೊಂಡಿದ್ದ ಕೆ.ಎಂ. ಲೋಕೇಶ್ ಅರ್ಜಿ ಸಲ್ಲಿಸಿದ್ದಾರೆ. ವಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ಕುವಾರ್, ಜಿಪಂ ಮಾಜಿ ಅಧ್ಕಕ್ಷೆ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಚುನಾವಣೆುಂಲ್ಲಿ ಸೋತಿದ್ದ ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ, ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಪ್ರಬಲ ಆಕಾಂಕ್ಷಿಗಳು.
ಕಾಂಗ್ರೆಸ್ ಪಕ್ಷದಿಂದ ಜಾ.ದಳಕ್ಕೆ ಬಂದಿರುವ ಉದ್ಯಮಿ ನಾಪಂಡ ಮುತ್ತಪ್ಪ ಜಾ.ದಳ ಪಕ್ಷದ ಆಕಾಂಕ್ಷಿಾಂಗಿದ್ದಾರೆ. ಇವರೊಂದಿಗೆ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಕೂಡ ಮಡಿಕೇರಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿ ಕೊಂಡಿದ್ದಾರೆ.