ಲಂಚ: ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಕೊಡಗು: ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಿಗನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ನಾಡಕಚೇರಿ ಗ್ರಾಮ ಲೆಕ್ಕಿಗ ಜಟ್ಟಪ್ಪ ಅವರನ್ನು ಎಸಿಬಿಯವರು ವಶಕ್ಕೆ ಪಡೆದಿದ್ದಾರೆ.

ಜಿ.ಎಂ.ಮುತ್ತಪ್ಪ ಎಂಬವರಿಂದ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ. ಆಸ್ತಿ ವಿಭಾಗ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿದೆ.

× Chat with us