ಜಿಲ್ಲೆಗಳು

ಕೌದಳ್ಳಿಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ

ಕಾರ್ಯಕರ್ತರ ಮನೆಗಳಿಗೆ ಸ್ಟಿಕರ್ ಅಂಟಿಸಿದ ಜನ ಧ್ವನಿ ಬಿ ವೆಂಕಟೇಶ್

ಹನೂರು : ಭಾರತೀಯ ಜನತಾ ಪಕ್ಷ ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಕ್ಷೇತ್ರ ವ್ಯಾಪ್ತಿಯ ಕೌದಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಸ್ಟಿಕರ್ ಅಂಟಿಸಿ ಜನ ಧ್ವನಿ ಬಿ ವೆಂಕಟೇಶ್ ರವರು ಚಾಲನೆ ನೀಡಿದರು.

ಈ ವೇಳೆ ಒಬಿಸಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜನದ್ವನಿ ಬಿ ವೆಂಕಟೇಶ್ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಬೂತ್ ಮಟ್ಟದ ಅಭಿಯಾನದಲ್ಲಿ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಬೂತ್ ಮಟ್ಟದಲ್ಲಿ ಗೆದ್ದರೆ ಕ್ಷೇತ್ರವನ್ನೇ ಗೆದ್ದಂತೆ ಕ್ಷೇತ್ರವನ್ನು ಗೆದ್ದರೆ ರಾಜ್ಯವನ್ನು ಗೆದ್ದಂತೆ ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಬೂತ್ ಮಟ್ಟದ ಅಭಿಯಾನ ಪ್ರಾರಂಭಿಸಲಾಗಿದೆ.

ಬೂತ್ ಮಟ್ಟದಲ್ಲಿ ಮತಗಳನ್ನು ಸೆಳೆದು ಮುಂದಿನ ಚುನಾವಣೆಯಲ್ಲಿ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಹಾಗೂ ಮುಖಂಡರುಗಳು ಹಗಲಿರುಳು ಕಾರ್ಯನಿರ್ವಹಿಸಬೇಕು, ಬಿಜೆಪಿ ಸಾಧನೆಗಳ ಬಗ್ಗೆ ಮಾಹಿತಿ ನೀಡಿ ಮನೆ ಬಾಗಿಲಿಗೆ ಬಿಜೆಪಿ ಸ್ಟಿಕರ್ ಅನ್ನು ಹಾಕುವ ಮೂಲಕ ನಮ್ಮ ಪಕ್ಷದ ಅಭಿವೃದ್ಧಿಯನ್ನು ತಿಳಿಸಬೇಕು ಎಂದರು. ಈ ಬಾರಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಜಬಿವುಲ್ಲಾ ರಾಚಪ್ಪ ಕೃಷ್ಣಮೂರ್ತಿ ಮಹಿಳಾ ಮೋರ್ಚಾ ಅಧ್ಯಕ್ಷ ಮೀನಾ ಮುಖಂಡರುಗಳಾದ ಲೋಕೇಶ್ ಜತ್ತಿ, ಜಫ್ರುಲ್ಲಾ ಸೋಮಶೇಖರ್ ಇನ್ನಿತರರು ಹಾಜರಿದ್ದರು

andolanait

Recent Posts

ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ,…

12 mins ago

ಅಡುಗೆ ಅನಿಲ,‌ಪೆಟ್ರೋಲಿಯಂ ಉತ್ಪನ್ನಗಳ ಕೊರತೆಗೆ ಕೇಂದ್ರ ಕಾರಣ ; ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ದೇಶದಲ್ಲಿ ಅಡುಗೆ ಅನಿಲ, ಪೆಟ್ರೊಲ್ ಡಿಸೇಲ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್…

21 mins ago

ಮೈಸೂರು-ಜೋಧ್‌ಪುರ ನಡುವೆ ವಿಶೇಷ ರೈಲು ಸೇವೆ ಆರಂಭ

ಮೈಸೂರು : ಮೈಸೂರು-ಜೋಧ್‌ಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿರುವುದಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ…

45 mins ago

ಓದುಗರ ಪತ್ರ | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮಾರಕ ನಿರ್ಮಾಣ ಸ್ವಾಗತಾರ್ಹ

೨೦೨೫ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ ವರ್ಷಗಳ ನಂತರ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಯಶೀಲರಾಗಿ…

1 hour ago

ಓದುಗರ ಪತ್ರ | ಆಟೋ ಚಾಲಕರಿಗೆ ಸರ್ಕಾರ ಪರಿಹಾರ ನೀಡಲಿ

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ನಡೆಸುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಿಂದ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲ…

1 hour ago

ಓದುಗರ ಪತ್ರ | ಜನಗಣತಿ ದೇಶದ ಏಳಿಗೆಯ ದಿಕ್ಸೂಚಿ

ಜನಗಣತಿ ಕಾರ್ಯದಲ್ಲಿ ಗಣತಿದಾರರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು. ಗುರುತಿನ ಚೀಟಿ ಧರಿಸಿ, ಸೌಜನ್ಯದಿಂದ ಮಾಹಿತಿ ಸಂಗ್ರಹಿಸಿ.…

1 hour ago